ಚಿಕ್ಕಮಗಳೂರು: ಇತಿಹಾಸ ಪ್ರಸಿದ್ಧ ಗಟಾಗಟಿ ದೇವರು ಎಂದು ಕರೆಯಲ್ಪಡುವ ಕಡೂರು ತಾಲೂಕಿನ ನಿಡಘಟ್ಟದ ಶ್ರೀ ಆಂಜನೇಯಸ್ವಾಮಿ ದೇವಾಲಯಕ್ಕೆ ದಲಿತರು ಪ್ರವೇಶ ಮಾಡಿ ಹೊಸ ಇತಿಹಾಸ ನಿರ್ಮಾಣಕ್ಕೆ ನಾಂದಿ ಹಾಡಿದ್ದಕ್ಕೆ ತಾಲೂಕು ಆಡಳಿತ ಸಾಕ್ಷಿಯಾಯಿತು.
ಈ ಸಂಬಂಧ ಮಂಗಳವಾರ ನಿಡಘಟ್ಟ ಸೇರಿದಂತೆ ಹತ್ತಾರು ಹಳ್ಳಿಗಳಲ್ಲಿ ನೂರಾರು ದಲಿತ ಕುಟುಂಬಗಳು ಇವೆ. ಆದರೆ ಶತಮಾನ ಸಂದಿದ್ದರೂ ಕೂಡ ದಲಿತರಿಗೆ ದೇವಾಲಯ ಪ್ರವೇಶಿಸುವ ಅವಕಾಶ ನೀಡಿಕೆ ಕನಸಾಗಿತ್ತು. ಆದರೆ ಸಮುದಾಯಕ್ಕೆ ಇದ್ದ ನೋವು ಶ್ರೀ ಆಂಜನೇಯಸ್ವಾಮಿ ದೇವಾಲಯ ಪ್ರವೇಶಿಸುವ ಮೂಲಕ ನಿವಾರಣೆ ಆಗುವ ಮೂಲಕ ಕಟ್ಟಳೆ ಮುರಿದು ದೇವಾಲಯ ಪ್ರವೇಶಿಸಿದ ದಲಿತರ ಶತಮಾನದ ಕನಸು ನನಸಾದಂತಾಗಿದೆ.
ನೂರಾರು ದಲಿತರು ತಮ್ಮ ಮುಖಂಡರೊಂದಿಗೆ ನಿಢಘಟ್ಟದ ಶ್ರೀ ಆಂಜನೇಯ ಸ್ವಾಮಿ ದೇವಾಲಯದ ಮುಂದೆ ಜಮಾಯಿಸಿದ್ದರು. ಕಳೆದ ಒಂದು ತಿಂಗಳ ಹಿಂದೆ ನಿಡಘಟ್ಟ ಮತ್ತು ಸುತ್ತಮುತ್ತಲಿನ ಗ್ರಾಮಗಳಲ್ಲಿರುವ ನೂರಾರು ದಲಿತರಿಗೆ ಪ್ರವೇಶ ನಿರಾಕರಿಸಲಾಗಿತ್ತು. ಗ್ರಾಮದ ಶ್ರೀ ಆಂಜನೇಯ ಸ್ವಾಮಿ ದೇವಾಲಯಕ್ಕೆ ಪ್ರವೇಶಕ್ಕೆ ಅವಕಾಶ ನೀಡುವಂತೆ ಕೆಲ ದಿನಗಳ ಹಿಂದೆ ತಹಸೀಲ್ದಾರ್ ಅವರಿಗೆ ಮನವಿ ಸಲ್ಲಿಸಲಾಗಿತ್ತು ಎನ್ನಲಾಗಿದೆ.
