Home namma chikmagalur chikamagalur ಸಂಭ್ರಮದ ರಂಗನಾಥಸ್ವಾಮಿ ರಥೋತ್ಸವ
chikamagalurHomeLatest Newsnamma chikmagalur

ಸಂಭ್ರಮದ ರಂಗನಾಥಸ್ವಾಮಿ ರಥೋತ್ಸವ

Share
Share

ಸಖರಾಯಪಟ್ಟಣ: ಸಖರಾಯಪಟ್ಟಣದ ಇತಿಹಾಸ ಪ್ರಸಿದ್ಧ ಶ್ರೀ ಶಕುನ ರಂಗನಾಥಸ್ವಾಮಿಯ ರಥೋತ್ಸವ ವಿಜೃಂಭಣೆಯಿಂದ ನಡೆಯಿತು. ಸಂಕ್ರಾಂತಿ ಹಬ್ಬದಂದು ಮೊಲ ಬಿಡುವ ಸೇವೆಯಿಂದ ಆರಂಭವಾದ ಧಾರ್ಮಿಕ ಕೈಂಕರ್ಯಗಳಲ್ಲಿ ದಿನವೂ ವಿಶೇಷ ಅಭಿಷೇಕ ಮತ್ತು ಹಣ್ಣು ತುಪ್ಪ ಸೇವೆಗಳು ನಡೆದವು.

ರಾಜ್ಯದ ವಿವಿದೆಡೆಯಿಂದ ಆಗಮಿಸಿದ್ದ ಭಕ್ತರು ಸ್ವಾಮಿಯ ದರ್ಶನ ಪಡೆದು ಪ್ರಸಾದ ಸ್ವೀಕರಿಸಿದರು. ಮಧ್ಯಾಹ್ನ ರಂಗನಾಥಸ್ವಾಮಿ ಉತ್ಸವ ಮೂರ್ತಿಯನ್ನು ಮೆರವಣಿಗೆಯಲ್ಲಿ ಬಿಡದಿಮನೆಗೆ ಕರೆತಂದು ಪ್ರತಿಷ್ಠಾಪಿಸಲಾಯಿತು.ದೇವಾಲಯದಿಂದ ಶ್ರೀದೇವಿ ಮತ್ತು ಭೂದೇವಿಯ ಉತ್ಸವ ಮೂರ್ತಿಗಳನ್ನು ಬಿಡದಿಮನೆ ಸಮೀಪದ ಅರಳೀಕಟ್ಟೆಗೆ ಮೆರವಣಿಗೆಯಲ್ಲಿ ಕರೆತಂದು ರಂಗನಾಥಸ್ವಾಮಿಯೊಂದಿಗೆ ಕಲ್ಯಾಣೋತ್ಸವ ನೆರವೇರಿಸಲಾಯಿತು.

ನಂತರ ಮೂರು ದೇವರುಗಳನ್ನು ಬಿಡದಿಮನೆಗೆ ಕರೆತಂದು ಪೂಜೆ ಸಲ್ಲಿಸಲಾಯಿತು. ಅಲಂಕಾರಗೊಂಡ ಮಹಾರಥದಲ್ಲಿ ರಂಗನಾಥಸ್ವಾಮಿ ಮತ್ತು ದೇವಿಯವರ ಉತ್ಸವ ಮೂರ್ತಿಗಳನ್ನು ಪ್ರತಿಷ್ಠಾಪಿಸಿ ವಿಶೇಷ ಪೂಜೆ ಸಲ್ಲಿಸಲಾಯಿತು.

ಗ್ರಾಪಂ. ಅಧ್ಯಕ್ಷೆ ರಾಜಮ್ಮ ಮತ್ತು ಸದಸ್ಯರು, ಶಾಸಕ ತಮ್ಮಯ್ಯ, ಸಿ ಟಿ ರವಿ, ಎಸ್ ಎಲ್ ಬೋಜೇಗೌಡ,ಹಾಸನ ಹಾಲು ಒಕ್ಕೂಟ ನಿರ್ದೇಶಕ ಎಸ್ ಡಿ ಸೋನಾಲ್‌ಗೌಡ, ಉಪವಿಭಾಗಧಿಕಾರಿ ಎನ್ ವಿ ನಟೇಶ್, ತಹಶಿಲ್ದಾರ್ ಪೂರ್ಣೀಮ, ದೇವಾಲಯ ಸಮಿತಿಯ ಲೋಕೇಶ್ , ಸಚ್ಚಿದಾನಂದ, ದೇವರಾಜು,ಪೊಲೀಸ್ ಇಲಾಖೆಯ ಡಿವೈಎಸ್ಪಿ ಪರಶುರಾಮಪ್ಪ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಹಡಿಮನೆ ಸತೀಶ್, ಸೇರಿದಂತೆ ಕಂದಾಯಾಧಿಕಾರಿಗಳು, ಗ್ರಾಮಸ್ಥರು ರಥಕ್ಕೆ ಪೂಜೆ ಸಲ್ಲಿಸಿದರು.

