ಚಿಕ್ಕಮಗಳೂರು: ಸುಮಾರು ೫ ವರ್ಷಗಳಿಂದ ಸಂಘಟನೆಯನ್ನು ಸಮರ್ಥವಾಗಿ ನೆಡೆಸಿಕೊಂಡು ಬಂದಿರುವ ಗಿರೀಶ್ ರವರನ್ನು ರಾಜ್ಯಾಧ್ಯಕ್ಷರ ಆದೇಶದಂತೆ ಭೀಮ್ ಆರ್ಮಿ ಜಿಲ್ಲಾ ಅಧ್ಯಕ್ಷರಾಗಿ ಮುಂದುವರೆಯಲಿದ್ದಾರೆ ಎಂದು ಕಾರ್ಯದರ್ಶಿ ಮಂಜುನಾಥ್ ತಿಳಿಸಿದರು.
ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ನಿಯಮದಂತೆ ಅಧ್ಯಕ್ಷರ ಬದಲಾವಣೆ ಪ್ರಕ್ರಿಯೆಯಲ್ಲಿ ೬ ಸದಸ್ಯರ ತಾತ್ಕಾಲಿಕ ಸಮಿತಿಯನ್ನು ರಚನೆ ಮಾಡಿ ಹೊಸ ಜಿಲ್ಲಾಧ್ಯಕ್ಷರ ನೇಮಕಾತಿ ಸೂಚಿಸಲಾಗಿತ್ತು ಆದರೆ ರಾಜ್ಯಾಧ್ಯಕ್ಷರ ಅನುಪಸ್ಥಿತಿಯಲ್ಲಿ ಚುನಾವಣೆ ಪೂರ್ವ ಮಾಹಿತಿಯನ್ನು ಎಲ್ಲಾ ಸದಸ್ಯರ ತಿಳಿಸದೆ ಕೆಲವೇ ಸದಸ್ಯರ ಗಮನಕ್ಕೆ ತಂದು ಕೇವಲ ೨೪ ಗಂಟೆಯಲ್ಲಿ ಚುನಾವಣೆ ಪ್ರಕ್ರಿಯೆ ಮಾಡಿ ಮುಗಿಸಲಾಗಿತ್ತು ಎಂದರು.
ಇದರಿಂದ ಸದಸ್ಯರು ಮತ್ತು ಕಾರ್ಯಕರ್ತರು ಮರು ಚುನಾವಣೆ ಮಾಡುವಂತೆ ರಾಜ್ಯಾಧ್ಯಕ್ಷರಿಗೆ ಅರ್ಜಿ ನೀಡಿರುತ್ತಾರೆ. ಅರ್ಜಿಯನ್ನು ಪರಿಶೀಲಿಸಿದ ಅವರು ಅಧ್ಯಕ್ಷ, ಉಪಾಧ್ಯಕ್ಷರ ನೇಮಕ ಅಸಿಂಧು ಎಂದು ಪರಿಗಣಿಸಿ. ಮರು ಚುನಾವಣೆ ನಡೆಯುವವರೆಗೂ ಗಿರೀಶ್ ರವರನ್ನು ಜಿಲ್ಲಾಧ್ಯರಾಗಿ ಮುಂದುವರೆಯುವಂತೆ ತಿಳಿಸಲಾಗಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಭೀಮ್ ಆರ್ಮಿ, ತಾಲ್ಲೂಕು ಅಧ್ಯಕ್ಷ ರಾಕೇಶ್, ಪದಾಧಿಕಾರಿಗಳಾದ ಸುರೇಶ್, ಹರೀಶ್, ನಿಶ್ಚಲ್ ಇತರರು ಉಪಸ್ಥಿತರಿದ್ದರು.
Girish appointed as Bhim Army district president
Leave a comment