Home namma chikmagalur chikamagalur ಸಂಘಟನೆ ವಿರೋಧಿ ಚಟುವಟಿಕೆ ಮೂವರ ಸದಸ್ಯರ ಅಮಾನತು
chikamagalurHomeLatest Newsnamma chikmagalur

ಸಂಘಟನೆ ವಿರೋಧಿ ಚಟುವಟಿಕೆ ಮೂವರ ಸದಸ್ಯರ ಅಮಾನತು

Share
Oplus_16908288
Share

ಚಿಕ್ಕಮಗಳೂರು : ಸಂಘಟನೆ ವಿರೋಧಿ ಚಟುವಟಿಕೆ ನಡೆಸಿದ ಆರೋಪದಡಿಯಲ್ಲಿ ಕರ್ನಾಟಕ ರಾಜ್ಯ ರೈತ ಸಂಘದ ಪ್ರಾಥಮಿಕ ಸದಸ್ಯತ್ವದಿಂದ ಡಿ.ರಾಮೇಗೌಡ, ವೈ.ಸಿ.ಸುನೀಲ್‌ಕುಮಾರ್ ಮತ್ತು ಬಿ.ಯು.ಪರ್ವತೇಗೌಡ ಅವರನ್ನು ಉಚ್ಚಾಟಿಸಿ ರಾಜ್ಯ ಸಮಿತಿ ಆದೇಶಿಸಿದೆ ಎಂದು ರೈತ ಸಂಘದ ಜಿಲ್ಲಾಧ್ಯಕ್ಷ ಡಿ.ಮಹೇಶ್ ತಿಳಿಸಿದರು.

ಅವರು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಸಂಘದಲ್ಲಿದ್ದುಕೊಂಡೇ ಕೆಲವರು ಸಂಘಟನೆ ವಿರೋಧಿ ಚಟುವಟಿಕೆ ನಡೆಸುತ್ತಾ ಬರುತ್ತಿರುವುದನ್ನು ರಾಜ್ಯ ಸಮಿತಿ ಗಮನಿಸಿದೆ ಎಂದರು.

ಅಧಿಕೃತ ಜಿಲ್ಲಾ ಮತ್ತು ತಾಲೂಕು ಶಾಖೆಗಳು ಸಂಘಟನೆಯ ನಿಯಮಾವಳಿಗೆ ಅನುಗುಣವಾಗಿ ಕಾರ್ಯಚಟುವಟಿಕೆ ನಡೆಸುತ್ತಿದ್ದರೂ ಉದ್ದೇಶಪೂರ್ವಕವಾಗಿ ಸಂಘಟನೆಯ ಚಟುವಟಿಕೆಗಳಿಗೆ ಅಡ್ಡಿಪಡಿಸುವುದು ಹಾಗೂ ವೈಯಕ್ತಿಕ ತೇಜೋವಧೆ ಮಾಡುವ ಉದ್ದೇಶದಿಂದ ವಾಟ್ಸಾಪ್ ಗ್ರೂಪ್ ಗಳಿಗೆ ಸಂಘಟನೆ ಮೇಲೆ ತಪ್ಪು ಅಭಿಪ್ರಾಯ ಬರುವಂತೆ ಗೊಂದಲ ಸೃಷ್ಟಿಸಿ ಸಂಘಟನೆಯ ಘನತೆಗೆ ಚ್ಯುತಿ ಬರುವಂತೆ ನಡೆದು ಕೊಂಡಿದ್ದಾರೆ.

ರಾಜ್ಯ ಸಮಿತಿ ಇವರಿಗೆ ಅನೇಕ ಬಾರಿ ಎಚ್ಚರಿಕೆ ಕೊಟ್ಟಿದ್ದರೂ, ರಾಜ್ಯ ಅಧ್ಯಕ್ಷರು, ಪದಾಧಿ ಕಾರಿಗಳು ಸಭೆ ನಡೆಸಿ ಸಂಘದ ಶಿಸ್ತನ್ನು ಉಲ್ಲಂಘಿಸದಂತೆ ತಿಳಿವಳಿಕೆ ನೀಡಿದ್ದರೂ ಸಹ ಎಲ್ಲ ಸಲಹೆಗಳನ್ನು ಗಾಳಿಗೆ ತೂರಿ ಸ್ವೇಚ್ಛೆಯಿಂದ ನಡೆದುಕೊಳ್ಳುತ್ತಿರುವುದು ರಾಜ್ಯ ಸಂಘದ ಗಮನಕ್ಕೆ ಬಂದಿದೆ ಎಂದು ಹೇಳಿದರು.

