Home namma chikmagalur chikamagalur ಕೈಕುಸ್ತಿ(ಪಂಝಾ)ಆಡುತ್ತಿದ್ದ ವೇಳೆ ಯುವಕನ ಸಾವು
chikamagalurHomeLatest Newsnamma chikmagalur

ಕೈಕುಸ್ತಿ(ಪಂಝಾ)ಆಡುತ್ತಿದ್ದ ವೇಳೆ ಯುವಕನ ಸಾವು

Share
Share

ಕಡೂರು:  ಕೈಕುಸ್ತಿ(ಪಂಝಾ)ಆಡುತ್ತಿದ್ದ ಸ್ನೇಹಿತರುಗಳ ನಡುವೆ ನಡೆದ ಮಾತಿನಚಕಮಕಿಯಿಂದ ಮಾರಣಾಂತಿಕ ಹಲ್ಲೆಗೆ ತಿರುಗಿ ಯುವಕನೊಬ್ಬನು ಮೃತಪಟ್ಟಿದ್ದು, ಕೊಲೆ ಮಾಡಿದ ಇಬ್ಬರು ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಸೋಮವಾರ ಒಳಪಡಿಸಲಾಯಿತು.

ಉತ್ತರ ಪ್ರದೇಶದ ಗೊರಕ್ ಪುರ್ ಜಿಲ್ಲೆಯ ಚೈತ್ರ ಗ್ರಾಮದ   ಕಿಶನ್(20)ಮೃತಪಟ್ಟ ದುರ್ದೈವಿಯಾಗಿದ್ದು. ಬಸವರಾಜ್, ಶೇಕ್ ಮೊಫಿಜಲ್ ಇಬ್ಬರು ಬಂಧಿತ ಆರೋಪಿಗಳಾಗಿದ್ದು. ಕೂಲಿ ಕೆಲಸಕ್ಕೆಂದು ನಗದಿಯಾತ್ ಕಾವಲ್ ಬಳಿ ಕಂಪನಿಯೊಂದರ ಕೆಲಸಕ್ಕೆಂದು ಬಂದಿದ್ದ ಯುವಕರು ಅಲ್ಲಿನ ಕ್ವಾಟ್ರಸ್ ನಲ್ಲಿ ಉಳಿದುಕೊಂಡಿದ್ದರು.
ಭಾನುವಾರ ರಾತ್ರಿ ಪಾರ್ಟಿ ಮಾಡುವ ಉದ್ದೇಶದಿಂದ ಸೇರಿಕೊಂಡಿದ್ದ ಯುವಕರು ಬಳಿಕ ಕೈ ಕುಸ್ತಿ ಆಟಕ್ಕೆ ಮುಂದಾಗಿದ್ದರು. ಆಟದಲ್ಲಿ ಕಿಶನ್ ಮೋಸದಾಟಕ್ಕೆ ಮುಂದಾಗಿದ್ದರ ಬಗ್ಗೆ ಕುಪಿತಗೊಂಡ ಸ್ನೇಹಿತರು ಮಾತಿನ ಚಕಮಕಿಯಿಂದ ವಾಗ್ವಾದಕ್ಕೆ ತಿರುಗಿ ಹಲ್ಲೆ ನಡೆಸಿದ್ದು, ಹಲ್ಲೆಗೊಳಗಾದ ಕಿಶನ್ ಗೆ ಎದೆ ಹಾಗೂ ಹೊಟ್ಟೆ ಭಾಗಕ್ಕೆ ಬಲವಾದ ಪೆಟ್ಟುಬಿದ್ದ ಹಿನ್ನೆಲೆಯಲ್ಲಿ ಅಸ್ವಸ್ಥಗೊಂಡಿದ್ದನು‌.
ಕೂಡಲೇ ಸಾರ್ವಜನಿಕ ಆಸ್ಪತ್ರೆಗೆ ಕರೆತಂದು ಚಿಕಿತ್ಸೆ ಕೊಡಿಸುವಲ್ಲಿ ಅಸುನೀಗಿರುವುದಾಗಿ ವೈದ್ಯರು ಖಚಿತಪಡಿಸಿದ್ದಾರೆ. ಈ ಕುರಿತು ಕಡೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Youth dies while playing hand wrestling (Panja)
Share

