Home namma chikmagalur chikamagalur ಜಿಲ್ಲಾ ಆಸ್ಪತ್ರೆಯಲ್ಲಿ ಹೊರಗುತ್ತಿಗೆ ನೌಕರರ ಪಿಎಫ್ ವಂಚನೆ
chikamagalurHomeLatest Newsnamma chikmagalur

ಜಿಲ್ಲಾ ಆಸ್ಪತ್ರೆಯಲ್ಲಿ ಹೊರಗುತ್ತಿಗೆ ನೌಕರರ ಪಿಎಫ್ ವಂಚನೆ

Share
Oplus_16908288
Share

ಚಿಕ್ಕಮಗಳೂರು:  ಜಿಲ್ಲಾ ಆಸ್ಪತ್ರೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ‘ಡಿ’ ದರ್ಜೆ ಹೊರಗುತ್ತಿಗೆ ನೌಕರರ ಭವಿಷ್ಯ ನಿಧಿ (EPF) ಹಣವನ್ನು ಪಾವತಿಸದೆ ವಂಚನೆ ನಡೆಸಿರುವುದಲ್ಲದೆ, ಕೆಲವು ನೌಕರರು ಹಾಗೂ ನೌಕರರ ಪ್ರತಿನಿಧಿಯ ಬ್ಯಾಂಕ್ ಖಾತೆಗಳನ್ನು ಅಕ್ರಮವಾಗಿ ಫ್ರೀಜ್ ಮಾಡಿಸಿ ಮಾನಸಿಕ ಕಿರುಕುಳ ನೀಡಲಾಗಿದೆ ಎಂದು ಆರೋಪಿಸಿ, ತಪ್ಪಿತಸ್ಥರ ವಿರುದ್ಧ ತಕ್ಷಣ ಕ್ರಿಮಿನಲ್ ಕ್ರಮ ಕೈಗೊಳ್ಳುವಂತೆ ಲಿಸಾ ಫೌಂಡೇಶನ್ (ಆರ್) ಆಗ್ರಹಿಸಿದೆ.

ನಗರದಲ್ಲಿ ಮಂಗಳವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಲಿಸಾ ಫೌಂಡೇಶನ್ ಸಂಸ್ಥಾಪಕಿ ಹಾಗೂ ಮ್ಯಾನೇಜಿಂಗ್ ಟ್ರಸ್ಟಿ, ವಕೀಲೆ ಸಂಗೀತಾ ಪ್ರಸಾದ್, ಸಂಸ್ಥೆಯ ಮಾಲೀಕ ಅಮರ್ ಎಸ್. ದ್ವೇಷಪೂರಿತವಾಗಿ ನೌಕರರನ್ನು ಬೆದರಿಸಿ ಅವರ ಧ್ವನಿಯನ್ನು ಅಡಗಿಸಲು ಯತ್ನಿಸುತ್ತಿದ್ದಾರೆ ಎಂದು ಆರೋಪಿಸಿದರು. ನೌಕರರು ಹಾಗೂ ಅವರ ಪ್ರತಿನಿಧಿ ಕೆ.ಎಸ್. ಮಂಜುಳಾ ಅವರ ಬ್ಯಾಂಕ್ ಖಾತೆಗಳನ್ನು ಅಕ್ರಮವಾಗಿ ಫ್ರೀಜ್ ಮಾಡಿಸಿರುವುದರಿಂದ ಅವರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದು ಹೇಳಿದರು.

ಈ ಸಂಬಂಧ ‘ಡಿ’ ದರ್ಜೆ ನೌಕರರ ನಿಯೋಗ ಹಾಗೂ ಲಿಸಾ ಫೌಂಡೇಶನ್‌ನ ಪ್ರತಿನಿಧಿಗಳು ಜಿಲ್ಲಾ ಆಸ್ಪತ್ರೆಯ ಡೀನ್ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದ್ದು, ವಿಷಯದ ಗಂಭೀರತೆಯನ್ನು ಅರಿತ ಡೀನ್ ಅವರು ಸಂಬಂಧಿತ ಗುತ್ತಿಗೆ ಸಂಸ್ಥೆಯನ್ನು ಕಪ್ಪುಪಟ್ಟಿಗೆ ಸೇರಿಸುವ ಪ್ರಕ್ರಿಯೆ ಆರಂಭಿಸಲು ಸೂಚನೆ ನೀಡಿರುವುದಾಗಿ ತಿಳಿಸಿದರು. ಜೊತೆಗೆ ಕಾರ್ಮಿಕರಿಗೆ ವಂಚನೆ ಎಸಗಿರುವ ಆರೋಪದ ಹಿನ್ನೆಲೆಯಲ್ಲಿ ಸಂಬಂಧಪಟ್ಟವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಸಲಹೆ ನೀಡಿರುವುದಾಗಿ ಹೇಳಿದರು.

