Home namma chikmagalur chikamagalur ಬಿರಂಜಿ ಹೊಳೆಯಿಂದ ರೈತಾಪಿ ವರ್ಗದ ಬೃಹತ್ ಪಾದಯಾತ್ರೆ
chikamagalurHomeLatest Newsnamma chikmagalur

ಬಿರಂಜಿ ಹೊಳೆಯಿಂದ ರೈತಾಪಿ ವರ್ಗದ ಬೃಹತ್ ಪಾದಯಾತ್ರೆ

Share
Share

ಚಿಕ್ಕಮಗಳೂರು:  ಜಾವಣಿಗೆ ನಾಡಿನ ರೈತರ ಜಮೀನುಗಳಿಗೆ ನೀರು ಹರಿಸುವಲ್ಲಿ ವಿಫಲಗೊ ಂಡಿರುವ ಸರ್ಕಾರದ ಆಡಳಿತ ವ್ಯವಸ್ಥೆ ವಿರುದ್ಧ ಮಂಗಳವಾರ ರೈತ ಸಂಘ- ಹಸಿರುಸೇನೆ ತಾಲ್ಲೂಕು ಘಟ ಕ ಕರೆ ನೀಡಿದ್ಧ ಪ್ರತಿಭಟನೆಯಲ್ಲಿ ಜಾವಣಿಗೆ ನಾಡಿನ ರೈತಾಪಿ ವರ್ಗವು ಬಿರಂಜಿ ಹೊಳೆಯಿಂದ ಕಾಲ್ನಡಿ ಗೆ ಪ್ರತಿಭಟನಾ ಜಾಥಾವು ಅನೇಕ ಗ್ರಾಮಗಳು ಹಾಗೂ ನಗರದ ಪ್ರಮುಖ ರಸ್ತೆಗಳಲ್ಲಿ ಸಂಚರಿಸುವ ಮೂ ಲಕ ಬೃಹತ್ ಧರಣಿ ಹಮ್ಮಿಕೊಂಡಿತು.

ಮಳಲೂರು, ಹಳುವಳ್ಳಿ, ಕದ್ರಿಮಿದ್ರಿ, ರಾಂಪುರ ಬಳಿಕ ನಗರದ ಪ್ರಮುಖ ರಸ್ತೆಗಳಲ್ಲಿ ಸರ್ಕಾರ ಹಾಗೂ ಚುನಾಯಿತ ಪ್ರತಿನಿಧಿಗಳ ವಿರುದ್ಧ ಧಿಕ್ಕಾರ ಕೂಗುತ್ತಾ ನಗರದ ಆಜಾದ್‌ಪಾರ್ಕ್ ವೃತ್ತದಲ್ಲಿ ಜಾಥಾ ಸಮಾ ವೇಶಗೊಂಡಿತು. ಪ್ರತಿಭಟನಾ ಜಾಥಾಯುದ್ಧಕ್ಕೂ ನೂರಾರು ಸಂಖ್ಯೆಯಲ್ಲಿ ಮಹಿಳೆಯರು, ಪುರುಷರು ಹಸಿ ರು ಬಾವುಟ ಹಿಡಿದು ಸಾಗಿದ್ದು, ರೈತ ಮಹಿಳೆÀಯೋರ್ವರು ಬಿರಂಜಿ ಹೊಳೆ ನೀರನ್ನು ಕೊಡದಲ್ಲಿ ತುಂಬಿಸಿ ಕೊಂಡು ನಗರದವರೆಗೂ ಕೊಂಡೊಯ್ದರು.

