Home namma chikmagalur chikamagalur ನಗರ ಸೇರಿದಂತೆ ವಿವಿಧ ಕಡೆ ವಿದ್ಯುತ್ ನಿಲುಗಡೆ
chikamagalurHomeLatest Newsnamma chikmagalur

ನಗರ ಸೇರಿದಂತೆ ವಿವಿಧ ಕಡೆ ವಿದ್ಯುತ್ ನಿಲುಗಡೆ

Share
Share

ಚಿಕ್ಕಮಗಳೂರು:  ಗ್ರಾಮೀಣ ಉಪವಿಭಾಗದ ವ್ಯಾಪ್ತಿಯಲ್ಲಿ ಬರುವ ಕಾರ್ಯ ಮತ್ತು ಪಾಲನಾ ವಿಭಾಗದ ಕಳಸಾಪುರ ಶಾಖೆಯ ೬೬/೧೧ ಕೆ.ವಿ ಕಳಸಾಪುರ ವಿದ್ಯುತ್ ಉಪಕೇಂದ್ರದಲ್ಲಿ ಡಿಸೆಂಬರ್ ೨೭ ರಂದು ತೃತೀಯ ತ್ರೈಮಾಸಿಕ ನಿರ್ವಹಣೆಯನ್ನು ಹಮ್ಮಿಕೊಂಡಿರುವುದರಿಂದ ಈ ಕೇಂದ್ರದಿಂದ ಹೊರಹೊಮ್ಮುವ ಎಲ್ಲಾ ೧೧ ಕೆ.ವಿ ಫೀಡರ್‌ಗಳಿಗೆ ಅಂದು ವಿದ್ಯುತ್ ಸರಬರಾಜು ನಿಲುಗಡೆಯಾಗುತ್ತದೆ.

೧೧ ಕೆ.ವಿ ದೇವಗೊಂಡನಹಳ್ಳಿ, ಮಠ, ಸಿಂದಿಗೆರೆ, ಮಾಚೇನಹಳ್ಳಿ, ಈಶ್ವರಹಳ್ಳಿ, ಕೆ.ಬಿ.ಹಾಳ್, ಗಾಳಿಹಳ್ಳಿ ಮತ್ತು ಕಳಸಾಪುರ ಈ ಫೀಡರ್‌ಗಳ ವ್ಯಾಪ್ತಿಗೆ ಬರುವ ಕಳಸಾಪುರ, ದೇವಗೊಂಡನಹಳ್ಳಿ, ಲಕ್ಕುಮನಹಳ್ಳಿ, ಕುನ್ನಾಳು, ಸಿರಬಡಿಗೆ, ಭೂಚೇನಹಳ್ಳಿ, ಬೆಳವಾಡಿ, ನರಸೀಪುರ, ಸಿಂದಿಗೆರೆ, ಮಾಚೇನಹಳ್ಳಿ, ಈಶ್ವರಹಳ್ಳಿ, ಕೆ.ಬಿ.ಹಾಳ್, ಗಾಳಿಹಳ್ಳಿ ಮತ್ತು ಸುತ್ತಮುತ್ತಲಿನ ಗ್ರಾಮಗಳ ವ್ಯಾಪ್ತಿಗೆ ಅಂದು ಬೆಳಿಗ್ಗೆ ೧೦ ರಿಂದ ಸಂಜೆ ೫ ಗಂಟೆವರೆಗೆ ವಿದ್ಯುತ್ ಸರಬರಾಜು ನಿಲುಗಡೆಯಾಗುತ್ತದೆ. ಗ್ರಾಹಕರು ಸಹಕರಿಸುವಂತೆ ಮೆಸ್ಕಾಂ ಕಾರ್ಯ ಮತ್ತು ಪಾಲನಾ ಗ್ರಾಮೀಣ ಉಪವಿಭಾಗದ ಸಹಾಯಕ ಕಾರ್ಯ ನಿರ್ವಾಹಕ ಇಂಜಿನಿಯರ್‌ರವರು ಪ್ರಕಟಣೆಯಲ್ಲಿ ಕೋರಿದ್ದಾರೆ.

