Home namma chikmagalur ರಾಜ್ಯೋತ್ಸವ ಪ್ರಶಸ್ತಿಗೆ ರಹಮತ್ ತರೀಕೆರೆ ಆಯ್ಕೆ
namma chikmagalurHomeLatest NewsTarikere

ರಾಜ್ಯೋತ್ಸವ ಪ್ರಶಸ್ತಿಗೆ ರಹಮತ್ ತರೀಕೆರೆ ಆಯ್ಕೆ

Share
Share

ಚಿಕ್ಕಮಗಳೂರು :ಈ ಬಾರಿಯ ರಾಜ್ಯೋತ್ಸವ ಪ್ರಶಸ್ತಿಗೆ ರಹಮತ್ ತರೀಕೆರೆ ಆಯ್ಕೆಗೊಂಡಿದ್ದಾರೆ.

ಪರಿಚಯ: ಹುಟ್ಟು-ಚಿಕ್ಕಮಗಳೂರು ಜಿಲ್ಲೆಯ ಸಮತಳ (೧೯೫೯): ಕಲಿಕೆ- ಸಮತಳ ತರೀಕೆರೆ ಶಿವಮೊಗ್ಗ ಮೈಸೂರು: ಬಿಎ-ಪ್ರಥಮ ಸ್ಥಾನ, ತೀನಂಶ್ರೀ ಚಿನ್ನದ ಪದಕ: ಎಂ.ಎ. ಪ್ರಥಮಯಾಂಕ್, & ಚಿನ್ನದ ಪದಕ. ಆಧ್ಯಾಪನ- ಶಿವಮೊಗ್ಗದ ಸಹ್ಯಾದ್ರಿ ಹಾಗೂ ಡಿವಿಎಸ್ ಕಾಲೇಜು (೧೯೮೪-೯೨), ಹಂಪಿಯ ಕನ್ನಡ ವಿಶ್ವವಿದ್ಯಾಲಯ (೧೯೯೨-೨೦೨೧): ಸಂದರ್ಶಕ ಪ್ರಾಧ್ಯಾಪಕ-ಸ್ಟಾನ್‌ಫೋರ್ಡ್ ವಿಶ್ವವಿದ್ಯಾಲಯ, ಕ್ಯಾಲಿಫೋರ್ನಿಯಾ (೨೦೨೩): ಮೈಸೂರು ವಿಶ್ವವಿದ್ಯಾನಿಲಯ (೨೦೨೪-೨೫); ಪ್ರಕಟಣೆ ಪ್ರತಿಸಂಸ್ಕೃತಿ, ಕತ್ತಿಯಂಚಿನ ದಾರಿ, ನೆತ್ತರಸೂತಕ, ಬಾಗಿಲಮಾತು. ಚಿಂತನೆಯ ಪಾಡು (ಸಾಹಿತ್ಯ ವಿಮರ್ಶೆ): ಕರ್ನಾಟಕ ಸೂಫಿಗಳು, ಕರ್ನಾಟಕ ನಾಥಪಂಥ, ಕರ್ನಾಟಕ ಶಾಕ್ತಪಂಥ, ಕರ್ನಾಟಕ ಮೊಹರಂ, ರಾಜಧರ್ಮ, ಕರ್ನಾಟಕ ಗುರುಪಂಥ (ಸಂಶೋಧನೆ): ಸಂಶೋಧನ ಮೀಮಾಂಸೆ, ಸಾಂಸ್ಕೃತಿಕ ಆಧ್ಯಯನ (ಸಂಶೋಧನ ತಾತ್ವಿಕತೆ); ಮರದೊಳಗಣ ಕಿಚ್ಚು, ಧರ್ಮಪರೀಕ್ಷೆ, ಬಹುತ್ವ ಕರ್ನಾಟಕ (ಚಿಂತನೆ): ಅಂಡಮಾನ್ ಕನಸು, ಕದಳಿ ಹೊಕ್ಕು ಬಂದೆ. ಜೆರುಸಲೆಂ (ಪ್ರವಾಸಕಥನ): ನಡೆದಷ್ಟೂ ನಾಡು, ಸಣ್ಣಸಂಗತಿ, ಹಾಸುಹೊಕ್ಕು (ಅಂಶಣ): ಲೋಕವಿರೋಧಿಗಳ ಜತೆಯಲ್ಲಿ, ನ್ಯಾಯನಿಷ್ಟುರಿಗಳ ಜತೆಯಲ್ಲಿ (ಸಂದರ್ಶನ): ಹಿತ್ತಲಜಗತ್ತು (ಲಲಿತಪ್ರಬಂಧ): ಕುಲುಮೆ (ಆತ್ಮಕಥೆ): ಅಮೀರ್‌ಬಾಯಿ ಕರ್ನಾಟಕ (ಜೀವನಚರಿತ್ರೆ): ವಸಾಹತುಪ್ರಜ್ಞೆ ಮತ್ತು ವಿಮೋಚನೆ (ಗೂಗಿ ತಿಯಾಂಗೊ ಅವರ ‘ಡಿಕಲೊನೈಜಿಂಗ್ ದ ಮೈಂಡ್’ ಅನುವಾದ): ಪ್ರಶಸ್ತಿ- ಕರ್ನಾಟಕ ಸಾಹಿತ್ಯ ಆಕಾಡೆಮಿ ೧೯೯೩ ೧೯೯೪ ೨೦೦೦; ಕೇಂದ್ರ ಸಾಹಿತ್ಯ ಆಕಾಡೆಮಿ ೨೦೧೦; ಜಿಎಸ್‌ ಶಿವರುದ್ರಪ್ಪ, ಹಾಮಾ ನಾಯಕ, ಪಿ.ಲಂಕೇಶ್, ವಸುದೇವ ಭೂಪಾಳಂ, ಸುನೀತಿಶೆಟ್ಟಿ, ವೀಚಿಕ್ಕವೀರಯ್ಯ, ಎಸ್.ಜಿ.ಸಣ್ಣಗುಡ್ಡಯ್ಯ, ಕುಕ್ಕೆಸುಬ್ರಹ್ಮಣ್ಯಶಾಸ್ತ್ರಿ, ಪ್ರದೀಪ್, ಸಂದೇಶ, ಪಾಟೀಲಪುಟ್ಟಪ್ಪ, ಪ್ರೊ. ಕರೀಮುದ್ದೀನ್ ಸ್ಮಾರಕ ಪ್ರಶಸ್ತಿಗಳು: ಪ್ರವಾಸ- ಪ್ಯಾಲೆಸ್ಟೈನ್ ಟರ್ಕಿ ಜೋರ್ಡಾನ್ ಇಸ್ರೇಲ್ ಈಜಿಪ್ಟ್ ಜರ್ಮನಿ ಕ್ರೋತಿಯಾ ಸೊವೇನಿಯಾ ನೆದರ್‌ಲ್ಯಾಂಡ್ಸ್ ಇಟಲಿ ಭೂತಾನ ನೇಪಾಳ ಆಮೆರಿಕಾ ಇರಾಕ್ ಇರಾನ್ ಸೌರಿಕರೇಜಿಯಾ