ಬಳಿಕ ಆಜಾದ್‌ಪಾರ್ಕ್ ವೃತ್ತದಲ್ಲಿ ಆದಿಚುಂಚನಗಿರಿ ಶೃಂಗೇರಿ ಶಾಖಾ ಮಠದ ಶ್ರೀ ಗುಣನಾಥ ಸ್ವಾಮೀಜಿ ಸಮಾವೇಶವನ್ನು ಉದ್ಗಾಟಿಸಿ ಮಾತನಾಡಿ ದೇಶಕ್ಕೆ ಅನ್ನ ಕೊಡುವ ರೈತರ ಸಂಕಷ್ಟಕ್ಕೆ ಚುನಾಯಿತ ಪ್ರತಿ ನಿಧಿಗಳು ಸ್ಪಂದಿಸುತ್ತಿಲ್ಲ. ರೈತ ಬೆಳೆದಿರುವ ಬೆಳೆಗಳಿಗೆ ಸಮರ್ಪಕವಾಗಿ ನೀರೊದಗಿಸದೇ ಪ್ರತಿನಿಧಿಗಳು ಮರಣಶಾಸನ ಬರೆಯುತ್ತಿದ್ದಾರೆ ಎಂದು ಹೇಳಿದರು.

ಅನ್ನದ ಒಂದಾಗಳಿನ ತುತ್ತಿಗೂ ರೈತರು ಬಹಳಷ್ಟು ಕಷ್ಟಪಡುತ್ತಾರೆ. ಆದರೆ ಆಳುವ ಜನಪ್ರತಿನಿಧಿಗಳು ರೈತರನ್ನು ಕಡೆಗಣಿಸುತ್ತಿದ್ದು, ಇದೇ ರೀತಿ ಮುಂದುವರೆದರೆ ಜಗತ್ತಿನಲ್ಲಿ ಯಾವೊಬ್ಬ ಮನುಷ್ಯ ಜೀವಿಸಲಾರ ನು. ರೈತರ ಬಾಳು ಕತ್ತಲೆಯಾದರೆ, ಸಂಪೂರ್ಣ ಮನುಷ್ಯ ಜೀವರಾಶಿ ಅವನತಿಯತ್ತ ಸಾಗುವ ಮೂಲಕ ಜಗತ್ತು ಸರ್ವನಾಶವಾಗಲಿದೆ ಎಂದು ಎಚ್ಚರಿಸಿದರು.

ರೈತರು ಜಮೀನುಗಳಲ್ಲಿ ಕಾರ್ಖಾನೆ ನಡೆಸಿ ಕಲುಷಿತ ವಾತಾವರಣ ಸೃಷ್ಟಿಸುತ್ತಿಲ್ಲ. ಪರಿಸರ ಸ್ನೇಹಿಯಾ ಗಿ ಸಸಿಗಳನ್ನು ನೆಟ್ಟು, ಪೋಷಿಸುವ ಮೂಲಕ ಸಕಲಜೀವರಾಶಿಗೂ ಗುಣಮಟ್ಟದ ಆಮ್ಲಜನಕ ಉತ್ಪತ್ತಿ ಮಾ ಡುತ್ತಿದ್ದಾನೆ. ಒಂದು ಕಾಲದಲ್ಲಿ ರಾಜರೇ ಪ್ರಜೆಗಳ ಸಮೀಪ ಬಂದು ಸಮಸ್ಯೆ ಆಲಿಸುತ್ತಿದ್ದರು. ಇದೀಗ ರೈತ ರೇ ರಾಜಕಾರಣಿಗಳು, ಅಧಿಕಾರಿಗಳತ್ತ ಅಂಗಲಾಚುವ ಪರಿಸ್ಥಿತಿಯಾಗಿದೆ ಎಂದು ತಿಳಿಸಿದರು.

ಜನಪ್ರತಿನಿಧಿಗಳು ಮನೆಯಿಂದ ಹಣತಂದು ಜಾವಣಿಗೆ ನಾಡಿನ ರೈತರ ಸಮಸ್ಯೆ ಪರಿಹರಿಸಿ ಎನ್ನುತ್ತಿಲ್ಲ. ರೈತರೇ ಭರಿಸುವ ತೆರಿಗೆ ಹಣದಿಂದ ನೀರು ಹರಿಸಬೇಕೇ ಹೊರತು ಭಿಕ್ಷೆ ಬೇಡುವ ಸ್ಥಿತಿ ನಿರ್ಮಿಸಬಾರದು. ಕೂಡಲೇ ಬಿರಂಜಿ ಹೊಳೆ ಅವೈಜ್ಞಾನಿಕ ಕಾಮಗಾರಿ ಸ್ಥಗಿತಗೊಳಿಸಿ, ಪುನಶ್ಚೇತನಗೊಳಿಸುವ ಮೂಲಕ ರೈತಾ ಪಿ ವರ್ಗಕ್ಕೆ ಅನುಕೂಲವಾಗುವ ನಿಟ್ಟಿನಲ್ಲಿ ಕಾಮಗಾರಿ ಪೂರೈಸಬೇಕು ಎಂದು ಒತ್ತಾಯಿಸಿದರು.

