Home Latest News ಗ್ರಾಹಕರ ಹಕ್ಕುಗಳನ್ನು ಸೇವೆಗಳನ್ನು ಕೇಳಿ ಪಡೆಯಬೇಕಾದ ಅನಿವಾರ್ಯತೆ
Latest NewsHomenamma chikmagalur

ಗ್ರಾಹಕರ ಹಕ್ಕುಗಳನ್ನು ಸೇವೆಗಳನ್ನು ಕೇಳಿ ಪಡೆಯಬೇಕಾದ ಅನಿವಾರ್ಯತೆ

Share
World Consumer Day program
World Consumer Day program
Share

ಚಿಕ್ಕಮಗಳೂರು:  ವಿಶ್ವ ಗ್ರಾಹಕರ ಹಕ್ಕುಗಳ ದಿನ ನಾವೆಲ್ಲರೂ ಗ್ರಾಹಕರಾಗಿರುವ ಈ ಯುಗದಲ್ಲಿ ನಮ್ಮ ಹಕ್ಕುಗಳನ್ನು ಸೇವೆಗಳನ್ನು ಕೇಳಿ ಪಡೆಯಬೇಕಾದ ಅನಿವಾರ್ಯತೆ ಇದೆ ಎಂದು ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಅಧ್ಯಕ್ಷರಾದ ಎನ್.ಆರ್. ಚನ್ನಕೇಶವ ಅವರು ಹೇಳಿದ್ದಾರೆ.

ಜಿಲ್ಲಾಡಳಿತ, ಆಹಾರ ನಾಗರೀಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ಕಾನೂನು ಮಾಪನ ಶಾಸ್ತ್ರ ಇಲಾಖೆ, ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ, ಟೌನ್ ಮಹಿಳಾ ಸಮಾಜ ಇವರುಗಳ ಸಂಯುಕ್ತಾಶ್ರಯದಲ್ಲಿ ಇಂದು ನಗರದ ಟಿ.ಎಂ.ಎಸ್  ಶಾಲಾ ಆವರಣದ ಸವೂರ್ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದ್ದ ವಿಶ್ವ ಗ್ರಾಹಕರ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಹಣ ಕೊಟ್ಟು ವಸ್ತು ಅಥವಾ ಸೇವೆ ಕೊಂಡುಕೊಳ್ಳುವವರೆಲ್ಲರೂ ಗ್ರಾಹಕರೇ ಆದರೆ ಹೆಚ್ಚಾಗಿ ಗ್ರಾಹಕರಿಗೆ ತಮಗೆ ಹಕ್ಕುಗಳಿವೆ ಎಂಬುದೇ ಗೊತ್ತಿರುವುದಿಲ್ಲ. ಇದನ್ನು ಎಲ್ಲರಿಗೂ ತಿಳಿಯುವುದು ತಮ್ಮ ಹಕ್ಕುಗಳನ್ನು ನ್ಯಾಯೋಚಿತವಾಗಿ ಪಡೆಯುವಂತೆ ಮಾಡುವುದೇ ಗ್ರಾಹಕರ ಹಕ್ಕುಗಳ ದಿನದ ಉದ್ದೇಶ ಎಂದು ಹೇಳಿದರು.

ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳಾದ ವಿ. ಹನುಮಂತಪ್ಪ ಅವರು ಮಾತನಾಡಿ ಪ್ರತಿ ವರ್ಷ ಮಾರ್ಚ್ ೧೫ ರಂದು ಎಲ್ಲಾ ದೇಶಗಳಲ್ಲಿ ವಿಶ್ವ ಗ್ರಾಹಕರ ಹಕ್ಕುಗಳ ದಿನವನ್ನಾಗಿ ಆಚರಿಸಲಾಗುತ್ತದೆ ಎಂದ ಅವರು ಗ್ರಾಹಕರಿಗೆ ನ್ಯಾಯ ಸಮ್ಮತವಾದ, ಸುರಕ್ಷಿತವಾದ ಮತ್ತು ಗುಣಮಟ್ಟ ಉತ್ಪನ್ನಗಳು ಸಿಗಬೇಕು ಎಂಬ ಉದ್ದೇಶದಿಂದ ೧೯೮೩ರಲ್ಲಿ ಕಾನೂನು ಜಾರಿಯಾಗಿ ಈ ದಿನಾಚರಣೆಯನ್ನು ಆಚರಿಸಲಾಗುತ್ತದೆ ಎಂದರು.

