Home namma chikmagalur chikamagalur ಕೇಂದ್ರ ಶಿಕ್ಷಣ ಸಚಿವರ ವಜಾಕ್ಕೆ ಆಗ್ರಹಿಸಿ ಸಿಪಿಐ(ಎಂ.ಎಲ್)ರೆಡ್‌ಸ್ಟಾರ್ ಪ್ರತಿಭಟನೆ
chikamagalurHomeLatest Newsnamma chikmagalur

ಕೇಂದ್ರ ಶಿಕ್ಷಣ ಸಚಿವರ ವಜಾಕ್ಕೆ ಆಗ್ರಹಿಸಿ ಸಿಪಿಐ(ಎಂ.ಎಲ್)ರೆಡ್‌ಸ್ಟಾರ್ ಪ್ರತಿಭಟನೆ

Share
Share

ಚಿಕ್ಕಮಗಳೂರು: ದೆಹಲಿಯ ಜಂತರ್ ಮಂತರ್‌ನಲ್ಲಿ ಶಾಂತಿಯುತವಾಗಿ ಪ್ರತಿಭಟನೆ ನಡೆಸುತ್ತಿದ್ದವರ ಮೇಲೆ ನಡೆದ ಪ್ರಹಾರವನ್ನು ಖಂಡಿಸಿರುವ ಸಿಪಿಐ(ಎಂ.ಎಲ್)ರೆಡ್‌ಸ್ಟಾರ್ ಪಕ್ಷವು, ನೀಟ್ ಪ್ರಶ್ನೆಪತ್ರಿಕೆ ಸೋರಿಕೆಯಾಗಿದ್ದು, ಕೇಂದ್ರದ ಶಿಕ್ಷಣ ಸಚಿವರನ್ನು ಸಚಿವ ಸಂಪುಟದಿಂದ ವಜಾಗೊಳಿಸಬೇಕೆಂದು ಒತ್ತಾಯಿಸಿ ಪಕ್ಷದ ಮುಖಂಡರು ನಗರದಲ್ಲಿ ಶನಿವಾರ ಪ್ರತಿಭಟನೆ ನಡೆಸಿದರು.

ನಗರದ ಆಜಾದ್ ವೃತ್ತದಲ್ಲಿ ಶುಕ್ರವಾರ ಪ್ರತಿಭಟನಾ ಧರಣಿ ನಡೆಸಿದ ಪಕ್ಷದ ಮುಖಂಡರು ನೀಟ್ ಪ್ರಶ್ನೆ ಸೋರಿಕೆ ಹಿನ್ನಲೆಯಲ್ಲಿ ನೈತಿಕ ಹೊಣೆಹೊತ್ತು ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರಪ್ರಧಾನ್ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಬೇಕೆಂದು ಒತ್ತಾಯಿಸಿದರು.

ಪ್ರತಿಭಟನಾ ನಿರತರನ್ನುದ್ದೇಶಿಸಿ ಮಾತನಾಡಿದ ಪಕ್ಷದ ರಾಜ್ಯ ಸಮಿತಿ ಸದಸ್ಯ ಬಿ.ರುದ್ರಯ್ಯ,ಕಳೆದ ೨೦೧೬ರಲ್ಲಿ ಕಿನ್ಯಾದ ರಾಜಧಾನಿ ನರೋಬಿಯಲ್ಲಿ ನಡೆದ ವಿಶ್ವವ್ಯಾಪಾರ ಸಂಘಟನೆ ವಿಶ್ವ ಸಮ್ಮೇಳನದಲ್ಲಿ ಉನ್ನತ ಶಿಕ್ಷಣದ ಶೇ.೫೦ ಸೀಟುಗಳನ್ನು ಖಾಸಗಿಯವರಿಗೆ ನೀಡಬೇಕೆಂಬ ಸಲಹೆಗೆ ಮೊದಲು ಸಹಿಹಾಕಿದವರು ಭಾರತದ ಪ್ರಧಾನಿ ನರೇಂದ್ರ ಮೋದಿಯವರು ಹಾಗಾಗಿ ಉನ್ನತ ಶಿಕ್ಷಣದ ಪ್ರವೇಶಕ್ಕೆ ನಡೆಯುವ ಪರೀಕ್ಷೆಯ ಪ್ರಶ್ನೆ ಪತ್ರಿಕೆಗಳು ಸೋರಿಕೆಯಾಗಲು ಕಾರಣವಾಗುತ್ತಿವೆ ಎಂದು ಆರೋಪಿಸಿದರು.

ಕೇಂದ್ರ ಸರ್ಕಾರ ಮಾತುಕತೆಯ ಮೂಲಕ ಸಮಸ್ಯೆ ಬಗೆಹರಿಸಬೇಕು. ತಪ್ಪಿದ್ದಲ್ಲಿ ದೇಶಾದ್ಯಂತ ಎಲ್ಲಾ ಜನಪರ ಶಕ್ತಿಗಳೊಂದಿಗೆ ಉಗ್ರಹೋರಾಟ ರೂಪಿಸಲು ಮುಂದಾಗಬೇಕಾಗುತ್ತದೆ ಎಂದು ಸಿಪಿಐ(ಎಂ.ಎಲ್)ರೆಡ್‌ಸ್ಟಾರ್ ಪಕ್ಷ ಎಚ್ಚರಿಸಿದೆ.

