Home namma chikmagalur ಸಾಹಿತ್ಯ ಸಮ್ಮೇಳನ ಅಧ್ಯಕ್ಷತೆಗೆ ಬುರುಡೆ ಮಂಜುನಾಥ್ !
namma chikmagalurchikamagalurHomeLatest News

ಸಾಹಿತ್ಯ ಸಮ್ಮೇಳನ ಅಧ್ಯಕ್ಷತೆಗೆ ಬುರುಡೆ ಮಂಜುನಾಥ್ !

Share
Share

ಅಜ್ಜಂಪುರ: ದ್ವೇಷ, ಅಸೂಯೆ, ಕುಟುಂಬ ಕಂಟಕ , ಅಪರಿಚಿತ ಎ.ಎನ್.ಮಂಜುನಾಥ್ ನನ್ನು ತಾಲ್ಲೂಕು ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆಯ ಆಯ್ಕೆಗೆ ವ್ಯಾಪಕ ವಿರೋಧ ವ್ಯಕ್ತವಾಗಿದೆ.

ಅಜ್ಜಂಪುರದಲ್ಲಿ ಹುಟ್ಟಿದ್ದು ಬಿಟ್ಟರೆ ಮಂಜುನಾಥ್ ಗೂ ಅಜ್ಜಂಪುರಕ್ಕೂ ಸಂಬಂಧವಿಲ್ಲ. ಇಂತವರನ್ನು ಆಯ್ಕೆ ಮಾಡಿದ್ದು ಏಕೆ ಎಂದು ಇಲ್ಲಿನ ಜನ ಪ್ರಶ್ನೆ ಮಾಡಿದ್ದಾರೆ. ಜನತಾದಳದ ಮುಖಂಡರ ಎಸ್,ಶಿವಾನಂದ್ ಮತ್ತಿತರರು ಈ ಬಗ್ಗೆ ನೈಜ ಪ್ರಶ್ನೆ ಎತ್ತಿದ್ದಾರೆ.

ಬುರುಡೆ ಮಂಜುನಾಥ್ ಮತ್ತು ಅಣ್ಣಾ ದತ್ತಾ ಫೈನಾನ್ಸ್ ಮಾಡಲು ಹಲವು ಶಿಕ್ಷಕರು ಮತ್ತು ನಿವೃತ್ತ ಶಿಕ್ಷಕರು ಹಾಗೂ ಬಡ ವ್ಯಾಪಾರಿಗಳಿಂದ ಹಣ ವಸೂಲಿ ಮಾಡಿದ್ದು ನಂತರ ದತ್ತಾ ಆತ್ಮಹತ್ಯೆ ಮಾಡಿಕೊಂಡರು. ಆಗಾ ಮಂಜುನಾಥ್ ಅಳಿದು ಉಳಿದ ಹಣ ಇಟ್ಟುಕೊಂಡು ಊರು ಬಿಟ್ಟವನು ಈಗ ಸಮ್ಮೇಳನದ ಅಧ್ಯಕ್ಷನಾಗಿ ಮೆರವಣಿಗೆ ಮಾಡಿಸಿಕೊಳ್ಳುವುದು ಮತ್ತು ಮಾಡುವುದು ಎಷ್ಟರಮಟ್ಟಿಗೆ ಸರಿ ಎಂದು ಆಕ್ರೋಶ ವ್ಯಕ್ತವಾಗಿದೆ.

ಮಂಜುನಾಥ್ ಅಣ್ಣಾ ದತ್ತಾ ಸತ್ತ ನಂತರ ಅತ್ತಿಗೆ ಇನ್ನೊಂದು ಮದುವೆಯಾಗಲು ಪ್ರಯತ್ನಿಸಿದಾಗ ಮಂಜುನಾಥ್ ಕುಟುಂಬಕ್ಕೆ ಕಿರುಕುಳ ಕೊಟ್ಟ ಆರೋಪ ಸೇರಿದಂತೆ ಹಲವು ದೂರುಗಳು ಇವೆ.ಹೆಂಡತಿ ಹೆಸರಿನಲ್ಲಿ ಲೇಖನಗಳನ್ನು ಬರೆಯುತ್ತಿದ್ದರು ಮತ್ತು ಲಾಭಿ ಮಾಡುವುದರಲ್ಲಿ ಎಕ್ಸ್ ಫರ್ಟ್ ಇರುವ ಈ ಬುರುಡೆ ಮಂಜುನಾಥ್ ದ್ವೇಷ ,ಅಸೂಯೆ ಬರಹದಲ್ಲಿ ಕೂಡಾ ನಿಪುಣ ಎನ್ನುತ್ತಾರೆ.

