ಚಿಕ್ಕಮಗಳೂರು: ಸುಲಿಗೆ ಪ್ರಕರಣವೊಂದರಲ್ಲಿ ಆರೋಪಿಗಳನ್ನು ಬಂಧಿಸಿ ಕದ್ದ ಹಣವನ್ನು ಹಾಗೂ ಕೃತಕ್ಕೆ ಬಳಸಿದ ಆಟೋ ಮತ್ತು ಬಿಯರ್ ಬಾಟಲಿಯನ್ನು ವಶಪಡಿಸಿಕೊಳ್ಳುವ ಮೂಲಕ ಪೊಲೀಸರು ಸೂಕ್ತ ಕಾನೂನು ಕ್ರಮ ಜರುಗಿಸಿದ್ದಾರೆ.
ನಗರದ ಬಸವನಹಳ್ಳಿ ಠಾಣಾ ವ್ಯಾಪ್ತಿಯ ಮಲ್ಲಂದೂರು ರಸ್ತೆಯಲ್ಲಿ ಕಲ್ಯಾಣನಗರ ವಾಸಿ ಶಾಲಾ ಬಸ್ ಚಾಲಕ ರವಿಕುಮಾರ್ ಎಂಬುವರನ್ನು ೩ ಜನ ಅಪರಿಚಿತರು ಹೆದರಿಸಿ ಆಟೋದಲ್ಲಿ ಬಲವಂತವಾಗಿ ಕರೆದುಕೊಂಡು ಹೋಗಿ ಆತನಿಗೆ ಬಿಯರ್ ಬಾಟಲಿಯಿಂದ ತಲೆಗೆ ಹೊಡೆದಿದ್ದಾರೆ. ಪ್ರಜ್ಞೆ ತಪ್ಪಿ ಬಿದ್ದಾಗ ಅವರ ಜೇಬಿನಲ್ಲಿದ್ದ ೮೫೦೦ ರೂ ಹಣವನ್ನು ಕಿತ್ತುಕೊಂಡು ಪರಾರಿಯಾಗಿದ್ದಾರೆ.
ಹಲ್ಲೆಗೆ ಒಳಗಾದ ವ್ಯಕ್ತಿ ಬಸವನಹಳ್ಳಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಸದರಿ ಪ್ರಕರಣವನ್ನು ಶೀಘ್ರವಾಗಿ ಬೇಧಿಸಿ ಆರೋಪಿಗಳನ್ನು ಬಂಧಿಸಿ ಕದ್ದಮಾಲನ್ನು ವಶಕ್ಕೆ ಪಡೆಯುವ ನಿಟ್ಟಿನಲ್ಲಿ ಜಿಲ್ಲಾಪೊಲೀಸ್ ಮುಖ್ಯಾಧಿಕಾರಿ ಜಿತೇಂದ್ರ ಕುಮಾರ್ ದಯಾಮ ಹೆಚ್ಚುವರಿ ಪೊಲೀಸ್ ಮುಖ್ಯಾಧಿಕಾರಿ ಸಿ.ಟಿ. ಜಯಕುಮಾರ್ ಮಾರ್ಗದರ್ಶನದಲ್ಲಿ ಡಿವೈಎಸ್‌ಪಿ ಎ.ಆರ್.ನಾಗರಾಜು, ವೃತ್ತನಿರೀಕ್ಷಕ ವಿಜಯ್ ಕುಮಾರ್ ಬಿರಾದಾರ್ ನೇತೃತ್ವದಲ್ಲಿ ಬಸವನಹಳ್ಳಿ ಠಾಣಾಧಿಕಾರಿ ಕೀರ್ತಿಕುಮಾರ್ ಹಾಗೂ ಅಜರುದ್ದೀನ್ ಮತ್ತು ಸಿಬ್ಬಂದಿಗಳಾದ ರವೀಂದ್ರ, ರಾಜ್‌ಕುಮಾರ್, ಲಿಂಗಮೂರ್ತಿ, ಮಧುಸೂಧನ್, ಜಯರಾಮ ಹಾಗೂ ಚಾಲಕರಾದ ಚಂದ್ರಶೇಖರ್ ರವರನ್ನು ಒಳಗೊಂಡ ಒಂದು ವಿಶೇಷ ತಂಡವನ್ನು ರಚಿಸಲಾಯಿತು.
ಈ ತಂಡವು ವಿವಿಧ ಆಯಾಮಗಳಲ್ಲಿ ವೈಜ್ಞಾನಿಕವಾಗಿ ತನಿಖೆ ನಡೆಸಿ ಪ್ರಕರಣದ ಆರೋಪಿ ಮತ್ತು ಮಾಲು ಪತ್ತೆಯ ಬಗ್ಗೆ ಮಾಹಿತಿಯನ್ನು ಸಂಗ್ರಹಿಸಿ ಪ್ರಕರಣದಲ್ಲಿನ ಆರೋಪಿಗಳಾದ ತಮಿಳುಕಾಲೋನಿಯ ಆಟೋಚಾಲಕ ಶಬೀರ್ ಅಹಮದ್, ಅರವಿಂದ ನಗರದ ಹೇಮಂತ್ ಕುಮಾರ್, ಅರಸೀಕೆರೆ ಪಟ್ಟಣದ ಅಹಮದ್ ಖಾನ್ ಇವರುಗಳನ್ನು ವಶಕ್ಕೆ ಪಡೆದು ಕಿತ್ತುಕೊಂಡು ಹೋಗಿದ್ದ ಹಣ, ಕೃತ್ಯಕ್ಕೆ ಬಳಸಿದ ಆಟೋ ಹಾಗೂ ಹಲ್ಲೆ ಮಾಡಿದ ಬಿಯರ್ ಬಾಟಲಿಯನ್ನು ವಶಪಡಿಸಿಕೊಂಡು ಆರೋಪಿಗಳ ವಿರುದ್ಧ ಕಾನೂನು ಕ್ರಮ ಜರುಗಿಸಿರುತ್ತಾರೆ.
ಪ್ರಕರಣವನ್ನು ಭೇದಿಸಿ ಆರೋಪಿಗಳನ್ನು ಬಂಧಿಸಿ ಕದ್ದ ಹಣವನ್ನು ವಶಕ್ಕೆ ಪಡೆದು ಆರೋಪಿಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸುವಲ್ಲಿ ಶ್ರಮಿಸಿದ ಅಪರಾಧ ತನಿಖಾ ತಂಡದಲ್ಲಿದ್ದ ಅಧಿಕಾರಿ ಸಿಬ್ಬಂದಿಯವರ ಕರ್ತವ್ಯವನ್ನು ಪೊಲೀಸ್ ಮುಖ್ಯಾಧಿಕಾರಿ ದಯಾಮ ಶ್ಲಾಘಿಸಿ ಬಹುಮಾನ ಘೋಷಿಸಿದ್ದಾರೆ.
Accused in extortion case arrested – auto seized
Leave a comment