ಇದೇ ವೇಳೆ, ಮೈಸೂರಿನ ಪ್ರಾದೇಶಿಕ ಭವಿಷ್ಯ ನಿಧಿ ಆಯುಕ್ತರ ಕಚೇರಿ 2026ರ ಜೂನ್ 11ರಂದು ಸಂಬಂಧಿತ ಸಂಸ್ಥೆಗೆ ನೋಟಿಸ್ ಜಾರಿಗೊಳಿಸಿದ್ದು, ಪಿಎಫ್ ಹಣ ಜಮಾ ಮಾಡದಿರುವುದನ್ನು ಗಂಭೀರ ಉಲ್ಲಂಘನೆಯಾಗಿ ಪರಿಗಣಿಸಿರುವುದಾಗಿ ಅವರು ತಿಳಿಸಿದರು.

ಲಿಸಾ ಫೌಂಡೇಶನ್ ಪ್ರಮುಖವಾಗಿ ಮೂರು ಬೇಡಿಕೆಗಳನ್ನು ಮುಂದಿಟ್ಟಿದ್ದು, 35 ‘ಡಿ’ ದರ್ಜೆ ನೌಕರರ ಪ್ರತಿಯೊಬ್ಬರ ಪಿಎಫ್ ಖಾತೆಗೆ ಬಾಕಿ ಇರುವ ಸುಮಾರು ₹70 ಸಾವಿರ ಅಥವಾ ಅದಕ್ಕಿಂತ ಹೆಚ್ಚಿನ ಮೊತ್ತವನ್ನು ಬಡ್ಡಿ ಹಾಗೂ ದಂಡ ಸಹಿತ ತಕ್ಷಣ ಜಮಾ ಮಾಡಬೇಕು. ಅಕ್ರಮವಾಗಿ ಫ್ರೀಜ್ ಮಾಡಿರುವ ನೌಕರರ ಹಾಗೂ ಕೆ.ಎಸ್. ಮಂಜುಳಾ ಅವರ ಬ್ಯಾಂಕ್ ಖಾತೆಗಳನ್ನು ಕೂಡಲೇ ಚಾಲನೆಗೆ ತರಬೇಕು. ಅಲ್ಲದೆ ಆರೋಪಿತ ಗುತ್ತಿಗೆದಾರರ ವಿರುದ್ಧ ಎಫ್‌ಐಆರ್ ದಾಖಲಿಸಿ ಕ್ರಿಮಿನಲ್ ಕ್ರಮ ಕೈಗೊಂಡು ಸಂಸ್ಥೆಯನ್ನು ಕಪ್ಪುಪಟ್ಟಿಗೆ ಸೇರಿಸಬೇಕು ಎಂದು ಒತ್ತಾಯಿಸಿದರು.

ಪತ್ರಿಕಾಗೋಷ್ಠಿಯಲ್ಲಿ ನೌಕರರ ಪ್ರತಿನಿಧಿ ಕೆ.ಎಸ್. ಮಂಜುಳಾ, ಸಂದೀಪ್, ಕುಮಾರ್ ನಾಯ್ಕ್ ಸೇರಿದಂತೆ ಇತರರು ಉಪಸ್ಥಿತರಿದ್ದರು

