Home namma chikmagalur chikamagalur ಸರ್ಫೇಸಿ ಕಾಯಿದೆಯ ವಿರುದ್ದ ರಾಜ್ಯ ರೈತ ಸಂಘ ಪ್ರತಿಭಟನೆ
chikamagalurHomeLatest Newsnamma chikmagalur

ಸರ್ಫೇಸಿ ಕಾಯಿದೆಯ ವಿರುದ್ದ ರಾಜ್ಯ ರೈತ ಸಂಘ ಪ್ರತಿಭಟನೆ

Share
Share

ಚಿಕ್ಕಮಗಳೂರು: ಕಾಫಿ ಬೆಳೆಗಾರರ ಪಾಲಿಗೆ ಮರಣ ಶಾಸನವಾಗಿರುವ ಸರ್ಫೇಸಿ ಕಾಯಿದೆ ರದ್ದು ಗೊಳಿಸಲು ರಾಜ್ಯ ಸರ್ಕಾರ ಮದ್ಯ ಪ್ರವೇಶ ಮಾಡಿ ಕಾಯಿದೆ ರದ್ದುಗೊಳಿಸಲು ಪ್ರಮಾಣ ಪತ್ರ ಸಲ್ಲಿಸುವಂತೆ ಒತ್ತಾಯಿಸಿದ ಪ್ರತಿಭಟನಾಕಾರರು ಕೆನರಾ ಬ್ಯಾಂಕಿನಲ್ಲಿ ಎಲ್ಲ ವ್ಯವಹಾರಗಳನ್ನು ಬಿಟ್ಟು ಬೇರೆ ಬ್ಯಾಂಕುಗಳಿಗೆ ತಮ್ಮ ವ್ಯವಹಾರಗಳನ್ನು ವರ್ಗಾವಣೆ ಮಾಡುವಂತೆ ಬೆಳೆಗಾರರ ಸಮೂಹಕ್ಕೆ ಕರೆ ನೀಡಿದ್ದಾರೆ

ಇಂದು ಕರ್ನಾಟಕ ರಾಜ್ಯ ರೈತ ಸಂಘ, ಹಸಿರು ಸೇನೆಯ ನೇತೃತ್ವದಲ್ಲಿ ಕಾಫಿ ಬೆಳೆಗಾರರ ಮತ್ತಿತರ ಸಂಘಟನೆಗಳ ಸಹಯೋಗದಲ್ಲಿ ಸರ್ಫೇಸಿ ಕಾಯಿದೆಯ ವಿರುದ್ದ ನಡೆದ ಪ್ರತಿಭಟನಾ ಮೆರವಣಿಗೆಯ ನಂತರ ನಗರಸಭಾ ಆವರಣದಲ್ಲಿರುವ ಲೋಕಸಬಾ ಸದಸ್ಯರ ಕಛೇರಿ ಎದುರು ಧರಣಿ ನಡೆಸಿ ವಿವಿಧ ಮುಖಂಡರುಗಳು ಮಾತನಾಡಿ ಸರ್ಫೇಸಿ ಕಾಯಿದೆಯಡಿ ಆನ್‌ಲೈನ್ ಮೂಲಕ ಹರಾಜು ನಡೆಸುತ್ತಿರುವ ಬಗ್ಗೆ ತೀವ್ರ ಆಕ್ರೋಶ ವ್ಯಕ್ತ ಪಡಿಸಿದರು.

ಪ್ರತಿಭಟನಾಕಾರರನ್ನು ಸ್ವಾಗತಿಸಿ ಮಾತನಾಡಿದ ಕರ್ನಾಟಕ ರಾಜ್ಯ ರೈತ ಸಂಘದ ಜಿಲ್ಲಾ ಅಧ್ಯಕ್ಷ ಮಹೇಶ್ ಅವರು ಆನ್‌ಲೈನ್ ಮೂಲಕ ಕಾಫಿ ತೋಟಗಳನ್ನು ಹರಾಜು ಹಾಕಿ ಬೆಳೆಗಾರರ ಕುಟುಂಬಗಳು ಬೀದಿ ಪಾಲಾಗುತಿದ್ದರು ಹೆಚ್ಚಿನ ಸಂಖ್ಯೆಯಲ್ಲಿ ಪ್ರತಿಭಟನೆಗೆ ಭಾಗವಹಿಸದಿರುವುದ ವಿಷಾಧದ ವಿಚಾರವೆಂದು ಅಸಮದಾನ ವ್ಯಕ್ತ ಪಡಿಸಿರು.

