ಚಿಕ್ಕಮಗಳೂರು: ಐದು ದಿನಗಳ ಬ್ಯಾಂಕಿಂಗ್ ಪದ್ಧತಿ ಜಾರಿಗೊಳಿಸಬೇಕು ಎಂದು ಆಗ್ರಹಿಸಿ ನಗರದ ಕೆನರಾ ಬ್ಯಾಂಕ್ ಮುಖ್ಯ ಕಚೇರಿ ಆವರಣದಲ್ಲಿ ಶುಕ್ರವಾರ ಬ್ಯಾಂಕ್ ಕಾರ್ಮಿಕ ಸಂಘಗಳ ಸಂಯು ಕ್ತ ವೇದಿಕೆ ಜಿಲ್ಲಾ ಸಮಿತಿಯಿಂದ ನೌಕರರು ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.
ಈ ಕುರಿತು ಮಾತನಾಡಿದ ಯುಎಫ್‌ಬಿಯು ಜಿಲ್ಲಾ ಸಮಿತಿ ಸಂಚಾಲಕ ಕೆ.ಆರ್.ಬಸವರಾಜ್ ಬ್ಯಾಂಕ್ ನೌಕರರು ಮತ್ತು ಅಧಿಕಾರಿಗಳ ನ್ಯಾಯಯುತ ಬೇಡಿಕೆಯನ್ನು ಕೇಂದ್ರ ಸರ್ಕಾರವು ಈಡೇರಿಸುವಲ್ಲಿ ವಿಳಂಭ ಮಾಡದೇ, ಐದು ದಿನಗಳ ಬ್ಯಾಂಕಿಂಗ್ ಪದ್ಧತಿಯನ್ನು ಶೀಘ್ರವೇ ಜಾರಿಗೊಳಿಸಲು ಅಗತ್ಯ ಕ್ರಮ ಕೈಗೊಳ್ಳ ಬೇಕು ಎಂದು ಒತ್ತಾಯಿಸಿದರು.
ನೌಕರರು ಸಾರ್ವಜನಿಕರಿಗೆ ಹಾಗೂ ದೇಶದ ಆರ್ಥಿಕ ವ್ಯವಸ್ಥೆಗೆ ಸೇವೆ ಸಲ್ಲಿಸುತ್ತಿದ್ದು, ವಾರದ ಐದು ದಿನಗಳ ಕೆಲಸದ ಪದ್ಧತಿ ಜಾರಿಯಾಗಬೇಕು ಎಂಬ ಬೇಡಿಕೆ ಬಹುದಿನಗಳಿಂದ ಬಾಕಿಯಿದೆ. ಈ ವಿಷಯಕ್ಕೆ ಸಂಬಂಧಿಸಿದಂತೆ ಈಗಾಗಲೇ ಹಲವು ಭಾರಿಗಳಲ್ಲಿ ಪ್ರತಿಭಟನೆ ನಡೆಸಲಾಗಿದ್ದು ಕಳೆದ ಜನವರಿ ಮಾಹೆಯ ಲ್ಲೂ ಬ್ಯಾಂಕ್ ಮುಷ್ಕರ ನಡೆಸಲಾಗಿತ್ತು ಎಂದರು.
ಬ್ಯಾಂಕಿಂಗ್ ಉದ್ಯಮದಲ್ಲಿ ೫ ದಿನಗಳ ಕೆಲಸದ ವಾರವನ್ನು ಜಾರಿಗೆ ತರಲು ಸರ್ಕಾರ ಅನುಮೋದನೆ ಮತ್ತು ಶನಿವಾರಗಳನ್ನು ರಜಾ ದಿನಗಳಾಗಿ ಘೋಷಿಸಲು ಭಾರತೀಯ ಬ್ಯಾಂಕ್‌ಗಳ ಸಂಘವು ಕಳೆದ ವರ್ಷ ಐಬಿಎ ಮತ್ತು ಯುಎಫ್‌ಬಿಯು ನಡುವೆ ಸಹಿ ಹಾಕಿದೆ. ಆದರೂ ಇದುವರೆಗೂ ಬೇಢಿಕೆಗೆ ಅಂತಿಮ ಪರಿ ಹಾರ ದೊರೆತಿಲ್ಲ ಎಂದು ತಿಳಿಸಿದರು.
ಬೇಡಿಕೆ ಈಡೇರಿಸುವ ನಿಟ್ಟಿನಲ್ಲಿ ಯುಎಫ್‌ಬಿಯು ರಾಷ್ಟ್ರವ್ಯಾಪ್ತಿ ಪ್ರತಿಭಟನಾ ಕರೆಯ ಹಿನ್ನೆಲೆಯಲ್ಲಿ ಜಿಲ್ಲಾ ಸಮಿತಿಯ ನೇತೃತ್ವದಲ್ಲಿ ಬ್ಯಾಂಕ್ ನೌಕರರು ಹಾಗೂ ಅಧಿಕಾರಿಗಳು ಪ್ರತಿಭಟನೆ ನಡೆಸಿ, ಐದು ದಿನಗ ಳ ಬ್ಯಾಂಕಿಂಗ್ ಪದ್ಧತಿಯನ್ನು ಶೀಘ್ರವೇ ಜಾರಿಗೊಳಿಸುವಂತೆ ಒತ್ತಾಯಿಸಲಾಗುತ್ತಿದೆ ಎಂದರು.
ಯುಎಫ್‌ಬಿಯು ಸಂಘಟನಾ ಕಾರ್ಯದರ್ಶಿ ಉಜ್ವಲ ಡಿ.ಪಡುಬಿದ್ರಿ ಮಾತನಾಡಿ ಐದು ದಿನಗಳ ಬ್ಯಾಂಕಿಂಗ್ ಪದ್ಧತಿಯನ್ನು ಜಾರಿಗೊಳಿಸುವ ಕುರಿತು ಇಂಡಿಯನ್ಸ್ ಬ್ಯಾಂಕ್ಸ್ ಅಸೋಸಿಯೇಷನ್ ಹಾಗೂ ಬ್ಯಾಂಕ್ ಕಾರ್ಮಿಕ ಸಂಘಟನೆಗಳ ನಡುವೆ ಒಪ್ಪಂದವಾಗಿದ್ದು ಅದರ ಅನುಮೋದನೆಗಾಗಿ ಕೇಂದ್ರ ಹಣಕಾ ಸು ಸಚಿವಾಲಯ ಹಣಕಾಸು ಸೇವೆಗಳ ಇಲಾಖೆಗೆ ಕಳುಹಿಸಿದ್ದು ಈ ವಿಚಾರದಲ್ಲಿ ಕೇಂದ್ರ ಸರ್ಕಾರ ಅನಗತ್ಯ ವಿಳಂಬ ಧೋರಣೆ ಅನಸರಿಸುತ್ತಿದೆ ಎಂದು ಹೇಳಿದರು.
ಪ್ರತಿಭಟನೆಯಲ್ಲಿ ಜಿಲ್ಲಾ ಯುಎಫ್‌ಬಿಯು ಸದಸ್ಯರಾದ ಕೆ.ಹೆಚ್.ಗಣೇಶ್, ಪ್ರದಿಪ್‌ಕುಮಾರ್, ವಿ.ಗಂ ಗಾಧರಪ್ಪ, ವಿ.ಜಿ.ಮಹೇಶ್, ದರ್ಶನ್, ಚಂದನ್, ಶ್ರೀನಿವಾಸಯ್ಯ, ದಾನೇಂದ್ರ ಮುಂತಾದವರಿದ್ದರು.
Employees protest demanding the implementation of a five-day banking system.
Leave a comment