Home namma chikmagalur chikamagalur ಬಿಜೆಪಿ ಮುಖಂಡರಾದ ಸಿ. ಟಿ.ರವಿರವರ ಹೇಳಿಕೆ ಹಾಸ್ಯಸ್ಪದ
chikamagalurHomeLatest Newsnamma chikmagalur

ಬಿಜೆಪಿ ಮುಖಂಡರಾದ ಸಿ. ಟಿ.ರವಿರವರ ಹೇಳಿಕೆ ಹಾಸ್ಯಸ್ಪದ

Share
Share

ಚಿಕ್ಕಮಗಳೂರು: ಜಿಲ್ಲೆಗೆ ಮಂತ್ರಿ ಸ್ಥಾನ ಡಿ.ಕೆ.ಶಿವಕುಮಾರ್ ರವರ ನೇತೃತ್ವದ ಕಾಂಗ್ರೆಸ್ ಸರ್ಕಾರದಲ್ಲಿ ಸಿಕ್ಕಿಲ್ಲ ಎಂಬ ವಿಧಾನ ಪರಿಷತ್ ಸದಸ್ಯರು ಹಾಗೂ ಹಿರಿಯ ಬಿಜೆಪಿ ಮುಖಂಡರಾದ ಸಿ. ಟಿ.ರವಿರವರ ಹೇಳಿಕೆ ಹಾಸ್ಯಸ್ಪದ ಎಂದು ಜಿಲ್ಲಾ ಪಧವೀಧರ ಮತ್ತು ಶಿಕ್ಷಕರ ಘಟಕದ ಜಿಲ್ಲಾದ್ಯಕ್ಷ ಜಿ.ಬಿ.ಪವನ್ ಲೇವಡಿ ಮಾಡಿದ್ದಾರೆ.

ಪತ್ರಿಕಾ ಹೇಳಿಕೆ ಮುಖಾಂತರ ನಾವೂ ನಮ್ಮ ಜಿಲ್ಲೆಯಿಂದ ಬಿಜೆಪಿ ಪಕ್ಷದ ಭವಿಷ್ಯ ಎಂದು ತಿಳಿದ ಆ ಪಕ್ಷದ ಹಿರಿಯ ನಾಯಕ ತಮ್ಮ ಸರ್ಕಾರ ಇದ್ದ ಎಲ್ಲ ಸಂದರ್ಭದಲ್ಲಿ ಯಾಕೆ ಮಂತ್ರಿಯಾಗಿರಲಿಲ್ಲ ಎಂದು ಪ್ರಶ್ನಿಸಿದ್ದಾರೆ.

ಒಂದು ಭಾರಿ ಮಂತ್ರಿಯಾದರೂ ಕೂಡ ಮೊದಲ ಭಾರಿ ಜಿಲ್ಲೆಗೆ ಉಸ್ತುವಾರಿ ಸಚಿವಾರಿಗೆ ಅವರ ಪಕ್ಷದ ಡಿ ಹೆಚ್ ಶಂಕರಮೂರ್ತಿ ಈಶ್ವರಪ್ಪ, ರವರು ಆದಾಗ ಇವರ ಬಾಯಿ ಎಲ್ಲಿ ಹೋಗಿತ್ತು ಎಂಬುದನ್ನು ಅರಿತುಕೊಳ್ಳಬೇಕು ಎಂದು ತಿಳಿಸಿದ್ದಾರೆ.

ಇತಿಹಾಸವನ್ನು ಅರಿತು ಮಾತಾನಾಡುವವನು ಇತಿಹಾಸವನ್ನು ಸೃಷ್ಠಿಸಬಲ್ಲ ಅದನ್ನು ಮರೆತು ರಾಜಕೀಯಾ ಹಪಾಹಪಿಗೆ ಮಾತನಾಡುವವರು ಎಂದು ನಾಯಕನಾಗಲಾರ ಎಂದು ಲೇವಡಿ ಮಾಡದ್ದಾರೆ.
1999 ರ ಕಾಂಗ್ರೇಸ್ ಸರ್ಕಾರದಲ್ಲಿ ಜಿಲ್ಲೆಯಲ್ಲಿ ಪಕ್ಷದಿಂದ ಮೂವರ ಹಿರಿಯ ನಾಯಕರು ಗೆದ್ದಿದ್ದು ಮೂವರಾದ ದಿವಂಗತ ಡಿ.ಬಿ.ಚಂದ್ರೇಗೌಡ, ಸಿ.ಆರ್.ಸಗೀರ್ ಅಹಮ್ಮದ್,ಮೋಟಮ್ಮ ನವರನ್ನು ಸಂಪುಟ ದರ್ಜೆಯ ಸಚಿವರನ್ನಾಗಿಸಿದ ಕೀರ್ತಿ ಕಾಂಗ್ರೇಸ್ ಪಕ್ಷಕ್ಕೆ ಇದೆ ಎಂಬ ಇತಿಹಾಸವನ್ನು ಪವನ್ ರವರು ರವಿರವರಿಗೆ ನೆನಪಿಸಿದ್ದಾರೆ.