ಇತ್ತೀಚಿನ ದಿನಗಳಲ್ಲಿ ಮಲೆನಾಡಿನ ರೈತರನ್ನು ಸರ್ಕಾರಗಳು ಒಕ್ಕೆಲೆಬ್ಬಿಸುವ ಯತ್ನಕ್ಕೆ ಅಣಿಯಾಗುತ್ತಿ ವೆ. ಇದು ಭವಿಷ್ಯದಲ್ಲಿ ಅತಿದೊಡ್ಡ ಮಾರಕವಾಗಲಿದೆ. ವಿದ್ಯಾವಂತರಾದ ಪ್ರತಿನಿಧೀಗಳೇ ಸರಿಯಾಗಿ ಕರ್ತವ್ಯ ನಿರ್ವಹಿಸುತ್ತಿಲ್ಲ. ಅವಿವೇಕಿಗಳಂತೆ ವರ್ತಿಸುತ್ತಿದ್ದು ಈ ದಿಸೆಯಲ್ಲಿ ರೈತರ ಹೋರಾಟಕ್ಕೆ ಮಠದಿಂದ ಸಂಪೂ ರ್ಣ ಬೆಂಬಲ ನೀಡಲಾಗುವುದು ಎಂದು ಭರವಸೆ ನೀಡಿದರು.

ಜಯಬಸವ ತಪೋವನದ ಶ್ರೀ ಜಯಬಸವಾನಂದ ಸ್ವಾಮೀಜಿ ಮಾತನಾಡಿ ಜಾವಣಿಗೆ ನಾಡು ಒಂ ದು ಕಾಲದಲ್ಲಿ ಭತ್ತದ ನಾಡಾಗಿತ್ತು, ಇಲ್ಲಿನ ರೈತರಿಗೆ ಜಲವೇ ಜೀವನದಿಯಾಗಿತ್ತು. ಆದರೆ ಅವೈಜ್ಞಾನಿಕ ಕಾ ಗಾರಿಯಿಂದ ಈ ಭಾಗದ ಜಮೀನಿಗೆ ನೀರು ಲಭ್ಯವಾಗುತ್ತಿಲ್ಲ. ಇದೀಗ ಕಾಮಗಾರಿ ಹೋರಾಟ ಮುಖೇನಾ ಒಂದು ಹಂತಕ್ಕೆ ತಲುಪಿದ್ದು, ಸರ್ಕಾರ ಕೂಡಲೇ ಎಚ್ಚೆತ್ತುಕೊಂಡು ರೈತರ ಸಮಸ್ಯೆ ಪರಿಹರಿಸದಿದ್ದಲ್ಲಿ ಉಗ್ರ ಹೋರಾಟಕ್ಕೆ ಸಜ್ಜಾಗುತ್ತೇವೆ ಎಂದರು.

ರಾಜ್ಯ ರೈತ ಸಂಘದ ಹಸಿರುಸೇನೆ ಸಾಮೂಹಿಕ ನಾಯಕತ್ವದ ರಾಜ್ಯ ಪ್ರಧಾನ ಕಾರ್ಯದರ್ಶಿ ಮಂಜು ಕಿರಣ್ ಮಾತನಾಡಿ ದೇಶದಲ್ಲಿ ರೈತರಿಗಾಗುತ್ತಿರುವ ಅನ್ಯಾಯ, ಬೇರೆ ಯಾವುದೇ ಸಮಾಜಕ್ಕೂ ಆಗುತ್ತಿಲ್ಲ. ಒಂದಿಲ್ಲೊAದು ರೈತ ವಿರೋಧಿ ಕಾಯ್ದೆ ಹೇರುವ ಮೂಲಕ ರೈತರ ಜೀವವನ್ನು ಕಸಿದುಕೊಳ್ಳಲು ಸರ್ಕಾರಗ ಳು ಮುಂದಾಗುತ್ತಿರುವುದು ಶೋಚನೀಯ ಎಂದು ಹೇಳಿದರು.