ನಂತರ ಗೋವಿಂದ ನಾಮಸ್ಮರಣೆಯೊಂದಿಗೆ ಭಕ್ತರು ತೇರು ಎಳೆದರು. ನೆರೆದಿದ್ದವರು ರಥಕ್ಕೆ ಬಾಳೇಹಣ್ಣು ಎಸೆದು ಇಷ್ಠಾರ್ಥಗಳ ಸಿದ್ಧಿಗೆ ಪ್ರಾರ್ಥನೆ ಸಲ್ಲಿಸಿದರು. ರಥೋತ್ಸವದ ಬಳಿಕ ಭಕ್ತರು ಕೆಂಚರಾಯಸ್ವಾಮಿ ಸನ್ನಿಧಿಗೆ ತೆರಳಲು ಅಣಿಯಾಗುತ್ತಿದ್ದುದು ಕಂಡು ಬಂತು.

The festive Ranganatha Swamy Chariot Festival

 

Share

Leave a comment

Leave a Reply

Your email address will not be published. Required fields are marked *

Don't Miss

ಲಕ್ಯಾ-ಸಖರಾಯಪಟ್ಟಣ ಹೋಬಳಿ ವಿದ್ಯುತ್ ಸಮಸ್ಯೆ ನಿವಾರಣೆಗೆ ಇಂಧನ ಸಚಿವ ಮನವಿ

ಚಿಕ್ಕಮಗಳೂರು: ಚಿಕ್ಕಮಗಳೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಲಕ್ಯಾ ಹಾಗೂ ಸಖರಾಯಪಟ್ಟಣ ಹೋಬಳಿಗಳಲ್ಲಿ ರೈತರು ಎದುರಿಸುತ್ತಿರುವ ತೀವ್ರ ವಿದ್ಯುತ್ ಸಮಸ್ಯೆಯನ್ನು ತಕ್ಷಣ ಪರಿಹರಿಸುವಂತೆ ವಿಧಾನ ಪರಿಷತ್ ಸದಸ್ಯ ಡಾ. ರವಿ ಸಿ.ಟಿ ಅವರು...

ಬಿರಂಜಿ ಹೊಳೆಯಿಂದ ರೈತಾಪಿ ವರ್ಗದ ಬೃಹತ್ ಪಾದಯಾತ್ರೆ

ಚಿಕ್ಕಮಗಳೂರು:  ಜಾವಣಿಗೆ ನಾಡಿನ ರೈತರ ಜಮೀನುಗಳಿಗೆ ನೀರು ಹರಿಸುವಲ್ಲಿ ವಿಫಲಗೊ ಂಡಿರುವ ಸರ್ಕಾರದ ಆಡಳಿತ ವ್ಯವಸ್ಥೆ ವಿರುದ್ಧ ಮಂಗಳವಾರ ರೈತ ಸಂಘ- ಹಸಿರುಸೇನೆ ತಾಲ್ಲೂಕು ಘಟ ಕ ಕರೆ ನೀಡಿದ್ಧ ಪ್ರತಿಭಟನೆಯಲ್ಲಿ...

Related Articles

ದೊಣ್ಣೆಯಿಂದ ಹಲ್ಲೆಯಾದ ಭಿಕ್ಷುಕನ ಸಾವು

ತರೀಕೆರೆ: ಭಿಕ್ಷೆ ಬೇಡಿ ಜೀವನ ಸಾಗಿಸುತ್ತಿದ್ದ ಸುಮಾರು 65 ವರ್ಷದ ವ್ಯಕ್ತಿಯೊಬ್ಬರನ್ನು ದೊಣ್ಣೆಯಿಂದ ಹೊಡೆದು, ಕಾಲಿನಿಂದ...

ಅಜ್ಜಂಪುರದಲ್ಲಿ ಅಪರಿಚಿತ ವಾಹನ ಡಿಕ್ಕಿಗೆ ವ್ಯಕ್ತಿ ಸಾವು

ಅಜ್ಜಂಪುರ: ರಸ್ತೆ ಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ವ್ಯಕ್ತಿಯೊಬ್ಬರಿಗೆ ಅಪರಿಚಿತ ವಾಹನ ಡಿಕ್ಕಿ ಹೊಡೆದು, ಚಾಲಕ ವಾಹನ...

ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ರಾಜ್ಯ ರೈತ ಸಂಘ ಪ್ರತಿಭಟನೆ

ಚಿಕ್ಕಮಗಳೂರು: ಜಿಲ್ಲೆಯ ಭೀಕರ ಬರಗಾರದ ಸಂಕಷ್ಟಕ್ಕೆ ಕೇಂದ್ರ ಹಾಗೂ ರಾಜ್ಯ ಸರ್ಕಾರ ಸ್ಪಂದಿಸುತ್ತಿಲ್ಲ. ಚಿಕ್ಕಮಗಳೂರು ತಾಲ್ಲೂಕನ್ನು...

ಜ್ಞಾನೇಶ್ ಕುಮಾರ್ ವಜಾಗೊಳಿಸಿ ಬಂಧಕ್ಕೆ ಆಗ್ರಹಿಸಿ ಕಾಂಗ್ರೆಸ್ ಕಾರ್ಯಕರ್ತರ ಧರಣಿ

ಚಿಕ್ಕಮಗಳೂರು: ಚುನಾವಣಾ ಆಯೋಗದ ಮುಖ್ಯ ಆಯುಕ್ತ ಜ್ಞಾನೇಶ್ ಕುಮಾರ್ ಸರ್ವಾಧಿಕಾರಿ ಧೋರಣೆ ಅನುಸರಿಸುತ್ತಿದ್ದಾರೆ. ಜೊತೆಗೆ ಬಿಜೆಪಿ...