Home namma chikmagalur chikamagalur ನಗರದ ಮಾರ್ಕೆಟ್ ರಸ್ತೆಯಲ್ಲಿ ನಕಲಿ ನಾಟಿ ತುಪ್ಪ ತಯಾರಿಸುತ್ತಿದ್ದ ತಂಡ ಪತ್ತೆ
chikamagalurCrime NewsHomeLatest Newsnamma chikmagalur

ನಗರದ ಮಾರ್ಕೆಟ್ ರಸ್ತೆಯಲ್ಲಿ ನಕಲಿ ನಾಟಿ ತುಪ್ಪ ತಯಾರಿಸುತ್ತಿದ್ದ ತಂಡ ಪತ್ತೆ

Share
Share

ಚಿಕ್ಕಮಗಳೂರು : ನಕಲಿ ನಾಟಿ ತುಪ್ಪ ತಯಾರಿಸಿ ಹಳ್ಳಿಗಳಿಗೆ ತೆರಳಿ ಮಾರಾಟ ಮಾಡುತ್ತಿದ್ದ ಜಾಲವನ್ನು ಆಹಾರ ಇಲಾಖೆಯ ಅಧಿಕಾರಿಗಳು ಪತ್ತೆಹಚ್ಚಿದ್ದಾರೆ. ಖಚಿತ ಮಾಹಿತಿ ಮೇರೆಗೆ ಆಹಾರ ಇಲಾಖೆಯ ಅಧಿಕಾರಿ ನಾಗರತ್ನ ನೇತೃತ್ವದ ತಂಡ ನಗರದ ಮಾರ್ಕೆಟ್ ರಸ್ತೆಯಲ್ಲಿರುವ ಪಾಳುಬಿದ್ದ ಮನೆಯೊಂದರ ಮೇಲೆ ದಾಳಿ ನಡೆಸಿದೆ.

ಈ ವೇಳೆ ಡಾಲ್ಲಾ, ವನಸ್ಪತಿ ಹಾಗೂ ವಿವಿಧ ರಾಸಾಯನಿಕಗಳನ್ನು ಬಳಸಿ ನಾಟಿ ತುಪ್ಪ ತಯಾರಿಸುತ್ತಿದ್ದ ತಂಡ ಪತ್ತೆಯಾಗಿದೆ. ನಾಟಿ ತುಪ್ಪದಂತೆ ಕಾಣಲು ಹಾಗೂ ಹಳದಿ ಬಣ್ಣ ಬರಲು ರಾಸಾಯನಿಕಗಳನ್ನು ಬಳಸಲಾಗುತ್ತಿತ್ತು ಎನ್ನಲಾಗಿದೆ.

ಬಳಿಕ ತಯಾರಿಸಿದ ತುಪ್ಪವನ್ನು ಬೈಕ್‌ಗಳಲ್ಲಿ ಹಳ್ಳಿಗಳಿಗೆ ಕೊಂಡೊಯ್ದು ನಾಟಿ ತುಪ್ಪವೆಂದು ಹೇಳಿ ಮಾರಾಟ ಮಾಡುತ್ತಿದ್ದರು ಎಂದು ತಿಳಿದುಬಂದಿದೆ. ದಾಳಿ ವೇಳೆ ಬಳ್ಳಾರಿ ಜಿಲ್ಲೆಯಲ್ಲಿ ನೋಂದಣಿಯಾಗಿರುವ ಮೂರು ಬೈಕ್‌ಗಳನ್ನು ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.

ಪ್ರಕರಣವು ಚಿಕ್ಕಮಗಳೂರು ನಗರ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು, ಆಹಾರ ಇಲಾಖೆಯ ಅಧಿಕಾರಿಗಳು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ

Gang manufacturing fake ghee discovered on Market Road in the city

Share

Leave a comment

Leave a Reply

Your email address will not be published. Required fields are marked *

Don't Miss

‘ದೇಶ ಮೊದಲು’ ಎಂಬ ಭಾವನೆಯೊಂದಿಗೆ ಕರ್ತವ್ಯ ನಿರ್ವಹಿಸಿ

ಚಿಕ್ಕಮಗಳೂರು:  ಸ್ವಾತಂತ್ರ್ಯದ ೮೦ನೇ ವರ್ಷದ ಸಂಭ್ರಮ ಕೇವಲ ಹಬ್ಬದ ಆಚರಣೆಯಾಗದೆ, ಸ್ವಾತಂತ್ರ್ಯ ಹೋರಾಟಗಾರರಿಗೆ ಕೃತಜ್ಞತೆ ಸಲ್ಲಿಸುವ, ದೇಶದ ಸಾಧನೆಗಳನ್ನು ಸ್ಮರಿಸುವ, ಸ್ವಾತಂತ್ರ್ಯದ ಮೌಲ್ಯಗಳನ್ನು ಅರಿತು ಉತ್ತಮ ಭವಿಷ್ಯ ರೂಪಿಸಿಕೊಳ್ಳುವ ಸಂಕಲ್ಪದ ದಿನವಾಗಬೇಕು...