ರೈತ ಸಂಘದ ಹಿರಿಯ ಮುಖಂಡ ಗುರುಶಾಂತಪ್ಪ ಅವರು ಮಾತನಾಡಿ ರೈತರು ಮತ್ತು ಬೆಳೆಗಾರರ ಕೊರಳಿಗೆ ಉರುಳಾಗಿರುವ ಸರ್ಫೇಸಿ ಕಾಯಿದೆಯ ವಿರುದದ ಎಚ್ಚೆತ್ತುಕೊಳ್ಳದಿದ್ದರೆ ಮುಂದಿನ ದಿನಗಳಲ್ಲಿ ಅನೇಕ ಕುಟುಂಬಗಳು ಬೀದಿಗೆ ಬರಬೇಕಾಗುತ್ತದೆ ಎಂದು ಎಚ್ಚರಿಸಿದರು.

ಮೂಡಿಗೆರೆ ಸಣ್ಣ ಬೆಳೆಗಾರರ ಸಂಘದ ಅಧ್ಯಕ್ಷ ಬಿ.ಕೆ. ಲಕ್ಮಣ ಕುಮಾರ್ ಅವರು ಮಾತನಡಿ ಸರ್ಫೇಸಿ ಕಾಯಿದೆ ರದ್ದುಗೊಳಿಸಿ ಆನ್‌ಲೈನ್ ಹರಾಜು ರದ್ದುಗೊಳಿಸುವುದಾಗಿ ಇಲ್ಲಿನ ಲೋಕ ಸಭಾ ಸದಸ್ಯರು, ಕೇಂದ್ರ ಸರ್ಕಾರದವರು ಪದೇ ಪದೇ ಸುಳ್ಳು ಹೇಳುತಿರುವುದನ್ನು ನಿಲ್ಲಿಸ ಬೇಕೆಂದು ಆಕ್ರೋಶ ವ್ಯಕ್ತ ಪಡಿಸಿದರಲ್ಲದೆ ಇನ್ನೊಂದು ತಿಂಗಳೊಳಗೆ ಈ ಕಾಯಿದೆಯನ್ನು ರದ್ದುಗೊಳಿಸಿ ಆನ್‌ಲೈನ್ ಹರಾಜು ನಿಲ್ಲಿಸದಿದ್ದರೆ ಕಾಫಿ ಬೆಳೆಯುವ ಪ್ರದೇಶದ ಎಲ್ಲಾ ಜನ ಪ್ರತಿನಿಧಿಗಳ ಮನೆ ಮುಂದೆ ಪ್ರತಿಭಟನೆ ನಡೆಸಬೇಕೆಂದು ಕರೆ ನೀಡಿದರು.

ಚಿಕ್ಕಮಗಳೂರು ಬೆಳೆಗಾರರ ಸಂಘದ ತಾಲ್ಲೂಕು ಸಮಿತಿಯ ಅಧ್ಯಕ್ಷ ಉತ್ತಮ್‌ಗೌಡ ಅವರು ಮಾತನಾಡಿ ಸರ್ಫೇಸಿ ಕಾಯಿದೆಡಿ ಕೆನರಾ ಬ್ಯಾಂಕ್‌ನಲ್ಲಿ ಹೆಚ್ಚು ಹರಾಜು ನಡೆಸುತ್ತ ಕೆನರಾ ಬ್ಯಾಂಕ್ ಆಡಳಿತ ಮಂಡಳಿಯವರು ಬೆಳೆಗಾರರ ಹಿತಕ್ಕೆ ಸಂಪೂರ್ಣ ವಿರುದ್ದವಾಗಿದ್ದರಲ್ಲದೆ ಬೆಳೆಗಾರರು ಸಾಲ ಇತ್ಯರ್ಥದ ಬಗ್ಗೆ ಮಾತನಾಡಲು ಹೋದರೆ ಅಮಾನವೀಯವಾಗಿ ವರ್ತಿಸುತ್ತಾರೆ ಆದ್ದರಿಂದ ಕೆನರಾ ಬ್ಯಾಂಕಿನಲ್ಲಿ ವ್ಯವಹಾರ ನಡೆಸುತ್ತಿರುವ ಎಲ್ಲಾ ಬೆಳೆಗಾರರು ಆ ಬ್ಯಾಂಕನ್ನು ಬಿಟ್ಟು ಹೊರ ಬಂದು ಬೇರೆ ಬ್ಯಾಂಕ್‌ಗಳಲ್ಲಿ ವ್ಯವಹಾರ ನಡೆಸುವಂತೆ ಕರೆ ನೀಡಿದರು.

