Home namma chikmagalur chikamagalur ತಾಂಡಗಳಿಗೆ ಕಾಂಗ್ರೆಸ್ ಶಾಸಕರ ಭೇಟಿ ಪ್ರವೇಶ ನಿಷೇಧ ಫಲಕ ಅಳವಡಿಕೆ
chikamagalurHomeLatest Newsnamma chikmagalur

ತಾಂಡಗಳಿಗೆ ಕಾಂಗ್ರೆಸ್ ಶಾಸಕರ ಭೇಟಿ ಪ್ರವೇಶ ನಿಷೇಧ ಫಲಕ ಅಳವಡಿಕೆ

Share
Share

ಚಿಕ್ಕಮಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಒಳಮೀಸಲಾತಿಯಲ್ಲಿ ಬಂಜಾರ ಸಮುದಾಯಕ್ಕೆ ಅನ್ಯಾಯ ಮಾಡಿದ್ದಾರೆ. ಕಾಂಗ್ರೆಸ್ ಶಾಸಕರು ನಮ್ಮ ತಾಂಡಗಳಿಗೆ ಭೇಟಿ ನೀಡದಂತೆ ಪ್ರವೇಶ ನಿಷೇಧ ಫಲಕ ಅಳವಡಿಸುತ್ತೇವೆ ಎಂದು ರಾಷ್ಟ್ರೀಯ ಘೋರ್ ಮುಳಾವ್ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಮಂಜುನಾಥ್ ನಾಯ್ಕ ಹೇಳಿದರು.

ಬಂಜಾರ ಸಮುದಾಯಕ್ಕೆ ಮುಖ್ಯಮಂತ್ರಿ ದ್ರೋಹ ಮಾಡಿದ್ದಾರೆ. ಒಳಮೀಸಲಾತಿಯಲ್ಲಿ ನಮ್ಮ ಬಂಜಾರ ಸಮುದಾಯಕ್ಕೆ ಅನ್ಯಾಯವಾಗಿದೆ ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ದೂರಿದರು.

ಬಿಜೆಪಿ ನೇತೃತ್ವದ ಸರ್ಕಾರ ಇದ್ದಾಗ ಮಾಧುಸ್ವಾಮಿ ವರದಿಯಲ್ಲಿ ಬಂಜಾರ ಸಮಾಜದವರಿಗೆ 4 ಜಾತಿಗಳು ಇದ್ದವು ಬಂಜಾರ, ಕೊರಮ, ಕೊರಚ, ಭೋವಿ ಜನಾಂಗಕ್ಕೆ ಶೇ 4ರಷ್ಟು ಮೀಸಲಾತಿ ಇತ್ತು ಅದನ್ನೇ ನಮ್ಮ ಸಮಾಜದವರು ‘ಬಿಜೆಪಿ ಹಠವೋ ತಾಂಡಾ ಬಚಾವೋ ಎಂದು ಬಿಜೆಪಿಗೆ ಮತ ಹಾಕದೆ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಿ ಅಹಿಂದ ನಾಯಕ ಸಿದ್ದರಾಮಯ್ಯ ಅವರನ್ನು ಮುಖ್ಯಮಂತ್ರಿಯಾಗಿ ಆಯ್ಕೆಯಾಗಲು ನೆರವಾಗಿದ್ದವು. ಆದರೆ, ಅವರು ನಮ್ಮ ಸಮುದಾಯಕ್ಕೆ ಅನ್ಯಾಯ ಮಾಡಿದ್ದಾರೆ ಎಂದು ಹೇಳಿದರು.