ಬಿಜೆಪಿ ಮತ್ತು ಸಿ.ಟಿ.ರವಿರವರ ಸದಾ ಪ್ರಕ್ರಿಯೆ ರಾಜಕಾರಣವೇ ಹೊರತು ಜಿಲ್ಲೆಯ ಅಭಿವೃದ್ದಿ ಬಗೆಗಿನ ಚಿಂತನೆ ಅಲ್ಲ ಇದಕ್ಕೆ ಉದಾಹರಣೆ ಇಂದಿನ ಮತ್ತು ಈ ಹಿಂದಿನ ಉಸ್ತುವಾರಿ ಸಚಿವರಾದ ಕೆ.ಜೆ.ಜಾರ್ಜ್ ರವರ ಕಾರ್ಯದ ಬಗ್ಗೆ ಇದುವರೆಗೂ ಯಾವುದೇ ತಕರಾರು ತೆಗೆಯದಿರುವುದು ಜಾರ್ಜ್ ರವರ ಮತ್ತು ಕಾಂಗ್ರೆಸ್ ಪಕ್ಷದ ಸಚಿವರ ಕಾರ್ಯಕ್ಷಮತೆಯನ್ನು ಎತ್ತಿ ತೋರಿಸುತ್ತದೆ ಎಂದು ಅವರು ಹೇಳಿಕೆಯಲ್ಲಿ ತಿಳಿಸಿದ್ದಾರೆ.
ರವಿರವರು ಇಂದು ಕ್ಷೇತ್ರದಲ್ಲಿ ತಮ್ಮ ಮುಂದಿನ ರಾಜಕೀಯ ಭವಿಷ್ಯಕ್ಕಾಗಿ ಈ ರೀತಿಯ ಹೇಳಿಕೆಯನ್ನು ತಮ್ಮ ಪಕ್ಷ ಈ ಹಿಂದೆ ಅಧಿಕಾರದಲ್ಲಿ ಇಂದ ಸಂದರ್ಭದಲಿ ಜಿಲ್ಲೆಯಲ್ಲಿ ನೆಡೆದುಕೊಂಡ ಇತಿಹಾಸವನ್ನು ಮರೆತು ಹೇಳಿಕೆ ನೀಡಿರುವುದು, ಹಾಸ್ಯಸ್ಪದವೇ ಸರಿ ಎಂದು ಕುಟುಕಿದ್ದಾರೆ.

ರವಿರವರು ಜವಾಬ್ದಾರಿಯುತರು ಎಂದು ತಿಳಿದಿರುವ ಜಿಲ್ಲಾ ಪಧವೀದರ ಮತ್ತು ಶಿಕ್ಷಕರ ಘಟಕವು ಇವರ ಈ ರೀತಿಯ ರಾಜಕೀಯ ಮತ್ತು ಇತಿಹಾಸ ಮರೆತ ಹೇಳಿಕೆಗಳನ್ನು ತೀವ್ರವಾಗಿ ಖಂಡಿಸುತ್ತಾ,ಈ ರೀತಿಯ ಹೇಳಿಕೆಗಳಿಗೆ ಚಿಕ್ಕಮಗಳೂರು ಕ್ಷೇತ್ರದ ಮತದಾರರು ಸೊಪ್ಪು ಹಾಕುವುದಿಲ್ಲ ಎಂಬುವುದನ್ನು ಮನವರಿಕೆ ಮಾಡಕೊಡಲು ಬಯಸುತ್ತದೆ ಎಂದು ತಿಳಿಸಿದ್ದಾರೆ.

BJP leader C. T. Ravi’s statement is ridiculous.

