Home namma chikmagalur chikamagalur ಸಂವಿಧಾನದ ಮೂಲಕ ಡಾ.ಬಿ.ಆರ್.ಅಂಬೇಡ್ಕರ್ ಸಾವಿರ ಸಿದ್ದಾಂತಗಳನ್ನು ನೀಡಿದ್ದಾರೆ
chikamagalurHomeLatest Newsnamma chikmagalur

ಸಂವಿಧಾನದ ಮೂಲಕ ಡಾ.ಬಿ.ಆರ್.ಅಂಬೇಡ್ಕರ್ ಸಾವಿರ ಸಿದ್ದಾಂತಗಳನ್ನು ನೀಡಿದ್ದಾರೆ

Share
Share

ಚಿಕ್ಕಮಗಳೂರು: ಇತ್ತೀಚಿನ ವರ್ಷಗಳಲ್ಲಿ ಡಾ|ಬಿ.ಆರ್.ಅಂಬೇಡ್ಕರ್ ಅವರು ರಚಿಸಿದ ಸಂವಿಧಾನವನ್ನು ಬದಲಾಯಿಸುತ್ತೇವೆಂಬ ಮಾತುಗಳು ಕೇಳಿ ಬರುತ್ತಿದೆ. ಇಂತಹ ಹೀನಾಯ ವ್ಯವಸ್ಥೆ ಇಂದು ನಡೆಯುತ್ತಿದೆ. ಡಾ|ಬಿ.ಆರ್.ಅಂಬೇಡ್ಕರ್ ಅವರು ರಚಿಸಿದ ಸಂವಿಧಾನದ ಪೀಠಿಕೆಯಲ್ಲಿನ ಪದಕ್ಕೆ ಪ್ರತಿಪದವನ್ನು ಸೃಷ್ಟಿಸುವ ತಾಕತ್ತು ಸಂವಿಧಾನ ಬದಲಾಯಿಸುತ್ತೇವೆಂಬವರು ತೋರಲಿ ಎಂದು ಅಂತಾರಾಷ್ಟ್ರೀಯ ಬೂಕರ್ ಪ್ರಶಸ್ತ್ರಿ ವಿಜೇತೆ ಬಾನು ಮುಷ್ತಾಕ್ ಸವಾಲು ಹಾಕಿದರು.

ಸೋಮವಾರ ಮೂಡಿಗೆರೆ ಪಟ್ಟಣದ ಅಡ್ಯಂತ್ಯಾಯ ರಂಗಮಂದಿರದಲ್ಲಿ ಡಾ|ಬಿ.ಆರ್.ಅಂಬೇಡ್ಕರ್ ಜಯಂತಿ ಆಚರಣಾ ಸಮಿತಿ ವತಿಯಿಂದ ಹಮ್ಮಿಕೊಂಡಿದ್ದ ಅಂಬೇಡ್ಕರ್ ಅವರ ೧೩೫ನೇ ಜನ್ಮ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ, ಅಂಬೇಡ್ಕರ್ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಅವರು ಮಾತನಾಡಿದರು. ಡಾ|ಬಿ.ಆರ್.ಅಂಬೇಡ್ಕರ್ ಅವರು ಸಂವಿಧಾನ ರಚಿಸುವ ಜತೆಗೆ ನಾವುಗಳು ಗೌರವದಿಂದ ಬದುಕುವ ಹಕ್ಕು ನೀಡಿದ್ದಾರೆ ಎಂದು ಹೇಳಿದರು.

ದಲಿತ ಮತ್ತು ಬಂಡಾಯ ಚಳುವಳಿ ವ್ಯಕ್ತಿಗೆ ಬೇಕಾದ ಸಕಲ ಪರಿಕರಗಳನ್ನು ನೀಡಿದೆ. ಅಪಾರ ಅನುಭವವನ್ನು ನೀಡಿದೆ. ಸಿದ್ದಾಂತ ಪ್ರತಿಯೊಬ್ಬರಿಗೂ ಪ್ರೇರಣೆಯಾಗಿದೆ. ಸಂವಿಧಾನದ ಮೂಲಕ ಡಾ| ಬಿ.ಆರ್.ಅಂಬೇಡ್ಕರ್ ಅವರು ಸಾವಿರ ಸಿದ್ದಾಂತಗಳನ್ನು ನೀಡಿದ್ದಾರೆ. ಸಂವಿಧಾನದ ಪ್ರತಿಯೊಂದು ವಿಚಾರವನ್ನು ಸಂವಿಧಾನದ ಪೀಠಿಕೆಯಲ್ಲಿ ಅಳವಡಿಸಿದ್ದಾರೆ ಎಂದು ಬಣ್ಣಿಸಿದರು.