ಜಿಲ್ಲೆಯಲ್ಲಿ ಸಾಹಿತ್ಯ ಪರಿಷತ್ತು ಚಟುವಟಿಕೆಯಿಂದ ಇದೆ.ಹೊಸ, ಹೊಸ ಹೆಸರಿನ ಪ್ರಶಸ್ತಿಗಳ ಜನಕ ಸೂರಿ ಶ್ರೀನಿವಾಸ್ ಊರು ಕೂಡ ಅಜ್ಜಂಪುರ ಇಲ್ಲಿ ರಗಳೆ ನಡೆಯುವುದನ್ನು ತಪ್ಪಿಸದಿದ್ದರೆ ಜನ ಪ್ರತಿಭಟನೆ ಮಾಡುವುದು ಖಚಿತ.

ರಾಜ್ಯ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಮಹೇಶ್ ಜೋಷಿ ಅಟಾಟೋಪ ನೋಡಿ ಪ್ರತಿಭಟನೆ, ತನಿಖೆ ನೋಡಿ ಆಡಳಿತಾಧಿಕಾರಿ ನೇಮಕ ಮಾಡಿ ಸರ್ಕಾರ ಆದೇಶ ಮಾಡಿದೆ. ಸರ್ಕಾರದಿಂದ ಬೇಕಾಬಿಟ್ಟಿ ಅನುದಾನ ಪಡೆಯುವ ಜೊತೆಗೆ ಸಮ್ಮೇಳನ ಅಧ್ಯಕ್ಷರಿಂದ ಹಣ,ಊಟ ಉಪಚಾರ ಕಾರು ಪಡೆದು ಓಡಾಡುವ ಮತ್ತು ಸಾರ್ವಜನಿಕರಿಂದ ಹಣ ವಸೂಲಿ ಮಾಡಿ ಸಮ್ಮೇಳನ ನಡೆಸುವವರು ಎಚ್ಚರಿಕೆ ವಹಿಸದಿದ್ದರೆ ಅಜ್ಜಂಪುರದಲ್ಲಿ ಪ್ರತಿಭಟನೆ ನಡೆಯುವುದು ಖಚಿತ.

ಸರ್ವ ಜನಾಂಗದ ಶಾಂತಿಯ ತೋಟದಂತಿರುವ ಅಜ್ಜಂಪುರ ಶಾಂತಿಗೆ ಮತ್ತು ಎಲ್ಲಾ ಜನರು ಒಂದೇ ಎಂಬ ಸೂರಿನಲ್ಲಿ ಇರುವಂತೆ ಇರುವ ಜನರ ಊರಲ್ಲಿ ಸಮ್ಮೇಳನಕ್ಕೆ ಗೌರವ ತರುವ ಸಾಹಿತಿಗಳು ,ಕಲಾವಿದರು ಮತ್ತು ಸಾಮಾಜಿಕ ಬದ್ದತ್ತೆ ಇರುವ ವ್ಯಕ್ತಿಗಳನ್ನು ಆಯ್ಕೆ ಮಾಡಿದರೆ ಒಳ್ಳೆಯದು.

Burude Manjunath to chair the literature conference!

Share

Leave a comment

Leave a Reply

Your email address will not be published. Required fields are marked *

Don't Miss

ದನದ ಮಾಂಸ ಮಾರಾಟದಲ್ಲಿ 40 ಕೆ.ಜಿ ಮಾಂಸ, ಕತ್ತಿ–ಚಾಕುಗಳು ಜಪ್ತಿ

ಚಿಕ್ಕಮಗಳೂರು: ನಗರದ ಅಯ್ಯಪ್ಪನಗರದ ಸಮೀಪದ ಶೆಡ್‌ನಲ್ಲಿ ಯಾವುದೇ ಪರವಾನಗಿ ಇಲ್ಲದೆ ದನದ ಮಾಂಸ ಮಾರಾಟ ಮಾಡುತ್ತಿದ್ದ ಆರೋಪದ ಮೇಲೆ ನಗರ ಠಾಣೆ ಪೊಲೀಸರು ವ್ಯಕ್ತಿಯೊಬ್ಬನ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಆ.9ರಂದು ಮಧ್ಯಾಹ್ನ...

