ಚಿಕ್ಕಮಗಳೂರು: ಪ್ರಸಿದ್ಧ ಪ್ರವಾಸಿ ತಾಣಗಳಲ್ಲಿ ಚಿಕ್ಕಮಗಳೂರು ಜಿಲ್ಲೆಗೆ ಅಗ್ರಸ್ಥಾನವಿದೆ.ನಿಜವಾದ ಪ್ರವಾಸಿಗರು ಜಿಲ್ಲೆಯ ಪ್ರಕೃತಿ ಸೌಂದರ್ಯದ ಜೊತೆಗೆ ಧಾರ್ಮಿಕ ಸ್ಥಳಗಳು, ಝರಿಗಳ ಜೊತೆಗೆ ಬೋರ್ಗರಿಯುವ ನದಿಗಳು, ಉಪ ನದಿಗಳು,ಅರಣ್ಯದ ಜೊತೆಗೆ ಕಾಡು ಪ್ರಾಣಿಗಳು ಮತ್ತು ವಿವಿಧ ಜಾತಿಯ ಮರ,ಗಿಡಗಳು ಹಾಗೂ ಟ್ರಕಿಂಗ್ ಸ್ಥಳಗಳು ಉಳಿದು ಕೊಳ್ಳಲು ಉತ್ತಮ ಹೋಟೆಲ್ ,ಹೋಮ್ ಸ್ಟೇಗಳ ಅವಶ್ಯಕತೆ ಇದೆ.
ರೆಸಾರ್ಟ್ಗಳು ಜೊತೆಗೆ ಮತ್ತಷ್ಟು ಕಾನೂನು ಮೀರಿ ಹೋಮ್ ಸ್ಟೇಗಳು ರೆಸಾರ್ಟ್ಗಳು ನಾಯಿ ಕೊಡೆಗಳಂತೆ ನಿರ್ಮಾಣ ವಾಗುವುದರ ಜೊತೆಗೆ ನಿತ್ಯ ಕಲ್ಯಾಣಿ ಯರ ಬಂದು ವ್ಯವಹಾರ ಮಾಡಿಕೊಳ್ಳುತ್ತಿದ್ದಾರೆ.
ಕಾಫಿ ತೋಟಗಳು ಕಣ್ಮರೆಯಾಗಿ ಪ್ರವಾಸಿಗರನ್ನು ಆಕರ್ಷಿಸುವ ಜೊತೆಗೆ ವ್ಯವಹಾರ ಕುದುರಿಸುವ ಹಾಟ್ ಸ್ಪಾಟ್ ಗಳಾಗಿವೆ. ಭೂಮಿ ರೇಟು ಗಗನಕ್ಕೆ ಏರಿಕೆಯಾಗಿದ್ದು ಹೊರ ರಾಜ್ಯದ ಹಣವಂತರು,ಗುತ್ತಿಗೆದಾರರು,ಗಣಿ ಮಾಲೀಕರು ಮತ್ತು ರಾಜಕಾರಣಿಗಳು, ನಿವೃತ್ತ ಅಧಿಕಾರಿಗಳು ಪ್ರವಾಸದ ಹೆಸರಿನಲ್ಲಿ ಹಣ ದೋಚುತ್ತಿದ್ದಾರೆ.ಸ್ಥಳಿಯರು ಮರ್ಯಾದೆಗೆ ಅಂಜಿ ಕಣ್ಣ್,ಕಣ್ಣ್ ಬಿಡುತ್ತಿದ್ದಾರೆ.
ಜಿಲ್ಲೆಗೆ ಬರುವ ಇಪ್ಪತ್ತರಷ್ಟು ನಿಜವಾದ ಪ್ರವಾಸಿಗರು ಬಂದರೆ ಇನ್ನುಳಿದ ಎಂಬತ್ತರಷ್ಷು ಪ್ರವಾಸಿಗರು ಮೋಜು ಮಸ್ತಿಗೆ ಬಂದು ತೆಕ್ಕೆ ಹಾಕಿಕೊಂಡು ಅಸಭ್ಯವಾಗಿ ನಶೆಯಲ್ಲಿ ತೇಲುತ್ತಿದ್ದಾರೆ.ಬೈಕ್, ಕಾರು,ಬಸ್ಸಿನಲ್ಲಿ ಬಂದು ಹೋಗುವವರ ಸಂಖ್ಯೆ ದಿನೇ,ದಿನೇ ಹೆಚ್ಚಾಗಿ ಟ್ರಾಫಿಕ್ ಸಮಸ್ಯೆ ಉಂಟಾಗುತ್ತಿದೆ.ಇದರ ಜೊತೆಗೆ ಡ್ರಗ್ಸ್ ವ್ಯವಹಾರ ಬಹಿರಂಗವಾಗಿ ನಡೆಸುತ್ತಿದ್ದಾರೆ ನಿತ್ಯ ಸುಮಂಗಲಿಯರಿಗೆ ಮರ್ಯಾದೆ ಇರುವ ಜನ ತಿಂಗಳಲ್ಲಿ ಮೂರು ದಿನ ಅರತಿ ಬೆಳಗೆ ಬೆಡ್ ರೂಮಿಗೆ ಕಳುಹಿಸುತ್ತಿದ್ದಾರೆ ಎಂಬ ದೂರುಗಳು ಇವೆ. ಕಾಂಚಾಣಂ ಕಾರ್ಯಾಸಿದ್ದಿ ಎನ್ನುವ ಮೋಹದಲ್ಲಿ ಎಲ್ಲಾ ನಡೆಯುತ್ತಿದೆ.ಇನ್ನೂ ವೆಹಿಕಲ್ ಗಲಾಟೆ ನಿತ್ಯವೂ ನಡೆಯುತ್ತಿದೆ
