Home namma chikmagalur chikamagalur ಲಾರಿ ಖರೀದಿಸುವುದಾಗಿ ನಂಬಿಸಿ ವಂಚನೆ-ಕ್ರಿಮಿನಲ್ ಪ್ರಕರಣ ದಾಖಲು
chikamagalurHomeLatest Newsnamma chikmagalur

ಲಾರಿ ಖರೀದಿಸುವುದಾಗಿ ನಂಬಿಸಿ ವಂಚನೆ-ಕ್ರಿಮಿನಲ್ ಪ್ರಕರಣ ದಾಖಲು

Share
Share

ಕೊಪ್ಪ: ಲಾರಿಯೊಂದನ್ನು ಖರೀದಿಸುವುದಾಗಿ ನಂಬಿಸಿ ಕರಾರು ಮಾಡಿಕೊಂಡು, ವಾಹನದ ಮೇಲಿದ್ದ ಲಕ್ಷಾಂತರ ರೂಪಾಯಿ ಸಾಲವನ್ನೂ ತೀರಿಸದೆ ಮುಂಗಡ ಹಣ ಹಾಗೂ ಭದ್ರತಾ ಚೆಕ್‌ಗಳನ್ನು ಕಸಿದು ವಂಚಿಸಿರುವ ಆರೋಪ ಚಿಕ್ಕಮಗಳೂರು ಜಿಲ್ಲೆಯ ಕೊಪ್ಪದಲ್ಲಿ ಬೆಳಕಿಗೆ ಬಂದಿದೆ.

ವಾಹನ ಮಾಲೀಕರಿಗೆ ನಂಬಿಕೆದ್ರೋಹವೆಸಗಿ ಕೋಟ್ಯಂತರ ರೂಪಾಯಿ ತಲೆನೋವು ತಂದಿಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಸತ್ಯನ್ ಎಂಬುವರ ವಿರುದ್ಧ ಕೊಪ್ಪ ಪೊಲೀಸ್ ಠಾಣೆಯಲ್ಲಿ ನ್ಯಾಯಾಲಯದ ಆದೇಶದಂತೆ ಕ್ರಿಮಿನಲ್ ಪ್ರಕರಣ ದಾಖಲಾಗಿದೆ.

ನುಗ್ಗಿ ಗ್ರಾಮದ ನಿವಾಸಿ ಚಂದಿಲ್ ಕುಮಾರ್ ಎಂಬುವರು ಈ ಸಂಬಂಧ ನ್ಯಾಯಾಲಯದಲ್ಲಿ ಖಾಸಗಿ ದೂರು (ಪಿಸಿಆರ್) ದಾಖಲಿಸಿದ್ದರು. ದೂರಿನ ವಿವರಗಳ ಪ್ರಕಾರ, ಚಂದಿಲ್ ಕುಮಾರ್ ತಮ್ಮ ಒಡೆತನದ ಲಾರಿಯನ್ನು ಸತ್ಯನ್ ಅವರಿಗೆ 8 ಲಕ್ಷ ರೂಪಾಯಿಗೆ ಮಾರಾಟ ಮಾಡಲು 2024ರ ಫೆಬ್ರವರಿಯಲ್ಲಿ ವಾಹನ ಕರಾರು ಪತ್ರ ಮಾಡಿಕೊಂಡಿದ್ದರು.

ವಾಹನದ ಮೇಲಿದ್ದ ಶ್ರೀರಾಮ್ ಫೈನಾನ್ಸ್ ಸಾಲವನ್ನು ಸಂಪೂರ್ಣವಾಗಿ ತಾವೇ ಭರಿಸಿ, ಸಾಲವನ್ನು ತಮ್ಮ ಹೆಸರಿಗೆ ವರ್ಗಾಯಿಸಿಕೊಳ್ಳುವುದಾಗಿ ಒಪ್ಪಿಕೊಂಡಿದ್ದ ಆರೋಪಿ, ನಮೂನೆ 29 ಮತ್ತು 30ಕ್ಕೆ ಸಹಿ ಪಡೆದು ಲಾರಿಯನ್ನು ತನ್ನ ವಶಕ್ಕೆ ಪಡೆದುಕೊಂಡಿದ್ದ ಎನ್ನಲಾಗಿದೆ.

