Home namma chikmagalur chikamagalur ರೈತ ಸಂಘ-ಹಸಿರು ಸೇನೆ ಸಂಘಟನೆಗೆ ನೂತನ ಪದಾಧಿಕಾರಿಗಳ ನೇಮಕ
chikamagalurHomeLatest Newsnamma chikmagalur

ರೈತ ಸಂಘ-ಹಸಿರು ಸೇನೆ ಸಂಘಟನೆಗೆ ನೂತನ ಪದಾಧಿಕಾರಿಗಳ ನೇಮಕ

Share
oplus_161480704
Share

ಚಿಕ್ಕಮಗಳೂರು: ಸಾಮೂಹಿಕ ನಾಯಕತ್ವದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಸಂಘಟನೆಗೆ ನೂತನ ಪದಾಧಿಕಾರಿಗಳನ್ನು ನೇಮಕ ಮಾಡಲಾಗಿದೆ ಎಂದು ಸಂಘದ ಸಹಕಾರ್ಯದರ್ಶಿ ಮಂಡಳಿ ಸದಸ್ಯ ವೈ.ಸಿ. ಸುನಿಲಕುಮಾರ್ ಹೇಳಿದರು.

*ಏಕವ್ಯಕ್ತಿಯ ಪ್ರಾಧಾನ್ಯತೆ ಬದಲಾಗಿ ಸಾಮೂಹಿಕ ನಾಯಕತ್ವದಲ್ಲಿ ಅಧ್ಯಕ್ಷೀಯ ಮಂಡಳಿ, ಉಪಾಧ್ಯಕ್ಷೀಯ ಮಂಡಳಿ, ಪ್ರಧಾನ ಕಾರ್ಯದರ್ಶಿ ಮಂಡಳಿ, ಸಹ ಕಾರ್ಯದರ್ಶಿ ಮಂಡಳಿಗಳ ಮೂಲಕ ವ್ಯಕ್ತಿಗಳ ಗುಂಪು ಕೆಲಸ ಮಾಡುತ್ತದೆ. ಇದರಿಂದ ರೈತ ಸಂಘಟನೆ ಬಲಗೊಳ್ಳುತ್ತವೆ’ ಎಂದು ಸುದ್ದಿಗೋಷ್ಠಿಯಲ್ಲಿ ಮಂಗಳವಾರ ತಿಳಿಸಿದರು.

ಪ್ರೊ. ನಂಜುಂಡಸ್ವಾಮಿ ಅವರು ತಮ್ಮ ಕೊನೆ ಬರವಣಿಗೆಯಲ್ಲಿ ಉಲ್ಲೇಖಿಸಿರುವಂತೆ ಅವರ ಪುತ್ರಿ ಚುಕ್ಕಿ ನಂಜುಂಡಸ್ವಾಮಿ ಅವರು ಸಾಮೂಹಿಕ ನಾಯಕತ್ವದ ಪರಿಕಲ್ಪನೆ ತಂದಿದ್ದು, ಅದರಂತೆ ಈಗಾಗಲೇ ರಾಜ್ಯದ 20 ಜಿಲ್ಲೆಗಳಲ್ಲಿ ಸಾಮೂಹಿಕ ನಾಯಕತ್ವದಲ್ಲಿ ರೈತ ಸಂಘ ಕಾರ್ಯನಿರ್ವಹಿಸುತ್ತಿದೆ ಎಂದು ಹೇಳಿದರು.

ಜುಲೈ 3ರಂದು ನಗರದ ಲಯನ್ಸ್ ಭವನದಲ್ಲಿ ಕೆ.ಕೆ. ಕೃಷ್ಣಗೌಡ ಅಧ್ಯಕ್ಷತೆಯಲ್ಲಿ ಜಿಲ್ಲಾ ಶಾಖೆ ಆರಂಭವಾಗಲಿದೆ. ಅಧ್ಯಕ್ಷೀಯ ಮಂಡಳಿಯಲ್ಲಿ ಡಿ. ರಾಮೇಗೌಡ, ಎಂ.ಡಿ. ಶಂಕರ್, ಎ.ಎನ್. ರಮೇಶ್, ಎಂ.ಸಿ. ಗಣೇಶ್, ನಜ್ಜಾ ಅಲಿ, ಉಪಾಧ್ಯಕ್ಷೀಯ ಮಂಡಳಿಯಲ್ಲಿ ಬಿ.ಎಚ್. ಸತೀಶ್, ಚನ್ನಲಕ್ಷ್ಮಿ, ಎಚ್.ಎಂ. ಶಿವರಾಜು, ಎಂ. ಚಂದ್ರಶೇಖ‌ರ್, ಎಸ್.ಎಚ್‌. ಬಸವರಾಜು ಅವರನ್ನು ನೇಮಕ ಮಾಡಲಾಗಿದೆ ಎಂದು ವಿವರಿಸಿದರು.

