Home ಜಿಲ್ಲಾ ಸಹಕಾರ ಯೂನಿಯನ್ ಚುನಾವಣೆಯಲ್ಲಿ ಮತ್ತೆ ಬಿಜೆಪಿ ಬೆಂಬಲಿತರಿಗೆ ಗೆಲುವು
HomechikamagalurLatest Newsnamma chikmagalur

ಜಿಲ್ಲಾ ಸಹಕಾರ ಯೂನಿಯನ್ ಚುನಾವಣೆಯಲ್ಲಿ ಮತ್ತೆ ಬಿಜೆಪಿ ಬೆಂಬಲಿತರಿಗೆ ಗೆಲುವು

Share
Share
ಚಿಕ್ಕಮಗಳೂರು: ಜಿಲ್ಲಾ ಸಹಕಾರ ಕೂಟ(ಯೂನಿಯನ್)ದ ನಿರ್ದೇಶಕರ ೧೩ ಸ್ಥಾನಗಳಿಗೆ ನಡೆದ ಭಾನುವಾರ ನಡೆದ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿತರು ೧೨ ಸ್ಥಾನಗಳಲ್ಲಿ ಭರ್ಜರಿ ಗೆಲುವು ಸಾಧಿಸಿದ್ದು, ಮತ್ತೆ ಅಧಿಕಾರದ ಚುಕ್ಕಾಣಿ ಹಿಡಿಯಲಿದ್ದಾರೆ. ಕಳೆದ ಎರಡು ಅವಧಿಯಲ್ಲೂ ಬಿಜೆಪಿ ಅಧಿಕಾರದಲ್ಲಿತ್ತು.
ಗೆದ್ದವರಿವರು: ಎ.ಕೆ. ಭಾರತಿ (ಜಿಲ್ಲೆಯ ಎಲ್ಲಾ ವಿವಿಧ ವ್ಯಾಪ್ತಿಯ ಮಹಿಳಾ ಸಹಕಾರ ಕ್ಷೇತ್ರ ಸಂಘ ಹಾಗೂ ಬ್ಯಾಂಕುಗಳ ಕ್ಷೇತ್ರ), ಸಿ.ಎಸ್.ರಂಗನಾಥ್ (ಪ್ರಾಥಮಿಕ ಕೃಷಿ ಪತ್ತಿನ ಬ್ಯಾಂಕುಗಳು, ಪಿಕಾರ್ಡ್ ಬ್ಯಾಂಕುಗಳು ಹಾಗೂ ಟಿಎಪಿಸಿಎಂಸ್ ಕ್ಷೇತ್ರ), ಪಿ.ಶಶಿಕುಮಾರ್ (ಪಿಸಿಎಆರ್‌ಡಿ ಬ್ಯಾಂಕುಗಳು, ಪಿಕಾರ್ಡ್ ಬ್ಯಾಂಕುಗಳು ಹಾಗೂ ಟಿಎಪಿಸಿಎಂಎಸ್ ಕ್ಷೇತ್ರ). ಸಿ.ಹೆಚ್.ಕುಶಕುಮಾರ್ (ಹಾಲು ಉತ್ಪಾಧಕರ ಸಹಕಾರ ಸಂಘಗಳ ಕ್ಷೇತ್ರ), ಡಾ. ಜಿ.ಎಸ್.ಮಹಾಬಲ (ಸೌಹಾದ ಸಹಕಾರಿಗಳ ಕ್ಷೇತ್ರ), ಕೆ.ಬಿ.ಸೋಮೇಶ್ (ಇತರ ಸಹಕಾರ ಸಂಘಗಳ ಕ್ಷೇತ್ರ) ಹಾಗೂ ಟಿ.ಧನಪಾಲ್ (ಇತರ ಸಹಕಾರ ಸಂಘಗಳ ಕ್ಷೇತ್ರ) ಚುನಾಯಿತರಾಗಿದ್ದಾರೆ.
ಅವಿರೋಧ ಆಯ್ಕೆಯಾದವರಿವರು: ಬಿ.ಸಿ.ಲೋಕಪ್ಪಗೌಡ (ಜಿಲ್ಲಾ ಮಟ್ಟದ ಕಾರ್ಯವ್ಯಾಪ್ತಿಯನ್ನು ಹೊಂದಿದ ಸಹಕಾರ ಸಂಘ ಹಾಗೂ ಬ್ಯಾಂಕುಗಳ ಕ್ಷೇತ್ರ). ಬಿ.ಕೆ.ದಿವಾಕರ (ಪಿಸಿಎಆರ್‌ಡಿ ಸಂಘಗಳು, ಪಿಕಾರ್ಡ್ ಹಾಗೂ ಟಿಎಪಿಸಿಎಂಎಸ್ ಕ್ಷೇತ್ರ ಮೂಡಿಗೆರೆ), ಎಚ್.ಕೆ.