ಚಿಕ್ಕಮಗಳೂರು: ಆಸ್ತಿ ಮತ್ತು ಅಂತಸ್ತಿಗಿಂತ ಆರೋಗ್ಯವು ಮನುಷ್ಯನ ಅತಿದೊಡ್ಡ ಸಂ ಪತ್ತು. ಈ ಆರೋಗ್ಯಯುತ ಬದುಕು ಸಂಪಾದಿಸುವುದು ಸುಲಭದ ಮಾತಲ್ಲ. ಇದಕ್ಕಾಗಿ ಸೂಕ್ತ ಸಮಯಕ್ಕೆ ಆರೋಗ್ಯ ತಪಾಸಣೆಗೆ ಒಳಗಾಗಬೇಕು ಎಂದು ಶಾಸಕ ಹೆಚ್.ಡಿ.ತಮ್ಮಯ್ಯ ಹೇಳಿದರು.
ನಗರದ ಹಿರೇಮಗಳೂರು ಸಮೀಪದ ಆರ್.ಸಿ. ಕಂಫಟ್ಸ್ ಕಟ್ಟಡದಲ್ಲಿ ಭಾನುವಾರ ಆರ್.ವಿ.ಆರ್. ಹೆಲ್ತ್ಕೇರ್ ವತಿಯಿಂದ ಆಯೋಜಿಸಿದ್ದ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿ ಮನುಷ್ಯ ಐವತ್ತರ ಆಸುಪಾಸಿನಲ್ಲಿ ಸಣ್ಣಪುಟ್ಟ ಆರೋಗ್ಯ ತಪಾಸಣೆಗೆ ಒಳಗಾಗಬೇಕು. ಇದು ಭವಿಷ್ಯ ದಲ್ಲಿ ಅನಾರೋಗ್ಯಕ್ಕೆ ತುತ್ತಾವುದನ್ನು ತಪ್ಪಿಸುವ ಒಂದು ಕ್ರಿಯೆಯಾಗಿದೆ. ಹೀಗಾಗಿ ಪ್ರತಿಯೊಬ್ಬರು ವಯೋ ಸಹಜದಲ್ಲಿ ದೇಹ ಸ್ಥಿತಿಗತಿ ಅರಿತು ತಪಾಸಣೆ ನಡೆಸಿ, ಸೂಕ್ತ ಪರಿಹಾರ ಕಂಡುಕೊಳ್ಳಬೇಕು ಎಂದರು.
ಉಚಿತ ಶಿಬಿರದಲ್ಲಿ ಖ್ಯಾತ ವೈದ್ಯರುಗಳ ತಂಡವು ಭಾಗವಹಿಸಿ ಸಾರ್ವಜನಿಕರ ತಪಾಸಣೆಗೆ ಮುಂದಾ ಗುತ್ತಿರುವುದು ಶ್ಲಾಘನೀಯ ಕೆಲಸ. ಈ ಅವಕಾಶವನ್ನು ಮನೆಯ ಹಿರಿಯರು, ಆರ್ಥಿಕ ಸಂಕಷ್ಟ ಎದುರಿಸು ವವರು ಸಮರ್ಪಕವಾಗಿ ಬಳಸಿಕೊಂಡು ಶಿಬಿರವನ್ನು ಯಶಸ್ವಿಗೊಳಿಸಬೇಕು ಎಂದು ಸಲಹೆ ಮಾಡಿದರು.
ಕೆಲವು ಕುಟುಂಬಗಳಲ್ಲಿ ಆರ್ಥಿಕ ಸಂಕಷ್ಟದಿಂದ ಸಮಯಕ್ಕೆ ಸರಿಯಾಗಿ ತಪಾಸಣೆ ನಡೆಸುವುದಿಲ್ಲ. ಈ ಕಾರಣದಿಂದ ಕಾಲಕ್ರಮೇಣ ಆರೋಗ್ಯದಲ್ಲಿ ಏರುಪೇರಾಗಿ ಅನಾರೋಗ್ಯ ಅಥವಾ ಸಾವಿಗೀಡಾಗಬಹುದು. ಆದ್ದರಿಂದ ಅನಾರೋಗ್ಯ ಸಂಭವಿಸುವ ಮೊದಲೇ ಎಚ್ಚೆತ್ತುಕೊಂಡಲ್ಲಿ ಸದೃಢ ಆರೋಗ್ಯಪೂರ್ಣ ಜೀವನ ಪಡೆದುಕೊಳ್ಳಲು ಸಹಕಾರಿ ಎಂದರು.
