Home namma chikmagalur chikamagalur ಪ್ರತ್ಯೇಕ ರಸ್ತೆ ಅಪಘಾತದಲ್ಲಿ ನಾಲ್ಕು ಮಂದಿ ಸಾವು
chikamagalurCrime NewsHomeLatest Newsnamma chikmagalur

ಪ್ರತ್ಯೇಕ ರಸ್ತೆ ಅಪಘಾತದಲ್ಲಿ ನಾಲ್ಕು ಮಂದಿ ಸಾವು

Share
Share

ಚಿಕ್ಕಮಗಳೂರು: ಜಿಲ್ಲೆಯ ವಿವಿಧ ಭಾಗಗಳಲ್ಲಿ ಸಂಭವಿಸಿದ ಪ್ರತ್ಯೇಕ ರಸ್ತೆ ಅಪಘಾತಗಳಲ್ಲಿ ನಾಲ್ಕು ಮಂದಿ ಮೃತಪಟ್ಟಿದ್ದು, ಹಲವರು ಗಾಯಗೊಂಡಿದ್ದಾರೆ. ತೇಗೂರು ಗ್ರಾಮದ ಬಳಿ ಟ್ರ್ಯಾಕ್ಟರ್‌ಗೆ ಕಟ್ಟಿದ್ದ ಹಗ್ಗ ಕುತ್ತಿಗೆಗೆ ತಗುಲಿ ಸ್ಕೂಟಿ ಸವಾರ ಮೃತಪಟ್ಟರೆ, ಸಖರಾಯಪಟ್ಟಣದ ಬಳಿ ಪಾದಚಾರಿಗೆ ಥಾರ್ ಕಾರು ಡಿಕ್ಕಿ ಹೊಡೆದು ಸಾವು ಸಂಭವಿಸಿದೆ. ಲಕ್ಕವಳ್ಳಿ ಸಮೀಪ ಮಳೆಯಿಂದ ಸ್ಕೂಟಿ ನಿಯಂತ್ರಣ ತಪ್ಪಿ ಬಿದ್ದ ಪರಿಣಾಮ ಮತ್ತೊಬ್ಬರು ಸೇರಿದಂತೆ ಮೂಡಿಗೆರೆಯಲ್ಲಿ ನಡೆದ ರಸ್ತೆ ಅಪಘಾತದಲ್ಲಿ ಬೈಕ್ ಸವಾರ ಮೃತಪಟ್ಟಿದ್ದಾರೆ.

ಸ್ಕೂಟಿ ಸವಾರ ಸಾವು: ತೇಗೂರು ಗ್ರಾಮದ ಬಳಿ ಟ್ರ್ಯಾಕ್ಟರ್‌ಗೆ ಕಟ್ಟಿದ್ದ ಹಗ್ಗವನ್ನು ರಸ್ತೆಗೆ ಅಡ್ಡಲಾಗಿ ಎಳೆದು ಮರದ ದಿಮ್ಮಿಯನ್ನು ಸಾಗಿಸುತ್ತಿದ್ದ ವೇಳೆ, ಸ್ಕೂಟಿಯಲ್ಲಿ ಬರುತ್ತಿದ್ದ ಮಹಮ್ಮದ್ ಗೌಸ್ ಖಾನ್ (೫೫) ಅವರ ಕುತ್ತಿಗೆಗೆ ಹಗ್ಗ ತಗುಲಿದೆ. ಪರಿಣಾಮ ಸ್ಕೂಟಿ ಸಮೇತ ದಂಪತಿ ರಸ್ತೆಗೆ ಬಿದ್ದಿದ್ದು, ಗೌಸ್ ಖಾನ್ ಮೃತಪಟ್ಟಿದ್ದಾರೆ. ಅವರ ಪತ್ನಿ ಫಾತಿಮಾ ಬೀ ಗಾಯಗೊಂಡಿದ್ದು, ಚಿಕ್ಕಮಗಳೂರು ಎಂ.ಜಿ. ಆಸ್ಪತ್ರೆಗೆ ದಾಖಲಿಸಲಾಗಿದೆ. ಟ್ರ್ಯಾಕ್ಟರ್ ಚಾಲಕ ಮತ್ತು ಮಾಲೀಕರ ವಿರುದ್ಧ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪಾದಚಾರಿ ಸಾವು: ಉದ್ದೇಬೋರನಹಳ್ಳಿ ಗ್ರಾಮದ ಸಮೀಪ ಎಲೆಕ್ಸಿಯರ್ ಬಾರ್‌ಗೆ ಹೋಗುವ ಕ್ರಾಸ್ ಬಳಿ, ರಸ್ತೆಯ ಎಡಭಾಗದಲ್ಲಿ ನಡೆದುಕೊಂಡು ಹೋಗುತ್ತಿದ್ದ ಸುಮಾರು ೫೦-೫೫ ವರ್ಷದ ಅಪರಿಚಿತ ವ್ಯಕ್ತಿಗೆ ಥಾರ್ ಕಾರು ಡಿಕ್ಕಿ ಹೊಡೆದಿದೆ. ತೀವ್ರ ಗಾಯಗೊಂಡ ವ್ಯಕ್ತಿ ಸ್ಥಳದಲ್ಲೇ ಮೃತಪಟ್ಟಿದ್ದು, ಕಾರು ನಿಲ್ಲಿಸದೆ ಚಾಲಕ ಪರಾರಿಯಾಗಿದ್ದಾನೆ ಎನ್ನಲಾಗಿದೆ. ಮೃತದೇಹವನ್ನು ಚಿಕ್ಕಮಗಳೂರು ಜಿಲ್ಲಾ ಸರ್ಕಾರಿ ಆಸ್ಪತ್ರೆಯ ಶವಾಗಾರಕ್ಕೆ ರವಾನಿಸಲಾಗಿದೆ. ಸಕ್ಕರಾಯಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮೃತರ ವಾರಸುದಾರರ ಪತ್ತೆ ಕಾರ್ಯ ಮುಂದುವರಿದಿದೆ.

