Home namma chikmagalur chikamagalur ಕುದುರೆಮುಖ ಮಾರ್ಗದ ಹಳ್ಳದಲ್ಲಿ ಪ್ರವಾಸಿಗರ ಹುಚ್ಚಾಟ
chikamagalurHomeLatest Newsnamma chikmagalur

ಕುದುರೆಮುಖ ಮಾರ್ಗದ ಹಳ್ಳದಲ್ಲಿ ಪ್ರವಾಸಿಗರ ಹುಚ್ಚಾಟ

Share
Share

ಕಳಸ: ಮಲೆನಾಡಿನ ಸೌಂದರ್ಯಕ್ಕೆ ಮಾರುಹೋಗಿ ಆಗಮಿಸುವ ಪ್ರವಾಸಿಗರು ಕೆಲವೊಮ್ಮೆ ಮಾಡುವ ಸಾಹಸಗಳು ಜೀವಕ್ಕೇ ಕಂಟಕವಾಗುತ್ತಿವೆ. ಚಿಕ್ಕಮಗಳೂರು ಜಿಲ್ಲೆಯ ಕಳಸ ತಾಲೂಕಿನ ಪ್ರಸಿದ್ಧ ನೇತ್ರಾವತಿ ಪೀಕ್ ಹಾಗೂ ಕುದುರೆಮುಖ ಮಾರ್ಗಮಧ್ಯೆ ಇರುವ ಹಳ್ಳವೊಂದರಲ್ಲಿ ಪ್ರವಾಸಿಗರು ಪ್ರಾಣದ ಹಂಗು ತೊರೆದು ನಡೆಸಿದ ಹುಚ್ಚಾಟ ಈಗ ತೀವ್ರ ಆತಂಕಕ್ಕೆ ಕಾರಣವಾಗಿದೆ.

ಧಾರಾಕಾರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಹಳ್ಳ-ಕೊಳ್ಳಗಳು ಮೈದುಂಬಿ, ರಭಸದಿಂದ ಭೋರ್ಗರೆಯುತ್ತಾ ಧುಮ್ಮಿಕ್ಕುತ್ತಿವೆ. ಇಂತಹ ಸಂದರ್ಭದಲ್ಲಿ ಪ್ರವಾಸಿಗರು ಕೇವಲ ಒಂದು ಹಗ್ಗದ ನೆರವಿನಿಂದ ಅಬ್ಬರಿಸುವ ನೀರಿನ ಪ್ರವಾಹವನ್ನು ದಾಟಲು ಸಾಹಸ ಪಟ್ಟಿದ್ದಾರೆ. ನೋಡುವವರ ಎದೆಝಲ್ ಎನಿಸುವಂತಿರುವ ಈ ದೃಶ್ಯಗಳು, ಜಾಗರೂಕತೆಯ ಎಲ್ಲ ಎಲ್ಲೆಗಳನ್ನು ಮೀರಿದ ಹುಚ್ಚುತನದ ಪರಮಾವಧಿಯಂತೆ ಕಾಣಿಸುತ್ತಿವೆ.

ನೀರಿನ ಭೋರ್ಗರೆತಕ್ಕೆ ಸಣ್ಣದಾಗಿ ಕಾಲು ಜಾರಿದರೂ ಸಾಕು, ಕ್ಷಣಾರ್ಧದಲ್ಲಿ ಕೊಚ್ಚಿಹೋಗುವ ಅಪಾಯ ಎದುರಾಗುತ್ತದೆ. ಕೇವಲ ಮೋಜಿಗಾಗಿ ಅಥವಾ ಟ್ರೆಕ್ಕಿಂಗ್ ಉತ್ಸಾಹದಲ್ಲಿ ಇಂತಹ ಅಪಾಯಕಾರಿ ಹಾದಿ ತುಳಿಯುತ್ತಿರುವ ಪ್ರವಾಸಿಗರ ನಡವಳಿಕೆ ಜವಾಬ್ದಾರಿರಹಿತವಾಗಿದೆ. ಒಂದೊಮ್ಮೆ ಹೆಚ್ಚು-ಕಡಿಮೆಯಾಗಿ ಜೀವಹಾನಿ ಸಂಭವಿಸಿದರೆ ಅದಕ್ಕೆ ಯಾರು ಹೊಣೆ ಎಂಬ ಪ್ರಶ್ನೆ ಸಾರ್ವಜನಿಕ ವಲಯದಲ್ಲಿ ಬಲವಾಗಿ ಕೇಳಿಬರುತ್ತಿದೆ.

ಮಲೆನಾಡಿನಲ್ಲಿ ಮಳೆಯಾರ್ಭಟ ಹೆಚ್ಚಿರುವ ಈ ಸಮಯದಲ್ಲಿ ಪ್ರವಾಸಿಗರ ಸುರಕ್ಷತೆ ಅತ್ಯಂತ ಮುಖ್ಯವಾಗಿದೆ. ಇಂತಹ ಅಪಾಯಕಾರಿ ಸಂದರ್ಭಗಳಲ್ಲಿ ತಕ್ಷಣವೇ ಎಚ್ಚೆತ್ತುಕೊಳ್ಳಬೇಕಾದ ಅರಣ್ಯ ಇಲಾಖೆ ಹಾಗೂ ತಾಲೂಕು ಆಡಳಿತ, ನೇತ್ರಾವತಿ ಪೀಕ್‌ನಂತಹ ಸೂಕ್ಷ್ಮ ಹಾಗೂ ಅಪಾಯಕಾರಿ ಟ್ರೆಕ್ಕಿಂಗ್ ಪ್ರದೇಶಗಳಿಗೆ ಪ್ರವಾಸಿಗರ ಪ್ರವೇಶವನ್ನು ಸಂಪೂರ್ಣವಾಗಿ ನಿರ್ಬಂಧಿಸುವುದು ಒಳಿತು. ಮುನ್ನೆಚ್ಚರಿಕೆ ಕ್ರಮಗಳನ್ನು ಬಿಗಿಗೊಳಿಸದಿದ್ದರೆ ಭವಿಷ್ಯದಲ್ಲಿ ದೊಡ್ಡ ದುರಂತ ಸಂಭವಿಸುವುದರಲ್ಲಿ ಯಾವುದೇ ಸಂಶಯವಿಲ್ಲ.

