ತರೀಕೆರೆ: ಲಕ್ಕವಳ್ಳಿ ವಲಯದ ಎಂ.ಸಿ. ಹಳ್ಳಿ ಶಾಖೆಯ ವ್ಯಾಪ್ತಿಯಲ್ಲಿ ಅಕ್ರಮವಾಗಿ ಕಡವೆಯನ್ನು ಬೇಟೆ ಮಾಡಿ ಮಾಂಸ ಕತ್ತರಿಸುತ್ತಿರುವ ಸಂದರ್ಭದಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ದಾಳಿ ನಡೆಸಿ, ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.
ಬಂಧಿತರಿಂದ ಸುಮಾರು 70 ಕೆ.ಜಿ. ಕಡವೆ ಮಾಂಸ, (ತಲೆ, ಕಾಲು ಸಮೇತ), ಒಂದು ನಾಡ ಬಂದೂಕು, ದ್ವಿಚಕ್ರ ವಾಹನ, ಬೇಟೆಯಾಡಲು ಬಳಸಿದ ಕತ್ತಿ, ಚಾಕು, ಹಣೆ ಬ್ಯಾಟರಿ ಮೊದಲಾದ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ ಎಂದು ಇಲಾಖೆ ಮೂಲಗಳು ತಿಳಿಸಿವೆ.
ಎಂ.ಸಿ. ಹಳ್ಳಿ ಕ್ವಾಟ್ರಸ್ ನಿವಾಸಿಗಳಾದ ಕಿರಣ್ ಕುಮಾರ್ ಜಿ.ಬಿನ್., ಗೋವಿಂದರಾಜು, ಭದ್ರಾವತಿಯ ಮಣಿಕಂಠ ಡಿ. ಬಂಧಿತರು. ಉಳಿದ ಆರೋಪಿಗಳಾದ ಪ್ರವೀಣ ಪಿ., ಪ್ರಭು, ಚೇತು ವಿಜಯ ತಲೆಮರೆಸಿಕೊಂಡಿದ್ದಾರೆ.
ಕಾರ್ಯಾಚರಣೆಯಲ್ಲಿ ಲಕ್ಕವಳ್ಳಿ ಆರ್ಎಫ್ಒ ಇಂದು ಜಿ.ಎಸ್., ಸಿಬ್ಬಂದಿ ಚನ್ನೇಗೌಡ ಜಿ.ಟಿ., ಮನೋಜ್ ಕೆ., ಸಂತೋಷ್ ಎಂ.ಬಿ., ಬಾಲರಾಜ್, ಪುನೀತ್, ವಿಶ್ವನಾಥ್, ಕು. ಶೋಭಾ ಭಾಗವಹಿಸಿದ್ದರು.
Sambar deer poaching in M.C. Halli – Accused arrested
Leave a comment