ಚಿಕ್ಕಮಗಳೂರು: ನಗರದ ಕುವೆಂಪು ಕಲಾಮಂದಿರಲ್ಲಿ ಜ. ೧೮ರ ಭಾನುವಾರ ಸಂಜೆ ೫.೩೦ಕ್ಕೆ ವಾರ್ಷಿಕ ಕಲಾ ಉತ್ಸವವನ್ನು ಏರ್ಪಡಿಸಲಾಗಿದೆ ಎಂದು ಶ್ರೀ ರಂಗರಾಮ್ ಆರ್ಟ್ಸ್ ಫೌಂಡೇಶನ್ ಸಂಸ್ಥಾಪಕಿ ಡಾ. ಎಂ.ಎಸ್ ವಿದ್ಯಾಲಕ್ಷ್ಮೀ ತಿಳಿಸಿದರು.
ಅವರು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ಕಲೆಗೆ ಪ್ರೋತ್ಸಾಹ ನೀಡುವ ಉದ್ದೇಶದಿಂದ ೨೦೧೩ ರಲ್ಲಿ ಶ್ರೀ ರಂಗರಾಮ್ ಆರ್ಟ್ಸ್ ಫೌಂಡೇಶನ್ ಪ್ರಾರಂಭಿಸಲಾಯಿತು. ವಾರದಲ್ಲಿ ೨ ದಿನ ಬಸವ ಮಂದಿರದಲ್ಲಿ ತರಗತಿಯನ್ನು ನೆಡೆಸಲಾಗುತ್ತಿದೆ ಎಂದರು.
ವಾರ್ಷಿಕ ಕಲಾ ಉತ್ಸವವನ್ನು ಹೆಚ್.ಆರ್ ಸುರೇಶ್ ಅಧ್ಯಕ್ಷತೆಯಲ್ಲಿ ಡಿ.ಹೆಚ್ ನಟರಾಜ್ ಉದ್ಘಾಟಿಸಲಿದ್ದಾರೆ. ಕಾರ್ಯಕ್ರಮದ ಅಂಗವಾಗಿ ಕಿರಣ್ ಎಚ್.ಎಸ್ ತಂಡದವರಿಂದ ಸುಗಮ ಸಂಗೀತ, ಎಂ.ಎಸ್ ವಿದ್ಯಾಲಕ್ಷ್ಮೀ ಮತ್ತು ಶಿಷ್ಯವೃಂದದವರಿಂದ ಸಮೂಹ ನೃತ್ಯ ಪ್ರರ್ಶನ ಹಾಗೂ ಬೆಂಗಳೂರಿನ ಪ್ರಸಿದ್ಧ ನೂಪುರ್ ಪರ್ಫಾರ್ಮಿಂಗ್ ಆರ್ಟ್ ಸೆಂಟರ್ನ ಚೇತನ ಹರಿ ಮತ್ತು ಶಿಷ್ಯರಿಂದ ಕಥಕ್ ಸಂಭ್ರಮವನ್ನು ನೆಡೆಸಲಾಗುತ್ತಿದೆ,
ಮಕ್ಕಳಿಗೆ ಉಪಯುಕ್ತವಾದ ಕಾರ್ಯಕ್ರಮ ಇದಾಗಿದ್ದು. ಕುಟುಂಬ ಸಮೇತ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿಕೊಡಬೇಕೆಂದು ಈ ಮೂಲಕ ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಸಾಹಿತಿ ಡಾ. ಬೆಳವಾಡಿ ಮಂಜುನಾಥ್, ಸಂಸ್ಥೆಯ ಕಾರ್ಯದರ್ಶಿ ಎಚ್.ಎಸ್ ಕಿರಣ್ ಉಪಸ್ಥಿತರಿದ್ದರು.
Rangaram Arts Foundation’s annual art festival on January 18th
Leave a comment