ಜಯಪುರ: ಕೊಪ್ಪ ತಾಲೂಕಿನ ನರಸೀಪುರ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿನ ‘ಶ್ರೀ ಚಂಡಿಕೇಶ್ವರಿ’ ದೇವಾಲಯದ ಹೊರ ಆವರಣದಲ್ಲಿನ ಶಾಸನ ಸಹಿತ ಸ್ಮಾರಕಶಿಲೆಯನ್ನು ದೇವಾಲಯದ ಆಡಳಿತ ಮಂಡಳಿಯ ಮನವಿಯ ಮೇರೆಗೆ, ಕುವೆಂಪು ವಿಶ್ವವಿದ್ಯಾನಿಲಯ ವಸ್ತುಸಂಗ್ರಹಾಲಯದ ಕ್ಯುರೇಟರ್ ಶ್ರುತೇಶ್ ಆಚಾರ್ಯ ಮೂಡುಬೆಳ್ಳೆ ಮಾರ್ಗದರ್ಶನದಲ್ಲಿ ಇತಿಹಾಸ ಮತ್ತು ಪುರಾತತ್ತ್ವ ಸಂಶೋಧನಾರ್ಥಿ ನ. ಸುರೇಶ್ ಕಲ್ಕೆರೆ ಮರು ಅಧ್ಯಯನಕ್ಕೆ ಒಳಪಡಿಸಿರುತ್ತಾರೆ.
ಈ ಶಾಸನ ಸಹಿತ ಸ್ಮಾರಕ ಶಿಲೆಯ ಮಾಹಿತಿಯನ್ನು ಎಪಿಗ್ರಾಫಿಯ ಕರ್ನಾಟಿಕ, ಸಂಪುಟ-೧೨ರಲ್ಲಿ ಪ್ರಕಟ ಮಾಡಿದ್ದರು ಸಹ ಪ್ರಸ್ತುತ ಅಧ್ಯಯನದಿಂದ ಹೆಚ್ಚಿನ ಮಾಹಿತಿಗಳು ಬೆಳಕಿಗೆ ಬಂದಿದ್ದು, ಕೊಪ್ಪ ತಾಲೂಕಿನ ಇತಿಹಾಸಕ್ಕೆ ಹೊಸ ವಿಚಾರಗಳು ಸೇರ್ಪಡೆಗೊಂಡಿದೆ ಎಂದು ಸಂಶೋಧನಾರ್ಥಿಯು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಮೊದಲಿನ ಅಧ್ಯಯನದಲ್ಲಿ ಶಾಸನದಲ್ಲಿ ಗಂಗೆಮ್ಬ, ಭೀರವೂರ, ಕಲಿಮರ ಈ ಪದಗಳ ಉಲ್ಲೇಖವಿದ್ದು ಇದೊಂದು ರಕ್ತ ಶಿಲಾಶಾಸನ ಎಂದು ಹೇಳಲಾಗಿದ್ದು, ಆದರೆ ಮರು ಅಧ್ಯಯನದಿಂದ ಈ ಶಾಸನ ಸಹಿತ ಸ್ಮಾರಕಶಿಲೆಯು ‘ಸಿಡಿತಲೆ ಕಲ್ಲು’ ಎಂದು ಕಂಡುಬಂದಿದೆ. ಅಂದರೆ ಒಬ್ಬ ವೀರನು ರಾಜ/ರಾಜ್ಯಕ್ಕಾಗಿ ತನ್ನ ಸ್ವಇಚ್ಛೆಯಿಂದ ಶಿರವನ್ನು ಕಡಿದು ಪ್ರಾಣ ತ್ಯಾಗ ಮಾಡಿರುವುದು.