PF fraud of outsourced employees in district hospital

Share

Leave a comment

Leave a Reply

Your email address will not be published. Required fields are marked *

Don't Miss

ಬ್ಯಾಂಕ್ ಸಾಲದಿಂದ ಮುಕ್ತಿ ಹೊಂದಲು ಕ್ಯಾನ್ ಅದಾಲತ್

ಚಿಕ್ಕಮಗಳೂರು: ಬ್ಯಾಂಕ್ ಸುಸ್ತಿದಾರ ಬೆಳೆಗಾರರ ಅನುಕೂಲಕ್ಕಾಗಿ ಕೆನರಾ ಬ್ಯಾಂಕ್ ಕಾಫಿ ಬೆಳೆಯುವ ಜಿಲ್ಲೆಗಳ ಆಯ್ದ ಕೆಲವು ಶಾಖೆಗಳಲ್ಲಿ ಕ್ಯಾನ್ ಅದಾಲತ್ ನಡೆಸುತ್ತಿದ್ದು, ಸುಸ್ತಿದಾರ ಬೆಳೆಗಾರರು ಈ ಅವಕಾಶ ಸದುಪಯೋಗಪಡಿಸಿಕೊಂಡು ಬ್ಯಾಂಕ್ ಸಾಲದಿಂದ...

ರಾಜ್ಯ ಮಟ್ಟದ ಕಬಡ್ಡಿಯಲ್ಲಿ ಚಿಕ್ಕಮಗಳೂರು ಮಹಿಳಾ ತಂಡಕ್ಕೆ ಚಾಂಪಿಯನ್ ಪಟ್ಟ

ಚಿಕ್ಕಮಗಳೂರು: ಕರ್ನಾಟಕ ಸರ್ಕಾರದ ಸಾರಿಗೆ ಸಚಿವರಾದ ಶ್ರೀ ಬೈರತಿ ಸುರೇಶ್ ಅವರ ನೇತೃತ್ವದಲ್ಲಿ ಜುಲೈ 27ರಿಂದ 29ರವರೆಗೆ ಬೆಂಗಳೂರಿನ ದೇವಸಂದ್ರದಲ್ಲಿ ನಡೆದ ರಾಜ್ಯ ಮಟ್ಟದ ಪುರುಷ ಹಾಗೂ ಮಹಿಳೆಯರ ಕಬಡ್ಡಿ ಪಂದ್ಯಾವಳಿಯಲ್ಲಿ...

Related Articles

ಪೋಕ್ಸೋ ಪ್ರಕರಣ: ಆರೋಪಿಗೆ 7 ವರ್ಷ ಕಠಿಣ ಶಿಕ್ಷೆ, ₹45 ಸಾವಿರ ದಂಡ

ಚಿಕ್ಕಮಗಳೂರು: ಲಿಂಗದಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ದಾಖಲಾಗಿದ್ದ ಪೋಕ್ಸೋ ಪ್ರಕರಣದಲ್ಲಿ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ...

ಕಾಂಗ್ರೆಸ್ ಸರ್ಕಾರದ ಸಂಪುಟ ವಿಸ್ತರಣೆ ಭ್ರಷ್ಠಚಾರಕ್ಕೆ ಬಹುಮಾನ

ಚಿಕ್ಕಮಗಳೂರು: ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ನೇತೃತ್ವದಲ್ಲಿ ನಡೆದ ಸಚಿವ ಸಂಪುಟ ವಿಸ್ತರಣೆ ಚಿಕ್ಕಮಗಳೂರು ಜಿಲ್ಲೆಗೆ...

ಜಿಲ್ಲೆಯಲ್ಲಿ ಅಂಗನವಾಡಿ ಕಾರ್ಯಕರ್ತೆಯರು-ಸಹಾಯಕಿಯರ ಹುದ್ದೆಗಳಿಗೆ ಅರ್ಜಿ

ಚಿಕ್ಕಮಗಳೂರು: ಜಿಲ್ಲಾ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯಡಿ ಖಾಲಿ ಇರುವ ಅಂಗನವಾಡಿ ಕಾರ್ಯಕರ್ತೆ ಮತ್ತು...

ನಾಮಫಲಕದಲ್ಲಿ ಶೇ.೬೦ರಷ್ಟು ಕನ್ನಡಕ್ಕೆ ಪ್ರಾಧಾನ್ಯತೆಗೆ ಸೂಚನೆ

ಚಿಕ್ಕಮಗಳೂರು: ಮುಂದಿನ ಒಂದು ವಾರದೊಳಗೆ ಉದ್ಯಮದ ಎಲ್ಲಾ ನಾಮಫಲಕಗಳಲ್ಲಿ ಸರ್ಕಾರದ ನಿಯಮಗಳ ಅನ್ವಯ ಶೇ. ೬೦ರಷ್ಟು...