Home namma chikmagalur chikamagalur ಪ್ರತ್ಯೇಕ ಅಪಘಾತ ಪ್ರಕರಣದಲ್ಲಿ ಹಲವರಿಗೆ ಗಾಯ
chikamagalurCrime NewsHomeLatest Newsnamma chikmagalur

ಪ್ರತ್ಯೇಕ ಅಪಘಾತ ಪ್ರಕರಣದಲ್ಲಿ ಹಲವರಿಗೆ ಗಾಯ

Share
Share

ಚಿಕ್ಕಮಗಳೂರು: ಜಿಲ್ಲೆಯ ಆಲ್ದೂರು, ಅಜ್ಜಂಪುರ, ಬೀರೂರು ಹಾಗೂ ಪಂಚನಹಳ್ಳಿ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ಪ್ರತ್ಯೇಕ ಅಪಘಾತ ಪ್ರಕರಣಗಳು ವರದಿಯಾಗಿವೆ. ಅಜಾಗರೂಕ ಚಾಲನೆ ಹಾಗೂ ವಾಹನದ ನಿಯಂತ್ರಣ ತಪ್ಪಿದ ಪರಿಣಾಮ ಹಲವರು ಗಾಯಗೊಂಡಿದ್ದು, ಸಂಬಂಧಪಟ್ಟ ಪೊಲೀಸ್ ಠಾಣೆಗಳಲ್ಲಿ ಪ್ರಕರಣಗಳು ದಾಖಲಾಗಿವೆ.