ನಿಯಂತ್ರಣ ತಪ್ಪಿ ಸಾವು: ಲಕ್ಕವಳ್ಳಿ ಕೇರಿ ಏರಿ ಮೇಲಿನ ಟಿ.ಎಂ. ರಸ್ತೆಯಲ್ಲಿ ಈಶ್ವರಮೂರ್ತಿ ಅವರು ತಮ್ಮ ಒಂಬತ್ತು ವರ್ಷದ ಮಗ ಋಷಿಯನ್ನು ಎಲೆಕ್ಟ್ರಿಕ್ ಸ್ಕೂಟಿಯಲ್ಲಿ ಕೂರಿಸಿಕೊಂಡು ಮನೆಗೆ ಮರಳುತ್ತಿದ್ದಾಗ, ಮಳೆಯಿಂದಾಗಿ ವಾಹನ ನಿಯಂತ್ರಣ ತಪ್ಪಿ ರಸ್ತೆಗೆ ಬಿದ್ದಿದೆ. ಘಟನೆಯಲ್ಲಿ ತಲೆಗೆ ಗಂಭೀರ ಗಾಯಗೊಂಡ ಈಶ್ವರಮೂರ್ತಿ ಅವರು ಶಿವಮೊಗ್ಗದ ಎನ್.ಎಚ್. ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಬಾಲಕನ ಬಲಗಾಲಿಗೆ ಗಾಯವಾಗಿದ್ದು, ಚಿಕಿತ್ಸೆ ನೀಡಲಾಗಿದೆ. ಲಕ್ಕವಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬೈಕ್ ಸವಾರ ಸಾವು: ರಸ್ತೆ ಅಪಘಾತದಲ್ಲಿ ಬೈಕ್ ಸವಾರ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಮೂಡಿಗೆರೆ ತಾಲೂಕಿನ ಹಳೆಕೋಟೆ ಗ್ರಾಮದ ಮುಖ್ಯ ರಸ್ತೆಯಲ್ಲಿ ನಡೆದಿದೆ. ಆಟೋ ಹಾಗೂ ಬೈಕ್ ಮುಖಾಮುಖಿಯಾಗಿ ಡಿಕ್ಕಿ ಹೊಡೆದಿದ್ದು ಡಿಕ್ಕಿಯ ರಭಸಕ್ಕೆ ಬೈಕ್ ಸವಾರ ಪ್ರವೀಣ್ (೨೬) ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ. ಅಪಘಾತದ ತೀವ್ರತೆಗೆ ಆಟೋ ಕೂಡ ರಸ್ತೆ ಬದಿಗೆ ಪಲ್ಟಿಯಾಗಿದೆ.ಯುವಕನ ದುರ್ಮರಣದಿಂದ ಸ್ಥಳದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದ್ದು ವಿಷಯ ತಿಳಿದು ಸ್ಥಳಕ್ಕೆ ಧಾವಿಸಿದ ಮೂಡಿಗೆರೆ ಪೊಲೀಸ್ ಠಾಣೆಯ ಸಿಬ್ಬಂದಿ ಪರಿಶೀಲನೆ ನಡೆಸಿದ್ದಾರೆ.

Four people die in separate road accidents

Share

Leave a comment

Leave a Reply

Your email address will not be published. Required fields are marked *

Don't Miss

ಜಿಲ್ಲಾ ಪಂಚಾಯಿತಿ ಮೀಸಲು ಕ್ಷಣಕ್ಕೊಂದು ಬಣ್ಣ, ದಿನಕ್ಕೊಂದು ಸುದ್ದಿ !