ವಕೀಲ ವಿ.ಕೆ.ರಘು ಸಾಧನೆ ಯೋಗ ಮಾಡುವವರಿಗೆ ಪ್ರೇರಣೆ

ಚಿಕ್ಕಮಗಳೂರು: ಯೊಗ ನಮ್ಮ ಪ್ರಾಚೀನ ಋಷಿಮುನಿಗಳು ಜಗತ್ತಿಗೆ ಕೊಟ್ಟಂತಹ ಕೊಡುಗೆ. ವಕೀಲ ವಿ.ಕೆ.ರಘು ಅವರ ಯೋಗದ ಸಾಧನೆ ಯೋಗ ಮಾಡುವವರಿಗೆ ಒಂದು ಪ್ರೇರಣೆ ಕೊಡುತ್ತದೆ ಎಂದು ವಿಧಾನ ಪರಿಷತ್ ಸದಸ್ಯ ಡಾ.ಸಿ.ಟಿ.ರವಿ...

Related Articles

ಕೇಬಲ್ ಕಳ್ಳರೆಂದು ಶಂಕಿಸಿ ಮೂವರ ಮೇಲೆ ಹಲ್ಲೆ

ಕಡೂರು: ಪಂಪ್‌ಸೆಟ್‌ ಮೋಟಾರ್‌ ಕೇಬಲ್‌ ಕಳ್ಳರೆಂದು ಅನುಮಾನಿಸಿ ಮೂವರು ಯುವಕರ ಮೇಲೆ ಗುಂಪೊಂದು ಗಂಭೀರವಾಗಿ ಹಲ್ಲೆ...

₹5 ಲಕ್ಷ ಮೌಲ್ಯದ ಶ್ರೀಗಂಧದ ಮರಗಳ ಕಳವು

ತರೀಕೆರೆ: ಕೃಷಿ ತೋಟಕ್ಕೆ ನುಗ್ಗಿದ ಕಳ್ಳರು ಸುಮಾರು 15 ಶ್ರೀಗಂಧದ ಮರಗಳನ್ನು ಕಡಿದು ಕಳವು ಮಾಡಿಕೊಂಡು...

ಸ್ಕೂಟರ್‌ ಅಪಘಾತ: ಚಿಕಿತ್ಸೆ ಫಲಿಸದೆ ಸಾವು

ಕಡೂರು: ರಸ್ತೆಯಲ್ಲಿ ಅಡ್ಡಬಂದ ನಾಯಿಗೆ ಡಿಕ್ಕಿ ಹೊಡೆಯುವುದನ್ನು ತಪ್ಪಿಸಲು ಹೋಗಿ ಸ್ಕೂಟರ್‌ ನಿಯಂತ್ರಣ ತಪ್ಪಿ ಬಿದ್ದು...

ಧ್ವಜಾರೋಹಣದ ಕೆಲವೇ ಗಂಟೆಗಳಲ್ಲಿ ಕೆಳಗಿಳಿಸಿದ ರಾಷ್ಟ್ರಧ್ವಜ …?

ಚಿಕ್ಕಮಗಳೂರು: ಸ್ವಾತಂತ್ರ್ಯ ದಿನಾಚರಣೆಯಂದೇ ಚಿಕ್ಕಮಗಳೂರಿನಲ್ಲಿ ರಾಷ್ಟ್ರಧ್ವಜಕ್ಕೆ ಸಂಬಂಧಿಸಿದಂತೆ ವಿವಾದವೊಂದು ಭುಗಿಲೆದ್ದಿದ್ದು, ಕರ್ನಾಟಕ ರಾಜ್ಯ ರೈತ ಸಂಘದ...