ಸಿ.ಪಿ.ಐ ನಾಯಕಿ ಶ್ರೀಮತಿ ರಾಧಾ ಸುಂದರೇಶ್ ಅವರು ಮತನಾಡಿ ಕೇರಳ, ತಮಿಳುನಾಡು ಮುಂದಾದ ರಾಜ್ಯಗಳಲ್ಲಿ ಕಸ್ತೂರಿರಂಗನ್ ವರದಿ ಸೇರಿದಂತೆ ಸರ್ಫೇಸಿ ಕಾಯಿದೆಯನ್ನು ಜಾರಿಮಾಡದಂತೆ ತೀರ್ಮಾನ ಕೈಗೊಂಡಿವೆ ನಮ್ಮ ರಾಜ್ಯದಲ್ಲಿ ಅದೇ ರೀತಿ ತೀರ್ಮಾನ ಮಾಡಿ ರಾಜ್ಯ ಸರ್ಕಾರ ಮದ್ಯ ಪ್ರವೇಶ ಮಾಡಿ ಸಂರ್ಫೇಸಿ ಕಾಯಿದೆಯನ್ನು ರದ್ದುಗೊಳಿಸುವಂತೆ ಪ್ರಮಾಣ ಪತ್ರ ಸಲ್ಲಿಸಬೇಕೆಂದು ಒತ್ತಾಯಿಸಿದರು.

ಕೆಪಿಸಿಸಿ ವಕ್ತಾರ ಎಚ್.ಎಚ್. ದೇವರಾಜ್ ಅವರು ಮಾತನಾಡಿ ಸರ್ಪೇಸಿ ಕಾಯ್ದೆ ರದ್ದು ಮಾಡಿ ಆನ್‌ಲೈನ್ ಹರಾಜು ನಿಲ್ಲಿಸುವುದಾಗಿ ಇಲ್ಲಿನ ಸಂಸತ್ ಸದಸ್ಯ ಕೋಟಾಶ್ರೀನಿವಾಸ್ ಪೂಜಾರಿ ಕೇಂದ್ರ ಸರ್ಕಾರವನ್ನು ಪ್ರತಿನಿಧಿಸುವವರು ನಿರಂತರವಾಗಿ ಸುಳ್ಳು ಹೇಳುತ್ತಿದ್ದಾರೆ ಮೊನ್ನೆ ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಅವರು ರಾಜ್ಯದ ಹಿರಿಯ ಮುತ್ಸದ್ಧಿ ರಾಜಕಾರಣಿ ಮಾಜಿ ಪ್ರಧಾನಿ ದೇವೇಗೌಡರಿಗೆ ಸುಳ್ಳು ಹೇಳಿ ಆನ್ ಲೈನ್ ಹರಾಜು ನಿಲ್ಲಿಸಲು ಆದೇಶ ಮಾಡಿರುವುದಾಗಿ ದೇವೇಗೌಡರಂತಹ ಹಿರಿಯರಿಗೆ ಸುಳ್ಳು ಹೇಳಿ ಮೋಸ ಮಾಡಿ ರಾಜ್ಯದ ಬೆಳೆಗಾರರಿಗೆ ದ್ರೋಹ ಮಾಡಿದ್ದಾರೆ ಎಂದು ಆಕ್ರೋಶ ವ್ಯಕ್ತ ಪಡಿಸಿದರು.