ರಾಜ್ಯ ರೈತ ಸಂಘದ ಹಸಿರುಸೇನೆ ಸಾಮೂಹಿಕ ನಾಯಕತ್ವದ ವೈ.ಸಿ.ಸುನೀಲ್‌ಕುಮಾರ್ ಮಾತನಾಡಿ ಕಳೆದ ಇಪ್ಪತ್ತೆöÊದು ವರ್ಷಗಳ ಕನಸಿನ ಮಳಲೂರು ಏತ ನೀರಾವರಿ ಬಾಕಿ ಉಳಿದಿರುವ ಕಾಮಗಾರಿ ಪೂ ರ್ಣಗೊಳಿಸಿ ಯೋಜನೆಯ ಮೂಲಕ ಕೆರೆಗಳಿಗೆ ನೀರು ಹರಿಸಬೇಕು. ಪುರಾತನ ಕಾಲದ ಐತಿಹಾಸಿಕ ಅರ ಸರ ನಾಲೆ ಅವೈಜ್ಞಾನಿಕ ಕಾಮಗಾರಿ ತೆರವುಗೊಳಿಸಿ, ಸಂಪೂರ್ಣ ನಾಲೆಯ ಹೂಳೆತ್ತಿಸಿ ಪುನಶ್ಚೇತನಗೊ ಳಿಸಬೇಕು ಎಂದು ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ಶಂಕರದೇವರ ಮಠದ ಶ್ರೀ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ, ರೈತ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಕಣಗಾಳ್ ಮೂರ್ತಿ, ರಾಜ್ಯ ಪ್ರಮುಖ್ ಕೆ.ಕೆ.ಕೃಷ್ಣೇಗೌಡ, ರೈತ ಮುಖಂಡರು ಗಳಾದ ಡಿ.ರಾಮೇಗೌಡ, ಬಿ.ವಿ.ಪರ್ವತೇಘೌಡ, ಎಂ.ಎನ್.ಮುಳ್ಳುAಡಪ್ಪ, ನಜ್ಮಾಆಲಿ, ಎಂ.ಸಿ.ಗಣೇಶ್‌ಗೌ ಡ, ಎ.ಎನ್.ರಮೇಶ್, ಎಂ.ಡಿ.ಶAಕರ್, ಎಂ.ಚAದ್ರಶೇಖರ್, ಮಣೇನಹಳ್ಳಿ ರಾಜು ಸೇರಿದಂತೆ ವಿವಿಧ ಪಕ್ಷ ದ ಮುಖಂಡರು ಹಾಗೂ ಕನ್ನಡಪರ ಸಂಘಟನೆ ಕಾರ್ಯಕರ್ತರು, ರೈತರು ಉಪಸ್ಥಿತರಿದ್ದರು.

Massive padayatra by the farming community from Biranji Hole.

Share

Leave a comment

Leave a Reply

Your email address will not be published. Required fields are marked *

Don't Miss

ರೈತರ ಸಹಕಾರ ಸಂಘದ ವಾರ್ಷಿಕ ಮಹಾಸಭೆಯಲ್ಲಿ ಮಾರಾಮಾರಿ

ಚಿಕ್ಕಮಗಳೂರು: ಶಾಂತಿಯುತವಾಗಿ ನಡೆಯಬೇಕಿದ್ದ ರೈತರ ಸಹಕಾರ ಸಂಘದ ವಾರ್ಷಿಕ ಮಹಾಸಭೆಯೊಂದು ನೋಡನೋಡುತ್ತಿದ್ದಂತೆ ಜಿದ್ದಾಜಿದ್ದಿನ ಅಖಾಡವಾಗಿ ಮಾರ್ಪಟ್ಟ ಘಟನೆ ಚಿಕ್ಕಮಗಳೂರು ತಾಲೂಕಿನ ಹಂಗರಹಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ನಡೆದಿದೆ. ಸಭೆಯಲ್ಲಿ...