ಇದನ್ನು ಬೇರೆ ಬೇರೆ ರೂಪದಲ್ಲಿಯೂ ತೋರಿಸಿರುತ್ತಾರೆ. ಪ್ರಸ್ತುತ ಇಲ್ಲಿರುವ ಸಿಡಿತಲೆ ಸ್ಮಾರಕ ಶಿಲೆಯು ಸುಮಾರು ಮೂರುವರೆ ಅಡಿ ಎತ್ತರ ಹಾಗೂ ಎರಡು ಅಡಿ ಅಗಲವನ್ನು ಹೊಂದಿದ್ದು, ೮ನೇ ಶತಮಾನದ ಅಂದರೆ ರಾ?ಕೂಟ ಕಾಲದ ಕನ್ನಡ ಲಿಪಿಯ ಶಾಸನವನ್ನು ಒಳಗೊಂಡಿದೆ. ಹಾಗಾಗಿ ಈ ಪ್ರದೇಶದಲ್ಲಿ ರಾ?ಕೂಟರ ಸಮಕಾಲೀನ ರಾಜವಂಶ/ಸಾಮಂತ ಅರಸರು ಆಳ್ವಿಕೆ ಮಾಡಿರುವುದು ದೃಢಪಡುತ್ತದೆ.
ಈ ಸ್ಮಾರಕ ಶಿಲೆಯ ಮೇಲ್ಭಾಗದಲ್ಲಿನ ಪಟ್ಟಿಕೆಯಲ್ಲಿ ಶಿರವನ್ನು ಹರಕೆ ರೂಪದಲ್ಲಿ ಕೊಟ್ಟಂತ ವೀರನಾದ ಗಂಗನು ಇಹಲೋಕದಿಂದ ಪರಲೋಕಕ್ಕೆ ಸೇರಿದ ಎಂಬುದನ್ನು ಸಾಂಕೇತಿಕವಾಗಿ ಮಂಟಪದಲ್ಲಿ ಕುಳಿತಿರುವಂತೆ ತೋರಿಸಲಾಗಿದೆ. ದೇವಾಲಯದ ಹೊರ ಆವರಣದಲ್ಲಿ ಸ್ಥಳೀಯರು ‘ಸಿಡಿಕಟ್ಟೆ’ ಎಂದು ಕರೆಯುವ ಕಲ್ಲಿನಿಂದ ನಿರ್ಮಾಣ ಮಾಡಿದ ಒಂದು ವೃತ್ತಾಕಾರದ ಕಟ್ಟೆಯಿದ್ದು, ಇಲ್ಲಿ ವೀರನಾದ ಗಂಗನು ಶಿರವನ್ನು ಕೊಟ್ಟಿರಬಹುದೆಂದು ಅಥವಾ ಆತ ಶಿರವನ್ನು ಕೊಟ್ಟ ಜಾಗದಲ್ಲಿ ನಂತರದಲ್ಲಿ ಈ ಕಟ್ಟೆಯನ್ನು ಕಟ್ಟಿಸಿರಬಹುದೆಂದು ಊಹಿಸಲಾಗಿದೆ.
ಇಲ್ಲಿರುವ ಸ್ಮಾರಕ ಶಿಲೆಯನ್ನು ದೇವಾಲಯದ ಆಡಳಿತ ಮಂಡಳಿಯವರು/ಅರ್ಚಕರು/ ಸ್ಥಳೀಯರು ಗಂಧ-ಪು?, ಎಣ್ಣೆ-ಧೂಪದಿಗಳಿಂದ ಪೂಜಿಸಿ, ಸಂರಕ್ಷಿಸಿಕೊಂಡು ಬಂದಿರುವುದು ಶ್ಲಾಘನೀಯ ಕಾರ್ಯ. ಈ ಶಾಸನಸಹಿತ ಸ್ಮಾರಕಶಿಲೆಯ ಮರು ಅಧ್ಯಯನದಲ್ಲಿ ಕಿಶನ್ ಕುಮಾರ್, ಶ್ರೇಯಾ ಶ್ರುತೇಶ್ ಆಚಾರ್ಯ ಹಾಗೂ ಆಶ್ಲೇ? ಆಚಾರ್ಯ ಮೂಡುಬೆಳ್ಳೆ ಹಾಗೂ ದೇವಾಲಯದ ಆಡಳಿತ ಮಂಡಳಿ ಮತ್ತು ಸ್ಥಳೀಯರು ಸಹಕಾರ ನೀಡಿರುತ್ತಾರೆ.
Re-study of the inscription at the Sri Chandikeshwari Temple in Norway
Leave a comment