ಕಸ್ತೂರಿ ರಂಗನ್ ವರದಿ ಮರುಪರಿಶೀಲಿಸಲು ರೈತ ಸಂಘ ಆಗ್ರಹ

ಚಿಕ್ಕಮಗಳೂರು: ಜಿಲ್ಲೆಯಲ್ಲಿ ಮುಂಗಾರು ವೈಫಲ್ಯದಿಂದ ಉಂಟಾಗಿರುವ ಬರ ಪರಿಸ್ಥಿತಿಯನ್ನು ತಕ್ಷಣವೇ ಬರಗಾಲವೆಂದು ಘೋಷಿಸಿ ಪರಿಹಾರ ಕ್ರಮ ಕೈಗೊಳ್ಳಬೇಕು. ಮಲೆನಾಡಿನ 137 ಗ್ರಾಮಗಳಿಗೆ ಕಂಟಕವಾಗಿರುವ ಕಸ್ತೂರಿ ರಂಗನ್ ವರದಿಯನ್ನು ಪುನಃ ಪರಿಶೀಲಿಸಿ ಜನವಸತಿ...

Related Articles

ಅಧಿಕಾರ ಎಂಬ ಮಾಯಾ ಜಿಂಕೆ ಮರೆಯಾಗಿದ್ದು ಏಕೆ ?

ಚಿಕ್ಕಮಗಳೂರು: ಕಳೆದ ನಾಲ್ಕು ವರೆ ವರ್ಷಗಳ ಹಿಂದೆಯೇ ವಿಧಾನ ಪರಿಷತ್ ಸದಸ್ಯರಾಗ ಬೇಕಿದ್ದ ಗಾಯಿತ್ರಿ ಶಾಂತೇಗೌಡ...

ಕಾಂಗ್ರೆಸ್ ಆಡಳಿತದಲ್ಲಿ ಭ್ರಷ್ಟಾಚಾರ-ಲೂಟಿಗಾಗಿ ಪೈಪೋಟಿ

ಚಿಕ್ಕಮಗಳೂರು: ಬಿಜೆಪಿ ಸರ್ಕಾರದಲ್ಲಿ ಶಾಸಕರ ನಡುವೆ ಕ್ಷೇತ್ರದ ಅಭಿವೃದ್ಧಿಗೆ ಪೈಪೋಟಿ ನಡೆದರೆ, ಕಾಂಗ್ರೆಸ್ ಆಡಳಿತದಲ್ಲಿ ಭ್ರಷ್ಟಾಚಾರ,ಲೂಟಿಗಾಗಿ...

ಸ್ವಾವಲಂಬನೆ-ಸಮಾಜ ಅವಕಾಶವೇ ಸಹಕಾರಿ ಚಳುವಳಿ ಉದ್ದೇಶ

ಚಿಕ್ಕಮಗಳೂರು: ಸಹಕಾರಿ ಚಳುವಳಿಯ ಮೂಲತತ್ವವೇ ಸ್ವಾವಲಂಬನೆ, ಪರಸ್ಪರ ಸಹ ಕಾರ, ಸಮಾನ ಅವಕಾಶ ಹಾಗೂ ಸಾಮಾಜಿಕ...

ಅಕ್ರಮ ಮರಳು ಸಾಗಾಟ: 407 ಲಾರಿ ವಶ, ಚಾಲಕ ಪೊಲೀಸ್ ವಶಕ್ಕೆ

ಶೃಂಗೇರಿ: ಪರವಾನಗಿ ಇಲ್ಲದೆ 407 ಲಾರಿಯಲ್ಲಿ ಅಕ್ರಮವಾಗಿ ಮರಳು ಸಾಗಿಸುತ್ತಿದ್ದ ಆರೋಪದ ಮೇಲೆ ಶೃಂಗೇರಿ ಪೊಲೀಸರು...