Home namma chikmagalur chikamagalur ಮುತ್ತಿನಪುರ ಗ್ರಾಮದಲ್ಲಿ ಅಕ್ರಮ ನಳಿಕೆಯ ನಾಡಬಂದೂಕು ಪತ್ತೆ
chikamagalurCrime NewsHomeLatest Newsnamma chikmagalur

ಮುತ್ತಿನಪುರ ಗ್ರಾಮದಲ್ಲಿ ಅಕ್ರಮ ನಳಿಕೆಯ ನಾಡಬಂದೂಕು ಪತ್ತೆ

Share
Share

ಚಿಕ್ಕಮಗಳೂರು: ಯಾವುದೇ ಪರವಾನಗಿ ಇಲ್ಲದೆ ಅಕ್ರಮವಾಗಿ ಮನೆಯಲ್ಲಿ ಒಂಟಿ ನಳಿಕೆಯ ನಾಡಬಂದೂಕು ಬಚ್ಚಿಟ್ಟುಕೊಂಡಿದ್ದ ವ್ಯಕ್ತಿಯೊಬ್ಬನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಚಿಕ್ಕಮಗಳೂರು ತಾಲೂಕಿನ ಮುತ್ತಿನಪುರ ಗ್ರಾಮದಲ್ಲಿ ನಡೆದಿದೆ.

ಗ್ರಾಮದ ಫಲಹಾರಸ್ವಾಮಿ ಮಠದ ನಿವಾಸಿ ಸತೀಶ (28) ಎಂಬಾತ ತನ್ನ ಮನೆಯಲ್ಲಿ ಯಾವುದೇ ಅಧಿಕೃತ ದಾಖಲೆ ಅಥವಾ ಪರವಾನಗಿ ಇಲ್ಲದೆ ಬಂದೂಕು ಇಟ್ಟುಕೊಂಡಿರುವ ಬಗ್ಗೆ ಗ್ರಾಮಾಂತರ ಠಾಣೆಯ ಪೊಲೀಸರಿಗೆ ಖಚಿತ ಮಾಹಿತಿ ಲಭ್ಯವಾಗಿತ್ತು. ತಕ್ಷಣವೇ ಕಾರ್ಯಪ್ರವೃತ್ತರಾದ ಪೊಲೀಸರು, ಪಂಚರ ಸಮಕ್ಷಮದಲ್ಲಿ ಆತನ ಮನೆಗೆ ದಿಢೀರ್ ದಾಳಿ ನಡೆಸಿ ತಪಾಸಣೆ ಕೈಗೊಂಡಿದ್ದಾರೆ.

ಮನೆಯ ಬೆಡ್‌ರೂಂ ಅನ್ನು ಪರಿಶೀಲಿಸಿದಾಗ ಮಂಚದ ಅಡಿಯಲ್ಲಿ ಸುಮಾರು ನಾಲ್ಕೂವರೆ ಅಡಿ ಉದ್ದದ, ಕಬ್ಬಿಣದ ಬ್ಯಾರಲ್ ಹಾಗೂ ಹಿತ್ತಾಳೆ ಲೋಹದ ಪಟ್ಟಿ ಸುತ್ತಿದ ಒಂಟಿ ನಳಿಕೆಯ ಮಸಿ ಬಂದೂಕು (ಎಸ್.ಬಿ.ಎಂ.ಎಲ್) ಇರುವುದು ಪತ್ತೆಯಾಗಿದೆ.

ಪರವಾನಗಿ ಇಲ್ಲದೆ ಕಾನೂನುಬಾಹಿರವಾಗಿ ಬಂದೂಕು ಹೊಂದಿದ್ದ ಹಿನ್ನಲೆಯಲ್ಲಿ ಪೊಲೀಸರು ಬಂದೂಕನ್ನು ಮಹಜರ್ ನಡೆಸಿ ಜಪ್ತಿ ಮಾಡಿಕೊಂಡಿದ್ದು, ಆರೋಪಿ ಸತೀಶನ ವಿರುದ್ಧ ಶಸ್ತ್ರಾಸ್ತ್ರ ಕಾಯ್ದೆಯಡಿ (Arms Act) ಪ್ರಕರಣ ದಾಖಲಿಸಿಕೊಂಡು ಮುಂದಿನ ಕಾನೂನು ಕ್ರಮ ಕೈಗೊಂಡಿದ್ದಾರೆ.

