ಅಜ್ಜಂಪುರ: ಅಂತರಘಟ್ಟೆಯ ಶ್ರೀನಿಧಿ ಬಾರ್ ಅಂಡ್ ರೆಸ್ಟೋರೆಂಟ್ನಲ್ಲಿ ನಡೆದ ಅತಿಕ್ರಮ ಪ್ರವೇಶ ಹಾಗೂ ಧ್ವಂಸ ಪ್ರಕರಣವೊಂದು ಇದೀಗ ಭಾರೀ ಸದ್ದು ಮಾಡುತ್ತಿದೆ. ಮಂಗಳವಾರ ರಾತ್ರಿ ಬಾರ್ ಮುಚ್ಚಿ ಸಿಬ್ಬಂದಿ ಲೆಕ್ಕಾಚಾರದಲ್ಲಿ ನಿರತರಾಗಿದ್ದಾಗ, ಮುಗಳಿ ಗ್ರಾಮದ ಸೂರ್ಯಪ್ರಸಾದ್ ಹಾಗೂ ಅಭಿಷೇಕ ಎಂಬುವವರು ದರ್ಪ ಮೆರೆದಿದ್ದಾರೆ.
ಕೈಯಲ್ಲಿ ಕಬ್ಬಿಣದ ರಾಡ್ ಹಿಡಿದುಕೊಂಡು ಕ್ಯಾಶ್ ಕೌಂಟರ್ಗೆ ನುಗ್ಗಿದ ಆರೋಪಿಗಳು, ಕ್ಯಾಶಿಯರ್ ಸುರೇಶ್ ಕುಮಾರ್ ಅವರ ಮೇಲೆ ಅವಾಚ್ಯವಾಗಿ ನಿಂದನೆ ನಡೆಸಿದ್ದಾರೆ. ಸುಮ್ಮನಿರದ ಈ ಕಿಡಿಗೇಡಿಗಳು ಬಾರ್ನಲ್ಲಿ ಜೋಡಿಸಿದ್ದ ಮದ್ಯದ ಬಾಟಲಿಗಳನ್ನು ರಾಡ್ನಿಂದ ಹೊಡೆದು ಪುಡಿಪುಡಿ ಮಾಡಿದ್ದಾರೆ. ಈ ದಾಳಿಯಲ್ಲಿ ಬರೋಬ್ಬರಿ 52,000 ರೂಪಾಯಿ ಮೌಲ್ಯದ ಮದ್ಯ ಸಂಪೂರ್ಣ ಹಾನಿಯಾಗಿದೆ.
ಅಷ್ಟೇ ಅಲ್ಲದೆ, ಇವತ್ತು ಬದುಕಿದ್ದೀರ ನೋಡಿಕೊಳ್ಳುತ್ತೇವೆ ಎಂದು ಕ್ಯಾಶಿಯರ್ಗೆ ಪ್ರಾಣ ಬೆದರಿಕೆ ಹಾಕಿ, ಅಲ್ಲಿಂದ ಪರಾರಿಯಾಗಿದ್ದಾರೆ. ಈ ಕುರಿತು ಬಾರ್ ಮಾಲೀಕರಿಗೆ ವಿಷಯ ತಿಳಿಸಿ, ಸುರೇಶ್ ಕುಮಾರ್ ಅವರು ಅಜ್ಜಂಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಆರೋಪಿಗಳಾದ ಸೂರ್ಯಪ್ರಸಾದ್ ಮತ್ತು ಅಭಿಷೇಕ ಅವರ ವಿರುದ್ಧ ಪೊಲೀಸರು ಕಾನೂನು ಕ್ರಮಕ್ಕೆ ಮುಂದಾಗಿದ್ದಾರೆ.
Cashier attacked at bar – alcohol damaged
Leave a comment