Home namma chikmagalur chikamagalur ಅತ್ಯಾಚಾರ ಆರೋಪಿಗೆ 20 ವರ್ಷ ಕಠಿಣ ಸಜೆ
chikamagalurCrime NewsHomeLatest Newsnamma chikmagalur

ಅತ್ಯಾಚಾರ ಆರೋಪಿಗೆ 20 ವರ್ಷ ಕಠಿಣ ಸಜೆ

Share
Share

ಚಿಕ್ಕಮಗಳೂರು: ಅಪ್ರಾಪ್ತ ಬುದ್ಧಿಮಾಂದ್ಯ ಬಾಲಕಿ ಮೇಲೆ ಅತ್ಯಾಚಾರ ಎಸಗಿದ ಆರೋಪದಲ್ಲಿ ಅಜ್ಜಂಪುರ ಸಮೀಪದ ಗ್ರಾಮವೊಂದರ ನಿವಾಸಿಗೆ 20 ವರ್ಷ ಕಠಿಣ ಸಜೆ ವಿಧಿಸಿ ನಗರದ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಪೋಕ್ಸೋ ಎಫ್‌ಟಿಎಸ್‌ಈ-1 ನ್ಯಾಯಾಲಯವು ತೀರ್ಪು ನೀಡಿದೆ.

ಶಾಂತಕುಮಾರ ಎಂಬಾತ ಶಿಕ್ಷೆಗೆ ಒಳಗಾದ ಆರೋಪಿ. ಕಳೆದ ಫೆಬ್ರವರಿ 7 ರಂದು ಸಂಜೆ ಈ ಘಟನೆ ನಡೆದಿದ್ದು, ಆರೋಪಿಯು 15 ವರ್ಷದ ಆ ಬಾಲಕಿಯನ್ನು ತನ್ನ ದನದ ಕೊಟ್ಟಿಗೆಗೆ ಬಲವಂತವಾಗಿ ಕರೆದೊಯ್ದು ಅತ್ಯಾಚಾರ ಎಸಗಿದ್ದ ಎನ್ನಲಾಗಿದೆ. ಆಕೆ ಮನೆ ಬಳಿ ಕಾಣಿಸದೇ ಇದ್ದಾಗ ಅನುಮಾನಗೊಂಡ ಆಕೆಯ ತಂದೆ ಹುಡುಕಾಡುತ್ತಿದ್ದಾಗ ಈ ಬಾಲಕಿ ಶಾಂತಕುಮಾರನ ಮನೆ ಕಡೆಯಿಂದ ಅಳುತ್ತಾ ಬರುತ್ತಿದ್ದಳೆನ್ನಲಾಗಿದೆ.

ಆಕೆಯ ಬಟ್ಟೆ ಕೊಳೆಯಾಗಿತ್ತು. ತಲೆಗೆ ಮಣ್ಣಾಗಿತ್ತಲ್ಲದೆ, ಮೂಗಿನಿಂದ ರಕ್ತ ಬರುತ್ತಿತ್ತೆನ್ನಲಾಗಿದೆ. ಆಕೆಯನ್ನು ವಿಚಾರಿಸಿ ಮಾಹಿತಿ ಪಡೆದ ತಂದೆ ಬಾಲಕಿಯನ್ನು ತರೀಕೆರೆ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸಿದ್ದಾರೆ. ಈ ಸಂದರ್ಭದಲ್ಲಿ ಆಕೆಯ ಮೇಲೆ ಬಲತ್ಕಾರ ಆಗಿರುವುದನ್ನು ದೃಢಪಡಿಸಿ ವೈದ್ಯರು ವರದಿ ನೀಡಿದ್ದು, ಈ ಸಂಬಂಧ ಅಜ್ಜಂಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿತ್ತು.

ಪ್ರಕರಣ ದಾಖಲಿಸಿದ ಇನ್ಸ್‌ಪೆಕ್ಟರ್ ಎನ್.ವೀರೇಂದ್ರ ಹಾಗೂ ಸಿಬ್ಬಂದಿ ಕೃತ್ಯದ ಸಂಬಂಧ ಸಾಕ್ಷ್ಯ ಸಂಗ್ರಹಿಸಿ ಆರೋಪಿಯ ವಿರುದ್ಧ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು.

ಪ್ರಕರಣದ ವಿಚಾರಣೆ ನಡೆಸಿದ ಸಂದರ್ಭದಲ್ಲಿ ಆರೋಪಿಯ ವಿರುದ್ಧದ ಆಪಾದನೆಗಳು ಸಾಬೀತಾದ್ದರಿಂದ ನಗರದ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಪೋಕ್ಸೋ ಎಫ್‌ಟಿಎಸ್‌ಈ-1 ನ್ಯಾಯಾಲಯದ ನ್ಯಾಯಾಧೀಶರಾದ ರಾಘವೇಂದ್ರ ಗುರುಪ್ರಸಾದ್ ಕುಲಕರ್ಣಿ ಅವರು ಆರೋಪಿಗೆ ಪೋಕ್ಸೋ ಕಾಯ್ದೆಯ ಕಲಂ 6 ರೆ/ವಿ ಬಿಎನ್‌ಎಸ್ ಕಲಂ 65(1)ರಡಿಯಲ್ಲಿ 20 ವರ್ಷಗಳ ಕಠಿಣ ಶಿಕ್ಷೆ ಹಾಗೂ 25 ಸಾವಿರ ರೂ. ದಂಡ, ಕಲಂ 64(2)(ಕೆ)ರಡಿಯಲ್ಲಿ 10 ವರ್ಷ ಕಠಿಣ ಶಿಕ್ಷೆ ಹಾಗೂ 25 ಸಾವಿರ ರೂ. ದಂಡ, ಕಲಂ 127 (2) ರಡಿಯಲ್ಲಿ ಒಂದು ವರ್ಷ ಕಠಿಣ ಶಿಕ್ಷೆ ಹಾಗೂ 5 ಸಾವಿರ ರೂ. ದಂಡ ವಿಧಿಸಿದ್ದಾರೆ. ಸರ್ಕಾರದ ಪರವಾಗಿ ಪೋಕ್ಸೋ ನ್ಯಾಯಾಲಯದ ವಿಶೇಷ ಸರ್ಕಾರಿ ಅಭಿಯೋಜಕ ಬಿ.ಭರತ್ ಕುಮಾರ್ ಅವರು ವಾದ ಮಂಡಿಸಿದ್ದರು.