ಪ್ರಶಾಂತ (ಪಿಸಿಎಆರ್‌ಡಿ ಸಂಘಗಳು, ಪಿಕಾರ್ಡ್ ಹಾಗೂ ಟಿಎಪಿಸಿಎಂಎಸ್ ಕ್ಷೇತ್ರ ಕೊಪ್ಪ ತಾಲ್ಲೂಕು), ಸುಭಾಷ್ ಪಿ.(ಪಿಸಿಎಆರ್‌ಡಿ ಸಂಘಗಳು, ಪಿಕಾರ್ಡ್ ಹಾಗೂ ಟಿಎಪಿಸಿಎಂಎಸ್ ಕ್ಷೇತ್ರ ಶೃಂಗೇರಿ ತಾಲ್ಲೂಕು), ಸೀಗೆಹಡ್ಲು ಹರೀಶ್ (ಪಿಸಿಎಆರ್‌ಡಿ ಸಂಘಗಳು, ಪಿಕಾರ್ಡ್ ಹಾಗೂ ಟಿಎಪಿಸಿಎಂಎಸ್ ಕ್ಷೇತ್ರ ತರೀಕೆರೆ ತಾಲ್ಲೂಕು) ಮತ್ತು ವೆಂಕಟೇಶ್ ಕೆ.ಟಿ (ಪಿಸಿಎಆರ್‌ಡಿ ಸಂಘಗಳು, ಪಿಕಾರ್ಡ್ ಹಾಗೂ ಟಿಎಪಿಸಿಎಂಎಸ್ ಕ್ಷೇತ್ರ ನ.ರಾ.ಪುರ ತಾಲ್ಲೂಕು) ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ವಿಜಯೋತ್ಸವದ ಬಳಿಕ ಯೂನಿಯನ್‌ನ ಹಾಲಿ ಅಧ್ಯಕ್ಷ ಬಿಜೆಪಿ ಮುಖಂಡ ಡಾ.ಜಿ.ಎಸ್.ಮಹಾಬಲ ಮಾತನಾಡಿ, ಬಿಜೆಪಿ ಬೆಂಬಲಿತರ ಗೆಲುವಿಗೆ ಸಹಕರಿಸಿದ ಪಕ್ಷದ ಎಲ್ಲಾ ಮುಖಂಡರು, ಕಾರ್ಯಕರ್ತರು ಹಾಗೂ ಮತದಾರರಿಗೆ ಅಭಿನಂದನೆ ಸಲ್ಲಿಸುವುದಾಗಿ ತಿಳಿಸಿದರಲ್ಲದೆ, ಯೂನಿಯನ್‌ನ ೧ ನಿರ್ದೇಶಕ ಸ್ಥಾನವನ್ನು ಹೊರತುಪಡಿಸಿ ಉಳಿದ ೧೨ ಸ್ಥಾನಗಳಲ್ಲಿ ಬಿಜೆಪಿ ಬೆಂಬಲಿತರು ಗೆಲುವು ಸಾಧಿಸಿದ್ದಾರೆ. ಸಹಕಾರಿ ಕ್ಷೇತ್ರದಲ್ಲಿ ಬಿಜೆಪಿ ಕಾರ್ಯಕರ್ತರು ಮತ್ತು ಸಹಕಾರಿಗಳು ಹೆಚ್ಚು ಆಸಕ್ತಿಯಿಂದ ಪಾಲ್ಗೊಂಡು ಸಹಕಾರ ಕ್ಷೇತ್ರವನ್ನು ಬಲಪಡಿಸಲು ಕೈಜೋಡಿಸಿದ್ದಾರೆ. ಹಿಂದೆ ಯೂನಿಯನ್‌ನಲ್ಲಿ ಉತ್ತಮ ಆಡಳಿತ ನೀಡಿರುವುದು ಈ ಆಯ್ಕೆಗೆ ಕಾರಣ ಎಂದರು.
ಹಿರಿಯ ನಿರ್ದೇಶಕ ಸಿ.ಎಸ್.ರಂಗನಾಥ್ ಮಾತನಾಡಿ, ಪಕ್ಷದ ಹಿರಿಯ ಮುಖಂಡರು, ಕಾರ್ಯಕರ್ತರು ಹಾಗೂ ಸಹಕಾರಿಗಳ ಬೆಂಬಲದಿಂದಾಗಿ ಬಿಜೆಪಿ ಬೆಂಬಲಿತ ನಿರ್ದೇಶಕರು ಅತೀ ಹೆಚ್ಚು ಸ್ಥಾನಗಳಲ್ಲಿ ಗೆಲ್ಲಲು ಸಾಧ್ಯವಾಗಿದೆ ಎಂದು ತಿಳಿಸಿದರು.
BJP supporters win again in District Cooperative Union elections
Share