ಅಲ್ಲದೆ, ಮತ್ತೊಂದು ಪ್ರತ್ಯೇಕ ಒಪ್ಪಂದದಡಿ ನೀಡಬೇಕಿದ್ದ ಹಣದ ಪೈಕಿ ಒಂದು ಲಕ್ಷ ರೂಪಾಯಿಯನ್ನು ಮುಂಗಡವಾಗಿ ನೀಡಿ, ಭದ್ರತೆಗಾಗಿ ಚಂದಿಲ್ ಕುಮಾರ್ ಅವರಿಂದ ಬ್ಯಾಂಕಿನ ಮೂರು ಖಾಲಿ ಚೆಕ್‌ಗಳನ್ನು ಪಡೆದುಕೊಂಡಿದ್ದ. ಆದರೆ, ನಂತರದಲ್ಲಿ ‘ಫೈನಾನ್ಸ್‌ಗೆ ಸಾಲ ಕಟ್ಟುತ್ತೇನೆ’ ಎಂದು ನಂಬಿಸಿ ಆ ಒಂದು ಲಕ್ಷ ರೂಪಾಯಿಯನ್ನೂ ವಾಪಸ್ ಪಡೆದಿದ್ದಲ್ಲದೆ, ಕೊಟ್ಟಿದ್ದ ಚೆಕ್‌ಗಳನ್ನೂ ಹಿಂತಿರುಗಿಸದೆ ವಂಚಿಸಿದ್ದಾರೆ ಎಂದು ಆರೋಪಿಸಲಾಗಿದೆ.

ಲಾರಿಯನ್ನು ತನ್ನ ವಶದಲ್ಲೇ ಇಟ್ಟುಕೊಂಡು ಫೈನಾನ್ಸ್‌ಗೆ ಕಂತುಗಳನ್ನು ಪಾವತಿಸದ ಕಾರಣ, ಸಾಲ ಮರುಪಾವತಿಸುವಂತೆ ಸಂಸ್ಥೆಯಿಂದ ಮೂಲ ಮಾಲೀಕರಿಗೆ ನೋಟಿಸ್‌ ಬಂದಾಗಲೇ ಆರೋಪಿ ಎಸಗಿರುವ ವಂಚನೆ ಬಯಲಿಗೆ ಬಂದಿದೆ ಎಂದು ದೂರಿನಲ್ಲಿ ವಿವರಿಸಲಾಗಿದೆ. ಈ ಗಂಭೀರ ಪ್ರಕರಣವನ್ನು ಪರಿಶೀಲಿಸಿದ ಘನ ನ್ಯಾಯಾಲಯದ ನಿರ್ದೇಶನದ ಮೇರೆಗೆ ಕೊಪ್ಪ ಪೊಲೀಸರು ಆರೋಪಿ ಸತ್ಯನ್ ವಿರುದ್ಧ ಎಫ್‌ಐಆರ್ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.

Fraud under the pretext of purchasing a lorry – criminal case registered.

Share

Leave a comment

Leave a Reply

Your email address will not be published. Required fields are marked *

Don't Miss

ಬೆಳವಾಡಿ ಕೆರೆಗೆ ಎತ್ತಿನಹೊಳೆ ನೀರು-ರೈತರಲ್ಲಿ ಸಂತಸ

ಚಿಕ್ಕಮಗಳೂರು: ಎತ್ತಿನಹೊಳೆ ಯೋಜನೆಯ ನೀರಿನಿಂದ ಚಿಕ್ಕಮಗಳೂರು ತಾಲೂಕಿನ ಲಕ್ಯಾ ಹೋಬಳಿಯ ಬೆಳವಾಡಿ ಕೆರೆ ತುಂಬಿ ಕೋಡಿ ಬಿದ್ದ ಹಿನ್ನೆಲೆಯಲ್ಲಿ ಶಾಸಕ ಹೆಚ್.ಡಿ.ತಮ್ಮಯ್ಯ ಹಾಗೂ ವಿಧಾನ ಪರಿಷತ್ ಸದಸ್ಯೆ ಗಾಯತ್ರಿ ಶಾಂತೇಗೌಡ ಅವರು...