ಪ್ರತಿಭಟನಾಕಾರರದ್ದೇಶಿಸಿ ಉಮೇಶ್ ಮಾತನಾಡಿದರು. ಪಕ್ಷ ಜಿಲ್ಲಾ ಕಾರ್ಯದರ್ಶಿ ಬಿ.ಆರ್.ಸಂದೀಪ, ಮುಖಂಡರುಗಳಾದ ಕೃಷ್ಣಪ್ಪ, ಬಸವರಾಜು, ನಾಗೇಶ್, ಶಂಕರ್, ಭಾಗ್ಯ, ಸುಧಾ, ಸುರೇಶ್, ಪುಟ್ಟಸ್ವಾಮಿ, ಹರೀಶ್ ಇದ್ದರು.

CPI(ML) Red Star protests demanding the dismissal of the Union Education Minister

 

Share

Leave a comment

Leave a Reply

Your email address will not be published. Required fields are marked *

Don't Miss

ಗ್ರೌಂಡ್ ಸರ್ವೇ ಅಗತ್ಯ-’ಕಾರ್ಬನ್ ಕ್ರೆಡಿಟ್ ನಿಗಮ’ ಸ್ಥಾಪನೆಗೆ ಪ್ರಸ್ತಾಪ

ಚಿಕ್ಕಮಗಳೂರು:  ಕೇಂದ್ರ ಸರ್ಕಾರ ಪಶ್ಚಿಮ ಘಟ್ಟಗಳ ಪರಿಸರ ಸೂಕ್ಷ್ಮ ವಲಯಕ್ಕೆ  ಸಂಬಂಧಿಸಿದಂತೆ ಉಪಗ್ರಹ ಆಧಾರಿತ ಚಿತ್ರಣವನ್ನು ಮಾತ್ರ ನೆಚ್ಚಿಕೊಂಡು ಅಧಿಸೂಚನೆ ಹೊರಡಿಸುತ್ತಿರುವುದು ಮಲೆನಾಡಿನ ರೈತರು ಹಾಗೂ ಸ್ಥಳೀಯ ಜನರಲ್ಲಿ ತೀವ್ರ ಆತಂಕ...

ಮಾಂಸ ಮಾರಾಟ- ಮೂವರ ಬಂಧನ

ಎನ್.ಆ‌ರ್. ಪುರ: ಕಾಡಿನಲ್ಲಿ ಮೇಯುತ್ತಿದ್ದ ಜಾನುವಾರನ್ನು ಹಿಡಿದು ತಂದು ಎಸ್ಟೇಟ್‌ ನ ಕೂಲಿಲೈನ್ ಬಳಿ ಬರ್ಬರವಾಗಿ ಕಡಿದು ಮಾಂಸ ಮಾರಾಟ ಮಾಡಲು ಯತ್ನಿಸುತ್ತಿದ್ದ ಅಡ್ಡೆ ಮೇಲೆ ಪೊಲೀಸರು ದಾಳಿ ನಡೆಸಿ ಮೂವರನ್ನು...

Related Articles

ಸಹಕಾರಿ ರಂಗದಲ್ಲಿ ನಿಷ್ಟೆ, ಪ್ರಾಮಾಣಿಕತೆ ಮಹತ್ವ ನೀಡಿ

ಚಿಕ್ಕಮಗಳೂರು:  ಸಹಕಾರಿ ರಂಗದಲ್ಲಿ ನಿಷ್ಟೆ, ಪ್ರಾಮಾಣಿಕತೆಗೆ ಹೆಚ್ಚಿನ ಮಹತ್ವ ನೀಡಬೇಕು. ಒಳ ವ್ಯವಹಾರದಲ್ಲಿ ತೊಡಗಿಸಿಕೊಂಡರೆ ಎಂದಿಗೂ...

ಬರಗಾಲ ಪರಿಹಾರಕ್ಕೆ ಆಗ್ರಹಿಸಿ ಸೆ.28ರಂದು ರೈತ ಸಂಘದ ಪ್ರತಿಭಟನಾ ಮೆರವಣಿಗೆ

ಚಿಕ್ಕಮಗಳೂರು: ಭೀಕರ ಬರಗಾಲದಿಂದ ರೈತರು ಸಂಕಷ್ಟಕ್ಕೆ ಸಿಲುಕಿದ್ದರೂ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಸಮರ್ಪಕವಾಗಿ ಸ್ಪಂದಿಸುತ್ತಿಲ್ಲ...

ಚಿಕ್ಕಮಗಳೂರು ತಾಲೂಕು ಬರಪೀಡಿತ ತಾಲೂಕುಗಳ ಪಟ್ಟಿಗೆ ಸೇರ್ಪಡೆಗೆ ಆಗ್ರಹ

ಚಿಕ್ಕಮಗಳೂರು: ಈ ಬಾರಿಯ ಮುಂಗಾರು ಅವಧಿಯಲ್ಲಿ ಚಿಕ್ಕಮಗಳೂರು ತಾಲೂಕಿನಲ್ಲಿ ತೀವ್ರ ಮಳೆ ಕೊರತೆಯಾಗಿದ್ದು, ಕೃಷಿ, ತೋಟಗಾರಿಕೆ,...

ಕಡೂರು ಬಸ್ ನಿಲ್ದಾಣದಲ್ಲಿ 50 ಗ್ರಾಂ ತೂಕದ ಚಿನ್ನದ ಸರ ಕಳ್ಳತನ

ಕಡೂರು: ಜನದಟ್ಟಣೆಯನ್ನೇ ಬಂಡವಾಳ ಮಾಡಿಕೊಂಡ ಕಳ್ಳರ ಗ್ಯಾಂಗ್ ಒಂದು, ಬಸ್ ಹತ್ತುವ ವೇಳೆ ಮಹಿಳೆಯ ಗಮನ...