ವೈಟ್ ಬೋರ್ಡ್ ಕಾರುಗಳು ಮತ್ತು ಜೀಪ್ ಗಳ ರಗಳೆ ಮುಗಿಯುತ್ತಿಲ್ಲ ಸಾರಿಗೆ ಇಲಾಖೆ ವಸೂಲಿ ಇಲಾಖೆಯಾಗಿದೆ ಇದರಿಂದ ಗಲಾಟೆ ನಡೆಯುತ್ತಿದೆ.ಜೀಪ್ ಗಳಲ್ಲಿ ಪ್ರವಾಸಿಗರನ್ನು ಕರೆದು ಕೊಂಡು ಬಹಿರಂಗವಾಗಿ ಓಡಾಡುತ್ತಿದ್ದಾರೆ. ಇದು ಎಲ್ಲಾ ಇಲಾಖೆಯವರಿಗೆ ತಿಳಿದರು ಸುಮ್ಮನಿರುವುದು ಕಾಂಚಾಣದ ಸದ್ದಿನ ಮಹಿಮೆ ಮುಂದೆ ಎಲ್ಲವೂ ಸ್ಥಬ್ದ. ನಾಡನ್ನು ಮುನ್ನೆಡೆಸುವ ಡಿ.ಕೆ.ಶಿವಕುಮಾರ್ ಕಾನೂನು ಮೀರಿ ರೆಸಾರ್ಟ್ ನಿರ್ಮಾಣ ಮಾಡುತ್ತಿದ್ದಾರೆ ಜಿಲ್ಲಾ ಉಸ್ತುವಾರಿ ಸಚಿವರು ಅಳತೆ ಮೀರಿ ಕಾಫಿ ತೋಟ ಖರೀದಿಯಲ್ಲಿ ಬ್ಯೂಸಿ ಇದ್ದಾರೆ.
ಇನ್ನೂ ಶಾಸಕರುಗಳು ಬ್ರಾಂಡಿ ಶಾಪ್ ಗಳಲ್ಲಿ ವಸೂಲಿಗೆ ಇಳಿಯುವುದರ ಜೊತೆಗೆ ಬ್ರಾಂಡಿ ಶಾಪ್ ಗಳನ್ನು ತೆರೆಯುತ್ತಿದ್ದಾರೆ. ಜೂಜು ಕೇಂದ್ರ ತೆರೆದರು ನಮಗೂ ಇದಕ್ಕೂ ಸಂಬಂಧವಿಲ್ಲ ಎಂದು ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆಯವರು ಕಣ್ಣುಮುಚ್ಚಿ ಕುಳಿತಿಲ್ಲಾ ಎಷ್ಟು ಸಿಗಬಹುದು ಎಂಬ ಲೆಕ್ಕಾಚಾರದಲ್ಲಿ ಜೂಬರಿಸಿಕೊಂಡು ಇದ್ದಾರೆ.ಜಿಲ್ಲೆಯಲ್ಲಿರುವ ಸಂಘಟನೆಗಳು ಕಾರ್ಯ ಕ್ರಮ ಅಯೋಜಿಸಲು ಸುಸ್ತಾದವರಂತೆ ನಟಿಸುತ್ತಿದ್ದಾರೆ.
ಇಷ್ಟೆಲ್ಲಾ ನಡೆದರೂ ಪ್ರವಾಸಿಗರಿಗೆ ನಿರ್ದಿಷ್ಟ ಮಾನದಂಡ ರೂಪಿಸದಿದ್ದರೆ ಮುಂದೆ ಜಿಲ್ಲೆಗೆ ಗಂಡಾಂತರ ತಪ್ಪುವುದಿಲ್ಲಾ.ಇದರಲ್ಲಿ ಮಾತ್ರ ಬಿಜೆಪಿ ಮತ್ತು ಕಾಂಗ್ರೆಸ್ ನವರ ಹೊಂದಾಣಿಕೆ ನೋಡಿದರೆ ಮೂರನ್ನು ಬಿಟ್ಟು ನಿಂತಿದ್ದಾರೆ ಜೊತೆಗೆ ಇಂತಹ ದಂಧೆಯಲ್ಲಿ ಪಕ್ಷದ ಮತ್ತು ಅಧಿಕಾರದ ಚುಕ್ಕಾಣಿ ಹಿಡಿದವರು ತೊಡಗಿಸಿ ಕೊಂಡಿರುವುದರಿಂದ ಎಲ್ಲವೂ ಮೌನ,ಮೌನ.
Mafia businesses in tourist spots in the district?
Leave a comment