Illegal muzzle-loading gun found in Muttinapura village

Share

Leave a comment

Leave a Reply

Your email address will not be published. Required fields are marked *

Don't Miss

ಕೆಎಸ್‌ಆರ್‌ಟಿಸಿ ಬಸ್‌ಗಾಗಿ ರಸ್ತೆಗಿಳಿದ ವಿದ್ಯಾರ್ಥಿಗಳು-ಗ್ರಾಮಸ್ಥರು

ಕಡೂರು: ಗ್ರಾಮೀಣ ಭಾಗದ ಕುಗ್ರಾಮಗಳಿಗೆ ಸಮರ್ಪಕ ಸಾರಿಗೆ ಸೌಲಭ್ಯ ಕಲ್ಪಿಸುವಂತೆ ಒತ್ತಾಯಿಸಿ ಶಾಲಾ-ಕಾಲೇಜು ವಿದ್ಯಾರ್ಥಿಗಳು, ಮಹಿಳೆಯರು ಹಾಗೂ ಗ್ರಾಮಸ್ಥರು ರಸ್ತೆಗಿಳಿದು ಪ್ರತಿಭಟನೆ ನಡೆಸಿದ ಘಟನೆ ಕಡೂರು ತಾಲೂಕಿನ ಕಬ್ಬಳ್ಳಿ ಗೇಟ್ ಬಳಿ...

ವಿಶೇಷ ಅಧಿವೇಶನದಲ್ಲಿ ಪಕ್ಷಭೇದ ಮರೆತು ಮಲೆನಾಡಿನ ಸಮಸ್ಯೆ ಚರ್ಚಿಸಲು ಒತ್ತಾಯ

ಚಿಕ್ಕಮಗಳೂರು: ಕಸ್ತೂರಿರಂಗನ್ ವರದಿ ಕುರಿತು ಚರ್ಚಿಸಲು ರಾಜ್ಯ ಸರ್ಕಾರ ಸೆ.21, 22 ಮತ್ತು 23ರಂದು ಮೂರು ದಿನಗಳ ವಿಶೇಷ ಅಧಿವೇಶನ ಕರೆದಿರುವುದನ್ನು ಜಿಲ್ಲಾ ನಾಗರಿಕ ಮತ್ತು ರೈತ ಹೋರಾಟ ಸಮಿತಿ ಸ್ವಾಗತಿಸಿದೆ....

Related Articles

ಪೌರ ಕಾರ್ಮಿಕರಿಗೆ ಸವಲತ್ತು ಕಲ್ಪಿಸಿ

ಚಿಕ್ಕಮಗಳೂರು:  ಪೌರಕಾರ್ಮಿಕರಿಗೆ ವಸತಿ ಸೌಲಭ್ಯ, ರಜೆ, ಮಕ್ಕಳ ಶಿಕ್ಷಣ ಸೇರಿದಂತೆ ಅವರ ಕಲ್ಯಾಣಕ್ಕೆ ಅಗತ್ಯ ಸೌಕರ್ಯಗಳನ್ನು...

ಗ್ರೌಂಡ್ ಸರ್ವೇ ಅಗತ್ಯ-’ಕಾರ್ಬನ್ ಕ್ರೆಡಿಟ್ ನಿಗಮ’ ಸ್ಥಾಪನೆಗೆ ಪ್ರಸ್ತಾಪ

ಚಿಕ್ಕಮಗಳೂರು:  ಕೇಂದ್ರ ಸರ್ಕಾರ ಪಶ್ಚಿಮ ಘಟ್ಟಗಳ ಪರಿಸರ ಸೂಕ್ಷ್ಮ ವಲಯಕ್ಕೆ  ಸಂಬಂಧಿಸಿದಂತೆ ಉಪಗ್ರಹ ಆಧಾರಿತ ಚಿತ್ರಣವನ್ನು...

ಮಾಂಸ ಮಾರಾಟ- ಮೂವರ ಬಂಧನ

ಎನ್.ಆ‌ರ್. ಪುರ: ಕಾಡಿನಲ್ಲಿ ಮೇಯುತ್ತಿದ್ದ ಜಾನುವಾರನ್ನು ಹಿಡಿದು ತಂದು ಎಸ್ಟೇಟ್‌ ನ ಕೂಲಿಲೈನ್ ಬಳಿ ಬರ್ಬರವಾಗಿ...

ನಕಲಿ ಬೀಗದ ಕೈ ಬಳಸಿ ಮನೆಯಲ್ಲಿದ್ದ ನಗ-ನಗದು ಕಳವು

ಚಿಕ್ಕಮಗಳೂರು: ಮನೆಯ ಯಜಮಾನರು ಹಬ್ಬದ ಸಂಭ್ರಮಕ್ಕೆಂದು ಊರಿಗೆ ತೆರಳಿದ್ದ ಸಮಯವನ್ನೇ ಹೊಂಚು ಹಾಕಿ ಕಾದು, ನಕಲಿ...