ಗ್ರಾಹಕ ವ್ಯವಹಾರ, ಆಹಾರ ಮತ್ತು ಸಾರ್ವಜನಿಕ ವಿತರಣಾ ಸಚಿವಾಲಯ, ಗ್ರಾಹಕ ಸಂರಕ್ಷಣಾ ಕಾಯಿದೆ ೨೦೧೯ನ್ನು ಜಾರಿಗೊಳಿಸಿತು. ಇದರೊಡನೆ ಗ್ರಾಹಕರ ಸುರಕ್ಷತೆಗೆ ಆದ್ಯತೆ ಎಂಬ ವಾದಕ್ಕೆ ಮತ್ತಷ್ಟು ಕಾನೂನು ಬಲ ಹೆಚ್ಚಾಗಿದೆ. ದೋಷಪೂರಿತ ವಸ್ತು ಸರಬರಾಜು ಮಾಡಿ ಆದರಿಂದ ಗ್ರಾಹರಿಗೆ ನಷ್ಟ ಉಂಟಾದಲ್ಲಿ ಅಥವಾ ಗ್ರಾಹಕರಿಗೆ ಅನ್ಯಾಯವಾದಲ್ಲಿ ಕನಿಷ್ಠ ೬ ತಿಂಗಳು ಜೈಲು ಶಿಕ್ಷೆ ಮತ್ತು ಒಂದು ಲಕ್ಷದವರಿಗೂ ದಂಡ ವಿಧಿಸಬಹುದು. ಗ್ರಾಹಕರು ಶೀಘ್ರವಾಗಿ ಅನ್ಯಾಯವಾದಲ್ಲಿ ೫ ಲಕ್ಷ ರೂಪಾಯಿ ದಂಡ, ಏಳು ವರ್ಷಗಳ ಜೈಲು ಶಿಕ್ಷೆ ವಿಧಿಸುವ ಅವಕಾಶವಿದೆ ಎಂದು ಹೇಳಿದರು.

ಗ್ರಾಹಕರು ಶೋಷಣೆಗೆ ಒಳಗಾಗಿದ್ದರೆ ಅಥವಾ ಸೇವೆಗಳಲ್ಲಿ ಅತೃಪ್ತಿ ಹೊಂದಿದ್ದಲ್ಲಿ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗಕ್ಕೆ ದೂರು ನೀಡಿ ಪರಿಹಾರ ಕಂಡುಕೊಳ್ಳಬೇಕು ಎಂದರು.

ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಸದಸ್ಯರಾದ ಪ್ರೇಮಾ ಇ., ಕಾನೂನು ಮಾಪನಶಾಸ್ತ ಇಲಾಖೆಯ ಸಹಾಯಕ ನಿಯಂತ್ರಕರಾದ ಬಿ.ಎನ್. ರಾಜೀವ್ ಮಾತನಾಡಿದರು.

ಟೌನ್ ಮಹಿಳಾ ಸಮಾಜದ ಅಧ್ಯಕ್ಷರಾದ ಗೀತಾ, ಎಂ.ಎಲ್. ಮೂರ್ತಿ ಮತ್ತಿತರು ಸಮಾರಂಭದಲ್ಲಿ ಉಪಸ್ಥಿತರಿದ್ದರು. ಸವಿತ ಅವರು ಸ್ವಾಗತಿಸಿದರು. ಟೌನ್ ಮಹಿಳಾ ಸಮಾಜ ಶಾಲಾ ವಿದ್ಯಾರ್ಥಿಗಳು ಪ್ರಾರ್ಥಿಸಿ ವಂದಿಸಿದರು.

World Consumer Day program

Share

Leave a comment

Leave a Reply

Your email address will not be published. Required fields are marked *

Don't Miss

ಅಯ್ಯನಕೆರೆಯಲ್ಲಿ ಈಜಲು ಹೋಗಿದ್ದ ಬಾಲಕ ಸಾವು

ಕಡೂರು: ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನ ಐತಿಹಾಸಿಕ ಅಯ್ಯನಕೆರೆಯಲ್ಲಿ ಈಜಲು ಹೋಗಿದ್ದ 13 ವರ್ಷದ ಬಾಲಕನೋರ್ವ ನೀರಿನಲ್ಲಿ ಮುಳುಗಿ ಮೃತಪಟ್ಟಿರುವ ಘಟನೆ ಸಂಭವಿಸಿದೆ. ಚಿಕ್ಕಮಗಳೂರು ನಗರದ ದಂಟರಮಕ್ಕಿ ನಿವಾಸಿಯಾದ ಪೃಥ್ವಿರಾಜ್ ಮೃತಪಟ್ಟ...