ಜಿಲ್ಲೆಯಾದ್ಯಂತ ಗೌರಿ-ಗಣೇಶ ಹಬ್ಬದ ಸಂಭ್ರಮ

ಚಿಕ್ಕಮಗಳೂರು: ಜಿಲ್ಲೆಯಾದ್ಯಂತ ಗೌರಿ-ಗಣೇಶ ಹಬ್ಬದ ಸಂಭ್ರಮ ಮನೆ ಮಾಡಿದ್ದು, ಎಲ್ಲೆಡೆ ಪ್ರತಿಷ್ಠಾಪನೆ ಉತ್ಸವಗಳು ನಡೆದವು. ಬೋಳರಾಮೇಶ್ವರ ದೇವಸ್ಥಾನದದ ಆವರಣದಲ್ಲಿ ಸಾರ್ವಜನಿಕ ಗಣಪತಿ ಸೇವಾ ಸಮಿತಿಯಿಂದ(ಅಜಾದ್ ಮೈದಾನ), ಹಿಂದೂ ಮಹಾಗಣಪತಿ ಸೇವಾ ಸಂಘದ...

Related Articles

ಜಿಲ್ಲೆಯ ಐದು ಜನ ಶಾಸಕರಿಗೆ ಬೊಗಣಿ ಗೂಟ ಖಚಿತ !?

ಚಿಕ್ಕಮಗಳೂರು: ಜಿಲ್ಲೆಯ ಐದು ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್‌ ಜಯಭೇರಿ ಬಾರಿಸುವ ಜೊತೆಗೆ ಕಾಂಗ್ರೆಸ್ ಮುಖಂಡರು ಮತ್ತು...

ಕಲಿಕೆ ವಯಸ್ಸಿನಲ್ಲಿ ವ್ಯಾಮೋಹಕ್ಕೆ ಒಳಗಾಗದಿರಿ

ಚಿಕ್ಕಮಗಳೂರು: ರಾಷ್ಟ್ರದ ಭವಿಷ್ಯವನ್ನು ಉಜ್ವಲಗೊಳಿಸುವ ಇಂದಿನ ಯುವಪೀಳಿಗೆ ಬಹಳ ಷ್ಟು ಎಚ್ಚರಿಕೆ ವಹಿಸಬೇಕು. ಕಲಿಕೆಯಲ್ಲಿ ಹೊರತಾಗಿ...

ಭೋವಿ ಜಾತಿ ಪ್ರಮಾಣಪತ್ರ ನೀಡಲು ವಿಳಂಬ

ಚಿಕ್ಕಮಗಳೂರು: ಜಿಲ್ಲೆಯಲ್ಲಿ ವಡ್ಡರ ಸಮುದಾಯದವರಿಗೆ ಭೋವಿ ಜಾತಿ ಪ್ರಮಾಣಪತ್ರ ನೀಡುವ ವಿಚಾರದಲ್ಲಿ ಅಧಿಕಾರಿಗಳು ಅನಗತ್ಯ ತೊಂದರೆ...

ಲಕ್ಯಾ-ಸಖರಾಯಪಟ್ಟಣ ಹೋಬಳಿ ವಿದ್ಯುತ್ ಸಮಸ್ಯೆ ನಿವಾರಣೆಗೆ ಇಂಧನ ಸಚಿವ ಮನವಿ

ಚಿಕ್ಕಮಗಳೂರು: ಚಿಕ್ಕಮಗಳೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಲಕ್ಯಾ ಹಾಗೂ ಸಖರಾಯಪಟ್ಟಣ ಹೋಬಳಿಗಳಲ್ಲಿ ರೈತರು ಎದುರಿಸುತ್ತಿರುವ ತೀವ್ರ...