Home namma chikmagalur chikamagalur ಬಾಳೆಹೊನ್ನೂರಿನ ವ್ಯಕ್ತಿಗೆ ಆನ್‌ಲೈನ್ ಫಿಶಿಂಗ್ ಫ್ರಾಡ್
chikamagalurHomeLatest Newsnamma chikmagalur

ಬಾಳೆಹೊನ್ನೂರಿನ ವ್ಯಕ್ತಿಗೆ ಆನ್‌ಲೈನ್ ಫಿಶಿಂಗ್ ಫ್ರಾಡ್

Share
Share

ಚಿಕ್ಕಮಗಳೂರು: ಕಸ್ಟಮರ್‌ಕೇರ್‌ನಿಂದ ದೂರವಾಣಿ ಕರೆಮಾಡಿರುವ ವ್ಯಕ್ತಿ ಬಾಳೆಹೊನ್ನೂರು ವ್ಯಕ್ತಿಯೊಬ್ಬರಿಗೆ ೧,೯೭,೮೪೧ ರೂ.ಗಳನ್ನು ವಂಚಿಸಿದ್ದಾರೆ. ಬಾಳೆಹೊನ್ನೂರು ಠಾಣೆ ವ್ಯಾಪ್ತಿಯ ಎಂ. ಅಕ್ಷಯ್ ಎಂಬುವರು ವ್ಯವಹಾರಕ್ಕೆಂದು ಬೆಂಗಳೂರು ಹಲಸೂರಿನ ಬ್ಯಾಂಕೊದರ ಶಾಖೆಯಲ್ಲಿ ಖಾತೆ ತೆರೆದಿದ್ದಾರೆ.

ಕ್ರೆಡಿಟ್‌ಕಾರ್ಡ್‌ಗೆ ಹೆಚ್ಚಿನ ವ್ಯಹಹಾರದ ಪರಿಮಿತಿ ಪಡೆದುಕೊಳ್ಳಲು ಬಳಸುತ್ತಿದ್ದ ಮೊಬೈಲ್ ಬ್ಯಾಂಕಿಂಗ್ ಆಪ್‌ಗೆ ಹೋಗಿ ಪರಿಶೀಲಿಸಿದಾಗ ಆಪ್ ಸರಿಯಾಗಿ ಕಾರ್ಯನಿರ್ವಹಿಸಲಿಲ್ಲ.ನನ್ನ ಮೊಬೈಲ್‌ಗೆ ಸಂಜೀವ ಎಂಬಾತ ಆಕ್ಸಿಸ್ ಬ್ಯಾಂಕ್ ಕಸ್ಟೂಮರ್ ಕೇರ್ ನಿಂದ ಪೋನ್ ಮಾಡುತ್ತಿರುವುದಾಗಿ ತಿಳಿಸಿದ್ದಾರೆ.

ಕ್ರೆಡಿಟ್ ಕಾರ್ಡನ ಕೊನೆಯ ೪ ನೇ ಸಂಖ್ಯೆ ಕೇಳಿದ್ದು ನಾನು ಸಂಖ್ಯೆ ಸರಿಯಿದ್ದುದರಿಂದ ಹೆಚ್ಚಿನ ಪರಿಮಿತಿ ಪಡೆಯಲು ಮೊಬೈಲ್ ಬ್ಯಾಂಕಿಂಗ್ ಆಪ್‌ಗೆ ಹೋಗಲು ಹೇಳಿದ್ದು, ಆಗ ಕೂಡ ಆಪ್ ಒಪನ್ ಆಗದ ಕಾರಣ ಲಿಂಕ್ ಗೆ ಹೋಗಲು ತಿಳಿಸಿದಾಗ ನಾನು ಗೂಗಲ್ ಕ್ರೋಮ್ ನಲ್ಲಿ ಲಿಂಕ್ ನ್ನು ಓಪನ್ ಮಾಡಿ ನೋಡಿದ್ದು ಆಕ್ಸಿಸ್ ಬ್ಯಾಂಕ್ ನ ವೆಬ್ ಅಪ್ಲಿಕೇಷನ್ ರೀತಿಯೇ ಇದ್ದು ಅದರೊಳಗೆ ಹೋಗಲು ಲಾಗಿನ್ ಆಪ್ಷನ್ ಬಂದಿದ್ದು ಲಾಗಿನ್ ಆಗಲು ನನ್ನ ಮೊಬೈಲ್ ಸಂಖ್ಯೆ ಮತ್ತು ಕ್ರೇಡಿಟ್ ಕಾರ್ಡ ಸಂಖ್ಯೆ ನಮೂದಿಸಿರುತ್ತೇನೆ.

ನಂತರ ಇನ್‌ಕರೆಕ್ಷನ್ ಸಪೋರ್ಟ್ ಎಂದು ಮೆಸೇಜ್ ಬಂದಿದ್ದು ನಂತರ ಕೇವಲ ೧ ನಿಮಿಷದೊಳಗೆ ನನ್ನ ಕ್ರೆಡಿಟ್ ಕಾರ್ಡ ನಿಂದ ೧,೯೭,೮೪೧ ರೂ ಹಣವು ರಿಲೆಯನ್ಸ ರಿಟೈಲ್‌ಗೆ ಕಟ್ ಆಗಿದ್ದು ಕೂಡಲೇ ಪೋನ್ ಲೈನಿನಲ್ಲಿದ್ದ ವ್ಯಕ್ತಿಯು ಪೋನ್ ಕಾಲ್ ಕಟ್ ಮಾಡಿರುತ್ತಾನೆ.