`ನಾನು’ ಎಂಬುದನ್ನು ಬಿಟ್ಟು `ನಾವು’ ಎಂಬ ಮನೋಭಾವ ಬೆಳೆಸಿಕೊಳ್ಳಿ

ಚಿಕ್ಕಮಗಳೂರು: `ನಾನು ಮಾಡಿದ್ದು, ನಾನು ಮಾಡಿದ್ದು’ ಎನ್ನುವುದಕ್ಕಿಂತ `ನಾವು ಮಾಡಿದ್ದು’ ಎಂಬ ಮನೋಭಾವ ಬೆಳೆಸಿಕೊಳ್ಳಬೇಕು. ಜನರ ಆಶೀರ್ವಾದದಿಂದಲೇ ಜನಪ್ರತಿನಿಧಿಗಳು ಅಧಿಕಾರಕ್ಕೆ ಬರುತ್ತಾರೆ. ಅಭಿವೃದ್ಧಿ ಕಾರ್ಯಗಳಿಗೆ ವೈಯಕ್ತಿಕ ಹಕ್ಕು ಸಾಧಿಸುವ ಬದಲು ಎಲ್ಲರ...

Related Articles

ಮುಖ್ಯಮಂತ್ರಿ ಸೂಕ್ತ ಭದ್ರತಾ ವ್ಯವಸ್ಥೆಗೆ ಜಿಲ್ಲಾಧಿಕಾರಿ ಸೂಚನೆ

ಚಿಕ್ಕಮಗಳೂರು: ಮುಖ್ಯಮಂತ್ರಿಗಳ ಜಿಲ್ಲಾ ಭೇಟಿಯ ಸಂದರ್ಭದಲ್ಲಿ ಸೂಕ್ತ ರೀತಿಯಲ್ಲಿ ಭದ್ರತಾ ವ್ಯವಸ್ಥೆ ಕಲ್ಪಿಸುವುದಲ್ಲದೆ, ಶಿಷ್ಟಾಚಾರ ಪಾಲನೆಗೆ...

ಎಂ.ಸಿ. ಹಳ್ಳಿಯಲ್ಲಿ ಕಡವೆ ಬೇಟೆ-ಆರೋಪಿಗಳ ಬಂಧನ

ತರೀಕೆರೆ: ಲಕ್ಕವಳ್ಳಿ ವಲಯದ ಎಂ.ಸಿ. ಹಳ್ಳಿ ಶಾಖೆಯ ವ್ಯಾಪ್ತಿಯಲ್ಲಿ ಅಕ್ರಮವಾಗಿ ಕಡವೆಯನ್ನು ಬೇಟೆ ಮಾಡಿ ಮಾಂಸ...

ಸೆ.21ರಿಂದ ಮುಖ್ಯಮಂತ್ರಿ ನಿವಾಸದವರೆಗೆ ಬೃಹತ್ ಪಾದಯಾತ್ರೆ

ಚಿಕ್ಕಮಗಳೂರು: ಹೊರಗುತ್ತಿಗೆ ಪೌರನೀರು ಸರಬರಾಜು ನೌಕರರನ್ನು ಪೌರಕಾರ್ಮಿಕರ ಮಾದರಿಯಲ್ಲಿ ವಿಶೇಷ ನೇರ ನೇಮಕಾತಿ ಅಥವಾ ನೇರಪಾವತಿ...

 ವಿಶ್ವಕರ್ಮ ಸಮುದಾಯ ಎಲ್ಲ ರಂಗಗಳಲ್ಲೂ ಮುಂಚೂಣಿಗೆ ಬರಲಿ

ಚಿಕ್ಕಮಗಳೂರು: ವಿಶ್ವಕರ್ಮ ಸಮುದಾಯ ಎಲ್ಲ ರಂಗಗಳಲ್ಲೂ ಮುಂಚೂಣಿಗೆ ಬರಬೇಕು ಎಂದು ರಾಜ್ಯ ಪರಿಸರ ಮೌಲ್ಯಮಾಪನ ಪ್ರಾಧಿಕಾರದ...