ಜಿಲ್ಲೆ ಮತ್ತು ತಾಲೂಕು ಸಮಿತಿಗಳು ಅಸ್ತಿತ್ವದಲ್ಲಿದ್ದರೂ ಜಿಲ್ಲಾ ಸಮಿತಿಯೊಂದಿಗೆ ಸರಿಯಾಗಿ ಸ್ಪಂದಿಸದೆ ಹೊಸದಾಗಿ ಜಿಲ್ಲೆ ಮತ್ತು ತಾಲೂಕು ಸಮಿತಿಗಳನ್ನು ಇತ್ತೀಚೆಗೆ ರಚಿಸಿಕೊಂಡಿರುವುದು ರಾಜ್ಯ ಸಮಿತಿ ಗಮನಕ್ಕೆ ಬಂದಿದೆ. ಇಂತಹ ವ್ಯಕ್ತಿಗಳಿಂದ ಸಂಘಟನೆಗೆ ಕೆಟ್ಟ ಹೆಸರು ಬರುವುದು ಖಚಿತ ಎಂದು ಪರಿಗಣಿಸಿ ಭಿನ್ನಮತೀಯ ಚಟುವಟಿಕೆ ನಡೆಸುತ್ತಾ ಸಂಘಟನೆಯಲ್ಲಿ ಒಡಕುಂಟು ಮಾಡಲು ತೊಡಗಿಸಿಕೊಂಡಿದ್ದ ಡಿ.ರಾಮೇಗೌಡ, ವೈ.ಸಿ.ಸುನೀಲ್‌ಕುಮಾರ್, ಬಿ.ಯು.ಪರ್ವತೇಗೌಡ ಅವರನ್ನು ಸಂಘಟನೆಯ ಪ್ರಾಥಮಿಕ ಸದಸ್ಯತ್ವದಿಂದ ರಾಜ್ಯ ಸಮಿತಿ ಉಚ್ಛಾಟಿಸಿದೆ ಎಂದು ಹೇಳಿದರು.

ಇನ್ನು ಮುಂದೆ ಸಂಘದಿಂದ ಉಚ್ಛಾಟಿತರಾದವರಿಗೂ ಕರ್ನಾಟಕ ರಾಜ್ಯ ರೈತ ಸಂಘಕ್ಕೂ ಯಾವುದೇ ಸಂಬಂಧವಿಲ್ಲ. ಉಚ್ಛಾಟಿತರು ನಮ್ಮ ಸಂಘಟನೆಯ ಹೆಸರನ್ನು ಯಾವುದೇ ಕಾರಣಕ್ಕೂ ಬಳಕೆ ಮಾಡಿಕೊಳ್ಳಬಾರದು ಹಾಗೂ ಸಂಘದ ಚಿನ್ಹೆ ಮತ್ತು ಲೆಟರ್ ಹೆಡ್ ಬಳಸಿಕೊಂಡು ದುರುಪಯೋಗಪಡಿಸಿಕೊಳ್ಳುವುದು ಕಂಡುಬಂದಲ್ಲಿ ಅವರು ಸೂಕ್ತ ಕ್ರಮ ಎದುರಿಸಬೇಕಾಗುತ್ತದೆ ಎಂದು ರಾಜ್ಯ ಸಮಿತಿ ಎಚ್ಚರಿಸಿದೆ ಎಂದು ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ರೈತ ಸಂಘದ ಮಾಜಿ ಅಧ್ಯಕ್ಷ ಗುರುಶಾಂತಪ್ಪ, ಪ್ರಧಾನ ಕಾರ್ಯದರ್ಶಿ ಎಂ.ಬಿ.ಚಂದ್ರಶೇಖರ್, ಮುಖಂಡರಾದ ಎಂ.ಸಿ.ಬಸವರಾಜು,ದೇವರಾಜು, ಭದ್ರೇಗೌಡ, ಸಿದ್ದೇಗೌಡ ಮತ್ತಿತರರಿದ್ದರು.

