ಚಿಕ್ಕಮಗಳೂರು: ಕಡೂರು ತಾಲೂಕು ಬಾಸೂರು ಹುಲ್ಲುಗಾವಲಿನಲ್ಲಿ ೩ ಕೃಷ್ಣಮೃಗಗಳ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ೭ ದಿನದೊಳಗೆ ವರದಿ ಸಲ್ಲಿಸುವಂತೆ ಅರಣ್ಯ ಸಚಿವ ಈಶ್ವರ್ ಖಂಡ್ರೆ ಸೂಚನೆ ನೀಡಿದ್ದಾರೆ.
ಬಾಸೂರು ಕಾವಲಿನಲ್ಲಿ ಮಂಗಳವಾರ ಗುಂಡಿಕ್ಕಿ ೩ ಕೃಷ್ಣಮೃಗಗಳನ್ನು ಹತ್ಯೆ ಮಾಡಲಾಗಿತ್ತು.ಅಂದೇ ದಿನ ರಾತ್ರಿ ಅರಣ್ಯ ಇಲಾಖೆ ಅಧಿಕಾರಿಗಳೊಂದಿಗೆ ಸಚಿವರು ವಿಡಿಯೋ ಸಂವಾದ ನಡೆಸಿದ್ದಾರೆ.ಘಟನೆಯ ದಿನದಂದು ಸಂಜೆ ೬.೪೫ಕ್ಕೆ ವಲಯಾರಣ್ಯಾಧಿಕಾರಿಗಳು ಸ್ಥಳಕ್ಕೆ ತೆರಳಿ ನೀಡಿದ ಮಾಹಿತಿ ಮಾತ್ರ ಅಧಿಕಾರಿಗಳು ಸಚಿವರಿಗೆ ನೀಡಿದ್ದರು.
ಆದರೆ ಅಂದೇ ಸಂಜೆ ೪ ಗಂಟೆಯೊಳಗೆ ಮರಣೋತ್ತರ ಪರೀಕ್ಷೆ ನಡೆದಿರೋ ಶಂಕೆ ವ್ಯಕ್ತವಾಗಿದೆ.ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಸರ್ಕಾರ ವರದಿ ಕೇಳಿದೆ. ಅತ್ಯಾಧುನಿಕ ಶಸ್ತ್ರಾಸ್ತದಿಂದ ೩ ಕೃಷ್ಣಮೃಗಗಳನ್ನು ಹತ್ಯೆಮಾಡಲಾಗಿದೆ.
ಎರಡು ಹೆಣ್ಣು ೧ ಗಂಡು ಕೃಷ್ಣಮೃಗ ಸಾವನ್ನಪ್ಪಿದ್ದು. ಮೂರು ಕೃಷ್ಣಮೃಗ ಗಳಿಗೂ ೨ ವರ್ಷ ಪ್ರಾಯ ವಾಗಿತ್ತು.ಚಿಕ್ಕಮಗಳೂರು-ಹಾವೇರಿಯಲ್ಲಿ ಮಾತ್ರ ಅಳಿವಿನಂಚಿನಲ್ಲಿರುವ ಕೃಷ್ಣಮೃಗಗಳು ಕಾಣಸಿಗುತ್ತವೆ.
ಅಂತ್ಯಸಂಸ್ಕಾರ : ತಾಲ್ಲೂಕಿನ ಬಾಸೂರು ಕಾವಲು ಬಳಿಯ ಕಲ್ಲೇನಹಳ್ಳಿಯ ಬೇಚಾರ್ ಗ್ರಾಮದ ಸರ್ವೆ ನಂಬರ್11ರಲ್ಲಿ ಗುಂಡೇಟಿಗೆ ಮೃತಪಟ್ಟ ಮೂರು ಕೃಷ್ಣಮೃಗಗಳ ಕಳೆಬರಹವನ್ನು ಕಾನೂನಾತ್ಮಕವಾಗಿ ಬುಧವಾರ ಅಂತ್ಯಸಂಸ್ಕಾರ ನಡೆಸಲಾಯಿತು
ಕೃಷ್ಣಮೃಗಗಳನ್ನು ಬೇಟೆಯಾಡಲು ಯತ್ನಿಸಿದ ಬೇಟೆಗಾರರನ್ನು ಪತ್ತೆಹಚ್ಚಲು ಶ್ವಾನದಳ ತರಿಸಿ ಪತ್ತೆಹಚ್ಚುವ ಕಾರ್ಯಚರಣೆ ಅಧಿಕಾರಿಗಳು ನಡೆಸಿದರು. ಮೊಬೈಲ್ ನೆಟ್ವರ್ಕ್ ಟವರ್ ಲೊಕೇಶನ್ ಸಹಾಯದಿಂದ ಬೇಟೆಗಾರರನ್ನು ಪತ್ತೆ ಹಚ್ಚುವ ವಿಶ್ವಾಸವನ್ನು ಅರಣ್ಯಾಧಿಕಾರಿಗಳು ವ್ಯಕ್ತಪಡಿಸಿದರು.
ಕಡೂರು ನ್ಯಾಯಾಲಯದ ಅನುಮತಿ ಪಡೆದು, ನಿಯಾನುಸಾರ ಕೃಷ್ಣಮೃಗಗಳ ಕಳೇಬರಹವನ್ನು. ಬಾಸೂರು ಕೃಷ್ಣ ಮೃಗಗಳ ಸಂರಕ್ಷಿತ ಪ್ರದೇಶದ ಪಕ್ಕದ ರಾಗಿ ಹೊಲದಲ್ಲಿ ನಿಯಾಮನುಸಾರ ದಹಸಿಲಾಗಿದೆ ಎಂದು ಸಹಾಯಕ ಉಪ ಅರಣ್ಯ ಸಂರಕ್ಷಣಾಧಿಕಾರಿ ಮೋಹನ್ ನಾಯ್ಕ್ ವಿಜಯವಾಣಿಯೊಂದಿಗೆ ಮಾಹಿತಿ ಹಂಚಿಕೊಂಡರು.
ಈ ಸಂದರ್ಭದಲ್ಲಿ ಉಪ ಅರಣ್ಯ ಸಂರಕ್ಷಣಾಧಿಕಾರಿ ರಮೇಶಬಾಬು, ಯಶಪಾಲ ಕ್ಷೀರಸಾಗರ , ಯಗಟಿ ಪಿಎಸ್ಐ ಮಂಜುನಾಥ್, ವನ್ಯಜೀವಿ ಪರಿಪಾಲಕ ವೀರೇಶ್ ಜಿ.ವೈಲ್ಡ್ ಕೇರ್ ಸಂಸ್ಥೆಯ ಅಧ್ಯಕ್ಷ ಮಧು ಮೂಗುತಿಹಳ್ಳಿ ಇದ್ದರು .
Instructions to submit report on blackbuck killing case
Leave a comment