ಹಿರೆಮಗಳೂರು ವಿದ್ಯುತ್ ಉಪಕೇಂದ್ರ:  ಗ್ರಾಮೀಣ ಉಪವಿಭಾಗದ ವ್ಯಾಪ್ತಿಯಲ್ಲಿ ಬರುವ ೬೬/೧೧ ಕೆ.ವಿ ಹಿರೆಮಗಳೂರು ವಿದ್ಯುತ್ ಉಪಕೇಂದ್ರದಲ್ಲಿ ಡಿಸೆಂಬರ್ ೨೮ ರಂದು ತೃತೀಯ ತ್ರೈಮಾಸಿಕ ನಿರ್ವಹಣೆಯನ್ನು ಹಮ್ಮಿಕೊಂಡಿರುವುದರಿಂದ ಈ ಕೇಂದ್ರದಿಂದ ಹೊರಹೊಮ್ಮುವ ಎಲ್ಲಾ ೧೧ ಕೆ.ವಿ ಫೀಡರ್‌ಗಳಿಗೆ ವಿದ್ಯುತ್ ಸರಬರಾಜು ನಿಲುಗಡೆಯಾಗುತ್ತದೆ.

ಹಿರೆಮಗಳೂರು ೬೬/೧೧ ಕೆ.ವಿ ವಿ.ವಿ ಕೇಂದ್ರದ  ೧೧ ಕೆ.ವಿ. ಇಂಡಸ್ಟ್ರಿಯಲ್ ಏರಿಯಾ, ಮಾಗಡಿ, ಕುರುವಂಗಿ, ಚಿಕ್ಕನಹಳ್ಳಿ, ಕೆ.ಆರ್.ಪೇಟೆ, ವಸ್ತಾರೆ, ಮತ್ತು ನಗರ ವ್ಯಾಪ್ತಿಯ ೧೧ ಕೆ.ವಿ ಸಿ.ಡಿ.ಎ ಮತ್ತು ಹಿರೇಮಗಳೂರು – ಈ ಫೀಡರ್‌ಗಳ ವ್ಯಾಪ್ತಿಗೆ ಬರುವ ಕಲ್ಯಾಣನಗರ, ಚಿಕ್ಕಕುರುಬರಹಳ್ಳಿ, ನರಿಗುಡ್ಡನಹಳ್ಳಿ, ಉದಯನಗರ, ಅಂಬಳೆ ಇಂಡಸ್ಟ್ರಿಯಲ್ ಏರಿಯಾ, ಸಿರ್ಗಾಪುರ, ಮಳಲೂರು, ಗಂಜಲಗೋಡು, ಬಾಣಾವರ, ವಸ್ತಾರೆ, ಬಾಚಿಗನಹಳ್ಳಿ, ಕೂದುವಳ್ಳಿ, ಕೋಡುವಳ್ಳಿ, ಹಲಸುಮನೆ, ಹಚಡಮನೆ, ಕಲ್ಲುಗುಡ್ಡೆ, ಅಂಬಳೆ, ಗೌಡನಹಳ್ಳಿ ಹಿರೆಮಗಳೂರು, ಕೋಟೆ, ಶಂಕರಪುರ, ಟಿಪ್ಪುನಗರ, ಬೇಲೂರು ರಸ್ತೆ, ಕುವೆಂಪು ನಗರ, ಎಂ.ಜಿ ರಸ್ತೆ, ಮಾರ್ಕೆಟ್ ರಸ್ತೆ, ವಿಜಯನಗರ, ಹೊಸಮನೆ, ಗಾಂಧಿನಗರ, ದೋಣಿಖಣ, ಮತ್ತು ಗೋಕುಲಾ ಫಾರಂ, ಗೌಡನಹಳ್ಳಿ, ಮುಗಳವಳ್ಳಿ, ಮಾಗಡಿ, ನಾಗರಹಳ್ಳಿ, ಕಬ್ಬಿಗೆರೆ, ಕರ್ತಿಕೆರೆ, ಬಂಡಿಹಳ್ಳಿ, ಕನ್ನೇನಹಳ್ಳಿ. ಕುರುವಂಗಿ, ಬಿಳೇಕಲ್, ನೆಟ್ಟಕೆರೆಹಳ್ಳಿ, ಸಗನಿಪುರ, ಚಿಕ್ಕನಹಳ್ಳಿ, ಹೊಸಲಕ್ಯಾ, ಗಾಣದಾಳು, ಕ್ಯಾತನಬೀಡು, ಮತ್ತು ಸುತ್ತಮುತ್ತಲಿನ ಗ್ರಾಮಗಳಿಗೆ ಅಂದು ಬೆಳಿಗ್ಗೆ ೧೦  ರಿಂದ ಸಂಜೆ ೫ ಗಂಟೆಯವರೆಗೆ ವಿದ್ಯುತ್ ನಿಲುಗಡೆಯಾಗಲಿದೆ.

