Home namma chikmagalur chikamagalur RTO ಚಲನ್ APK ಡೌನ್‌ಲೋಡ್ ಮಾಡಿದ್ದ ರೈತನ ಖಾತೆಗೆ ಸೈಬರ್ ಕನ್ನ
chikamagalurCrime NewsHomeLatest Newsnamma chikmagalur

RTO ಚಲನ್ APK ಡೌನ್‌ಲೋಡ್ ಮಾಡಿದ್ದ ರೈತನ ಖಾತೆಗೆ ಸೈಬರ್ ಕನ್ನ

Share
Share

ಚಿಕ್ಕಮಗಳೂರು: ಆರ್‌ಟಿಒ (RTO) ಚಲನ್ ಪಾವತಿಸುವ ನೆಪದಲ್ಲಿ ಮೊಬೈಲ್‌ಗೆ APK ಫೈಲ್ ಡೌನ್‌ಲೋಡ್ ಮಾಡಿಕೊಂಡ ಪರಿಣಾಮ ರೈತರೊಬ್ಬರ ಬ್ಯಾಂಕ್ ಖಾತೆಯಿಂದ ಹಂತ ಹಂತವಾಗಿ 6.08 ಲಕ್ಷ ರೂ. ಹಣ ವರ್ಗಾವಣೆಯಾಗಿರುವ ಸೈಬರ್ ವಂಚನೆ ಪ್ರಕರಣ ಅಜ್ಜಂಪುರ ತಾಲ್ಲೂಕಿನಲ್ಲಿ ಬೆಳಕಿಗೆ ಬಂದಿದೆ.

ಅಜ್ಜಂಪುರ ತಾಲ್ಲೂಕಿನ ಗರಗದಹಳ್ಳಿ ಗ್ರಾಮದ ಪ್ರವೀಣ್.ಜಿ.ಎನ್. (43) ಹಣ ಕಳೆದುಕೊಂಡವರು. ಇವರು ಕೆನರಾ ಬ್ಯಾಂಕ್‌ನ ಅಜ್ಜಂಪುರ ಶಾಖೆಯಲ್ಲಿ ಖಾತೆ ಹೊಂದಿದ್ದು, ಅದಕ್ಕೆ ಮೊಬೈಲ್ ಸಂಖ್ಯೆ ಲಿಂಕ್ ಮಾಡಿಕೊಂಡು ಫೋನ್‌ಪೇ ಬಳಸುತ್ತಿದ್ದರು.

ಅಕ್ಟೋಬರ್ 26ರಂದು ಸಂಜೆ ಸುಮಾರು 5.45ರ ವೇಳೆಗೆ ಹೊಸದುರ್ಗದಲ್ಲಿದ್ದಾಗ ಅವರ ಮೊಬೈಲ್‌ಗೆ ಬ್ಯಾಂಕ್ ಖಾತೆಯಿಂದ ಹಣ ಡೆಬಿಟ್ ಆಗಿರುವ ಸಂದೇಶಗಳು ಸರಣಿಯಾಗಿ ಬಂದಿವೆ. ಮೊದಲಿಗೆ 2,12,058.40 ರೂ., ನಂತರ 1,88,742 ರೂ., 1,07,007 ರೂ. ಹಾಗೂ 80,875 ರೂ. ಹಣ ವರ್ಗಾವಣೆಯಾಗಿದೆ. ಇದಲ್ಲದೆ 10 ಸಾವಿರ, 5 ಸಾವಿರ ಹಾಗೂ 4,715.04 ರೂ. ಸೇರಿದಂತೆ ಒಟ್ಟು 6,08,397.44 ರೂ. ಹಣವನ್ನು ವಂಚಕರು ವಿವಿಧ ಹಂತಗಳಲ್ಲಿ ವರ್ಗಾಯಿಸಿಕೊಂಡಿದ್ದಾರೆ ಎನ್ನಲಾಗಿದೆ.

ಹಣ ಕಡಿತವಾಗುತ್ತಿರುವುದನ್ನು ಗಮನಿಸಿದ ಪ್ರವೀಣ್ ಅವರು ತಕ್ಷಣ ಸಂಜೆ 6 ಗಂಟೆಗೆ ಕೆನರಾ ಬ್ಯಾಂಕ್ ಸಹಾಯವಾಣಿಗೆ ಕರೆ ಮಾಡಿ ಖಾತೆಯನ್ನು ಡೆಬಿಟ್ ಫ್ರೀಜ್ ಮಾಡಿಸಿದ್ದಾರೆ. ಬಳಿಕ ಸೈಬರ್ ಅಪರಾಧ ಸಹಾಯವಾಣಿ 1930ಕ್ಕೆ ಕರೆ ಮಾಡಿ ಎರಡು ಸ್ವೀಕೃತಿ ಸಂಖ್ಯೆಗಳಲ್ಲಿ ದೂರು ದಾಖಲಿಸಿದ್ದಾರೆ.

ಮರುದಿನ ಬ್ಯಾಂಕ್‌ಗೆ ತೆರಳಿ ಖಾತೆಯಲ್ಲಿನ ಹಣ ವರ್ಗಾವಣೆ ಕುರಿತು ಮಾಹಿತಿ ಪಡೆದುಕೊಂಡಿದ್ದಾರೆ. ತಮ್ಮ ಗಮನಕ್ಕೆ ಬಾರದೆ ಮೊಬೈಲ್‌ನಲ್ಲಿ ಆರ್‌ಟಿಒ ಚಲನ್ APK ಫೈಲ್ ಡೌನ್‌ಲೋಡ್ ಆಗಿದ್ದು, ಅದರ ಮೂಲಕ ವೈಯಕ್ತಿಕ ಹಣಕಾಸು ಮಾಹಿತಿಯನ್ನು ಕದ್ದು ಖಾತೆಯಲ್ಲಿದ್ದ ಹಣವನ್ನು ವರ್ಗಾಯಿಸಿಕೊಳ್ಳಲಾಗಿದೆ ಎಂದು ಅವರು ದೂರಿನಲ್ಲಿ ಆರೋಪಿಸಿದ್ದಾರೆ.

