Home namma chikmagalur chikamagalur 200 ರೂ.ಸಾಲ ನೀಡಿಲ್ಲ ಎಂದು ಸುತ್ತಿಗೆಯಿಂದ ತಲೆ ಜಜ್ಜಿ ಕೊಲೆಗೆ ಯತ್ನ
chikamagalurCrime NewsHomeLatest Newsnamma chikmagalur

200 ರೂ.ಸಾಲ ನೀಡಿಲ್ಲ ಎಂದು ಸುತ್ತಿಗೆಯಿಂದ ತಲೆ ಜಜ್ಜಿ ಕೊಲೆಗೆ ಯತ್ನ

Share
Share

ತರೀಕೆರೆ: ಕೇವಲ ಇನ್ನೂರು ರೂಪಾಯಿ ಹಣ ನೀಡಲಿಲ್ಲ ಎಂಬ ಕ್ಷುಲ್ಲಕ ಕಾರಣಕ್ಕೆ ವ್ಯಕ್ತಿಯೊಬ್ಬನ ತಲೆಯ ಹಿಂಭಾಗಕ್ಕೆ ಸುತ್ತಿಗೆಯಿಂದ ಜಜ್ಜಿ ಕೊಲೆಗೆ ಯತ್ನಿಸಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ ತಾಲೂಕಿನ ಜೋಡಿ ಗೋವಿಂದಪ್ಪ ಗ್ರಾಮದ ಅಡಿಕೆ ತೋಟದಲ್ಲಿ ಸಂಭವಿಸಿದೆ.

ವಾಸಪ್ಪ ಕಾಲೋನಿಯ ನಿವಾಸಿ ಮಂಜುನಾಥ್ ಟಿ.ಎಚ್. ಎಂಬುವವರೇ ಹಲ್ಲೆಯಿಂದ ರಕ್ತದ ಮಡುವಿನಲ್ಲಿ ಬಿದ್ದ ದುರ್ದೈವಿ. ಇವರು ಎಂದಿನಂತೆ ತಮ್ಮ ತೋಟದಲ್ಲಿ ಡ್ರಿಪ್ ಪೈಪ್‌ಲೈನ್ ಪರಿಶೀಲಿಸುತ್ತಿದ್ದಾಗ, ಅಲ್ಲಿಗೆ ಬಂದ ಅದೇ ಕಾಲೋನಿಯ ಗಣೇಶ ಎಂಬಾತ ₹200 ಸಾಲ ಕೇಳಿದ್ದಾನೆ.

ಮಂಜುನಾಥ್ ಹಣವಿಲ್ಲ ಎಂದಿದ್ದಕ್ಕೆ ಉದ್ರಿಕ್ತನಾದ ಗಣೇಶ ಸುತ್ತಿಗೆಯಿಂದ ಮಂಜುನಾಥ್ ಅವರ ತಲೆಗೆ ಬಲವಾಗಿ ಹೊಡೆದಿದ್ದಾನೆ. ತಲೆಯಿಂದ ರಕ್ತದ ಚಿಮ್ಮಿ ಕಿರುಚಾಡುತ್ತಿದ್ದ ಮಂಜುನಾಥ್ ಅವರನ್ನು ಪಕ್ಕದ ತೋಟದವರು ತಕ್ಷಣವೇ ರಕ್ಷಿಸಿ ಆಸ್ಪತ್ರೆಗೆ ದಾಖಲಿಸಿದ್ದು, ತರಿಕೆರೆ ಪೊಲೀಸ್ ಠಾಣೆಯಲ್ಲಿ ಕೊಲೆ ಯತ್ನದ ಅಡಿಯಲ್ಲಿ ಪ್ರಕರಣ ದಾಖಲಾಗಿದೆ.