ಪ್ರಧಾನ ಕಾರ್ಯದರ್ಶಿ ಮಂಡಳಿಯಲ್ಲಿ ಜಿ.ಕೆ. ಕಾಂತರಾಜು, ಎಚ್.ಎಸ್. ಲೋಕೇಶ್, ಕೆ.ಕೆ. ರವಿ, ಎಚ್.ಸಿ. ವಸಂತ್, ಚಂದ್ರಶೇಖ‌ರ್, ಸಹಕಾರ್ಯದರ್ಶಿ ಮಂಡಳಿಯಲ್ಲಿ ಬಿ.ಯು. ಪರ್ವತೇಗೌಡ, ಎಂ.ಎನ್. ಮಲ್ಲುಂಡಪ್ಪ, ಎಚ್.ಎನ್. ಗಿರೀಶ್, ಎಂ.ಎನ್. ಜಯರಾಂ, ಕೆ.ಎಂ. ದುರ್ಗೆಗೌಡ, ಬಿ.ಎನ್. ಹುಲಿಯಪ್ಪಗೌಡ, ಲಕ್ಷ್ಮಣರಾಜ ಅರಸ್, ಬಿ.ಎಚ್‌. ಪ್ರಜಾಪದ್ಮ, ಬಿ.ಸಿ. ಈರೇಗೌಡ, ಸೋಮೇಗೌಡ, ಗೋಪಿಕೃಷ್ಣ, ಕೆ.ಎಸ್. ಆನಂದೇಗೌಡ, ಕೆ.ಎಂ. ಜಯರಾಮೇಗೌಡ, ವೈ.ಸಿ. ಸುನಿಲ್ ಕುಮಾರ್, ಹಸಿರು ಸೇನೆ ಅಧ್ಯಕ್ಷೀಯ ಮಂಡಳಿಗೆ ಎಸ್.ಆರ್. ಸಚಿನ್, ಕೆ.ಎ. ಶ್ರೀಧರ್, ಎಚ್.ಬಿ. ಅನಿಲ್ ಅವರನ್ನು ಆಯ್ಕೆ ಮಾಡಲಾಗಿದೆ ಎಂದರು.
ಸಂಘದಲ್ಲಿ ಉಚಿತ ಕಾನೂನು ಸಲಹಾ ಸಮಿತಿ ಮತ್ತು ಆರೋಗ್ಯ ಸೇವಾ ಸಮಿತಿ ರಚಿಸಲಾಗಿದೆ. ಇದರ ಸದುಪಯೋಗವನ್ನು ರೈತರು ಪಡೆದುಕೊಳ್ಳಬೇಕು ಎಂದು ಮನವಿ ಮಾಡಿದರು.

ಸುದ್ದಿಗೋಷ್ಠಿಯಲ್ಲಿ ಸಂಘಟನೆಯ ಮುಖಂಡರಾದ ಕೆ.ಕೆ. ಕೃಷ್ಣಗೌಡ, ಡಿ. ರಾಮೇಗೌಡ, ನಮ್ಮಾ ಅಲಿ, ಎ.ಎನ್. ರಮೇಶ್, ಜಿ.ಕೆ. ಕಾಂತರಾಜ್, ಎಂ.ಎನ್. ಮಲ್ಲುಂಡಪ್ಪ, ಎಂ.ಸಿ. ಗಣೇಶಗೌಡ, ಬಸವರಾಜ್, ಶಿವರಾಜ್ ಇದ್ದರು.