ಈ ಸಂಬಂಧ ಅಕ್ಟೋಬರ್ 29ರಂದು ಚಿಕ್ಕಮಗಳೂರು ಸೈಬರ್ ಕ್ರೈಂ ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

Cybercriminals hacked into farmer’s account after downloading RTO Challan APK

Share

Leave a comment

Leave a Reply

Your email address will not be published. Required fields are marked *

Don't Miss

ಪ್ಲಾಂಟೇಷನ್ ಕಾರ್ಮಿಕರಿಗೆ ಶೇ.17ರಷ್ಟು ವೇತನ ಹೆಚ್ಚಳ

ಚಿಕ್ಕಮಗಳೂರು: ಚಿಕ್ಕಮಗಳೂರು, ಹಾಸನ ಹಾಗೂ ಕೊಡಗು ಜಿಲ್ಲೆಗಳ ಕಾಫಿ ಮತ್ತು ಟೀ ಪ್ಲಾಂಟೇಷನ್‌ಗಳಲ್ಲಿ ದುಡಿಯುವ ಕಾರ್ಮಿಕರ ವೇತನ ಹೆಚ್ಚಳಕ್ಕೆ ಸಂಬಂಧಿಸಿದಂತೆ ಕರ್ನಾಟಕ ಪ್ಲಾಂಟರ್ಸ್ ಅಸೋಸಿಯೇಷನ್‌ ಹಾಗೂ ಕಾರ್ಮಿಕ ಸಂಘಟನೆಗಳ ನಡುವೆ ಒಪ್ಪಂದಕ್ಕೆ...

ಅ.26ರಂದು ಚಿಕ್ಕಮಗಳೂರಿನಲ್ಲಿ ಮಹರ್ಷಿ ವಾಲ್ಮೀಕಿ ಜಯಂತಿ ಆಚರಣೆ

ಚಿಕ್ಕಮಗಳೂರು: ಆದಿಕವಿ ಶ್ರೀ ಮಹರ್ಷಿ ವಾಲ್ಮೀಕಿ ಜಯಂತಿಯನ್ನು ಅ.26ರಂದು ಚಿಕ್ಕಮಗಳೂರಿನಲ್ಲಿ ಶ್ರದ್ಧಾಭಕ್ತಿ ಹಾಗೂ ಅರ್ಥಪೂರ್ಣವಾಗಿ ಆಚರಿಸಲಾಗುವುದು ಎಂದು ಶ್ರೀ ವಾಲ್ಮೀಕಿ ನಾಯಕ ಯುವಕರ ಸಂಘದ ಜಿಲ್ಲಾಧ್ಯಕ್ಷ ಜಗದೀಶ್ ಕೋಟೆ ತಿಳಿಸಿದರು. ನಗರದ...

Related Articles

ಅಪ್ರಾಪ್ತ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಆರೋಪ

ಚಿಕ್ಕಮಗಳೂರು: ಪ್ರೀತಿಸುವುದಾಗಿ ನಂಬಿಸಿ ಮದುವೆಯಾಗುವುದಾಗಿ ಭರವಸೆ ನೀಡಿ ಅಪ್ರಾಪ್ತ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ...

ದಲಿತರಿಗೆ ಮೀಸಲಿಟ್ಟ ಭೂಮಿ ಮಂಜೂರಾತಿಗೆ ಆಗ್ರಹ

ಚಿಕ್ಕಮಗಳೂರು: ದಲಿತರಿಗೆ ಮೀಸಲಿಟ್ಟಿರುವ ಸರ್ಕಾರಿ ಭೂಮಿಯನ್ನು ಭೂಹೀನ ದಲಿತರಿಗೆ ಮಂಜೂರು ಮಾಡಬೇಕು ಎಂದು ಆಗ್ರಹಿಸಿ ಕರ್ನಾಟಕ...

ಕ್ರೀಡಾ ಸಾಧಕರಿಗೆ ಕಾಫಿನಾಡಿನಲ್ಲಿ ಇಂದು ಅದ್ಧೂರಿ ಗೌರವ

ಚಿಕ್ಕಮಗಳೂರು: ಅಂತರರಾಷ್ಟ್ರೀಯ ಮಟ್ಟದಲ್ಲಿ ಭಾರತದ ಕ್ರೀಡಾ ಕೀರ್ತಿಯನ್ನು ವಿಶ್ವದಾದ್ಯಂತ ಪಸರಿಸಿರುವ ಪ್ಯಾರಾ ಕ್ರೀಡಾಪಟುಗಳನ್ನು ಗೌರವಿಸುವ ಉದ್ದೇಶದಿಂದ...

ರಾಜ್ಯೋತ್ಸವ ಪ್ರಶಸ್ತಿಗೆ ಚಿಕ್ಕಮಗಳೂರಿನ ಇಬ್ಬರು ಸಾಧಕರು ಭಾಜನ

ಉದ್ಯಮ ಕ್ಷೇತ್ರದಲ್ಲಿ ಎಂ.ಬಿ. ಜಯಶಂಕರ್, ವಚನ ಹಾಗೂ ಜಾನಪದ ಸಾಹಿತ್ಯ ಕ್ಷೇತ್ರದಲ್ಲಿ ಚಟ್ನಳ್ಳಿ ಮಹೇಶ್‌ಗೆ ಗೌರವ...