ವೃತ್ತ ನಿರೀಕ್ಷಕ ಎಂ.ರಫೀಕ್, ಸಖರಾಯಪಟ್ಟಣದ ಪಿಎಸೈ ಪವನ್, ಸೇರಿದಂತೆ ಗಲಾಟೆಗೆ ಆಸ್ಪದ ನೀಡದಂತೆ ನೂರಾರು ಪೋಲೀಸರ ಬಿಗಿ ಬಂದೋಬಸ್ತ್ ನಿಯೋಜಿಸಲಾಗಿತ್ತು. ಮಂಗಳವಾರ ಬೆಳಿಗ್ಗೆ ತಾಲೂಕು ಆಡಳಿತ ಮತ್ತು ಮೇಲ್ವರ್ಗದ ಸಮುದಾಯಗಳ ಸಮ್ಮುಖದಲ್ಲಿ ನೂರಾರು ದಲಿತರು ದೇವಾಲಯ ಪ್ರವೇಶಿಸಿ ಶ್ರೀ ಸ್ವಾಮಿಯವರಿಗೆ ಪೂಜೆ ಸಲ್ಲಿಸಿ ಸಂತಸ ವ್ಯಕ್ತಪಡಿಸಿದರು.
ದಲಿತ ಮುಖಂಡರಾದ ವೈ.ಟಿ ಗೋವಿಂದಪ್ಪ ರಾಘವೇಂದ್ರ, ಬಾಣೂರು ಸುರೇಶ್, ಕಡೂರಿನ ಪ್ರಮೋದ, ಭಾಣೂರು ನಾಗಣ್ಣ, ವೈಮಲ್ಲಾಪುರದ ತಮ್ಮಯ್ಯ, ಬಾಸೂರು ಪ್ರಸನ್ನ, ಗೋಪಾಲ್, ಜಯಣ್ಣ, ಕೆದಿಗೆರೆ ಚಂದ್ರಪ್ಪ ಮತ್ತಿತರು ಇದ್ದರು.
ಕಳೆದ 20 ದಿನಗಳ ಹಿಂದೆ ದಲಿತ ಮುಖಂಡರು ನಿಡಘಟ್ಟದ ಶ್ರೀ ಆಂಜನೇಯ ಸ್ವಾಮಿ ದೇವಾಲಯ ಪ್ರವೇಶಕ್ಕೆೆ ತಾಲೂಕು ಆಡಳಿತಕ್ಕೆ ಮನವಿ ನೀಡಿದ್ದರು. ಈ ಬಗ್ಗೆ ನಾವು ಪೂರ್ವಬಾವಿ ಸಭೆ ಮಾಡಿಕೊಂಡಿದ್ದೆವು, ಇದಕ್ಕೆ ಮೇಲ್ವರ್ಗದ ಯಾರೂ ಹಸ್ತಕ್ಷೇಪ ಮಾಡಲಿಲ್ಲ. ನೀವುಗಳೇ ಬಂದು ಪ್ರವೇಶಕ್ಕೆ ಅನುವು ಮಾಡಿಕೊಡುವಂತೆ ಕೋರಿದ್ದರು. ಅದರಂತೆ ತಾವು ಹೋಗಿದ್ದು ಸಂವಿಧಾನ ಬದ್ದವಾಗಿ ಎಲ್ಲ ವರ್ಗಗಳು ಸೌಹಾರ್ಧತೆಯಿಂದ ನಡೆದುಕೊಂಡು ಹೋಗುವಂತೆ ತಿಳಿಸಲಾಗಿದೆ.
ಅನೇಕ ವರ್ಷಗಳ ಹೋರಾಟದ ಬಳಿಕ ದಲಿತರಿಗೆ ದೇವಾಲಯ ಪ್ರವೇಶಕ್ಕೆ ಅವಕಾಶ ಸಿಕ್ಕಿದೆ. ನೀವು ಯಾವುದೇ ಗೊಂದಲಕ್ಕೆ ಆಸ್ಪದ ನೀಡದಂತೆ ಪೂಜೆ ಸಲ್ಲಿಸಬಹುದು. ಸಂವಿಧಾನದಲ್ಲಿ ಎಲ್ಲರಿಗೂ ಸಮಾನ ಅವಕಾಶವು ನನಸಾಗಿದೆ. ಎಲ್ಲ ವರ್ಗಗಳೊಂದಿಗೆ ಸೌಹಾರ್ದಯುತವಾಗಿ ನಡೆದುಕೊಳ್ಳುವಂತೆ ಮನವಿ ಮಾಡಲಾಗಿದೆ.
Dalits enter Nidaghatta Anjaneyaswamy Temple after 5 decades
Leave a comment