ಮಾಜಿ ಸಚಿವ ಬಿ.ಬಿ. ನಿಂಗಯ್ಯ ಅವರು ಮಾತನಾಡಿ ನಾಡಿನ ಮಹಾನ್ ಚೇತನ ಎಚ್.ಡಿ. ದೇವೇಗೌಡರಿಗೆ ಸುಳ್ಳು ಹೇಳಿ ಸಾಗು ಹಾಕಿರುವ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾ ರಾಮನ್ ಅವರ ನಡವಳಿಕೆ ಖಂಡನೀಯ ಎಂದು ಹೇಳಿದರಲ್ಲದೆ ರಾಜ್ಯ ಸರ್ಕಾರ ಕಾಫಿ ಉದ್ಯಮವನ್ನು ಸರ್ಫೇಸಿ ಕಾಯ್ದೆ ಯಿಂದ ಮುಕ್ತ ಗೊಳಿಸಲು ರಾಜ್ಯಸರ್ಕಾರ ಮಧ್ಯ ಪ್ರವೇಶಿಸುವಂತೆ ಮುಖ್ಯ ಮಂತ್ರಿಗಳನ್ನು ಕೋರಲು ಕಾಫಿ ಪ್ರದೇಶ ಎಲ್ಲಾ ಜನ ಪ್ರತಿನಿಧಿ ಗಳೊಂದಿಗೆ ನಿಯೋಗ ತೆರಳಲು ಪ್ರಯತ್ನಿಸುವುದಾಗಿ ತಿಳಿಸಿದರಲ್ಲದೆ ತಿಳಿಸಿದರು.

ಕಾಫಿ ಬೆಳೆಗಾರರಿಂದ ಬಹುಪಾಲು ಎಲ್ಲಾ ಬ್ಯಾಂಕುಗಳ ಬೆಳವಣಿಗೆಗೆ ಸಹಕಾರಿಯಾಗಿದೆ ಆದರೆ ಕೆನರಾ ಬ್ಯಾಂಕ್‌ನವರು ಬೆಳೆಗಾರರಿಗೆ ವಿರುದ್ಧವಾಗಿ ನಡೆದುಕೊಳ್ಳುತ್ತಿದ್ದಾರೆ ಎಂಬ ಬಗ್ಗೆ ಗಂಭೀರವಾಗಿ ಪರಿಗಣಿಸಿ ಎಲ್ಲಾ ಬೆಳೆಗಾರರು ಸೂಕ್ತವಾದ ತೀರ್ಮಾನ ಕೈಗೊಳ್ಳಬೇಕೆಂದು ಕರೆ ನೀಡಿದರು. ಜೆ.ಡಿ.ಎಸ್. ಮುಖಂಡ ಸರ್ಫೆಸಿ ಕಾಯ್ದೆಯಿಂದ ಬೆಳೆಗಾರರಿಗೆ ಆಗುತ್ತಿರುವ ತೊಂದರೆಯ ಬಗ್ಗೆ ಕೇವಲ ಕೇಂದ್ರ ಸರ್ಕಾರದತ್ತ ಬೊಟ್ಟು ಮಾಡಿ ತೋರಿಸದೇ ರಾಜ್ಯದ ಕಾಫಿ ಪ್ರದೇಶದ ಎಲ್ಲಾ ಜನ ಪ್ರತಿನಿಧಿಗಳು ಬೆಳೆಗಾರರ ಪರವಾಗಿ ಧ್ವನಿ ಎತ್ತ ಬೇಕೆಂದು ಒತ್ತಾಯಿಸಿದರು.

ಹೊಲದ ಗದ್ದೆ ಗಿರೀಶ್ ಸೇರಿದಂತೆ ವಿವಿಧ ಮುಖಂಡರುಗಳು ಮಾತನಾಡಿ ಕಾಫಿ ಬೆಳೆಗಾರರಿಗೆ ಮಾರಕವಾಗಿರುವ ಸರ್ಪೇಸಿ ಕಾಯ್ದೆಯ ವಿರುದ್ಧ ದೊಡ್ಡ ಪ್ರಮಾಣದ ಹೋರಾಟಕ್ಕೆ ಸಿದ್ದರಾಗುವಂತೆ ಕರೆ ನೀಡಿದರು.

State Farmers’ Association protests against SARFAESI Act

Share

Leave a comment

Leave a Reply

Your email address will not be published. Required fields are marked *

Don't Miss

ಸಫಾರಿಗೆ ತೆರಳಿದ್ದ ಪ್ರವಾಸಿಗರಿಗೆ ಹುಲಿ ದರ್ಶನ

ಚಿಕ್ಕಮಗಳೂರು: ಕಾಫಿನಾಡಿನ ಭದ್ರಾ ಅಭಯಾರಣ್ಯದಲ್ಲಿ ಸಫಾರಿಗೆ ತೆರಳಿದ್ದ ಪ್ರವಾಸಿಗರಿಗೆ ದೈತ್ಯಾಕಾರದ ಹುಲಿಯೊಂದು ದರ್ಶನ ನೀಡುವ ಮೂಲಕ ಅಚ್ಚರಿ ಮತ್ತು ಸಂತಸ ಮೂಡಿಸಿದೆ. ಕೆಮ್ಮಣ್ಣುಗುಂಡಿಯ ಪ್ರಸಿದ್ದ ಹೆಬ್ಬೆ ಫಾಲ್ಸ್ ರಸ್ತೆಯಲ್ಲಿ ಈ ಹುಲಿ...

