ಚಿಕ್ಕಮಗಳೂರು: ಜಿಲ್ಲಾ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯಡಿ ಖಾಲಿ ಇರುವ ಅಂಗನವಾಡಿ ಕಾರ್ಯಕರ್ತೆ ಮತ್ತು ಸಹಾಯಕಿಯರ ಹುದ್ದೆಗಳಿಗೆ ಆಯಾ ಕಂದಾಯ ಗ್ರಾಮ, ನಗರ ಕಂದಾಯ ವಾರ್ಡ್ಗಳ ಅರ್ಹ ಅಭ್ಯರ್ಥಿಗಳಿಂದ ಜಿಲ್ಲೆಯ ಒಟ್ಟು ೨೯ ಅಂಗನವಾಡಿ ಕಾರ್ಯಕರ್ತೆಯರು ಹಾಗೂ ೨೦೩ ಸಹಾಯಕಿಯರ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ.
ಚಿಕ್ಕಮಗಳೂರು ತಾಲ್ಲೂಕಿನಲ್ಲಿ ೦೩ ಅಂಗನವಾಡಿ ಕಾರ್ಯಕರ್ತೆಯರು, ೫೧ ಸಹಾಯಕಿಯರ ಹುದ್ದೆಗಳು, ಕಡೂರು ತಾಲ್ಲೂಕಿನಲ್ಲಿ ೮ ಅಂಗನವಾಡಿ ಕಾರ್ಯಕರ್ತೆಯರು ಹಾಗೂ ೩೯ ಸಹಾಯಕಿಯರ ಹುದ್ದೆಗಳು, ತರೀಕೆರೆ ತಾಲ್ಲೂಕಿನಲ್ಲಿ ೭ ಕಾರ್ಯಕರ್ತೆಯರು, ೨೩ ಸಹಾಯಕಿಯರು, ಶೃಂಗೇರಿಯಲ್ಲಿ ೦೧ ಕಾರ್ಯಕರ್ತೆ ೧೧ ಸಹಾಯಕಿಯರು, ಕೊಪ್ಪ ತಾಲ್ಲೂಕಿನಲ್ಲಿ ೭ ಕಾರ್ಯಕರ್ತೆಯರು ಹಾಗೂ ೧೩ ಸಹಾಯಕಿಯರು, ನರಸಿಂಹರಾಜಪುರ ತಾಲ್ಲೂಕಿನಲ್ಲಿ ೦೨ ಕಾರ್ಯಕರ್ತೆಯರು, ೧೯ ಸಹಾಯಕಿಯರು ಹಾಗೂ ಮೂಡಿಗೆರೆಯಲ್ಲಿ ೦೧ ಕಾರ್ಯಕರ್ತೆ ಹಾಗೂ ೪೭ ಸಹಾಯಕಿಯರ ಹುದ್ದೆಗಳು ಖಾಲಿ ಇದ್ದು, ಇವುಗಳಿಗೆ ನೇಮಕಾತಿ ಮಾಡಿಕೊಳ್ಳಲು ಕ್ರಮ ಕೈಗೊಳ್ಳಲಾಗಿದೆ.
ಜಿಲ್ಲೆಯ ಅರ್ಹ ಅಭ್ಯರ್ಥಿಗಳು ಸಂಬಂಧಪಟ್ಟ ತಾಲ್ಲೂಕು ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಚೆರಿಗಳಿಂದ ಅರ್ಜಿಗಳನ್ನು ಪಡೆದು, ಭರ್ತಿ ಮಾಡಲಾದ ಅರ್ಜಿ ಮತ್ತು ಪೂರಕ ದಾಖಲೆಗಳನ್ನು ಮುಚ್ಚಿದ ಲಕೋಟೆಯಲ್ಲಿ ಆಗಸ್ಟ್ ೩೧ರ ಸಂಜೆ ೫.೩೦ರೊಳಗೆ ಆಯಾ ತಾಲ್ಲೂಕು ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಚೇರಿಗಳಲ್ಲಿ ಸಲ್ಲಿಸಬಹುದು.
ಹೆಚ್ಚಿನ ಮಾಹಿತಿಗೆ ಸಂಬಂಧಪಟ್ಟ ತಾಲ್ಲೂಕು ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳನ್ನು ಕಚೆರಿ ವೇಳೆಯಲ್ಲಿ ಸಂಪರ್ಕಿಸಬಹುದು ಎಂದು ಜಿಲ್ಲಾ ಮಟ್ಟದ ಆಯ್ಕೆ ಸಮಿತಿಯ ಅಧ್ಯಕ್ಷರಾದ ಜಿಲ್ಲಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Applications for the posts of Anganwadi workers and helpers in the district
Leave a comment