ಚಿಕ್ಕಮಗಳೂರು:, ಚಿಕ್ಕಮಗಳೂರು ಜಿಲ್ಲಾ ಪಂಚಾಯಿತಿಗೆ ಮೀಸಲಾತಿ ನಿಗದಿ ಮಾಡಿ ಚುನಾವಣಾ ಆಯೋಗ ಆದೇಶ ಹೊರಡಿಸಿದೆ. ಶಾಸಕರುಗಳ ಮೂಗಿನ ನೇರಕ್ಕೆ ಮೀಸಲಾತಿ ಪ್ರಕಟಿಸಿರುವುದು ಹಗಲು ಹೊತ್ತು ಎಲ್ಲರೂ ನೋಡುತ್ತಿರುವಾಗ ಕದ್ದು ಹಾಲು ಕುಡಿದಂತೆ...

ಕಡೂರು ರೈಲ್ವೆ ನಿಲ್ದಾಣದಲ್ಲಿ ಕೈಕೊಟ್ಟ ಡಿಜಿಟಲ್ ಪಾವತಿ ವ್ಯವಸ್ಥೆ

ಚಿಕ್ಕಮಗಳೂರು: ಕಡೂರು ರೈಲ್ವೆ ನಿಲ್ದಾಣದಲ್ಲಿ ಯುಪಿಐ ಮೂಲಕ ಹಣ ಪಾವತಿಸಿ ಟಿಕೆಟ್ ಪಡೆಯಲು ಸಾಧ್ಯವಾಗದೆ ಶುಕ್ರವಾರ ಪ್ರಯಾಣಿಕರು ತೊಂದರೆ ಅನುಭವಿಸಿದರು. ಸರ್ವರ್ ಸಮಸ್ಯೆಯಿಂದ ಡಿಜಿಟಲ್ ಪಾವತಿ ಸ್ಥಗಿತಗೊಂಡು ಕೈಯಲ್ಲಿ ಹಣವಿಲ್ಲದ ಪ್ರಯಾಣಿಕರು...

Related Articles

ವಡ್ಡರಹಳ್ಳಿ-ಕೆ.ಬಿ. ಹಾಳ್ ಕೆರೆಗಳಿಗೆ ಗಂಗೆ ಪೂಜೆ

ಚಿಕ್ಕಮಗಳೂರು: ಬರಗಾಲದ ನಡುವೆಯೂ ಎತ್ತಿನಹೊಳೆ ಯೋಜನೆಯ ನೀರಿನಿಂದ ಕೆ.ಬಿ. ಹಾಳ್ (ಕುರುಬರ ಬೂದಿಹಾಳ್) ಸೇರಿದಂತೆ ಸುತ್ತಮುತ್ತಲಿನ...

ಅ.27ರಂದು ಅರಣ್ಯ ಭವನ ಸಂಕೀರ್ಣ ಲೋಕಾರ್ಪಣೆ

ಚಿಕ್ಕಮಗಳೂರು: ನಗರದಲ್ಲಿ ನೂತನವಾಗಿ ನಿರ್ಮಾಣಗೊಂಡಿರುವ ಅರಣ್ಯ ಭವನ ಸಂಕೀರ್ಣ ಅ.೨೭ರಂದು ಲೋಕಾರ್ಪಣೆಗೊಳ್ಳಲಿದ್ದು, ಅರಣ್ಯ ಸಚಿವ ರಾಮಲಿಂಗಾರೆಡ್ಡಿ...

ಪ್ರತ್ಯೇಕ ಅಪಘಾತ ಪ್ರಕರಣದಲ್ಲಿ ಹಲವರಿಗೆ ಗಾಯ

ಚಿಕ್ಕಮಗಳೂರು: ಜಿಲ್ಲೆಯ ಆಲ್ದೂರು, ಅಜ್ಜಂಪುರ, ಬೀರೂರು ಹಾಗೂ ಪಂಚನಹಳ್ಳಿ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ಪ್ರತ್ಯೇಕ ಅಪಘಾತ...

ಸಮಾನ ಆಚರಣಾ ಸಂಹಿತೆ, ಸಂಸ್ಕಾರ ಶಿಕ್ಷಣ ಇಂದಿನ ಅನಿವಾರ್ಯತೆ

*ಶೃಂಗೇರಿ:* ಭಾರತೀಯ ಮೂಲದ ಧಾರ್ಮಿಕ ಪರಂಪರೆಗಳಲ್ಲಿರುವ ಸಾಮಾನ್ಯ ಮೌಲ್ಯಗಳನ್ನು ಆಧರಿಸಿ ಸಮಾನ ಆಚರಣೆ ಸಂಹಿತೆ ಹಾಗೂ...