ಚಿಕ್ಕಮಗಳೂರು : ಜಿಲ್ಲೆಯಲ್ಲಿ ಬರಗಾಲದ ಛಾಯೆ ಇರುವುದರಿಂದ ಶಾಸಕರನ್ನೊಳಗೊಂಡು ರೈತ ಪ್ರತಿನಿಧಿಗಳಿಗೆ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಸಭೆ ಕರೆದು ಸಮಸ್ಯೆ ಹಾಗೂ ಪರಿಹಾರೋಪಾಯ ಚರ್ಚಿಸುವಂತೆ ಒತ್ತಾಯಿಸಿ ರಾಜ್ಯ ರೈತಸಂಘದ ಪದಾಧಿಕಾರಿಗಳು ಸೋಮವಾರ ನಗರದ ಆಜಾದ್ದಲ್ಲಿ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗಳ ಮೂಲಕ ರಾಜ್ಯದ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು.
ಜಿಲ್ಲೆ ಈಗಾಗಲೇ ಮುಂಗಾರು ವೈಫಲ್ಯದಿಂದ ಜಿಲ್ಲೆಯಲ್ಲಿ ಬರದ ಪರಿಸ್ಥಿತಿ ತಲೆದೂರಿದೆ. ಮಲೆನಾಡು, ಅರೆಮಲೆನಾಡು, ಬಯಲು ಪ್ರದೇಶಗಳಲ್ಲಿ ಸರಾಸರಿಗಿಂತ ಮಳೆ ಕಡಿಮೆಯಾಗಿದೆ. ಮಲೆನಾಡಿನಲ್ಲಿ ಸರಿಯಾದ ಮಳೆಯಾಗಿಲ್ಲ. ಬಯಲುಸೀಮೆ ಪ್ರದೇಶಗಳಲ್ಲಿ ಮುಂಗಾರು ಮಳೆಯ ವಿಫಲತೆಯ ಕಾರಣದಿಂದ ಬಿತ್ತನೆ ಮಾಡಲು ಸಾಧ್ಯವಾಗಿಲ್ಲ. ಅಕಾಲಿಕವಾಗಿ ಬಂದ ಮಳೆಗೆ ಅಲ್ಲಲ್ಲಿ ಬಿತ್ತನೆ ವಿಫಲವಾಗಿದೆ.
ಕೊಳವೆ ಬಾವಿ ಆಶ್ರಿತ ರೈತರು ಮಾತ್ರ ಅಲ್ಪಸ್ವಲ್ಪ ಬೆಳೆ ಬೆಳೆದಿದ್ದರು ಬೆಳೆಗೆ ಸರಿಯಾದ ಬೆಲೆ ಸಿಗದೆ ರೈತರು ನಷ್ಟ ಅನುಭವಿಸುತ್ತಿದ್ದಾರೆ. ಮಳೆ ಅಭಾವದ ಕಾರಣ ಕೆರೆ ಕಟ್ಟೆಗಳು ನೀರಿಲ್ಲದೆ ಬಣಗುಡುತ್ತಿವೆ. ಕಡೆ ಕುಡಿಯುವ ನೀರಿಗೂ ತೊಂದರೆಯಾಗಿದೆ. ಜಾನುವಾರುಗಳಿಗೆ ಮೇವಿನ ಕೊರೆತೆ ಎದುರಾಗುವ ಸಾಧ್ಯತೆ ಇದೆ ಎಂದಿದ್ದಾರೆ.
ಸರ್ಕಾರ ಇದುವರೆಗೂ ಶಾಶ್ವತ ಬರಗಾಲ ಎದುರಿಸುವ ಯೋಜನೆಯನ್ನು ರೂಪಿಸಬೇಕು, ಬೆಳೆ ಕಳೆದುಕೊಂಡ ರೈತರರಿಗೆ ಕನಿಷ್ಠ ಮಟ್ಟದ ಬೆಳೆ ಪರಿಹಾರ ನೀಡಬೇಕು, ಶಾಶ್ವತನೀರಾವರಿ ಯೋಜನೆಗನ್ನು ರೂಪಿಸಬೇಕು, ಜಿಲ್ಲೆಯ ಎಲ್ಲಾ ನೀರಾವರಿ ಯೋಜನೆಗಳನ್ನು ಈ ವರ್ಷವೇ ಪೂರ್ಣಗೊಳಿಸಬೇಕು. ಭದ್ರ ಉಪಕಣಿವೆಯ ೧-೨ನೇ ಹಂತದ ೩ನೇ ಹಂತದ ಯೋಜನೆಯನ್ನು ಈ ವರ್ಷವೇ ಪೂರ್ಣಗೊಳಿಸಿಬೇಕೆಂದಿದ್ದಾರೆ.