Attempted murder after smashing head with hammer for not repaying Rs. 200 loan

Share

Leave a comment

Leave a Reply

Your email address will not be published. Required fields are marked *

Don't Miss

ಗೂಡ್ಸ್‌ ವಾಹನ ಡಿಕ್ಕಿಗೆ ಯುವಕ ಸಾವು

ಕಡೂರು: ಸಖರಾಯಪಟ್ಟಣ ಸಮೀಪದ ಹಿರೇಗೌಜ ಗೇಟ್ ಬಳಿ ನಡೆದ ರಸ್ತೆ ಅಪ ಘಾತದಲ್ಲಿ ಗೂಡ್ಸ್ ವಾಹನ ಡಿಕ್ಕಿಯಾಗಿ ಗಾಯಗೊಂಡಿದ್ದ ಯುವಕ ಮೃತಪಟ್ಟಿದ್ದಾರೆ. ಹಾಸನ ಮೂಲದ ಯಶವಂತ್ (26) ಮೃತಪಟ್ಟವರು. ಇವರು ಬೆಂಗಳೂರಿನಲ್ಲಿ...

ಮಳಲೂರು ಏತ ನೀರಾವರಿ ಯೋಜನೆಗೆ ಮರುಜೀವ

ಚಿಕ್ಕಮಗಳೂರು: ಕಾಫಿನಾಡಿನ ರೈತರ ಬಹುದಿನಗಳ ಕನಸಾಗಿದ್ದ ಮಳಲೂರು ಏತ ನೀರಾವರಿ ಯೋಜನೆಗೆ ಕೊನೆಗೂ ಮರುಜೀವ ಬಂದಿದ್ದು, ರಾಜ್ಯ ಸರ್ಕಾರದಿಂದ 11 ಕೋಟಿ ರೂಪಾಯಿ ಅನುದಾನ ಬಿಡುಗಡೆಯಾಗಿದೆ. ಈ ಮಹತ್ವದ ಬೆಳವಣಿಗೆಯ ಕುರಿತು...

Related Articles

ಜೆಸಿಬಿ ಚಾಲಕನಿಂದ ಮಹಿಳೆ ಮೇಲೆ ಹಲ್ಲೆ

ತರೀಕೆರೆ: ನಂದಿಬಟ್ಟಲು ಗ್ರಾಮದ ಕೆರೆಯನ್ನು ಮೂರು ವರ್ಷಗಳ ಅವಧಿಗೆ ಗುತ್ತಿಗೆಗೆ ಪಡೆದು ಲಕ್ಷಾಂತರ ರೂಪಾಯಿ ವೆಚ್ಚದಲ್ಲಿ...

ಮೊಬೈಲ್ ಕದ್ದು ಬ್ಯಾಂಕ್ ಖಾತೆ ಖಾಲಿ ಮಾಡಿದ ಖದೀಮರು

ಚಿಕ್ಕಮಗಳೂರು: ಕಡೂರು ಬಸ್ ನಿಲ್ದಾಣದಲ್ಲಿ ಮೆಸ್ಕಾಂ ನೌಕರರೋರ್ವ ಮೊಬೈಲ್ ಕಳ್ಳತನ ಮಾಡಿದ ಖದೀಮರು ಆ ಮೊಬೈಲ್...

ಗಾಂಜಾ ಪೆಡ್ಲರ್ ಹೆಡೆಮುರಿ ಕಟ್ಟಿದ ನಗರ ಪೊಲೀಸರು

ಚಿಕ್ಕಮಗಳೂರು: ವಿದ್ಯಾರ್ಥಿಗಳನ್ನು ಹಾಗೂ ಸಾರ್ವಜನಿಕರನ್ನು ಗುರಿಯಾಗಿಸಿಕೊಂಡು ಮಾದಕ ದ್ರವ್ಯ ಮಾರಾಟ ಮಾಡುತ್ತಿದ್ದ ಗಾಂಜಾ ಪೆಡ್ಲರ್ ನನ್ನು...

ಕೋಟ್ಯಂತರ ರೂಪಾಯಿ ಮೌಲ್ಯದ ಬ್ಯಾಂಕ್ ಆಸ್ತಿ ಪತ್ರಗಳೊಂದಿಗೆ ಮಹಿಳೆ ನಾಪತ್ತೆ

ಕಡೂರು: ಕೋರ್ಟ್ ವಿಚಾರಣೆಗಾಗಿ ಚಿಕ್ಕಮಗಳೂರಿಗೆ ಹೋಗಿ ಬರುವುದಾಗಿ ಹೇಳಿ ಹೋದ ಮಹಿಳೆಯೊಬ್ಬರು ಮನೆಯಲ್ಲಿದ್ದ ನೂರಾರು ಗ್ರಾಂ...