ಅಮಾನೀಯ ಆಲೋಚನೆಯ ಕಾಲದಲ್ಲಿ ಅಂಬೇಡ್ಕರ್ ಅವರು ಸಂವಿಧಾನವನ್ನು ರಚಿಸಿರುವುದು ಸುಲಭದ ಮಾತಲ್ಲ. ಅಂಬೇಡ್ಕರ್ ಅವರು ಇಡೀ ಬದುಕನ್ನು ಮುಡುಪಿಟ್ಟಿದ್ದಾರೆ. ಸಂವಿಧಾನದಲ್ಲಿ ಶಿಕ್ಷಣ, ಸಂಘಟನೆ, ಹೋರಾಟದ ಹಾದಿಯನ್ನು ಪ್ರತಿಯೊಬ್ಬರಿಗೂ ನೀಡಿದ್ದಾರೆ. ಇಂದಿಗೂ ಸಂಘ ಟನೆ ಹೋರಾಟ ಅಗತ್ಯವೇ ಎಂಬ ಪ್ರಶ್ನೆ ನಾವೆಲ್ಲರೂ ಹಾಕಿಕೊಳ್ಳಬೇಕು ಎಂದು ಹೇಳಿದರು.

ಕೆಲವು ಶಿಕ್ಷಣ ಸಂಸ್ಥೆಗಳು ಕೆಳವರ್ಗದ ವಿದ್ಯಾರ್ಥಿಗಳನ್ನು ಅಪಮಾನಿಸುವ ಕೆಲಸ ಮಾಡುತ್ತಿವೆ. ಇದರಿಂ ನೋಂದ ಎಷ್ಟೋ ಕೆಳವರ್ಗದ ವಿದ್ಯಾರ್ಥಿಗಳು ಆತ್ಮಹತ್ಯೆಯ ದಾರಿಯನ್ನು ತುಳಿಯುತ್ತಿದ್ದು, ಸರ್ಕಾರ ವೇಮೂಲ ಆಕ್ಟ್ ಜಾರಿಗೊಳಿಸಲು ಮುಂದಾಗಿದೆ. ಈ ಕಾಯ್ದೆಯಿಂದ ಮುಂದೆ ಕೆಳವರ್ಗದ ವಿದ್ಯಾರ್ಥಿಗಳು ಉತ್ತಮ ಶಿಕ್ಷಣ ಶಿಕ್ಷಣ ಪಡೆಯಲು ಸಾಧ್ಯವಾಗಲಿದೆ ಎಂದು ಪ್ರತಿಪಾದಿಸಿದರು.

ಜಾತಿ ಆಧಾರಿತ ಬೇಧ ಅಪರಾಧ. ಕಾನೂನಿನಿಂದ ಸಮಾಜದ ಬದಲಾವಣೆ ಸಾಧ್ಯವಿಲ್ಲ. ಸಮಾಜದ ಬದಲಾವಣೆಗೆ ನಮ್ಮಲ್ಲಿರುವ ದೃಷ್ಟಿ ಬದಲಾಗಬೇಕು. ಮೌಲ್ಯಗಳು ಗಟ್ಟಿಯಾಗಬೇಕು. ನಮ್ಮಲ್ಲಿರುವ ಮೌನ ಶಾಂತಿಯಲ್ಲ. ಮೌನವಾಗಿದ್ದರೇ ಅನ್ಯಾಯದ ಪರ ನಾವಿದ್ದೇವೆ ಎಂದು ಅರ್ಥ. ನಾವು ಅನ್ಯಾಯದ ವಿರುದ್ಧ ಮಾತನಾಡಬೇಕು ಎಂದು ಕರೆ ನೀಡಿದರು.

ಅಂಕಣಕಾರ ಹಾಗೂ ಖ್ಯಾತ ವಾಗ್ಮಿ ಶಿವಸುಂದರ್ ಮಾತನಾಡಿ, ಈ ದೇಶವನ್ನು ಆಳಿದ್ದು, ರಾಜಕಾರಣಿಗಳು ಅಲ್ಲ. ಭಾರತದ ಸಂವಿಧಾನ. ದೇಶವಾಸಿಗಳಾದ ನಾವುಗಳೆಲ್ಲ ಇದನ್ನು ಅರಿಯಬೇಕು. ದೇಶದಲ್ಲಿ ಸಮಾನತೆ ಇರಬೇಕೆಂದು ಡಾ|ಬಿ.ಆರ್. ಅಂಬೇಡ್ಕರ್ ಅವರು ಪ್ರತಿಪಾದಿಸಿದ್ದರು. ಜಾತಿ ವ್ಯವಸ್ಥೆ ಅತಿದೊಡ್ಡ ದೇಶದ್ರೋಹದ ವ್ಯವಸ್ಥೆ ಈ ದೇಶದಲ್ಲಿ ಬಾತೃತ್ವ ಸಹೋದರತೇ ಇರಬೇಕು ಎಂದು ಅಂಬೇಡ್ಕರ್ ಅವರು ಬಯಸಿದ್ದರು ಎಂದು ಅಭಿಪ್ರಾಯಿಸಿದರು.