ಇಟ್ಟುಕೊಂಡವರು ಮತ್ತು ಕಟ್ಟಿಕೊಂಡವರ ಕಾದಾಟ ! – ವೀರಶೈವ ಲಿಂಗಾಯತ ಸಂಘ ಬೀದಿಗೆ ತಂದಿರುವುದೇಕೆ ?

ಚಿಕ್ಕಮಗಳೂರು: ಪ್ರಪಂಚದಲ್ಲಿ ಯಾರು ಸಾಧನೆ ಮಾಡದ ಕೆಲಸ ಮಾಡಿದ್ದೇವೆ ಎಂಬ ಭ್ರಮೆಯಲ್ಲಿ ತೆಲುತ್ತಿರುವವರು ಪದಾಧಿಕಾರಿಗಳ ಎಡವಟ್ಟಿನಿಂದಾಗಿ ಡಬಲ್,ಡಬಲ್ ಆಹ್ವಾನ ಪತ್ರಿಕೆ ಮುದ್ರಣವಾಗಿದೆ.ಈ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಪರ,ವಿರೋಧ ಚರ್ಚೆ ಕೂಡ ನಡೆದು...

Related Articles

ಜಿಲ್ಲೆಯ ವಿದ್ಯಾರ್ಥಿನಿ ಬೃಂದಾ ರಾಜ್ಯ ಮಟ್ಟದಲ್ಲಿ ಅಗ್ರಸ್ಥಾನ

ಚಿಕ್ಕಮಗಳೂರು: ಕರ್ನಾಟಕ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿ ಪ್ರಕಟಿಸಿರುವ ಎಸ್‌ಎಸ್‌ಎಲ್‌ಸಿ ಫಲಿತಾಂಶದಲ್ಲಿ ಜಿಲ್ಲೆಯ ವಿದ್ಯಾರ್ಥಿನಿ ಬೃಂದಾ ಅಪೂರ್ವ...

ಕಾಡಾನೆ ದಾಳಿಗೆ ಅರಣ್ಯ ಇಲಾಖೆಯ ಇಬ್ಬರು ಸಿಬ್ಬಂದಿ ಗಾಯ

ಮೂಡಿಗೆರೆ:  ಇಲ್ಲಿನ ಕಾಡು ಪ್ರದೇಶದಲ್ಲಿ ಇಂದು ಬೆಳಗ್ಗೆ ಸುಮಾರು 9 ಗಂಟೆ ವೇಳೆ ಕಾಡಾನೆ ದಾಳಿ...

ಅರಣ್ಯ ಸಮಸ್ಯೆ ಬಗ್ಗೆ ಏ.28ಕ್ಕೆ ಪ್ರವಾಸಿಮಂದಿರದಲ್ಲಿ ಚರ್ಚೆ

ಚಿಕ್ಕಮಗಳೂರು: ಡೀಮ್ಡ್ ಫಾರೆಸ್ಟ್ ಮತ್ತು ಅರಣ್ಯ ಸಮಸ್ಯೆಗಳನ್ನು ನಿವಾರಿಸಲು ಎಸ್‌ಐಟಿ ರಚಿಸಿ ಸರ್ವೆ ಆರಂಭಿಸಿದೆ. ಈ...

ಷೇರುದಾರರಿಗೆ ಅನುಕೂಲಕ್ಕೆ ಆಡಳಿತ ವ್ಯವಸ್ಥೆ ಡಿಜಿಟಲೀಕರಣ

ಚಿಕ್ಕಮಗಳೂರು: ಚಿಕ್ಕಮಗಳೂರು ಟೌನ್ ಕೋ-ಆಪರೇಟಿವ್ ಸೊಸೈಟಿಯ ಆಡಳಿತ ವ್ಯವಸ್ಥೆಯನ್ನು ಷೇರುದಾರರಿಗೆ ಅನುಕೂಲ ಆಗುವಂತೆ ಡಿಜಿಟಲೀಕರಣಗೊಳಿಸಲಾಗಿದೆ ಎಂದು...