Home Latest News ಚಿಕ್ಕಮಗಳೂರು ಪೊಲೀಸರು ಸೂಪರ್ ಹೀರೋಗಳು : ವೇದ ಕೃಷ್ಣಮೂರ್ತಿ
Latest News

ಚಿಕ್ಕಮಗಳೂರು ಪೊಲೀಸರು ಸೂಪರ್ ಹೀರೋಗಳು : ವೇದ ಕೃಷ್ಣಮೂರ್ತಿ

Share
Share

ಚಿಕ್ಕಮಗಳೂರು : ದೇಶದಲ್ಲಿ ನಾಲ್ಕು ವಿಧವಾದ ಹೀರೋಗಳಿದ್ದಾರೆ ಅದರಲ್ಲಿ ಚಿಕ್ಕಮಗಳೂರು ಜಿಲ್ಲೆಯ ಪೊಲೀಸರು ನನ್ನ ಪಾಲಿಗೆ ಸೂಪರ್ ಹೀರೋಗಳು ಎಂದು ಅಂತರಾಷ್ಟ್ರೀಯ ಮಹಿಳಾ ಕ್ರಿಕೆಟ್ ಪಟು ವೇದ ಕೃಷ್ಣಮೂರ್ತಿ ಹೇಳಿದರು.

ನಗರದ ಡಿಎಆರ್ ಮೈದಾನದಲ್ಲಿ ಎರಡು ದಿನಗಳ ವಾರ್ಷಿಕ ಪೊಲೀಸ್ ಕ್ರೀಡಾಕೂಟವನ್ನು ಉದ್ಘಾಟಿಸಿ ಅವರು ಮಾತನಾಡಿದರು. ದೇಶದಲ್ಲಿ ಸ್ವಾತಂತ್ರ್ಯಕ್ಕಾಗಿ ಹೋರಾಡಿದವರು, ಪ್ರಸ್ತುತ ದೇಶವನ್ನು ಕಾಪಾಡುತ್ತಿರುವ ಸೈನಿಕರು, ದೇಶದ ಕ್ರೀಡಾಪಟುಗಳು ಹಾಗೂ ಪೊಲೀಸರು ಇವರುಗಳು ದೇಶದ ಹೀರೋಗಳು ಎಂದು ವೇದ ಕೃಷ್ಣಮೂರ್ತಿ ನುಡಿದರು.

ನಾನು ಕ್ರಿಕೆಟ್ ಆಡಲು ಪ್ರಪಂಚದ ಬೇರೆ ಬೇರೆ ಶ್ರೀಮಂತ ದೇಶಗಳಿಗೆ ಹೋಗಿ ನೋಡಿದ್ದೇನೆ, ಆದರೆ ಚಿಕ್ಕಮಗಳೂರು ಜಿಲ್ಲೆಯಂತಹ ಪ್ರದೇಶ ಪ್ರಪಂಚದಲ್ಲೇ ಎಲ್ಲೂ ನೋಡಿಲ್ಲ ‌ಎಂದು ವೇದ ಜಿಲ್ಲೆಯನ್ನು ಬಣ್ಣಿಸಿದ್ದಾರೆ. ಸಮೀಕ್ಷೆಯೊಂದರ ಪ್ರಕಾರ ಅತ್ಯಂತ ಸುರಕ್ಷಿತ ಜಿಲ್ಲೆ ನಮ್ಮದು, ಇಲ್ಲಿನ ಜನರು ಪ್ರೀತಿ, ಪ್ರೇಮ, ವಾತ್ಸಲ್ಯ ಮನೋಭಾವನೆ ಹೊಂದಿರುವ ಜನರು ಮತ್ತೆಲ್ಲೂ ಸಿಗುವುದಿಲ್ಲ ಎಂದು ವೇದ ಕೃಷ್ಣಮೂರ್ತಿ ವ್ಯಾಖ್ಯಾನಿಸಿದ್ದಾರೆ.

ಕಾರ್ಯಕ್ರಮದಲ್ಲಿ ಚಿಕ್ಕಮಗಳೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿಕ್ರಂ ಅಮಟೆ, ಜಿಲ್ಲಾ ಪಂಚಾಯಿತಿ ಸಿಇಓ ಎಚ್ಎಸ್ ಕೀರ್ತನ, ಸೇರಿದಂತೆ ಹಲವು ಗಣ್ಯರು ಬಲೂನ್ ಹಾಗೂ ಪಾರಿವಾಳಗಳನ್ನು ಹಾರಿಬಿಡುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಜಿಲ್ಲೆಯ ಹಲವೆಡೆ ಗಳಿಂದ ಆಗಮಿಸಿದ್ದ ಪೊಲೀಸ್ ಕ್ರೀಡಾಪಟುಗಳು ಆಕರ್ಷಕ ಪತಸಂಚಲನ ನಡೆಸಿದರು. ಐದು ಬಾರಿಯ ಆ ಚಾಂಪಿಯನ್ ಗಿರೀಶ್ ಕ್ರೀಡಾ ಜ್ಯೋತಿಯನ್ನು ವೇದ ಕೃಷ್ಣ ಮೂರ್ತಿಗೆ ಹಸ್ತಾಂತರಿಸಿದರು. ಇಂದು ಮತ್ತು ನಾಳೆಯೂ ವಿವಿಧ ಕ್ರೀಡೆಗಳು ಡಿಎಆರ್ ಮೈದಾನದಲ್ಲಿ ನಡೆಯಲಿವೆ