ರಬ್ಬರ್ ತೋಟದಲ್ಲಿ ಮನುಷ್ಯನ ತಲೆಬುರುಡೆ -ಮೂಳೆಗಳು ಪತ್ತೆ

ಎನ್.ಆರ್.ಪುರ: ಚಿಕ್ಕಮಗಳೂರು ಜಿಲ್ಲೆಯ ನರಸಿಂಹರಾಜಪುರ ತಾಲೂಕಿನ ಅರಳಿಕೊಪ್ಪ ಗ್ರಾಮದ ರಬ್ಬರ್ ತೋಟವೊಂದರಲ್ಲಿ ಮನುಷ್ಯನನ್ನು ಸುಟ್ಟು ಹಾಕಿರುವ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ. ಎಲ್ಲೋ ಬಿನ್ ಅವರಚ್ಚನ್ ಎಂಬುವವರಿಗೆ ಸೇರಿದ ರಬ್ಬರ್ ತೋಟದಲ್ಲಿ...

Related Articles

ಏ.30 ರಿಂದ ದ್ವಿತೀಯ ಪಿಯುಸಿ ಪರೀಕ್ಷೆ 2

ಚಿಕ್ಕಮಗಳೂರು: ದ್ವಿತೀಯ ಪಿಯುಸಿ ಪರೀಕ್ಷೆ 2 ಇದೇ ಏ.30 ರಿಂದ ಆರಂಭಗೊಳ್ಳುತ್ತಿರುವುದರಿಂದ ಪರೀಕ್ಷಾ ತಯಾರಿ ಕುರಿತು...

ಸಂವಿಧಾನದ ಮೂಲಕ ಡಾ.ಬಿ.ಆರ್.ಅಂಬೇಡ್ಕರ್ ಸಾವಿರ ಸಿದ್ದಾಂತಗಳನ್ನು ನೀಡಿದ್ದಾರೆ

ಚಿಕ್ಕಮಗಳೂರು: ಇತ್ತೀಚಿನ ವರ್ಷಗಳಲ್ಲಿ ಡಾ|ಬಿ.ಆರ್.ಅಂಬೇಡ್ಕರ್ ಅವರು ರಚಿಸಿದ ಸಂವಿಧಾನವನ್ನು ಬದಲಾಯಿಸುತ್ತೇವೆಂಬ ಮಾತುಗಳು ಕೇಳಿ ಬರುತ್ತಿದೆ. ಇಂತಹ...

ಇಂದು ಕೈವಾರ ತಾತಯ್ಯನವರ ದೇವಾಲಯ ಉದ್ಘಾಟನೆ

ಚಿಕ್ಕಮಗಳೂರು: ತಾಲೂಕಿನ ಸಗನಿಪುರ ರಸ್ತೆಯ ಕೈವಾರ ಗಿರಿಯಲ್ಲಿ ನೂತನವಾಗಿ ನಿರ್ಮಾಣ ಮಾಡಿರುವ ಶ್ರೀಯೋಗಿನರೇಯಣ ಯತೀಂದ್ರ ಕೈವಾರ...

ಕಾಂಗ್ರೆಸ್ – ಮಿತ್ರ ಪಕ್ಷದಿಂದ ದೇಶದ ಮಹಿಳೆಯರಿಗೆ ಮಾಡಿದ ಅಪಮಾನ

ಚಿಕ್ಕಮಗಳೂರು:ಸಂಸತ್ತಿನಲ್ಲಿ ನಾರಿಶಕ್ತಿ ಮಹಿಳಾ ಮೀಸಲಾತಿ ವಿರುದ್ಧ ಕಾಂಗ್ರೆಸ್ ಮತ್ತು ಅದರ ಮಿತ್ರ ಪಕ್ಷಗಳು ಮತಚಲಾಯಿಸುವ ಮೂಲಕ...