New office bearers appointed for Farmers’ Association-Green Army organization

Share

Leave a comment

Leave a Reply

Your email address will not be published. Required fields are marked *

Don't Miss

ಎಂ.ಸಿ. ಹಳ್ಳಿಯಲ್ಲಿ ಕಡವೆ ಬೇಟೆ-ಆರೋಪಿಗಳ ಬಂಧನ

ತರೀಕೆರೆ: ಲಕ್ಕವಳ್ಳಿ ವಲಯದ ಎಂ.ಸಿ. ಹಳ್ಳಿ ಶಾಖೆಯ ವ್ಯಾಪ್ತಿಯಲ್ಲಿ ಅಕ್ರಮವಾಗಿ ಕಡವೆಯನ್ನು ಬೇಟೆ ಮಾಡಿ ಮಾಂಸ ಕತ್ತರಿಸುತ್ತಿರುವ ಸಂದರ್ಭದಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ದಾಳಿ ನಡೆಸಿ, ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ. ಬಂಧಿತರಿಂದ...

ಸೆ.21ರಿಂದ ಮುಖ್ಯಮಂತ್ರಿ ನಿವಾಸದವರೆಗೆ ಬೃಹತ್ ಪಾದಯಾತ್ರೆ

ಚಿಕ್ಕಮಗಳೂರು: ಹೊರಗುತ್ತಿಗೆ ಪೌರನೀರು ಸರಬರಾಜು ನೌಕರರನ್ನು ಪೌರಕಾರ್ಮಿಕರ ಮಾದರಿಯಲ್ಲಿ ವಿಶೇಷ ನೇರ ನೇಮಕಾತಿ ಅಥವಾ ನೇರಪಾವತಿ ವ್ಯವಸ್ಥೆಗೆ ಒಳಪಡಿಸಿ ಸೇವಾ ಭದ್ರತೆ ಕಲ್ಪಿಸಬೇಕು ಎಂದು ಒತ್ತಾಯಿಸಿ ಸೆ.21ರಿಂದ ತುಮಕೂರಿನ ಸಿದ್ದಗಂಗಾ ಮಠದಿಂದ...

Related Articles

ಪೂನಾ ಒಪ್ಪಂದ ಯಥಾವತ್ತಾಗಿ ಜಾರಿಗೆ ಆಗ್ರಹಿಸಿ ದಸಂಸ ಪ್ರತಿಭಟನೆ

ಚಿಕ್ಕಮಗಳೂರು:  ದಲಿತ ಸಮುದಾಯದ ಪ್ರಾತಿನಿಧ್ಯ ಹಾಗೂ ಹಕ್ಕುಗಳನ್ನು ಸಂರಕ್ಷಿಸುವ ಉ ದ್ದೇಶದಿಂದ ಪೂನಾ ಒಪ್ಪಂದ ಯಥಾವತ್ತಾಗಿ...

ಶೇ.90ಕ್ಕೂ ಅಧಿಕ ಅಂಕ ಪಡೆದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ

ಚಿಕ್ಕಮಗಳೂರು: ಅಖಿಲ ಭಾರತ ವೀರಶೈವ ಮಹಾಸಭಾದ ಚಿಕ್ಕಮಗಳೂರು ಜಿಲ್ಲಾ ಘಟಕದ ವತಿಯಿಂದ 2025–26ನೇ ಸಾಲಿನ ಎಸ್‌ಎಸ್‌ಎಲ್‌ಸಿ...

ರಾಜ್ಯ ಹೆದ್ದಾರಿಯಲ್ಲಿ ದೈತ್ಯ ಒಂಟಿ ಸಲಗ ಪ್ರತ್ಯಕ್ಷ

ಚಿಕ್ಕಮಗಳೂರು : ಪ್ರಸಿದ್ದ ಧಾರ್ಮಿಕ ಕ್ಷೇತ್ರಗಳಾದ ಶೃಂಗೇರಿ ಹಾಗೂ ಹೊರನಾಡಿಗೆ ಸಂಪರ್ಕ ಕಲ್ಪಿಸುವ ರಾಜ್ಯ ಹೆದ್ದಾರಿಯಲ್ಲಿ...

ಸಾರಿಗೆ ಸಂಸ್ಥೆಯ ಬಸ್ – ದ್ವಿಚಕ್ರ ವಾಹನದ ನಡುವೆ ಮುಖಾಮುಖಿ ಡಿಕ್ಕಿ

ಮೂಡಿಗೆರೆ: ರಸ್ತೆಯಲ್ಲಿ ಸಂಚರಿಸುತ್ತಿದ್ದ ಸಾರಿಗೆ ಸಂಸ್ಥೆಯ ಬಸ್ ಮತ್ತು ದ್ವಿಚಕ್ರ ವಾಹನದ ನಡುವೆ ಮುಖಾಮುಖಿ ಡಿಕ್ಕಿ...