Home namma chikmagalur chikamagalur ರಸ್ತೆಯಲ್ಲಿ ದುಡುಕಿನಿಂದ ಚಾಲನೆ – ಪ್ರಕರಣ ದಾಖಲು
chikamagalurCrime NewsHomeLatest Newsnamma chikmagalur

ರಸ್ತೆಯಲ್ಲಿ ದುಡುಕಿನಿಂದ ಚಾಲನೆ – ಪ್ರಕರಣ ದಾಖಲು

Share
Share

ಮೂಡಿಗೆರೆ: ಇನ್‌ಸ್ಟಾಗ್ರಾಮ್‌ನಲ್ಲಿ ಲೈಕ್ಸ್ ಮತ್ತು ಕಾಮೆಂಟ್ಸ್ಗಾಗಿ ಸಾರ್ವಜನಿಕ ರಸ್ತೆಯಲ್ಲಿ ಅಪಾಯಕಾರಿಯಾಗಿ ರೀಲ್ಸ್ ಮಾಡಿದ್ದ ಮೂಡಿಗೆರೆ ಮೂಲದ ವ್ಯಕ್ತಿಯೊಬ್ಬರ ಮೇಲೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಮೂಡಿಗೆರೆ ತಾಲ್ಲೂಕಿನ ಊರುಬಗೆ ಗ್ರಾಮದ ರಾಜು ಪಿ.ಕೆ (57) ಎಂಬುವವರು ಇತ್ತೀಚೆಗೆ ಹ್ಯಾಂಡ್ ಪೋಸ್ಟ್‌ನಿಂದ ದಾರದಹಳ್ಳಿಗೆ ಹೋಗುವ ಸಾರ್ವಜನಿಕ ರಸ್ತೆಯಲ್ಲಿ ಬೈಕಿನ ಹ್ಯಾಂಡಲ್ ಬಿಟ್ಟು, ನಿರ್ಲಕ್ಷ್ಯ ಮತ್ತು ದುಡುಕಿನಿಂದ ಚಾಲನೆ ಮಾಡಿದ್ದರು.

ಅಲ್ಲದೇ ಚಲಿಸುವ ಬೈಕ್ ಮೇಲೆಯೇ ರೀಲ್ಸ್ ಮಾಡಿ ಅದನ್ನು ತಮ್ಮ ಇನ್‌ಸ್ಟಾಗ್ರಾಮ್ ಐಡಿಯಲ್ಲಿ ಅಪ್‌ಲೋಡ್ ಮಾಡಿಕೊಂಡಿದ್ದರು.

ಸೋಶಿಯಲ್ ಮೀಡಿಯಾ ಮೇಲೆ ಕಣ್ಣಿಡುವ ಪೊಲೀಸರು ಸಾರ್ವಜನಿಕರ ಹಾಗೂ ರಸ್ತೆ ಸಂಚಾರಿಗಳ ಜೀವಕ್ಕೆ ಅಪಾಯ ತಂದೊಡ್ಡುವ ರೀತಿಯಲ್ಲಿ ಸ್ಟಂಟ್ ಮಾಡಿದ್ದನ್ನು ಗಂಭೀರವಾಗಿ ಪರಿಗಣಿಸಿ ಸ್ವಯಂಪ್ರೇರಿತವಾಗಿ ದೂರು ದಾಖಲಿಸಿಕೊಂಡು ಆರೋಪಿ ರಾಜು ವಿರುದ್ಧ ಕಾನೂನು ಕ್ರಮ ಕೈಗೊಂಡಿದ್ದಾರೆ. ರಸ್ತೆಯಲ್ಲಿ ರೀಲ್ಸ್ ಹೆಸರಲ್ಲಿ ಇಂತಹ ಹುಚ್ಚಾಟ ಆಡಿದರೆ ಕಠಿಣ ಕ್ರಮ ಖಚಿತ ಎಂದು ಪೊಲೀಸರು ಈ ಮೂಲಕ ಎಚ್ಚರಿಸಿದ್ದಾರೆ.