ನಂತರ ನಾನು ಮೋಸ ಹೋಗಿರುವುದು ತಿಳಿಯಿತು. ನನ್ನಿಂದ ಲಿಂಕ್ ಓಪನ್ ಮಾಡಿಸಿ ಮೋಸದಿಂದ ಹಣವನ್ನು ಪಡೆದಿರುವ ಸಂಜೀವನ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಂಡು ನನ್ನ ಹಣವನ್ನು ವಾಪಾಸ್ ಕೊಡಿಸಬೇಕಾಗಿ ಕೋರಿ ಅಕ್ಷಯ್ ಬಾಳೆಹೊನ್ನೂರು ಪೊಲೀಸರಿಗೆ ದೂರು ನೀಡಿದ್ದಾರೆ.

Online phishing fraud for a person from Balehonnur

Share

Leave a comment

Leave a Reply

Your email address will not be published. Required fields are marked *

Don't Miss

ದನದ ಮಾಂಸ ಮಾರಾಟದಲ್ಲಿ 40 ಕೆ.ಜಿ ಮಾಂಸ, ಕತ್ತಿ–ಚಾಕುಗಳು ಜಪ್ತಿ

ಚಿಕ್ಕಮಗಳೂರು: ನಗರದ ಅಯ್ಯಪ್ಪನಗರದ ಸಮೀಪದ ಶೆಡ್‌ನಲ್ಲಿ ಯಾವುದೇ ಪರವಾನಗಿ ಇಲ್ಲದೆ ದನದ ಮಾಂಸ ಮಾರಾಟ ಮಾಡುತ್ತಿದ್ದ ಆರೋಪದ ಮೇಲೆ ನಗರ ಠಾಣೆ ಪೊಲೀಸರು ವ್ಯಕ್ತಿಯೊಬ್ಬನ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಆ.9ರಂದು ಮಧ್ಯಾಹ್ನ...

ವಕೀಲ ವಿ.ಕೆ.ರಘು ಸಾಧನೆ ಯೋಗ ಮಾಡುವವರಿಗೆ ಪ್ರೇರಣೆ

ಚಿಕ್ಕಮಗಳೂರು: ಯೊಗ ನಮ್ಮ ಪ್ರಾಚೀನ ಋಷಿಮುನಿಗಳು ಜಗತ್ತಿಗೆ ಕೊಟ್ಟಂತಹ ಕೊಡುಗೆ. ವಕೀಲ ವಿ.ಕೆ.ರಘು ಅವರ ಯೋಗದ ಸಾಧನೆ ಯೋಗ ಮಾಡುವವರಿಗೆ ಒಂದು ಪ್ರೇರಣೆ ಕೊಡುತ್ತದೆ ಎಂದು ವಿಧಾನ ಪರಿಷತ್ ಸದಸ್ಯ ಡಾ.ಸಿ.ಟಿ.ರವಿ...

Related Articles

ಕೇಬಲ್ ಕಳ್ಳರೆಂದು ಶಂಕಿಸಿ ಮೂವರ ಮೇಲೆ ಹಲ್ಲೆ

ಕಡೂರು: ಪಂಪ್‌ಸೆಟ್‌ ಮೋಟಾರ್‌ ಕೇಬಲ್‌ ಕಳ್ಳರೆಂದು ಅನುಮಾನಿಸಿ ಮೂವರು ಯುವಕರ ಮೇಲೆ ಗುಂಪೊಂದು ಗಂಭೀರವಾಗಿ ಹಲ್ಲೆ...

₹5 ಲಕ್ಷ ಮೌಲ್ಯದ ಶ್ರೀಗಂಧದ ಮರಗಳ ಕಳವು

ತರೀಕೆರೆ: ಕೃಷಿ ತೋಟಕ್ಕೆ ನುಗ್ಗಿದ ಕಳ್ಳರು ಸುಮಾರು 15 ಶ್ರೀಗಂಧದ ಮರಗಳನ್ನು ಕಡಿದು ಕಳವು ಮಾಡಿಕೊಂಡು...

ಸ್ಕೂಟರ್‌ ಅಪಘಾತ: ಚಿಕಿತ್ಸೆ ಫಲಿಸದೆ ಸಾವು

ಕಡೂರು: ರಸ್ತೆಯಲ್ಲಿ ಅಡ್ಡಬಂದ ನಾಯಿಗೆ ಡಿಕ್ಕಿ ಹೊಡೆಯುವುದನ್ನು ತಪ್ಪಿಸಲು ಹೋಗಿ ಸ್ಕೂಟರ್‌ ನಿಯಂತ್ರಣ ತಪ್ಪಿ ಬಿದ್ದು...

ಧ್ವಜಾರೋಹಣದ ಕೆಲವೇ ಗಂಟೆಗಳಲ್ಲಿ ಕೆಳಗಿಳಿಸಿದ ರಾಷ್ಟ್ರಧ್ವಜ …?

ಚಿಕ್ಕಮಗಳೂರು: ಸ್ವಾತಂತ್ರ್ಯ ದಿನಾಚರಣೆಯಂದೇ ಚಿಕ್ಕಮಗಳೂರಿನಲ್ಲಿ ರಾಷ್ಟ್ರಧ್ವಜಕ್ಕೆ ಸಂಬಂಧಿಸಿದಂತೆ ವಿವಾದವೊಂದು ಭುಗಿಲೆದ್ದಿದ್ದು, ಕರ್ನಾಟಕ ರಾಜ್ಯ ರೈತ ಸಂಘದ...