ಚಿಕ್ಕಮಗಳೂರು: ಸಂಕ್ರಾಂತಿ ಹಿನ್ನೆಲೆಯಲ್ಲಿ ಗೌಡಸಾರಸ್ವತ ಬ್ರಾಹ್ಮಣ ಸಮಾಜದಿಂದ ನಡೆಯುವ ಕೇಳ್ ಮೇಳ್ ಸಾಂಸ್ಕೃತಿಕ ಕಾರ್ಯಕ್ರಮ ನಗರದಲ್ಲಿ ಸಂಭ್ರಮದಿಂದ ನಡೆಯಿತು.
ಗೌಡಸಾರಸ್ವತ ಬ್ರಾಹ್ಮಣ ಸಮಾಜದ ಭರತ ಯುವಕ ಮಂಡಳಿ ಮತ್ತು ಕೌಶಲ್ಯ ಯುವತಿ ಮಂಡಳಿಯಿಂದ ನಗರದ ಭುವನೇಶ್ವರ ವಿದ್ಯಾಸಂಸ್ಥೆಯಲ್ಲಿ ಭಾನುವಾರ ಆಯೋಜಿಸಿದ್ದ ಕೇಳ್ಮೇಳ್(ಸೇರು-ಆಡು) ಕಾರ್ಯಕ್ರಮದಲ್ಲಿ ಸಮಾಜದ ಬಹುತೇಕರೂ ಭಾಗವಹಿಸಿ ಹಗಲಿಡಿ ಸಂತಸ, ಸಂಭ್ರಮ ಹಂಚಿಕೊಂಡು ಖುಷಿಪಟ್ಟರು.
ಪುರುಷರ ಮತ್ತು ಮಹಿಳೆಯರಿಗೆ ಪ್ರತ್ಯೇಕವಾದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ, ಆಟೋಟ ಸ್ಪರ್ಧೆಗಳನ್ನು ಏರ್ಪಡಿಸಿದ್ದು ಬಾಲಕ, ಬಾಲಕಿಯರಿಂದ ಹಿಡಿದು ವೃದ್ದರ ವರೆಗೆ ಎಲ್ಲರೂ ಆಟೋಟ ಸ್ಪರ್ಧೆಯಲ್ಲಿ ಪಾಲ್ಗೊಂಡು ಸಮಾಜದ ಒಗ್ಗಟ್ಟನ್ನು ಪ್ರದರ್ಶಿಸಿದರು.
ಕೇಳ್ಮೇಳ್ ಉದ್ಘಾಟನಾ ಕಾರ್ಯಕ್ರಮದಲ್ಲಿ ಸಮಾಜದ ಮುಖಂಡರಾದ ಪ್ರತಿಮಾಅರುಣ್ ಪೈ ಮಾತನಾಡಿ, ಜಿಎಸ್ಬಿ ಸಮಾಜದಿಂದ ೧೯೯೮ ರಲ್ಲಿ ಈ ಕೇಳ್ಮೇಳ್ ಸಾಂಸ್ಕೃತಿಕ ಕಾರ್ಯಕ್ರಮ ಪ್ರಾರಂಭವಾಯಿತು.ಅಲ್ಲಿಂದ ಈವರೆಗೆ ಚಾಚೂ ತಪ್ಪದೆ ಮುಂದುವರಿಸಿಕೊಂಡು ಬರಲಾಗುತ್ತಿದೆ.ಸಂಕ್ರಾಂತಿ ಸಂಸ್ಕೃತಿ ಉಳಿಸಿ ಬೆಳೆಸುವುದೂ ನಮ್ಮ ಸನಾತನ ಸಂಸ್ಕೃತಿ ಉಳಿಸುವುದು ನಮ್ಮ ಆಚರಣೆಯ ಪ್ರಮುಕ ಉದ್ದೇಶವಾಗಿದೆ ಎಂದು ಹೇಳಿದರು.
ಸಮಾಜದ ಮುಖಂಡ ಕೆ.ವೆಂಕಟೇಶ್ ಪೈ ಮಾತನಾಡಿ, ಸಂಕ್ರಾಂತಿ ಹಿನ್ನೆಲೆಯಲ್ಲಿ ಸಮಾಜದ ಬಂಧುಗಳು ಒಂದಡೆ ಸೇರಲು ಕೇಳ್ ಮೇಳ್ ಉತ್ತಮ ಅವಕಾಶ ಕಲ್ಪಿಸಿದೆ ಎಂದರು.
ರಾಯನಾಯಕ್ ಮಾತನಾಡಿ, ಜಿಎಸ್ಬಿ ಸಮಾಜದ ನಾವೆಲ್ಲರೂ ಒಂದೇ ಎಂದು ಒಗ್ಗಟ್ಟು ಪ್ರದರ್ಶಿಸುವ ಹಬ್ಬ ಕೇಳ್ ಮೇಳ್ ಆಗಿದೆ ಎಂದು ಹೇಳಿದರು.ನಿವೃತ್ತ ದೈಹಿಕ ಶಿಕ್ಷಕ ತಾರಾನಾಥಕಾಮತ್, ಸಮಾಜದ ಮುಖಂಡರಾದ ಜ್ಯೋತಿಪೈ, ಪ್ರಫುಲ್ಲಾಪೈ, ದಿನೇಶ್ಪೈ, ಸುರ್ಕಾಮತ್, ಶ್ರೀಪತಿ, ಸುಭಾಷ್ಭಟ್, ರಮೇಶ್ಪೈ, ರವೀಂದ್ರಪ್ರಭು, ಕಾರ್ತಿಕ್ಕಾಮತ್, ದಾಮೋದರ್ಪ್ರಭು ಮತ್ತಿತರರಿದ್ದರು.
Sankranti celebrations from GSB
Leave a comment