Three members suspended for anti-organizational activities

Share

Leave a comment

Leave a Reply

Your email address will not be published. Required fields are marked *

Don't Miss

ಅನಧಿಕೃತ ಜೀಪ್‌ಗಳ ಹಾವಳಿ ತಪ್ಪಿಸಲು ಆಗ್ರಹಿಸಿ ಜಿಲ್ಲಾಡಳಿತಕ್ಕೆ ಮನವಿ

ಚಿಕ್ಕಮಗಳೂರು:  ಜಿಲ್ಲೆಯ ಪ್ರವಾಸಿ ತಾಣಗಳಲ್ಲಿ ಅನಧಿಕೃತ ಮತ್ತು ಅಕ್ರಮ ಜೀಪ್ ಗಳ ಹಾವಳಿ ತಡೆಗಟ್ಟಿ ಪ್ರವಾಸಿಗರ ಸುರಕ್ಷತೆ ಕಾಪಾಡಬೇಕು ಎಂದು ಆಗ್ರಹಿಸಿ ಜಿಲ್ಲೆಯ ಸ್ಥಳೀಯ ನಾಗರೀ ಕರು ಸೋಮವಾರ ಅಪರ ಜಿಲ್ಲಾಧಿಕಾರಿ...

ಜಿಲ್ಲೆಯ ಪ್ರವಾಸಿ ತಾಣಗಳಲ್ಲಿ ಮಾಫಿಯಾ ದಂದೆಗಳು ?

ಚಿಕ್ಕಮಗಳೂರು: ಪ್ರಸಿದ್ಧ ಪ್ರವಾಸಿ ತಾಣಗಳಲ್ಲಿ ಚಿಕ್ಕಮಗಳೂರು ಜಿಲ್ಲೆಗೆ ಅಗ್ರಸ್ಥಾನವಿದೆ.ನಿಜವಾದ ಪ್ರವಾಸಿಗರು ಜಿಲ್ಲೆಯ ಪ್ರಕೃತಿ ಸೌಂದರ್ಯದ ಜೊತೆಗೆ ಧಾರ್ಮಿಕ ಸ್ಥಳಗಳು, ಝರಿಗಳ ಜೊತೆಗೆ ಬೋರ್ಗರಿಯುವ ನದಿಗಳು, ಉಪ ನದಿಗಳು,ಅರಣ್ಯದ ಜೊತೆಗೆ ಕಾಡು ಪ್ರಾಣಿಗಳು...

Related Articles

ವಕೀಲ ವಿ.ಕೆ.ರಘು ಸಾಧನೆ ಯೋಗ ಮಾಡುವವರಿಗೆ ಪ್ರೇರಣೆ

ಚಿಕ್ಕಮಗಳೂರು: ಯೊಗ ನಮ್ಮ ಪ್ರಾಚೀನ ಋಷಿಮುನಿಗಳು ಜಗತ್ತಿಗೆ ಕೊಟ್ಟಂತಹ ಕೊಡುಗೆ. ವಕೀಲ ವಿ.ಕೆ.ರಘು ಅವರ ಯೋಗದ...

ಅಂಚೆ ನಾಗಭೂಷಣ್ ಗೆ’ಪತ್ರಿಕಾ ರತ್ನ’ ಪ್ರಶಸ್ತಿ ಪ್ರಧಾನ

ತರೀಕೆರೆ : ಪಟ್ಟಣದ ಹಿರಿಯ ಪತ್ರಕರ್ತರು, ಜಿಲ್ಲಾ ಕನ್ನಡ ವಾರಪತ್ರಿಕೆ ಅಂಚೆವಾರ್ತೆ ಸಂಪಾದಕರು ಆದ ಅಂಚೆ...

ಇಂದು ಆರ್‌ಟಿಒ ರಾಕೇಶ್ ಕುಮಾರ್ ವಿರುದ್ಧ ವಿಚಾರಣೆ

ಚಿಕ್ಕಮಗಳೂರು: ಇಲ್ಲಿನ ಪ್ರಾದೇಶಿಕ ಸಾರಿಗೆ ಕಚೇರಿಯಲ್ಲಿ ಭ್ರಷ್ಟಾಚಾರ ಹಾಗೂ ಹಣಕಾಸು ಅಕ್ರಮಗಳ ಆರೋಪ ಕೇಳಿಬಂದಿರುವ ಬೆನ್ನಲ್ಲೇ...

ನಗರದಲ್ಲಿ ಎರಡು ಗುಂಪುಗಳ ನಡುವಿನ ಗಲಾಟೆ

ಚಿಕ್ಕಮಗಳೂರು : ಮಧ್ಯರಾತ್ರಿ ರಸ್ತೆಯಲ್ಲಿ ಕೆಟ್ಟ ಶಬ್ದಗಳಿಂದ ಬೈದಾಡಿಕೊಳ್ಳುತ್ತಾ ಸಾರ್ವಜನಿಕರ ನೆಮ್ಮದಿಗೆ ಭಂಗ ತಂದ ಎರಡು...