ಪ್ರಜಾಪ್ರಭುತ್ವ ಎನ್ನುವುದು ಆಳುವ ಪದ್ಧತಿಯಲ್ಲ. ಮನುಷ್ಯನನ್ನು ಸಮರಸದಿಂದ ಕಾಣುವ ಸಂಬಂಧ. ರೋಗಿಷ್ಟ ಭಾರತಕ್ಕೆ ಡಾಕ್ಟರ್ ಆಗಿ ಬಂದವರು ಡಾ|ಬಿ.ಆರ್.ಅಂಬೇಡ್ಕರ್ ಅವರು, ಸ್ವಾತಂತ್ರ್ಯ ಸಮಾನತೆ ಬ್ರಾತೃತ್ವ ಎಂಬ ದಿವೌಷಧವನ್ನು ನೀಡಿದರು ಎಂದ ಅವರು ಸಾಮಾಜಿಕ ಕ್ರಾಂತಿಯಾಗದೆ ರಾಜಕೀಯ ಕ್ರಾಂತಿಯಾಗಲು ಸಾಧ್ಯವಿಲ್ಲ. ಅಂಬೇಡ್ಕರ್ ಅವರ ದಾರ್ಶನಿಕತೆ ವರ್ತಮಾನದಲ್ಲಿ ಮರುಹುಟ್ಟುಬೇಕು. ಅಂಬೇಡ್ಕರ್ ಭಯಸಿದ ಸಂವಿಧಾನ ಇನ್ನೂ ಬಂದಿಲ್ಲ ಎಂದು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆವಹಿಸಿದ್ದ ಮಾಜಿ ಸಚಿವ ಬಿ.ಬಿ.ನಿಂಗಯ್ಯ ಮಾತನಾಡಿ, ಡಾ|ಬಿ.ಆರ್.ಅಂಬೇಡ್ಕರ್ ಸಂವಿಧಾನವನ್ನು ದೇಶದ ಜನರ ಕುರಿತು ಬರೆದಿದ್ದು, ಅಪಾಯದ ಕಾಲದಲ್ಲಿ ನಾವಿದ್ದೇವೆ. ಮರು ಚಿಂತನೆ ಮಾಡಬೇಕಾದ ಅವಶ್ಯಕತೆ ಇದೆ. ಸಮಾಜದಲ್ಲಿ ಗೊಂದಲಗಳು ಇರುವ ಕಾಲದಲ್ಲಿ ವಿಚಾರ ಮಂಥನ ಆಗಬೇಕು. ಅಂಬೇಡ್ಕರ್ ಅವರ ಬಗ್ಗೆ ಅಧ್ಯಯನ ಮಾಡುವ ಅವಶ್ಯಕತೆ ಇದೆ ಎಂದು ಹೇಳಿದರು. ಮಾಜಿ ಶಾಸಕ ಎಂ.ಪಿ.ಕುಮಾರಸ್ವಾಮಿ ಮಾತನಾಡಿದರು. ಬಿ.ರುದ್ರಯ್ಯ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಬಿ.ಎಸ್.ಜಯರಾಮೇಗೌಡ, ಬಿಎಸ್‌ಪಿ ರಾಜ್ಯಾಧ್ಯಕ್ಷ ಜಾಕೀರ್ ಹುಸೇನ್, ಕೆ.ಮಂಚೇಗೌಡ, ಎಂ.ಪಿ.ಮನು, ಬಿ.ಕೆ.ಲಕ್ಷ್ಮಣ್‌ಗೌಡ, ಎಚ್.ಜಿ.ಸುರೇಂದ್ರೇಗೌಡ ಮಂಜಯ್ಯ, ಕೆಂಜಿಗೆ ಪ್ರದೀಪ್ ಸೇರಿದಂತೆ ಇತರರು ಇದ್ದರು.

ಕಾರ್ಯಕ್ರಮಕ್ಕೂ ಮುನ್ನಾ ಸಂವಿಧಾನದ ಪೀಠಿಕೆಯನ್ನು ಸಿಂಚನ ಭೋದಿಸಿದರು. ಎಂ.ಎಸ್.ಅನಂತ್ ಸ್ವಾಗತಿಸಿದರು. ಕಾರ್ಯಕ್ರಮದಲ್ಲಿ ಸರ್ವಧರ್ಮದ ಹಿರಿಯ ನಾಗರಿಕರನ್ನು ಗೌರವಿಸಲಾಯಿತು. ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿಯಲ್ಲಿ ಅತಿಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.

Dr. B.R. Ambedkar has given thousands of principles through the Constitution.