Share

Leave a comment

Leave a Reply

Your email address will not be published. Required fields are marked *

Don't Miss

ದ್ವೇಷ ಭಾಷಣಗಳ ಆಧಾರಲ್ಲಿಯೇ ಸಂಘಟನೆ ಕಟ್ಟಲು ಹೊರಟಿರುವುದು ಖಂಡನೀಯ

ಚಿಕ್ಕಮಗಳೂರು : ವಿಧಾನ ಪರಿಷತ್ ಸದಸ್ಯ ಸಿ.ಟಿ ರವಿ ಮತ್ತು ಉಡುಪಿ ಕ್ಷೇತ್ರದ ಶಾಸಕ ಯಶ್ಪಾಲ್ ಸುವರ್ಣ ವಿಪರೀತವಾದ ದ್ವೇಷ ಭಾಷಣಗಳ ಆಧಾರಲ್ಲಿಯೇ ಸಂಘಟನೆಯನ್ನು ಕಟ್ಟಲು ಹೊರಟಿರುವುದು ಖಂಡನೀಯ ಎಂದು ಕೆ.ಪಿ.ಸಿ.ಸಿ...

ಕಾವೇರಿ ನೀರು ತಮಿಳುನಾಡಿಗೆ ಹರಿಸದಂತೆ ಒತ್ತಾಯಿಸಿ ಪ್ರತಿಭಟನೆ

ಚಿಕ್ಕಮಗಳೂರು:  ಕಾವೇರಿ ನೀರನ್ನು ನೆರೆರಾಜ್ಯ ತಮಿಳುನಾಡಿಗೆ ಹರಿಬಿಡದೇ ರಾಜ್ಯದ ಜನರಿಗೆ ಉಳಿಸಿಕೊಡಬೇಕು ಎಂದು ಆಗ್ರಹಿಸಿ ಶನಿವಾರ ಜಿಲ್ಲಾ ಕನ್ನಡಸೇನೆ ಕಾರ್ಯಕರ್ತರು ನಗರದ ಆ ಜಾದ್‌ಪಾರ್ಕ್ ವೃತ್ತದ ಸಮೀಪ ಪ್ರತಿಭಟನೆ ನಡೆಸಿ ಆಕ್ರೋಶ...

Related Articles

ಎಂಎಲ್‌ಸಿ ಆಗಿ ಗಾಯತ್ರಿ ಶಾಂತೇಗೌಡ ಪ್ರಮಾಣವಚನ

ಬೆಂಗಳೂರು: ಚಿಕ್ಕಮಗಳೂರು ಸ್ಥಳೀಯ ಸಂಸ್ಥೆಗಳ ಕ್ಷೇತ್ರದಿಂದ ವಿಧಾನ ಪರಿಷತ್‌ಗೆ ಆಯ್ಕೆಯಾದ ಕಾಂಗ್ರೆಸ್‌ನ ಎ.ವಿ. ಗಾಯತ್ರಿ ಶಾಂತೇಗೌಡ...

ಕೊಟ್ಟಿಗೆಹಾರದಲ್ಲಿ ಭೀಕರ ಅಪಘಾತದಲ್ಲಿ ಮೂವರು ಸಾವು 

ಮೂಡಿಗೆರೆ: ತಾಲೂಕಿನ ಕೊಟ್ಟಿಗೆಹಾರದ ಪೆಟ್ರೋಲ್ ಪಂಪ್ ಮುಂಭಾಗ ಕಾರು ಮತ್ತು ಲಾರಿ ನಡುವೆ ಸಂಭವಿಸಿದ ಭೀಕರ...

ನೀರಿನ ಸಮಸ್ಯೆ ತಲೆದೋರದಂತೆ ಭದ್ರಾ ಮೇಲ್ದಂಡೆ ನಾಲೆ ಮೂಲಕ ನೀರು ಹರಿಸಲು ಕ್ರಮ

ಚಿಕ್ಕಮಗಳೂರು:  ತರೀಕೆರೆ, ಕಡೂರು, ಅಜ್ಜಂಪುರ ತಾಲ್ಲೂಕಿನಲ್ಲಿ ಮಳೆ ಅಭಾವದಿಂದಾಗಿ ಬರಗಾಲದ ಸ್ಥಿತಿ ತಲೆದೋರಿದೆ. ಕುಡಿಯುವ ನೀರಿನ...

ಮಳೆಯಾಗದೆ ಸಂಕಷ್ಟಕ್ಕೆ ಸಿಲುಕಿದ ರೈತರ ಸ್ಥಿತಿ ಅವಲೋಕಿಸಿದ ಸಚಿವ ಜಾರ್ಜ್

ಚಿಕ್ಕಮಗಳೂರು: ಸಕಾಲದಲ್ಲಿ ಮಳೆಯಾಗದೆ ಸಂಕಷ್ಟಕ್ಕೆ ಸಿಲುಕಿರುವ ರೈತರು, ಒಣಗಿ ನಿಂತಿರುವ ಭೂಮಿ, ಮಳೆಯ ನಿರೀಕ್ಷೆಯಲ್ಲಿ ಬಿತ್ತನೆ...