ಕಾಂಗ್ರೆಸ್ ನೇತೃತ್ವದ ಸರ್ಕಾರ ಬಂಜಾರ ಸಮುದಾಯಕ್ಕೆ ಸರಿಯಾದ ಅವಕಾಶ ನೀಡಿಲ್ಲ. ಸಂಪುಟದಲ್ಲಿ ಎಡಗೆ ಮತ್ತು ಬಲಗೈಗೆ ತಲಾ ಶೇ 5.25 ರಷ್ಟು ಮೀಸಲಾತಿ ಮಾಡಲಾಗಿ ನೀಡಲಾಗಿದೆ. ಭೋವಿ, ಕೊರಮಕ್ಕೆ ಶೇ 4.5 ರಷ್ಟು ಮೀಸಲಾತಿ ಮಾಡಿದ್ದಾರೆ. ಈ ಮೂಲಕ ನಮ್ಮ ಜನಾಂಗಕ್ಕೆ ಕಡಿಮೆ ಮೀಸಲಾತಿ ನೀಡಿದ್ದಾರೆ ಎಂದರು.

ನಮ್ಮ ಬಂಜಾರ ಸುಮುದಾಯದವರು ರಾಜ್ಯದ ಹರಪನಹಳ್ಳಿ, ದಾವಣಗೆರೆ ಸೇರಿದಂತೆ ವಿವಿಧೆಡೆಯಿಂದ ಸುಮಾರು 12 ಸಾವಿರ ಮಂದಿ ಮಲೆನಾಡಿನ ಕಾಫಿತೋಟಕ್ಕೆ ಕೂಲಿ ಕೆಲಸಕ್ಕೆ ಬಂದು ವರ್ಷದ 10 ತಿಂಗಳು ಇಲ್ಲಿ ಕೂಲಿ ಮಾಡುತ್ತಾರೆ. ಅಷ್ಟು ಬಡತನದ ಸ್ಥಿತಿಯಲ್ಲಿ ನಮ್ಮ ಸಮುದಾಯ ಇದೆ ಎಂದು ಹೇಳಿದರು.

ರಾಜ್ಯದ ನಮ್ಮ ಯಾವುದೇ ತಾಂಡಗಳಿಗೆ ಕಾಂಗ್ರೆಸ್ ಶಾಸಕರಿಗೆ ಪ್ರವೇಶ ಇಲ್ಲ ಎಂದು ಫಲಕ ಹಾಕಿಸು ತ್ತೇವೆ. ಮುಂದಿನ ದಿನಗಳಲ್ಲಿ ರಾಜ್ಯದಾದ್ಯಂತ ಉಗ್ರವಾ ಹೋರಾಟ ಮಾಡು ತ್ತೇವೆ ಎಂದು ಎಚ್ಚರಿಕೆ ನೀಡಿದರು.
ರಾಷ್ಟ್ರೀಯ ಘೋರ್ ಮಳಾವ್ ಸಂಘದ ಸುಮಿತ್ರ, ಭಾಮ, ಜಯಂತ್, ಕೃಷ್ಣಾನಾಯಕ್ ಸುದ್ದಿ ಗೋಷ್ಠಿಯಲ್ಲಿ ಭಾಗವಹಿಸಿದ್ದರು.

Signs prohibiting Congress MLAs from visiting Tandas installed

Share

Leave a comment

Leave a Reply

Your email address will not be published. Required fields are marked *

Don't Miss

ಅಜ್ಜಂಪುರ ತಾಲೂಕಿನ ಆಸಂಧಿ ಗ್ರಾಮದಲ್ಲಿ ರೈತರೊಬ್ಬರ ಎತ್ತಿನ ಗಾಡಿ ಕಳ್ಳತನ

ಅಜ್ಜಂಪುರ: ರೈತರೊಬ್ಬರ ಎತ್ತಿನ ಗಾಡಿ ಕಳ್ಳತನವಾಗಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ಅಜ್ಜಂಪುರ ತಾಲೂಕಿನ ಆಸಂಧಿ ಗ್ರಾಮದಲ್ಲಿ ನಡೆದಿದೆ. ಮಲ್ಲಪ್ಪ ಎಂಬುವವರು ಕಳೆದುಹೋದ ತಮ್ಮ ಕಬ್ಬಿಣದ ಎತ್ತಿನ ಗಾಡಿಗಾಗಿ ದೂರು ನೀಡಿದ್ದು, ಪೊಲೀಸರು...

