ಚಿಕ್ಕಮಗಳೂರು: ರಾಜ್ಯಮಟ್ಟದ ೪೪ನೇ ಮಾಸ್ಟರ್ಸ್ ಅಥ್ಲೆಟಿಕ್ಸ್ ಚಾಂಫಿಯನ್ ಶಿಪ್ -೨೦೨೫ ಸ್ಪರ್ಧೆಯಲ್ಲಿ ಜಿಲ್ಲೆಯ ಹಿರಿಯ ಹಾಗೂ ಕಿರಿಯ ಕ್ರೀಡಾಪಟುಗಳಾದ ಬಿ.ಎನ್. ಹೇಮಲತಾ, ಹೆಚ್. ಡಿ.ವಿನಯ್, ಎನ್.ಲೋಕೇಶ್, ಡಿ.ಶ್ರೀಧರ್, ನಿಂಗಪ್ಪ, ಹೆಚ್.ಐ.ಬಸವರಾಜ್ ಅವರುಗಳು ಸ್ಪರ್ಧಿಸಿ ವಿಜೇತ ರಾದ ಹಿನ್ನೆಲೆ ಮಂಗಳವಾರ ಜಿಲ್ಲಾ ಆಟದ ಮೈದಾನದಲ್ಲಿ ಜಿಲ್ಲೆಯ ಹಿರಿಯ ಕ್ರೀಡಾಪಟು, ತರಬೇತುದಾರ ರಾದ ಯಶೋಧ ಚಂಗಪ್ಪ ತಂಡದಿಂದ ಅಭಿನಂದನೆ ಸಲ್ಲಿಸಲಾಯಿತು.
ನಿಂಗಪ್ಪ ಅವರು ೭೦ರ ವಯಸ್ಸಿನ ಸ್ಪರ್ಧೆಯಲ್ಲಿ ಭಾಗವಹಿಸಿ ಗುಂಡು ಎಸೆತ ಪ್ರಥಮ, ಬಿ.ಎನ್. ಹೇ ಮಾಲತ ೩೫ರ ವಯಸ್ಸಿನಲ್ಲಿ ೪೦೦ ಮೀಟರ್ ಓಟ ಪ್ರಥಮ, ೮೦೦ ಮೀಟರ್ ಪ್ರಥಮ ಹಾ ಗೂ ೫೦೦೦ ಮೀಟರ್ ದ್ವಿತೀಯ ಸ್ಥಾನ, ಹೆಚ್.ಐ.ಬಸವರಾಜ್ ೬೫ರ ವಯಸ್ಸಿನ ಸ್ಪರ್ಧೆಯಲ್ಲಿ ಶಾಟ್‌ಪುಟ್‌ನಲ್ಲಿ ತೃತೀಯ ಸ್ಥಾನ ಪಡೆದುಕೊಂಡಿದ್ದಾರೆ.
ಹೆಚ್.ಡಿ.ವಿನಯ್ ೩೦ರ ವಯಸ್ಸಿನ ಸ್ಪರ್ಧೆಯಲ್ಲಿ ೪೦೦ ಮೀಟರ್ ಓಟ ಪ್ರಥಮ, ೮೦೦ ಮೀಟರ್ ದ್ವೀ ತೀಯ ಹಾಗೂ ೧೫೦೦ ಮೀಟರ್ ದ್ವಿತೀಯ ಸ್ಥಾನ ಪಡೆದಿದ್ದಾರೆ. ಡಿ.ಶ್ರೀಧರ್ ಅವರು ೫೫ರ ವಯಸ್ಸಿನ ಸ್ಪಧೆ ಯಲ್ಲಿ ೧೦೦ ಮೀಟರ್ ಓದ ತೃತೀಯ, ೨೦೦ ಮೀಟರ್ ತೃತೀಯ ಸ್ಥಾನ ಪಡೆದುಕೊಂಡು ತಿರುವನಂತ ಪುರದಲ್ಲಿ ನಡೆಯುವ ರಾಷ್ಟ್ರೀಯ ಮಟ್ಟದ ಅಥ್ಲೆಟಿಕ್ಸ್ ಕ್ರೀಡಾಕೂಟಕ್ಕೆ ಆಯ್ಕೆಯಾಗಿದ್ದಾರೆ.
ಈ ಸಂದರ್ಭದಲ್ಲಿ ಅಂತರಾಷ್ಟ್ರೀಯ ಕ್ರೀಡಾಪಟುಗಳಾದ ಸುನಂದ ರಘುನಾಥ್, ಹೆಚ್.ಸಿ.ಸಂತೋಷ್ ಹಿರಿಯಪಟುಗಳಾದ ಸಿ.ಜೆ.ಮಂಜುನಾಥ್, ಶಂಕರಣ್ಣ, ಶ್ರೀನಿವಾಸ್, ಅರಸ್ ಮತ್ತಿತರರಿದ್ದರು.
Congratulations to the winners of the State Athletics Championship
Leave a comment