Share

Leave a comment

Leave a Reply

Your email address will not be published. Required fields are marked *

Don't Miss

ದನದ ಮಾಂಸ ಮಾರಾಟದಲ್ಲಿ 40 ಕೆ.ಜಿ ಮಾಂಸ, ಕತ್ತಿ–ಚಾಕುಗಳು ಜಪ್ತಿ

ಚಿಕ್ಕಮಗಳೂರು: ನಗರದ ಅಯ್ಯಪ್ಪನಗರದ ಸಮೀಪದ ಶೆಡ್‌ನಲ್ಲಿ ಯಾವುದೇ ಪರವಾನಗಿ ಇಲ್ಲದೆ ದನದ ಮಾಂಸ ಮಾರಾಟ ಮಾಡುತ್ತಿದ್ದ ಆರೋಪದ ಮೇಲೆ ನಗರ ಠಾಣೆ ಪೊಲೀಸರು ವ್ಯಕ್ತಿಯೊಬ್ಬನ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಆ.9ರಂದು ಮಧ್ಯಾಹ್ನ...

ವಕೀಲ ವಿ.ಕೆ.ರಘು ಸಾಧನೆ ಯೋಗ ಮಾಡುವವರಿಗೆ ಪ್ರೇರಣೆ

ಚಿಕ್ಕಮಗಳೂರು: ಯೊಗ ನಮ್ಮ ಪ್ರಾಚೀನ ಋಷಿಮುನಿಗಳು ಜಗತ್ತಿಗೆ ಕೊಟ್ಟಂತಹ ಕೊಡುಗೆ. ವಕೀಲ ವಿ.ಕೆ.ರಘು ಅವರ ಯೋಗದ ಸಾಧನೆ ಯೋಗ ಮಾಡುವವರಿಗೆ ಒಂದು ಪ್ರೇರಣೆ ಕೊಡುತ್ತದೆ ಎಂದು ವಿಧಾನ ಪರಿಷತ್ ಸದಸ್ಯ ಡಾ.ಸಿ.ಟಿ.ರವಿ...

Related Articles

ಕೇಬಲ್ ಕಳ್ಳರೆಂದು ಶಂಕಿಸಿ ಮೂವರ ಮೇಲೆ ಹಲ್ಲೆ

ಕಡೂರು: ಪಂಪ್‌ಸೆಟ್‌ ಮೋಟಾರ್‌ ಕೇಬಲ್‌ ಕಳ್ಳರೆಂದು ಅನುಮಾನಿಸಿ ಮೂವರು ಯುವಕರ ಮೇಲೆ ಗುಂಪೊಂದು ಗಂಭೀರವಾಗಿ ಹಲ್ಲೆ...

₹5 ಲಕ್ಷ ಮೌಲ್ಯದ ಶ್ರೀಗಂಧದ ಮರಗಳ ಕಳವು

ತರೀಕೆರೆ: ಕೃಷಿ ತೋಟಕ್ಕೆ ನುಗ್ಗಿದ ಕಳ್ಳರು ಸುಮಾರು 15 ಶ್ರೀಗಂಧದ ಮರಗಳನ್ನು ಕಡಿದು ಕಳವು ಮಾಡಿಕೊಂಡು...

ಸ್ಕೂಟರ್‌ ಅಪಘಾತ: ಚಿಕಿತ್ಸೆ ಫಲಿಸದೆ ಸಾವು

ಕಡೂರು: ರಸ್ತೆಯಲ್ಲಿ ಅಡ್ಡಬಂದ ನಾಯಿಗೆ ಡಿಕ್ಕಿ ಹೊಡೆಯುವುದನ್ನು ತಪ್ಪಿಸಲು ಹೋಗಿ ಸ್ಕೂಟರ್‌ ನಿಯಂತ್ರಣ ತಪ್ಪಿ ಬಿದ್ದು...

ಧ್ವಜಾರೋಹಣದ ಕೆಲವೇ ಗಂಟೆಗಳಲ್ಲಿ ಕೆಳಗಿಳಿಸಿದ ರಾಷ್ಟ್ರಧ್ವಜ …?

ಚಿಕ್ಕಮಗಳೂರು: ಸ್ವಾತಂತ್ರ್ಯ ದಿನಾಚರಣೆಯಂದೇ ಚಿಕ್ಕಮಗಳೂರಿನಲ್ಲಿ ರಾಷ್ಟ್ರಧ್ವಜಕ್ಕೆ ಸಂಬಂಧಿಸಿದಂತೆ ವಿವಾದವೊಂದು ಭುಗಿಲೆದ್ದಿದ್ದು, ಕರ್ನಾಟಕ ರಾಜ್ಯ ರೈತ ಸಂಘದ...