ಫಸಲ್ ಭೀಮ ಯೋಜನೆ ಸೇರಿದಂತೆ ಬೆಳೆವಿಮೆ ಜಾರಿಯಲ್ಲಿ ರೈತರಿಗೆ ಮಾರಕವಾಗಿರುವ ನಿಯಮಗಳನ್ನು ಬದಲಾಯಿಸಿ ರೈತರಿಗೆ ಪೂರಕವಾದ ನಿಯಮಗಳನ್ನು ತರಬೇಕು.ಪರಿಸರ ಸೂಕ್ಷ್ಮ ವಲಯ ಘೋಷಣೆ ವಿರುದ್ಧ ಜಿಲ್ಲೆಯ ಮಲೆನಾಡಿನ ೧೩೭ ಗ್ರಾಮಗಳನ್ನು ಪರಿಸರ ಸೂಕ್ಷ್ಮ ಪ್ರದೇಶವೆಂದು ಘೋಷಣೆ ಮಾಡಲು ಸರ್ಕಾರ ಕಸ್ತೂರಿ ರಂಗನ್ ವರದಿ ಜಾರಿಗೆ ತರುವುದು ಮಲೆನಾಡಿಗರಿಗೆ ಮರಣ ಶಾಸನವಾಗುತ್ತದೆ ಎಂದಿದ್ದಾರೆ.
ಪ್ರತಿರೋಧಧ ನಡುವೆಯೂ ವಿಚಾರಣೆ ನಡೆಸದೆ ತೀರ್ಮಾನ ಕೈಗೊಳ್ಳದೆ ಪುನಃ ಸೂಕ್ಷ್ಮ ಪ್ರದೇಶ ಎಂದು ಘೋಷಣೆ ಮಾಡಲು ಕೇಂದ್ರ ಸರ್ಕಾರ ತನ್ನ ಹಠಮಾರಿ ಧೋರಣೆಯನ್ನು ಪ್ರದರ್ಶಿಸುತ್ತಿದ್ದು ಕೂಡಲೇ ಜನರ ಅಹವಾಲನ್ನು ಪರಿಗಣಿಸಿ ತೀರ್ಮಾನ ಕೈಗೊಳ್ಳಬೇಕೆಂದಿದ್ದಾರೆ.
ಈ ಎಲ್ಲಾ ಕಾರಣಗಳಿಗಾಗಿ ಜಿಲ್ಲೆಯ ಎಲ್ಲಾ ಶಾಸಕರು ಹಾಗೂ ರೈತ ಪ್ರತಿನಿಧಿಗಳನ್ನೊಳಗೊಂಡಂತೆ ಜಿಲ್ಲಾಧಿಕಾರಿಗಳು ಸಭೆ ಕರೆದು ಚರ್ಚಿಸಿ ಸರ್ಕಾರಕ್ಕೆ ವರದಿ ಸಲ್ಲಿಸಬೇಕಾಗಿ ಈ ಮೂಲಕ ಒತ್ತಾಯಿಸಿದ್ದಾರೆ.
ಈಸಂದರ್ಭದಲ್ಲಿ ಸಂಘಟನೆಯ ಜಿಲ್ಲಾಧ್ಯಕ್ಷ ಡಿ.ಮಹೇಶ್ ,ಜಿಲ್ಲಾ ಗೌರವಾಧ್ಯಕ್ಷಎಂ.ಸಿ.ಬಸವರಾಜು, ಪ್ರಧಾನಕಾರ್ಯದರ್ಶಿ ಎಂ.ಬಿ.ಚಂದ್ರಶೇಖರ್, ಉಪಾಧ್ಯಕ್ಷ ಕುಮಾರಸ್ವಾಮಿ ಮುಖಂಡರಾದ ದೇವರಾಜೇಗೌಡ, ಶಿವಕುಮಾರ್, ಜೆ.ಎಸ್.ಶಿವಣ್ಣ,ಭದ್ರೇಗೌಡ , ಜಯರಾಮ್, ವೆಂಕಟೇಶ್ ,ಸುನೀಲ್ ಕುಮಾರ್ಕೆ.ಟಿ, ಸಿದ್ದೇಗೌಡ, ಯುರಾಜ್ ಸೇರಿದಂತೆ ಹಲವರಿದ್ದರು.
Protest by state farmers’ association office bearers
Leave a comment