Rape accused gets 20 years rigorous imprisonment

Share

Leave a comment

Leave a Reply

Your email address will not be published. Required fields are marked *

Don't Miss

ಅಪಘಾತದಲ್ಲಿ ಸಾವು: ಚಾಲಕನಿಗೆ 9 ತಿಂಗಳು ಸಜೆ

ಚಿಕ್ಕಮಗಳೂರು: ಅತೀ ವೇಗ ಮತ್ತು ಅಜಾಗರೂಕತೆಯಿಂದ ಕಾರು ಚಾಲನೆ ಮಾಡಿ ಸಂಭವಿಸಿದ ಭೀಕರ ಅಪಘಾತದಲ್ಲಿ ಓರ್ವ ಮೃತಪಟ್ಟು ಇನ್ನಿಬ್ಬರು ಗಾಯಗೊಂಡ ಘಟನೆಗೆ ಸಂಬಂಧಿಸಿದಂತೆ ಚಾಲಕನಿಗೆ ನಗರದ ಒಂದನೇ ಅಧಿಕ ಹಿರಿಯ ಸಿ.ಜೆ....

ದ್ವಿಚಕ್ರ ವಾಹನ ಡಿಕ್ಕಿ-ಪಾದಚಾರಿ ಯುವಕ ಸಾವು

ಚಿಕ್ಕಮಗಳೂರು: ತಾಲೂಕಿನ ಕುರುಬರಹಳ್ಳಿ ಗ್ರಾಮದ ಸಮೀಪ ದ್ವಿಚಕ್ರ ವಾಹನ ಡಿಕ್ಕಿ ಹೊಡೆದ ಪರಿಣಾಮ ಪಾದಚಾರಿ ಯುವಕ ಮೃತಪಟ್ಟಿದ್ದು, ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರ ಮಾಹಿತಿ ಪ್ರಕಾರ, ಮಾಚೇನಹಳ್ಳಿ ಗ್ರಾಮದ...

Related Articles

100 ಅಡಿ ಪ್ರಪಾತಕ್ಕೆ ಉರುಳಿದ 10 ಚಕ್ರದ ಲಾರಿ

ಚಿಕ್ಕಮಗಳೂರು: ಬ್ರೇಕ್ ಫೇಲ್ ಆಗಿ ಚಾಲಕನ ನಿಯಂತ್ರಣ ತಪ್ಪಿದ ೧೦ ಚಕ್ರದ ಲಾರಿಯೊಂದು ರಸ್ತೆ ಪಕ್ಕದ...

ದಾಸರಹಳ್ಳಿ ಕೆರೆ ಸೆ.೧೦ ರಂದು ಲೋಕಾರ್ಪಣೆ

ಚಿಕ್ಕಮಗಳೂರು: ಸುಮಾರು ೨ ಕೋಟಿ ರುಪಾಯಿ ವೆಚ್ಚದಲ್ಲಿ ಅಭಿವೃದ್ಧಿ ಪಡಿಸಲಾಗುತ್ತಿರುವ ದಾಸರಹಳ್ಳಿ ಕೆರೆಯನ್ನು ಸೆಪ್ಟಂಬರ್ ೧೦...

ಸಾಮಾಜಿಕ ಹೋರಾಟಗಾರನ ಹತ್ಯೆಯ ಆರೋಪಿಗಳ ಕಠಿಣ ಶಿಕ್ಷೆಗೆ ಮನವಿ

ಚಿಕ್ಕಮಗಳೂರು:  ಸಾಮಾಜಿಕ ಹೋರಾಟಗಾರ ಹಾಗೂ ದಲಿತ ಮುಖಂಡ ಭೂಮಾನ ಂದ ಹತ್ಯೆಗೈದ ಆರೋಪಿಗಳಿಗೆ ಕಠಿಣ ಶಿಕ್ಷೆ...

ಕನಿಷ್ಟ ವೇತನ ಜಾರಿಗೆ ಆಗ್ರಹಿಸಿ ಹೊರಗುತ್ತಿಗೆ ನೌಕರರಿಂದ ಪ್ರತಿಭಟನೆ

ಚಿಕ್ಕಮಗಳೂರು:  ಸರ್ಕಾರಿ ಕಚೇರಿಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಹೊರಗುತ್ತಿಗೆ ನೌ ಕರರಿಗೆ ಕಾರ್ಮಿಕ ಆಯುಕ್ತರ ಆದೇಶದಂತೆ ಕನಿಷ್ಟ ವೇತನ...