Share

Leave a comment

Leave a Reply

Your email address will not be published. Required fields are marked *

Don't Miss

ಅಜ್ಜಂಪುರದ ಇಲಿಗೆ ‘ಹಣದ ಮೋಹ’

ಚಿಕ್ಕಮಗಳೂರು : ತುಮಕೂರಿನಲ್ಲಿ ಇತ್ತೀಚೆಗೆ ಇಲಿಯೊಂದು ಚಿನ್ನದ ಆಭರಣಗಳನ್ನು ಎಗರಿಸಿ ಸುದ್ದಿಯಾಗಿದ್ದರೆ, ಇತ್ತ ಚಿಕ್ಕಮಗಳೂರಿನಲ್ಲಿ ಮತ್ತೊಂದು ಚಾಣಾಕ್ಷ ಇಲಿ ಒಂದು ಹೆಜ್ಜೆ ಮುಂದೆ ಹೋಗಿ ನೇರವಾಗಿ ಹಣವನ್ನೇ ಕದ್ದು ತನ್ನ ಸಾಮ್ರಾಜ್ಯ...

ಜಿಲ್ಲಾಧಿಕಾರಿ ಭಂವರ್ ಸಿಂಗ್ ಮೀನಾ ಹೆಸರಿನಲ್ಲಿಯೂ ನಕಲಿ ವಾಟ್ಸಪ್ ಖಾತೆ

ಚಿಕ್ಕಮಗಳೂರು: ಇತ್ತೀಚಿನ ದಿನಗಳಲ್ಲಿ ಸೈಬರ್ ಕ್ರೈಂ ಪ್ರಕರಣಗಳು ದಿನೇ ದಿನೇ ಹೆಚ್ಚಾಗುತ್ತಿದ್ದು, ಹ್ಯಾಕರ್‌ಗಳು ಮತ್ತು ವಂಚಕರು ವಾಟ್ಸಪ್, ಫೇಸ್‌ಬುಕ್ ಸೇರಿದಂತೆ ವಿವಿಧ ಸಾಮಾಜಿಕ ಜಾಲತಾಣಗಳಲ್ಲಿ ಪ್ರಮುಖರ ಹೆಸರನ್ನು ದುರ್ಬಳಕೆ ಮಾಡಿಕೊಂಡು ಜನರನ್ನು...

Related Articles

ಮುಳ್ಳಯ್ಯನಗಿರಿ ಕ್ರಾಸ್ ಬಳಿ ಟಿಟಿ ವಾಹನ ಮರಕ್ಕೆ ಡಿಕ್ಕಿ

ಚಿಕ್ಕಮಗಳೂರು: ತಾಲೂಕಿನ ಪ್ರಸಿದ್ಧ ಪ್ರವಾಸಿ ತಾಣ ಮುಳ್ಳಯ್ಯನಗಿರಿ ಕ್ರಾಸ್ ಬಳಿ ಶುಕ್ರವಾರ ಇನೋವಾ ಕಾರು ನಿಯಂತ್ರಣ...

ಹಾಸ್ಟೆಲ್‌ ವಿದ್ಯಾರ್ಥಿ ಆತ್ಮಹತ್ಯೆಗೆ ಯತ್ನ

ಚಿಕ್ಕಮಗಳೂರು: ಸಮಗ್ರ ಗಿರಿಜನ ಕಲ್ಯಾಣ ಇಲಾಖೆ (ಐಟಿಡಿಪಿ) ವ್ಯಾಪ್ತಿಯ ಡಾ. ಬಿ.ಆರ್. ಅಂಬೇಡ್ಕರ್ ವಸತಿ ಶಾಲೆಯ...

ಮನೆಯ ಮೇಲ್ಛಾವಣಿಯ ಹೆಂಚು ತೆಗೆದು ನುಗ್ಗಿ ಸರಗಳ್ಳತನ

ನರಸಿಂಹರಾಜಪುರ: ಮನೆಯಲ್ಲಿ ದಂಪತಿ ಮಲಗಿದ್ದ ವೇಳೆ ಮೇಲ್ಛಾವಣಿಯ ಹೆಂಚು ತೆಗೆದು ಒಳನುಗ್ಗಿದ ಕಳ್ಳನೊಬ್ಬ ಮಹಿಳೆಯ ಕೊರಳಿನಲ್ಲಿದ್ದ...

ಕನಸು ಫೈನಾನ್ಸ್ ಹೆಸರಿನಲ್ಲಿ ₹1.60 ಲಕ್ಷ ವಂಚನೆ ಆರೋಪ

ಕಡೂರು: ಪ್ರತಿದಿನ ಉಳಿತಾಯದ ಹಣವನ್ನು ಸ್ವೀಕರಿಸಿ ಶೇ.7ರಷ್ಟು ಬಡ್ಡಿ ನೀಡುವುದಾಗಿ ನಂಬಿಸಿ, ಹಣವನ್ನು ವಾಪಸ್ ನೀಡದೆ...