ಆಲ್ದೂರು: ಆಲ್ದೂರಿನ ಬಿ.ಎಚ್. ರಸ್ತೆಯ ಹವಳ್ಳಿ ಪರಿಶಿಷ್ಟ ಜಾತಿ ಕಾಲೋನಿ ರಸ್ತೆಯ ಕೆಳಭಾಗದಲ್ಲಿ ಸಫಿಉಲ್ಲಾ ಅವರು ಬೈಕ್‌ನಲ್ಲಿ ಅಂಗಡಿಗೆ ತೆರಳುತ್ತಿದ್ದಾಗ, ಹಿಂಬದಿಯಿಂದ ಬಂದ ಮತ್ತೊಂದು ಬೈಕ್ ಡಿಕ್ಕಿ ಹೊಡೆದಿದೆ. ಪರಿಣಾಮ ಸಫಿಉಲ್ಲಾ ಅವರ ತಲೆ ಹಾಗೂ ದೇಹದ ವಿವಿಧ ಭಾಗಗಳಿಗೆ ಗಂಭೀರ ಗಾಯಗಳಾಗಿದ್ದು, ಚಿಕ್ಕಮಗಳೂರಿನ ಮಲ್ಲೇಗೌಡ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಹೆಚ್ಚಿನ ಚಿಕಿತ್ಸೆ ಹಾಗೂ ಶಸ್ತ್ರಚಿಕಿತ್ಸೆ ಅಗತ್ಯವಿರುವುದಾಗಿ ತಿಳಿದುಬಂದಿದೆ. ಅಪಘಾತದ ಬಳಿಕ ಬೈಕ್ ನಿಲ್ಲಿಸದೆ ತೆರಳಿದ ಚಾಲಕನ ವಿರುದ್ಧ ಆಲ್ದೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಅಜ್ಜಂಪುರ: ತುಪ್ಪದಹಳ್ಳಿಯಿಂದ ನೇರಲೆಕೆರೆಗೆ ಕೂಲಿ ಕೆಲಸಕ್ಕೆ ಬೈಕ್‌ನಲ್ಲಿ ತೆರಳುತ್ತಿದ್ದ ವ್ಯಕ್ತಿಗೆ ಶಿರಗಲಿಪುರದ ಮುಂದಿನ ರಸ್ತೆ ತಿರುವಿನಲ್ಲಿ ಎದುರಿನಿಂದ ಬಂದ ಹುಂಡೈ ವೆನ್ಯೂ ಕಾರು ಡಿಕ್ಕಿ ಹೊಡೆದಿದೆ. ಅಪಘಾತದಲ್ಲಿ ಬೈಕ್ ಸವಾರನ ಬಲಗಾಲು ಮುರಿದು ಗಾಯಗಳಾಗಿದ್ದು, ತರೀಕೆರೆ ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿ ಬಳಿಕ ಶಿವಮೊಗ್ಗದ ಆರಾಧನಾ ಆರ್ಥೋಪೆಡಿಕ್ ಸೆಂಟರ್‌ಗೆ ದಾಖಲಿಸಲಾಗಿದೆ. ಅಜ್ಜಂಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬೀರೂರು: ಕಡೂರಿನ ರಾಷ್ಟ್ರೀಯ ಹೆದ್ದಾರಿ ೬೯ರಲ್ಲಿ ಸ್ಯಾಂಟ್ರೊ ಕಾರೊಂದು ಸರಣಿ ಅಪಘಾತಕ್ಕೆ ಕಾರಣವಾಗಿದೆ ಎನ್ನಲಾಗಿದೆ. ಮೊದಲು ಮುಂದೆ ಸಾಗುತ್ತಿದ್ದ ಸ್ಪ್ಲೆಂಡರ್ ಬೈಕ್‌ಗೆ ಡಿಕ್ಕಿ ಹೊಡೆದ ಕಾರು, ಬಳಿಕ ಕಿಶೋರ್ ಮತ್ತು ಅವರ ಪತ್ನಿ ಚೈತ್ರಾ ಪ್ರಯಾಣಿಸುತ್ತಿದ್ದ ಸ್ಕೂಟಿಗೆ ಡಿಕ್ಕಿ ಹೊಡೆದಿದೆ. ನಂತರ ಮತ್ತೊಂದು ನಿಂತಿದ್ದ ಬೈಕ್‌ಗೂ ಡಿಕ್ಕಿ ಹೊಡೆದಿದೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ. ಘಟನೆಯಲ್ಲಿ ಕಿಶೋರ್, ಚೈತ್ರಾ ಸೇರಿದಂತೆ ಹಲವರಿಗೆ ಗಾಯಗಳಾಗಿದ್ದು, ಚಿಕಿತ್ಸೆಗಾಗಿ ಶಿವಮೊಗ್ಗದ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ. ಕಾರಿನ ಚಾಲಕನ ವಿರುದ್ಧ ಬೀರೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪಂಚನಹಳ್ಳಿ: ಉಪ್ಪಿನಹಳ್ಳಿ-ಬೆಲಗೂರು ರಸ್ತೆಯ ಜಿ. ಬೊಮ್ಮೇನಹಳ್ಳಿ ಗೇಟ್ ಬಳಿ ಮಂಜುನಾಥ್ (೬೦) ಅವರು ಚಲಾಯಿಸುತ್ತಿದ್ದ ಹೋಂಡಾ ಆಕ್ಟಿವಾ ಸ್ಕೂಟಿ ನಿಯಂತ್ರಣ ತಪ್ಪಿ ಬಿದ್ದಿದೆ. ಪರಿಣಾಮ ತಲೆ, ಕೈಕಾಲುಗಳಿಗೆ ಗಾಯಗಳಾಗಿ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಅವರನ್ನು ಪಂಚನಹಳ್ಳಿ ಸರ್ಕಾರಿ ಆಸ್ಪತ್ರೆಯಿಂದ ಶಿವಮೊಗ್ಗದ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ನೀಡಲಾಗಿದೆ. ಚಿಕಿತ್ಸೆ ಪಡೆದು ಮನೆಗೆ ಮರಳಿದ್ದರೂ ಪ್ರಜ್ಞೆ ಮರಳದ ಕಾರಣ ಅವರ ಪುತ್ರ ಸುನಿಲ್ ದೂರು ನೀಡಿದ್ದಾರೆ. ಪಂಚನಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

Several people injured in a separate accident case

Share

Leave a comment

Leave a Reply

Your email address will not be published. Required fields are marked *

Don't Miss

ಜಿಲ್ಲಾ ಪಂಚಾಯಿತಿ ಮೀಸಲು ಕ್ಷಣಕ್ಕೊಂದು ಬಣ್ಣ, ದಿನಕ್ಕೊಂದು ಸುದ್ದಿ !

ಚಿಕ್ಕಮಗಳೂರು:, ಚಿಕ್ಕಮಗಳೂರು ಜಿಲ್ಲಾ ಪಂಚಾಯಿತಿಗೆ ಮೀಸಲಾತಿ ನಿಗದಿ ಮಾಡಿ ಚುನಾವಣಾ ಆಯೋಗ ಆದೇಶ ಹೊರಡಿಸಿದೆ. ಶಾಸಕರುಗಳ ಮೂಗಿನ ನೇರಕ್ಕೆ ಮೀಸಲಾತಿ ಪ್ರಕಟಿಸಿರುವುದು ಹಗಲು ಹೊತ್ತು ಎಲ್ಲರೂ ನೋಡುತ್ತಿರುವಾಗ ಕದ್ದು ಹಾಲು ಕುಡಿದಂತೆ...