Speeding on the road – case registered

Share

Leave a comment

Leave a Reply

Your email address will not be published. Required fields are marked *

Don't Miss

ಅನಧಿಕೃತ ಜೀಪ್‌ಗಳ ಹಾವಳಿ ತಪ್ಪಿಸಲು ಆಗ್ರಹಿಸಿ ಜಿಲ್ಲಾಡಳಿತಕ್ಕೆ ಮನವಿ

ಚಿಕ್ಕಮಗಳೂರು:  ಜಿಲ್ಲೆಯ ಪ್ರವಾಸಿ ತಾಣಗಳಲ್ಲಿ ಅನಧಿಕೃತ ಮತ್ತು ಅಕ್ರಮ ಜೀಪ್ ಗಳ ಹಾವಳಿ ತಡೆಗಟ್ಟಿ ಪ್ರವಾಸಿಗರ ಸುರಕ್ಷತೆ ಕಾಪಾಡಬೇಕು ಎಂದು ಆಗ್ರಹಿಸಿ ಜಿಲ್ಲೆಯ ಸ್ಥಳೀಯ ನಾಗರೀ ಕರು ಸೋಮವಾರ ಅಪರ ಜಿಲ್ಲಾಧಿಕಾರಿ...

ಜಿಲ್ಲೆಯ ಪ್ರವಾಸಿ ತಾಣಗಳಲ್ಲಿ ಮಾಫಿಯಾ ದಂದೆಗಳು ?

ಚಿಕ್ಕಮಗಳೂರು: ಪ್ರಸಿದ್ಧ ಪ್ರವಾಸಿ ತಾಣಗಳಲ್ಲಿ ಚಿಕ್ಕಮಗಳೂರು ಜಿಲ್ಲೆಗೆ ಅಗ್ರಸ್ಥಾನವಿದೆ.ನಿಜವಾದ ಪ್ರವಾಸಿಗರು ಜಿಲ್ಲೆಯ ಪ್ರಕೃತಿ ಸೌಂದರ್ಯದ ಜೊತೆಗೆ ಧಾರ್ಮಿಕ ಸ್ಥಳಗಳು, ಝರಿಗಳ ಜೊತೆಗೆ ಬೋರ್ಗರಿಯುವ ನದಿಗಳು, ಉಪ ನದಿಗಳು,ಅರಣ್ಯದ ಜೊತೆಗೆ ಕಾಡು ಪ್ರಾಣಿಗಳು...

Related Articles

ವಕೀಲ ವಿ.ಕೆ.ರಘು ಸಾಧನೆ ಯೋಗ ಮಾಡುವವರಿಗೆ ಪ್ರೇರಣೆ

ಚಿಕ್ಕಮಗಳೂರು: ಯೊಗ ನಮ್ಮ ಪ್ರಾಚೀನ ಋಷಿಮುನಿಗಳು ಜಗತ್ತಿಗೆ ಕೊಟ್ಟಂತಹ ಕೊಡುಗೆ. ವಕೀಲ ವಿ.ಕೆ.ರಘು ಅವರ ಯೋಗದ...

ಅಂಚೆ ನಾಗಭೂಷಣ್ ಗೆ’ಪತ್ರಿಕಾ ರತ್ನ’ ಪ್ರಶಸ್ತಿ ಪ್ರಧಾನ

ತರೀಕೆರೆ : ಪಟ್ಟಣದ ಹಿರಿಯ ಪತ್ರಕರ್ತರು, ಜಿಲ್ಲಾ ಕನ್ನಡ ವಾರಪತ್ರಿಕೆ ಅಂಚೆವಾರ್ತೆ ಸಂಪಾದಕರು ಆದ ಅಂಚೆ...

ಇಂದು ಆರ್‌ಟಿಒ ರಾಕೇಶ್ ಕುಮಾರ್ ವಿರುದ್ಧ ವಿಚಾರಣೆ

ಚಿಕ್ಕಮಗಳೂರು: ಇಲ್ಲಿನ ಪ್ರಾದೇಶಿಕ ಸಾರಿಗೆ ಕಚೇರಿಯಲ್ಲಿ ಭ್ರಷ್ಟಾಚಾರ ಹಾಗೂ ಹಣಕಾಸು ಅಕ್ರಮಗಳ ಆರೋಪ ಕೇಳಿಬಂದಿರುವ ಬೆನ್ನಲ್ಲೇ...

ನಗರದಲ್ಲಿ ಎರಡು ಗುಂಪುಗಳ ನಡುವಿನ ಗಲಾಟೆ

ಚಿಕ್ಕಮಗಳೂರು : ಮಧ್ಯರಾತ್ರಿ ರಸ್ತೆಯಲ್ಲಿ ಕೆಟ್ಟ ಶಬ್ದಗಳಿಂದ ಬೈದಾಡಿಕೊಳ್ಳುತ್ತಾ ಸಾರ್ವಜನಿಕರ ನೆಮ್ಮದಿಗೆ ಭಂಗ ತಂದ ಎರಡು...