Share

Leave a comment

Leave a Reply

Your email address will not be published. Required fields are marked *

Don't Miss

ಅಯ್ಯನಕೆರೆಯಲ್ಲಿ ಈಜಲು ಹೋಗಿದ್ದ ಬಾಲಕ ಸಾವು

ಕಡೂರು: ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನ ಐತಿಹಾಸಿಕ ಅಯ್ಯನಕೆರೆಯಲ್ಲಿ ಈಜಲು ಹೋಗಿದ್ದ 13 ವರ್ಷದ ಬಾಲಕನೋರ್ವ ನೀರಿನಲ್ಲಿ ಮುಳುಗಿ ಮೃತಪಟ್ಟಿರುವ ಘಟನೆ ಸಂಭವಿಸಿದೆ. ಚಿಕ್ಕಮಗಳೂರು ನಗರದ ದಂಟರಮಕ್ಕಿ ನಿವಾಸಿಯಾದ ಪೃಥ್ವಿರಾಜ್ ಮೃತಪಟ್ಟ...

ರಬ್ಬರ್ ತೋಟದಲ್ಲಿ ಮನುಷ್ಯನ ತಲೆಬುರುಡೆ -ಮೂಳೆಗಳು ಪತ್ತೆ

ಎನ್.ಆರ್.ಪುರ: ಚಿಕ್ಕಮಗಳೂರು ಜಿಲ್ಲೆಯ ನರಸಿಂಹರಾಜಪುರ ತಾಲೂಕಿನ ಅರಳಿಕೊಪ್ಪ ಗ್ರಾಮದ ರಬ್ಬರ್ ತೋಟವೊಂದರಲ್ಲಿ ಮನುಷ್ಯನನ್ನು ಸುಟ್ಟು ಹಾಕಿರುವ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ. ಎಲ್ಲೋ ಬಿನ್ ಅವರಚ್ಚನ್ ಎಂಬುವವರಿಗೆ ಸೇರಿದ ರಬ್ಬರ್ ತೋಟದಲ್ಲಿ...

Related Articles

ಏ.30 ರಿಂದ ದ್ವಿತೀಯ ಪಿಯುಸಿ ಪರೀಕ್ಷೆ 2

ಚಿಕ್ಕಮಗಳೂರು: ದ್ವಿತೀಯ ಪಿಯುಸಿ ಪರೀಕ್ಷೆ 2 ಇದೇ ಏ.30 ರಿಂದ ಆರಂಭಗೊಳ್ಳುತ್ತಿರುವುದರಿಂದ ಪರೀಕ್ಷಾ ತಯಾರಿ ಕುರಿತು...

ಇಂದು ಕೈವಾರ ತಾತಯ್ಯನವರ ದೇವಾಲಯ ಉದ್ಘಾಟನೆ

ಚಿಕ್ಕಮಗಳೂರು: ತಾಲೂಕಿನ ಸಗನಿಪುರ ರಸ್ತೆಯ ಕೈವಾರ ಗಿರಿಯಲ್ಲಿ ನೂತನವಾಗಿ ನಿರ್ಮಾಣ ಮಾಡಿರುವ ಶ್ರೀಯೋಗಿನರೇಯಣ ಯತೀಂದ್ರ ಕೈವಾರ...

ಕಾಂಗ್ರೆಸ್ – ಮಿತ್ರ ಪಕ್ಷದಿಂದ ದೇಶದ ಮಹಿಳೆಯರಿಗೆ ಮಾಡಿದ ಅಪಮಾನ

ಚಿಕ್ಕಮಗಳೂರು:ಸಂಸತ್ತಿನಲ್ಲಿ ನಾರಿಶಕ್ತಿ ಮಹಿಳಾ ಮೀಸಲಾತಿ ವಿರುದ್ಧ ಕಾಂಗ್ರೆಸ್ ಮತ್ತು ಅದರ ಮಿತ್ರ ಪಕ್ಷಗಳು ಮತಚಲಾಯಿಸುವ ಮೂಲಕ...

ಎಸ್‌ಎಸ್‌ಎಲ್‌ಸಿ ಫಲಿತಾಂಶದ ಸ್ಕ್ಯಾನ್ ಕಾಪಿ ಬಂದಾಗ 72 ಅಂಕ

ಚಿಕ್ಕಮಗಳೂರು: ಎಸ್‌ಎಸ್‌ಎಲ್‌ಸಿ ಫಲಿತಾಂಶ ಪ್ರಕಟವಾದಾಗ ಕೆಲವೊಮ್ಮೆ ತಾಂತ್ರಿಕ ದೋಷಗಳು ವಿದ್ಯಾರ್ಥಿಗಳ ಜೀವನದ ಜೊತೆ ಹೇಗೆ ಆಟವಾಡುತ್ತವೆ...