ಮುಂದಿನ ದಿನಗಳಲ್ಲಿ ಮಂಗಳೂರಿನ ಆರ್.ವಿ.ಆರ್. ಹೆಲ್ತ್ಕೇರ್ ಜಿಲ್ಲಾ ಕೇಂದ್ರದಲ್ಲಿ ಆಸ್ಪತ್ರೆ ತೆರೆಯುವ ಆಕಾಂಕ್ಷೆ ಹೊಂದಿದ್ದು, ಸಾರ್ವಜನಿಕರಿಗೆ ಉತ್ತಮ ಚಿಕಿತ್ಸೆ, ತಪಾಸಣೆ ಹಾಗೂ ಅಗತ್ಯಗನುಸಾರ ಸೇವೆ ಕಲ್ಪಿ ಸುವ ಮೂಲಕ ಜಿಲ್ಲೆಯ ಜನರಿಗೆ ಆರೋಗ್ಯಯುತ ಬದುಕಿಗೆ ನಾಂದಿಯಾಡಲಿ ಎಂದು ಆಶಿಸಿದರು.
ಆರ್.ವಿ.ಆರ್. ಹೆಲ್ತ್ಕೇರ್ ಮಾಲೀಕ ಎಂ.ಎನ್.ವಿಜಯ್ಶೆಟ್ಟಿ ಮಾತನಾಡಿ ತಲೆನೋವು, ಮರೆವು, ಕೈ-ಕಾಲುಗಳ ನಿಶಕ್ತಿ, ಪಾರ್ಶ್ಚವಾಯು, ನಡುಕ, ತಲೆಸುತ್ತ, ಸಮತೋಲನ ಸಮಸ್ಯೆಯಿಂದ ಬಳಲುತ್ತಿರುವವ ರಿಗೆ ಉಚಿತ ಶಿಬಿರದ ಪ್ರಯೋಜನವನ್ನು ಪಡೆದುಕೊಳ್ಳಬೇಕು. ಅಲ್ಲದೇ ಆರೋಗ್ಯ ಚಿಕಿತ್ಸೆಯ ಕುರಿತು ಅರಿ ವು ಮೂಡಿಸುವುದೇ ಶಿಬಿರದ ಮುಖ್ಯ ಎಂದರು.
ಇದೇ ವೇಳೆ ಶೀಬಿರಕ್ಕೆ ಎಂಎಲ್ಸಿ ಸಿ.ಟಿ.ರವಿ, ಜಿಲ್ಲಾ ಆರೋಗ್ಯಾಧಿಕಾರಿ ಮಂಜುನಾಥ್ ಭಾಗವಹಿಸಿ ಶು ಭಕೋರಿದರು. ಈ ಸಂದರ್ಭದಲ್ಲಿ ಆರ್.ವಿ.ಆರ್. ಹೆಲ್ತ್ಕೇರ್ ವೈದ್ಯರಾದ ಡಾ|| ಬಿ.ಎಸ್.ರಾಘವೇಂದ್ರ, ಡಾ|| ನಿಶಿತಾ ಶೆಟ್ಟಿ, ಡಾ|| ಸಹನಾ ಜಿ.ಬಾಳಿಗಾ, ಡಾ|| ಅಂಜನ್ಕುಮಾರ್ ಡಾ|| ವಿಘ್ನೇಶ್ಸಂಪತ್ ಅಯ್ಯರ್ ಮುಂತಾದ ವರು ಉಪಸ್ಥಿತರಿದ್ದರು.
Health is a person’s greatest wealth more than wealth and status.
Leave a comment