ಅಂದು ಬೆಳಿಗ್ಗೆ ೫ ರಿಂದ ಬೆಳಿಗ್ಗೆ ೧೦ರವರೆಗೆ ೩ ಫೇಸ್ ವಿದ್ಯುತ್ ಸರಬರಾಜು ಮಾಡಲಾಗುವುದು. ಗ್ರಾಹಕರು ಸಹಕರಿಸುವಂತೆ ಮೆಸ್ಕಾಂ ಕಾರ್ಯ ಮತ್ತು ಪಾಲನಾ ಗ್ರಾಮೀಣ ಉಪವಿಭಾಗದ ಸಹಾಯಕ ಕಾರ್ಯ ನಿರ್ವಾಹಕ ಇಂಜಿನಿಯರ್‌ರವರು ಪ್ರಕಟಣೆಯಲ್ಲಿ ಕೋರಿದ್ದಾರೆ.

ಅಲ್ಲಂಪುರ ರಸ್ತೆಯ ವಿದ್ಯುತ್ ಕಂಬ ಸ್ಥಳಾಂತರ: ಲೋಕೋಪಯೋಗಿ ಇಲಾಖೆಯ ಸಹಾಯಕ ಕಾರ್ಯ ನಿರ್ವಾಹಕ ಇಂಜಿನಿಯರ್‌ರವರ ಕೋರಿಕೆ ಮೇರೆಗೆ ಸ್ವಯಂ ಆರ್ಥಿಕ ಯೋಜನೆಯಡಿಯಲ್ಲಿ ಹಾಲೇನಹಳ್ಳಿ ಗ್ರಾಮದಿಂದ ಅಲ್ಲಂಪುರ ರಸ್ತೆಯಲ್ಲಿ ವಿದ್ಯುತ್ ಕಂಬವನ್ನು ಸ್ಥಳಾಂತರಿಸುವ ಕಾಮಗಾರಿ ನಡೆಯಲಿರುವುದರಿಂದ ನಗರ ಉಪ ವಿಭಾಗದ ಘಟಕ-೩ರ ವ್ಯಾಪ್ತಿಯಲ್ಲಿ ಬರುವ ೬೬/೧೧ ಕೆ.ವಿ. ವಿದ್ಯುತ್ ವಿತರಣಾ ಕೇಂದ್ರದಿಂದ ಹೊರಹೊಮ್ಮುವ ಮತ್ತು ಎಫ್-೧೪ ಕೆಂಪನಹಳ್ಳಿ, ಎಫ್-೧೨ ತ್ರಿವಿಕ್ ಫೀಡರ್ ಮಾರ್ಗಗಳ ಪ್ರದೇಶಗಳಾದ ರತ್ನಗಿರಿ ಬಡಾವಣೆ, ಚಂದ್ರನಗರ, ಕೆಂಪನಹಳ್ಳಿ, ಬಾಳೇಹಳ್ಳಿ, ಕರ್ಕಿಪೇಟೆ, ರಾಮನಹಳ್ಳಿ, ಅಲ್ಲಂಪುರ, ಹಾಲೇನಹಳ್ಳಿ, ತ್ರಿವಿಕ್ ಪೀಡರ್‌ನ ಸುತ್ತಮುತ್ತಲಿನ ಪ್ರದೇಶಗಳಿಗೆ ಡಿಸೆಂಬರ್ ೨೯ ಮತ್ತು ೩೦ ರಂದು ಬೆಳಗ್ಗೆ ೧೦ ರಿಂದ ಸಂಜೆ ೬ ಗಂಟೆವರೆಗೆ ವಿದ್ಯುತ್ ಸರಬರಾಜು ನಿಲುಗಡೆಗೊಳಿಸಲಾಗುತ್ತದೆ. ಗ್ರಾಹಕರು, ಸಾರ್ವಜನಿಕರು ಸಹಕರಿಸುವಂತೆ ಮೆಸ್ಕಾಂ ನಗರ ಉಪವಿಭಾಗದ ಸಹಾಯಕ ಕಾರ್ಯ ನಿರ್ವಾಹಕ ಇಂಜಿನಿಯರ್‌ರವರು ಕೋರಿದ್ದಾರೆ.

Power outages in various parts of the city

Share

Leave a comment

Leave a Reply

Your email address will not be published. Required fields are marked *

Don't Miss

ಮಳೆಯಾಗದೆ ಸಂಕಷ್ಟಕ್ಕೆ ಸಿಲುಕಿದ ರೈತರ ಸ್ಥಿತಿ ಅವಲೋಕಿಸಿದ ಸಚಿವ ಜಾರ್ಜ್

ಚಿಕ್ಕಮಗಳೂರು: ಸಕಾಲದಲ್ಲಿ ಮಳೆಯಾಗದೆ ಸಂಕಷ್ಟಕ್ಕೆ ಸಿಲುಕಿರುವ ರೈತರು, ಒಣಗಿ ನಿಂತಿರುವ ಭೂಮಿ, ಮಳೆಯ ನಿರೀಕ್ಷೆಯಲ್ಲಿ ಬಿತ್ತನೆ ಮಾಡಿದ್ದ ಬೀಜಗಳು ಮೊಳಕೆ ಒಡೆಯದೆ ಬಿಸಿಲಿನ ಝಳಕ್ಕೆ ಸಿಲುಕಿ ಸುಟ್ಟುಹೋಗಿರುವುದನ್ನು ಜಿಲ್ಲಾ ಉಸ್ತುವಾರಿ ಸಚಿವ...

ಸಚಿವ ಕೆ.ಜೆ. ಜಾರ್ಜ್ ಬೆಂಗಾವಲು ವಾಹನ ಅಪಘಾತ

ಚಿಕ್ಕಮಗಳೂರು : ಅಜ್ಜಂಪುರ ಜಿಲ್ಲೆಯ ಬಯಲುಸೀಮೆ ಪ್ರದೇಶಗಳಲ್ಲಿ ಬರ ಪರಿಸ್ಥಿತಿ ವೀಕ್ಷಣೆಗಾಗಿ ಪ್ರವಾಸದಲ್ಲಿದ್ದ ಜಿಲ್ಲಾ ಉಸ್ತುವಾರಿ ಸಚಿವ ಕೆ.ಜೆ. ಜಾರ್ಜ್ ಅವರ ಬೆಂಗಾವಲು (Escort) ವಾಹನ ಅಪಘಾತಕ್ಕೀಡಾದ ಘಟನೆ ಅಜ್ಜಂಪುರ ಪಟ್ಟಣದಲ್ಲಿ...

Related Articles

ಪರಿಸರ ಸೂಕ್ಷ್ಮ ಪ್ರದೇಶ ಕರಡು ಅಧಿಸೂಚನೆ ಮಲೆನಾಡಿಗೆ ಕಂಟಕ

ಚಿಕ್ಕಮಗಳೂರು: ಪಶ್ಚಿಮ ಘಟ್ಟ ವ್ಯಾಪ್ತಿಯ ರಾಜ್ಯದ ೧೦ ಜಿಲ್ಲೆಗಳ ೨೦ ಸಾವಿರಕ್ಕೂ ಅಧಿಕ ಚದರ ಕಿಲೋ...

ಅಂಗಾಂಗ ದಾನ ರೂಬೆನ್ ಮೊಸಸ್ ಕುಟುಂಬ ಸಮಾಜಕ್ಕೆ ಮಾದರಿ

ಚಿಕ್ಕಮಗಳೂರು: ಅಂಗಾಂಗ ದಾನ ಮಾಡಿ ರೂಬೆನ್ ಮೊಸಸ್ ಕುಟುಂಬ ಸಮಾಜಕ್ಕೆ ಮಾದರಿಯಾಗಿದೆ ಎಂದು ನಗರಸಭೆ ಪೌರಾಯುಕ್ತ...

ವೈಜ್ಞಾನಿಕ ರೀತಿಯಲ್ಲಿ ಕಸ ವಿಲೇವಾರಿಗೆ ಜಿಲ್ಲಾಧಿಕಾರಿ ಸೂಚನೆ

ಚಿಕ್ಕಮಗಳೂರು: ಕಸವನ್ನು ವೈಜ್ಞಾನಿಕವಾಗಿ ವಿಲೇವಾರಿ ಮಾಡುವಂತೆ ಜಿಲ್ಲಾಧಿಕಾರಿ ಭಂವರ್ ಸಿಂಗ್ ಮೀನಾ ಅಧಿಕಾರಿಗಳಿಗೆ ಸೂಚಿಸಿದರು. ಕೊಪ್ಪ...

ಫಸಲ್ ಬಿಮಾ ನೋಂದಣಿ ಹೆಚ್ಚಿಸಲು ಜಿಲ್ಲಾಧಿಕಾರಿ ನಿರ್ದೇಶನ

ಚಿಕ್ಕಮಗಳೂರು: ಫಸಲ್ ಬಿಮಾ ಯೋಜನೆಯಡಿ ನೋಂದಣಿ ಕಡಿಮೆಯಾಗಿದ್ದು, ತಕ್ಷಣ ಅಗತ್ಯ ಪ್ರಚಾರ ಕೈಗೊಂಡು ರೈತರ ಮನವೊಲಿಸಿ...