Tourists’ madness in the Kudremukh route canal

Share

Leave a comment

Leave a Reply

Your email address will not be published. Required fields are marked *

Don't Miss

ಆಗಸ್ಟ್ 2ಕ್ಕೆ ಪೊಲೀಸ್ ಕಾನ್‌ಸ್ಟೇಬಲ್ ಹುದ್ದೆಯ ಪರೀಕ್ಷೆಗೆ ನಿಷೇಧಾಜ್ಞೆ ಜಾರಿ

ಚಿಕ್ಕಮಗಳೂರು: ಪೊಲೀಸ್ ಕಾನ್‌ಸ್ಟೇಬಲ್ (ಸಿವಿಲ್) ಹುದ್ದೆಗಳ ನೇರ ನೇಮಕಾತಿಗಾಗಿ ಆಗಸ್ಟ್ ೨ ರಂದು ಲಿಖಿತ ಪರೀಕ್ಷೆ ನಡೆಯಲಿರುವ ಹಿನ್ನೆಲೆಯಲ್ಲಿ ಜಿಲ್ಲೆಯ ೧೬ ಪರೀಕ್ಷಾ ಕೇಂದ್ರಗಳ ಸುತ್ತಮುತ್ತ ಜಿಲ್ಲಾ ದಂಡಾಧಿಕಾರಿಗಳು ಹಾಗೂ ಜಿಲ್ಲಾಧಿಕಾರಿಗಳಾದ...

ಪ್ರತ್ಯೇಕ ರಸ್ತೆ ಅಪಘಾತದಲ್ಲಿ ಇಬ್ಬರ ಸಾವು

ಚಿಕ್ಕಮಗಳೂರು: ಜಿಲ್ಲೆಯ ಪ್ರತ್ಯೇಕ ಕಡೆಗಳಲ್ಲಿ ಸಂಭವಿಸಿದ ರಸ್ತೆ ಅಪಘಾತಗಳಲ್ಲಿ ಇಬ್ಬರು ದಾರುಣವಾಗಿ ಮೃತಪಟ್ಟು, ಹಲವರು ಗಾಯಗೊಂಡಿರುವ ಘಟನೆಗಳು ವರದಿಯಾಗಿವೆ. ಬಸವನಕೂಡಿ ಈಶ್ವರಹಳ್ಳಿ ಗ್ರಾಮದ ಬಳಿ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಸೋಮಭೋವಿ ಎಂಬುವರಿಗೆ...

Related Articles

ಪರಿಸರ ಸೂಕ್ಷ್ಮ ಪ್ರದೇಶ ಘೋಷಣೆಗೆ ನಾಗರಿಕರು ಆಕ್ಷೇಪಣೆ ಸಲ್ಲಿಸ ಬೇಕು

ಚಿಕ್ಕಮಗಳೂರು : ಜಿಲ್ಲೆಯ ೧೩೭ ಹಳ್ಳಿಗಳನ್ನು ಪರಿಸರ ಸೂಕ್ಷ್ಮ ಪ್ರದೇಶ ಎಂದು ಘೋಷಣೆ ಮಾಡಿದ್ದು, ಬಗ್ಗೆ...

ಅರಣ್ಯ ಸಂತ್ರಸ್ತ ರೈತರ ಬೃಹತ್ ಸಮಾವೇಶ

ಚಿಕ್ಕಮಗಳೂರು : ಜಿಲ್ಲಾ ನಾಗರಿಕ ಮತ್ತು ರೈತ ಹೋರಾಟ ಸಮಿತಿ ವತಿಯಿಂದ ಚಿಕ್ಕಮಗಳೂರು ತಾಲೂಕು ಕಾಮೇಹಳ್ಳಿ...

ಪರಿಸರ ಸೂಕ್ಷ್ಮ ಪ್ರದೇಶ ಘೋಷಣೆಯ ಕರಡು ಅಧಿಸೂಚನೆಗೆ ಕಲ್ಕುಳಿ ವಿಠಲ ಹೆಗ್ಗಡೆ ವಿರೋಧ

ಶೃಂಗೇರಿ: ‘ನಗರ ಪ್ರದೇಶದಲ್ಲಿ ಕುಳಿತು ಐಷರಾಮಿ ಜೀವನ ನಡೆಸುವ ಪರಿಸರವಾದಿಗಳು ತಯಾರಿಸುವ ವರದಿಗಳಿಗೆ ಮಲೆನಾಡಿನ ಮಣ್ಣಿನ...

ಅನಧಿಕೃತ ಜೀಪ್‌ಗಳ ಹಾವಳಿ ತಪ್ಪಿಸಲು ಆಗ್ರಹಿಸಿ ಜಿಲ್ಲಾಡಳಿತಕ್ಕೆ ಮನವಿ

ಚಿಕ್ಕಮಗಳೂರು:  ಜಿಲ್ಲೆಯ ಪ್ರವಾಸಿ ತಾಣಗಳಲ್ಲಿ ಅನಧಿಕೃತ ಮತ್ತು ಅಕ್ರಮ ಜೀಪ್ ಗಳ ಹಾವಳಿ ತಡೆಗಟ್ಟಿ ಪ್ರವಾಸಿಗರ...