ಶ್ರೀ ಲಕ್ಷ್ಮೀನರಸಿಂಹ ಸ್ವಾಮಿ ದೇವಸ್ಥಾನದಲ್ಲಿ ಕಳ್ಳತನ

ಶೃಂಗೇರಿ: ತಾಲೂಕಿನ ಕಿಗ್ಗಾ ಸಮೀಪದ ಯಡದಳ್ಳಿ ಗ್ರಾಮದ ಕೊಚ್ಚಾರಿನಲ್ಲಿರುವ ಐತಿಹಾಸಿಕ ಶ್ರೀ ಲಕ್ಷ್ಮೀನರಸಿಂಹ ಸ್ವಾಮಿ ದೇವಸ್ಥಾನದಲ್ಲಿ ಕಳ್ಳತನ ನಡೆದಿದ್ದು, ದೈವ ಸನ್ನಿಧಿಯಲ್ಲಿದ್ದ ಲಕ್ಷಾಂತರ ರೂಪಾಯಿ ಮೌಲ್ಯದ ಬೆಳ್ಳಿಯ ಆಭರಣಗಳು ಹಾಗೂ ಕಾಣಿಕೆ...

Related Articles

ಮಹಿಳಾ ವಿರೋಧಿ ಕಾಂಗ್ರೆಸ್ ಪಕ್ಷದ ನಡೆ ಖಂಡಿಸಿ ಮಹಿಳೆಯರು ಪ್ರತಿಭಟನೆ

ಚಿಕ್ಕಮಗಳೂರು: ಲೋಕಸಭಾ ಸ್ಥಾನದಲ್ಲಿ ಮಹಿಳೆಯರಿಗೆ ಶೇ.೩೩ ಮೀಸಲಾತಿ ಮಂಡನೆ ಅನುಷ್ಟಾನ ಗೊಳಿಸದಂತೆ ತಡೆಹಿಡಿದ ಮಹಿಳಾ ವಿರೋಧಿ...

ಲವ್ ಜಿಹಾದ್ ಖಂಡಿಸಿ ನಗರದಲ್ಲಿ ಪ್ರತಿಭಟನೆ

ಚಿಕ್ಕಮಗಳೂರು: ರಾಜ್ಯ ಹಾಗೂ ದೇಶದ ಹಲವೆಡೆ ನಡೆಯುತ್ತಿರುವ ಲವ್ ಜಿಹಾದ್ ಹಾಗೂ ಕಾರ್ಪೊರೇಟ್ ಜಿಹಾದ್‌ನಂತಹ ಕೃತ್ಯಗಳನ್ನು...

ವಿಶಿಷ್ಠ ಮಾದರಿಯಲ್ಲಿ ಡಾ. ಬಿ.ಆರ್ ಅಂಬೇಡ್ಕರ್ ಜಯಂತಿ

ಚಿಕ್ಕಮಗಳೂರು : ಸರ್ವ ಜನರ ಉತ್ಸವವಾಗಿ ಜನೋತ್ಸವದ ರೀತಿ ವಿಶಿಷ್ಠ ಮಾದರಿಯಲ್ಲಿ ಡಾ. ಬಿ.ಆರ್ ಅಂಬೇಡ್ಕರ್...

ಕ್ಷುಲ್ಲಕ ಕಾರಣಕ್ಕೆ ಯುವತಿ ಆತ್ಮಹತ್ಯೆಗೆ ಶರಣು

ಮೂಡಿಗೆರೆ: ತಂದೆ ಬೈದರು ಎಂಬ ಕ್ಷುಲ್ಲಕ ಕಾರಣಕ್ಕೆ ಅವಿವಾಹಿತೆ ಯುವತಿಯೋರ್ವರು ಮನೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ...