ಚಿಕ್ಕಮಗಳೂರು: ಹೆಚ್‌ಐವಿ ಸೋಂಕಿತ ವ್ಯಕ್ತಿಗೆ ಸಾವು ಬಿಟ್ಟರೆ ಬೇರೆ ಯಾವುದೇ ಮಾರ್ಗವಿರ ಲಿಲ್ಲ. ಆದರೆ ಇದೀಗ ವೈದ್ಯಕೀಯ ಸಂಶೋಧನೆಗಳ ಫಲವಾಗಿ ಸೋಂಕಿನ ವ್ಯಕ್ತಿ, ಸಂಪೂರ್ಣ ಕಾಯಿಲೆ ಯಿಂದ ಮುಕ್ತರಾಗದಿದ್ದರೂ ಎಲ್ಲರಂತೆ ದೀರ್ಘಕಾಲ ಜೀವಿಸಬಹುದು ಎಂದು ಎಂಇಎಸ್ ಗೌರವ ಕಾ ರ್ಯದರ್ಶಿ ಡಾ|| ಡಿ.ಎಲ್.ವಿಜಯ್‌ಕುಮಾರ್ ಹೇಳಿದರು.
ನಗರದ ಮಲೆನಾಡು ವಿದ್ಯಾಸಂಸ್ಥೆಯಲ್ಲಿ ಶುಕ್ರವಾರ ಬಿಎಡ್ ಕಾಲೇಜು ವತಿಯಿಂದ ಆಯೋಜಿಸಿದ್ಧ ಹೆಚ್‌ಐವಿ-ಏಡ್ಸ್ ಕುರಿತ ಜಾಗೃತಿ ಬೀದಿ ನಾಟಕ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಏಡ್ಸ್ ಕಾಯಿಲೆ ಭಾಧಿತರಾದ ವ್ಯಕ್ತಿಗೆ ಸಾರ್ವಜನಿಕರು ಭಯಪಡುವ ಅಗತ್ಯವಿಲ್ಲ. ಒಟ್ಟಿಗೆ ಆಹಾರ ಸೇ ವಿಸುವುದರಿಂದ, ಓಡಾಡುವುದರಿಂದ ಕಾಯಿಲೆ ಅಂಟಿಕೊಳ್ಳುವುದಿಲ್ಲ. ಆದರೆ ನಮ್ಮಗಳ ಎಚ್ಚರಿಕೆ ಸದಾ ಇರ ಬೇಕು. ಸೋಂಕಿನ ವ್ಯಕ್ತಿಯೊಂದಿಗೆ ಉತ್ತಮ ಒಡನಾಟ ಹೊಂದಬೇಕು ಎಂದು ಸಲಹೆ ಮಾಡಿದರು.
ಆಫ್ರೀಕಾದಲ್ಲಿ ಜನಿಸಿದ ಏಡ್ಸ್ ಎಂಬ ಮಾರಕ ಕಾಯಿಲೆ ಹಂತ, ಹಂತವಾಗಿ ಜಗತ್ತಿನಾದ್ಯಂತ ವ್ಯಾಪಿಸಿ ತು. ಸುಮಾರು ೪೦ ಮಿಲಿಯನ್ ಮಂದಿ ಜಗತ್ತಿನಲ್ಲಿ ಏಡ್ಸ್‌ಗೆ ತುತ್ತಾಗಿದ್ದು, ವಿಶ್ವ ಆರೋಗ್ಯ ಸಂಸ್ಥೆ ಸಮಗ್ರ ಸಂಶೋಧನೆ ನಡೆಸಿ ಡಿ.೦೧ ರಂದು ವಿಶ್ವ ಏಡ್ಸ್ ಜಾಗೃತಿ ಕಾರ್ಯಕ್ರಮ ರೂಪಿಸಿ ಜಗತ್ತಿನಾದ್ಯಂತ ಜಾಗೃತಿ ಅಭಿಯಾನ ನಡೆಸುತ್ತಿದೆ ಎಂದರು.
ಏಡ್ಸ್ ಕಾಯಿಲೆ ಏಕಾಏಕಿ ಮನುಷ್ಯನಿಗೆ ಆವರಿಸಿಕೊಳ್ಳುವುದಿಲ್ಲ. ಆಸ್ಪತ್ರೆಗಳಲ್ಲಿ ಏಡ್ಸ್ ಭಾದಿತ ವ್ಯಕ್ತಿಯ ಇಂಜೆಕ್ಷನ್ ಬದಲಿಸದೇ ನೀಡಿದರೆ ಅಥವಾ ರಕ್ತ ಪರೀಕ್ಷಿಸದೇ ಆರೋಗ್ಯ ವ್ಯಕ್ತಿಗೆ ನೀಡಿದಾಗ ಏಡ್ಸ್‌ಗೆ ತುತ್ತಾ ಗುವ ಸಂಭವವಿದೆ. ಈ ಹೊರತಾಗಿ ಭಾದಿತ ವ್ಯಕ್ತಿಯೊಂದಿಗೆ ಒಡನಾಟ ಹೊಂದಿದ್ದಲ್ಲಿ ಕಾಯಿಲೆ ಆವರಿಸಿ ಕೊಳ್ಳುವುದಿಲ್ಲ ಎಂದು ಹೇಳಿದರು.
ಎಂಇಎಸ್ ಸಹ ಕಾರ್ಯದರ್ಶಿ ಎಸ್.ಶ್ರೀಧರ್ ಮಾತನಾಡಿ ಏಡ್ಸ್ ಎಂಬ ಪಿಡುಗನ್ನು ಮೊಳಕೆಯಲ್ಲೇ ಚಿವುಟಿ ಹಾಕುವ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳ ಮೂಲಕ ಅರಿವು ಮೂಡಿಸಲಾಗುತ್ತಿದೆ. ಈ ಬಗ್ಗೆ ಉಪಯು ಕ್ತ ಮಾಹಿತಿ ಸಾಮಾಜಿಕ ಜಾಲತಾಣಗಳಲ್ಲಿ ಲಭ್ಯವಾಗಲಿದ್ದು, ಎಲ್ಲರೂ ವಿಷಯ ಅರಿತುಕೊಂಡು ಆತ್ಮಾವ ಲೋಕನ ಮಾಡಿಕೊಳ್ಳಬೇಕು ಎಂದು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅಧ್ಯಕ್ಷ ಎಂ.ವಿ.ಷಡಕ್ಷರಿ ಹೆಚ್‌ಐವಿ ಕಾಯಿಲೆ ಸಮಾ ಜಕ್ಕೆ ಅಂಟಿಕೊಳ್ಳಬಾರದೆಂಬ ದೃಷ್ಟಿಯಿಂದ ನಗರದ ಬಸ್‌ಸ್ಟ್ಯಾಂಡ್, ನಗರಸಭೆ ಆವರಣ ಹಾಗೂ ಎಸ್‌ಟಿಜೆ ಕಾಲೇಜಿನಲ್ಲಿ ಇಂದು ವಿದ್ಯಾರ್ಥಿಗಳ ಮೂಲಕ ಜಾಗೃತಿ ಕುರಿತು ಬೀದಿ ನಾಟಕ ನಡೆಸಲಾಗಿದೆ ಎಂದರು.
ಈ ಸಂದರ್ಭದಲ್ಲಿ ಎಂಇಎಸ್ ಶೈಕ್ಷಣಿಕ ಸಲಹೆಗಾರ ಮಂಜುನಾಥ್‌ಭಟ್, ಕಚೇರಿ ವಯವಸ್ಥಾಪಕಿ ಶ್ರೀಲಕ್ಷ್ಮೀ, ವಿವಿಧ ವಿಭಾಗದ ಮುಖ್ಯಸ್ಥರು, ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
A person affected by AIDS can live just like everyone else.
Leave a comment