ಕಡೂರು ರೈಲ್ವೆ ನಿಲ್ದಾಣದಲ್ಲಿ ಕೈಕೊಟ್ಟ ಡಿಜಿಟಲ್ ಪಾವತಿ ವ್ಯವಸ್ಥೆ

ಚಿಕ್ಕಮಗಳೂರು: ಕಡೂರು ರೈಲ್ವೆ ನಿಲ್ದಾಣದಲ್ಲಿ ಯುಪಿಐ ಮೂಲಕ ಹಣ ಪಾವತಿಸಿ ಟಿಕೆಟ್ ಪಡೆಯಲು ಸಾಧ್ಯವಾಗದೆ ಶುಕ್ರವಾರ ಪ್ರಯಾಣಿಕರು ತೊಂದರೆ ಅನುಭವಿಸಿದರು. ಸರ್ವರ್ ಸಮಸ್ಯೆಯಿಂದ ಡಿಜಿಟಲ್ ಪಾವತಿ ಸ್ಥಗಿತಗೊಂಡು ಕೈಯಲ್ಲಿ ಹಣವಿಲ್ಲದ ಪ್ರಯಾಣಿಕರು...

Related Articles

ವಡ್ಡರಹಳ್ಳಿ-ಕೆ.ಬಿ. ಹಾಳ್ ಕೆರೆಗಳಿಗೆ ಗಂಗೆ ಪೂಜೆ

ಚಿಕ್ಕಮಗಳೂರು: ಬರಗಾಲದ ನಡುವೆಯೂ ಎತ್ತಿನಹೊಳೆ ಯೋಜನೆಯ ನೀರಿನಿಂದ ಕೆ.ಬಿ. ಹಾಳ್ (ಕುರುಬರ ಬೂದಿಹಾಳ್) ಸೇರಿದಂತೆ ಸುತ್ತಮುತ್ತಲಿನ...

ಅ.27ರಂದು ಅರಣ್ಯ ಭವನ ಸಂಕೀರ್ಣ ಲೋಕಾರ್ಪಣೆ

ಚಿಕ್ಕಮಗಳೂರು: ನಗರದಲ್ಲಿ ನೂತನವಾಗಿ ನಿರ್ಮಾಣಗೊಂಡಿರುವ ಅರಣ್ಯ ಭವನ ಸಂಕೀರ್ಣ ಅ.೨೭ರಂದು ಲೋಕಾರ್ಪಣೆಗೊಳ್ಳಲಿದ್ದು, ಅರಣ್ಯ ಸಚಿವ ರಾಮಲಿಂಗಾರೆಡ್ಡಿ...

ಪ್ರತ್ಯೇಕ ರಸ್ತೆ ಅಪಘಾತದಲ್ಲಿ ನಾಲ್ಕು ಮಂದಿ ಸಾವು

ಚಿಕ್ಕಮಗಳೂರು: ಜಿಲ್ಲೆಯ ವಿವಿಧ ಭಾಗಗಳಲ್ಲಿ ಸಂಭವಿಸಿದ ಪ್ರತ್ಯೇಕ ರಸ್ತೆ ಅಪಘಾತಗಳಲ್ಲಿ ನಾಲ್ಕು ಮಂದಿ ಮೃತಪಟ್ಟಿದ್ದು, ಹಲವರು...

ಸಮಾನ ಆಚರಣಾ ಸಂಹಿತೆ, ಸಂಸ್ಕಾರ ಶಿಕ್ಷಣ ಇಂದಿನ ಅನಿವಾರ್ಯತೆ

*ಶೃಂಗೇರಿ:* ಭಾರತೀಯ ಮೂಲದ ಧಾರ್ಮಿಕ ಪರಂಪರೆಗಳಲ್ಲಿರುವ ಸಾಮಾನ್ಯ ಮೌಲ್ಯಗಳನ್ನು ಆಧರಿಸಿ ಸಮಾನ ಆಚರಣೆ ಸಂಹಿತೆ ಹಾಗೂ...