Leave a comment

Leave a Reply

Your email address will not be published. Required fields are marked *

Don't Miss

ನಾಮಫಲಕದಲ್ಲಿ ಶೇ.೬೦ರಷ್ಟು ಕನ್ನಡಕ್ಕೆ ಪ್ರಾಧಾನ್ಯತೆಗೆ ಸೂಚನೆ

ಚಿಕ್ಕಮಗಳೂರು: ಮುಂದಿನ ಒಂದು ವಾರದೊಳಗೆ ಉದ್ಯಮದ ಎಲ್ಲಾ ನಾಮಫಲಕಗಳಲ್ಲಿ ಸರ್ಕಾರದ ನಿಯಮಗಳ ಅನ್ವಯ ಶೇ. ೬೦ರಷ್ಟು ಕನ್ನಡ ನಾಮಫಲಕ ಇರುವಂತೆ ಕ್ರಮ ಕೈಗೊಳ್ಳಬೇಕು. ತಪ್ಪಿದಲ್ಲಿ ನಗರಸಭೆಯಿಂದ ನಾಮಫಲಕಗಳನ್ನು ತೆರವುಗೊಳಿಸಿ ಕಾನೂನು ರೀತಿ...

ಮದುವೆ ಮನೆಯಲ್ಲಿ ₹3.75 ಲಕ್ಷ ಮೌಲ್ಯದ ಚಿನ್ನಾಭರಣ ಕಳವು

ಚಿಕ್ಕಮಗಳೂರು: ಜಿಲ್ಲೆಯ ಬಾಳೆಹೊನ್ನೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಮದುವೆ ಕಾರ್ಯಕ್ರಮಕ್ಕೆ ತೆರಳಿದ್ದ ವೇಳೆ ಸುಮಾರು ₹3.75 ಲಕ್ಷ ಮೌಲ್ಯದ ಚಿನ್ನಾಭರಣ ಕಳುವಾಗಿರುವ ಘಟನೆ ಬೆಳಕಿಗೆ ಬಂದಿದೆ. ಪ್ರಕರಣ ಸಂಬಂಧ ಇಬ್ಬರು ಸಂಬಂಧಿಕರ...

Related Articles

ಮನೆಯಲ್ಲಿ ಇಟ್ಟಿದ್ದ ಚಿನ್ನಾಭರಣ-20 ಸಾವಿರ ನಗದು ಕಳವು

ಚಿಕ್ಕಮಗಳೂರು: ಮನೆಯ ಬೀರುವಿನಲ್ಲಿ ಇರಿಸಿದ್ದ ಸುಮಾರು ೨೮ ಗ್ರಾಂ ಚಿನ್ನಾಭರಣ ಹಾಗೂ ?೨೦ ಸಾವಿರ ನಗದು...

ವೃದ್ದಾಪ್ಯ, ಅಂಗವಿಕಲ ವೇತನ ವಿಳಂಬ ಖಂಡಿಸಿ ಬಿಜೆಪಿ ಪ್ರತಿಭಟನೆ

ಚಿಕ್ಕಮಗಳೂರು: ವೃದ್ದಾಪ್ಯ, ವಿಧವಾ, ವಿಕಲಚೇತನ ಹಾಗೂ ಬಿಪಿಎಲ್ ಕಾರ್ಡ್ ರದ್ದು ಪಡಿಸಿರುವ ರಾಜ್ಯದ ಕಾಂಗ್ರೆಸ್ ಸರ್ಕಾರದ...

19 ಲಕ್ಷ ಜನರ ಪಿಂಚಣಿ ರದ್ದು: ಸರ್ಕಾರದ ವಿರುದ್ಧ ವಿಧಾನಮಂಡಲದಲ್ಲಿ ಸಂಗ್ರಾಮ

ಸಖರಾಯಪಟ್ಟಣ: ರಾಜ್ಯದಲ್ಲಿ 19 ಲಕ್ಷಕ್ಕೂ ಹೆಚ್ಚು ಜನರ ವೃದ್ಧಾಪ್ಯ, ವಿಧವಾ ಹಾಗೂ ಅಂಗವಿಕಲ ಪಿಂಚಣಿಯನ್ನು ರದ್ದುಪಡಿಸಲಾಗಿದೆ....

ಸಖರಾಯಪಟ್ಟಣದ ಮೂಲಸೌಕರ್ಯ ಸಮಸ್ಯೆ ಪರಿಹಾರಕ್ಕೆ 5 ಬೇಡಿಕೆ

ಚಿಕ್ಕಮಗಳೂರು: ಜಿಲ್ಲೆಯ ಪ್ರಮುಖ ಗ್ರಾಮ ಪಂಚಾಯಿತಿಗಳಲ್ಲಿ ಒಂದಾಗಿರುವ ಸಖರಾಯಪಟ್ಟಣದಲ್ಲಿ ಮೂಲಭೂತ ಸೌಲಭ್ಯಗಳ ಕೊರತೆಯಿಂದ ಜನರು ತೊಂದರೆ...