Leave a comment

Leave a Reply

Your email address will not be published. Required fields are marked *

Don't Miss

ಪ್ರವಾಸೋದ್ಯಮ ತಾಣಗಳಿಗೆ ಮೂಲಸೌಕರ್ಯಕ್ಕೆ ಆಗ್ರಹಿಸಿ ಕರವೇ ಧರಣಿ

ಚಿಕ್ಕಮಗಳೂರು:  ಮಲೆನಾಡಿನ ಪಶ್ಚಿಮ ಘಟ್ಟ ಪ್ರವಾಸೋದ್ಯಮದ ಹಲವಾರು ಸಮಸ್ಯೆಗಳ ನ್ನು ಪರಿಹರಿಸುವಲ್ಲಿ ವಿಫಲವಾಗಿರುವ ಜಿಲ್ಲಾಡಳಿತ ವಿರುದ್ಧ ಸೋಮವಾರ ಜಿಲ್ಲಾ ಕರವೇ (ಶಿವರಾಮೇ ಗೌಡ ಬಣ) ಮುಖಂಡರುಗಳು ಅರೆಬೆತ್ತಲಾಗಿ, ಬಾಯಿಗೆ ಕಪ್ಪುಪಟ್ಟಿ ಕಟ್ಟಿಕೊಂಡು,...

ಮಲ್ಲೇಗೌಡ ಆಸ್ಪತ್ರೆ ಆರೋಗ್ಯ ಸೇವೆ ಬಲಪಡಿಸಲು ಜಿಲ್ಲಾಧಿಕಾರಿ ಸೂಚನೆ

ಚಿಕ್ಕಮಗಳೂರು: ನಗರದ ಮಲ್ಲೇಗೌಡ ಸರ್ಕಾರಿ ಜಿಲ್ಲಾ ಆಸ್ಪತ್ರೆಗೆ ಜಿಲ್ಲಾಧಿಕಾರಿ ಭಂವರ್ ಸಿಂಗ್ ಮೀನಾ ಅವರು ಸೋಮವಾರ ಭೇಟಿ ನೀಡಿ ಆಸ್ಪತ್ರೆಯ ವಿವಿಧ ವಿಭಾಗಗಳ ಕಾರ್ಯವೈಖರಿ ಹಾಗೂ ಸಾರ್ವಜನಿಕರಿಗೆ ಸಿಗುತ್ತಿರುವ ಆರೋಗ್ಯ ಸೇವೆಗಳನ್ನು...

Related Articles

ಜಯಪುರ ಠಾಣೆಯ ಮಹಿಳಾ ಸಿಬ್ಬಂದಿಗೆ ಬಾಗಿನ

ಕೊಪ್ಪ : ಹಬ್ಬ-ಹರಿದಿನಗಳಲ್ಲೂ ಕರ್ತವ್ಯದಲ್ಲೇ ನಿರತರಾಗಿರುವ ಪೊಲೀಸ್ ಸಿಬ್ಬಂದಿಯ ಮೊಗದಲ್ಲಿ ಹಬ್ಬದ ಸಂಭ್ರಮ ಮೂಡಿಸುವ ಅರ್ಥಪೂರ್ಣ...

ಟ್ರಾಕ್ಟರ್ ಹರಿಸಿ ₹1.15 ಲಕ್ಷ ಮೌಲ್ಯದ ರಾಗಿ ಬೆಳೆ ನಾಶ

ತರೀಕೆರೆ : ನ್ಯಾಯಾಲಯದ ಸ್ಪಷ್ಟ ತಡೆಯಾಜ್ಞೆ ಇದ್ದರೂ ಅದ್ಯಾವುದನ್ನೂ ಲೆಕ್ಕಿಸದೆ, ಜಮೀನಿಗೆ ಅಕ್ರಮವಾಗಿ ನುಗ್ಗಿ ಕಟಾವಿಗೆ...

ಸಚಿವ ಕೃಷ್ಣಬೈರೇಗೌಡ ಹೇಳಿಕೆ ಖಂಡನೀಯ

ಚಿಕ್ಕಮಗಳೂರು- ಬೆಂಗಳೂರು ನಗರ ಪರಿಶೀಲನೆ ಮಾಡುವ ಸಂದರ್ಭದಲ್ಲಿ ಸಚಿವ ಕೃ?ಬೈರೇಗೌಡರು ಪೌರಕಾರ್ಮಿಕರ ಬಗ್ಗೆ ತುಚ್ಚವಾಗಿ ಮಾತನಾಡಿರುವುದನ್ನು...

ಮುಂದಿನ ದಿನಗಳಲ್ಲಿ ದೇವಾಲಯದ ಜಿರ್ಣೋದ್ದಾರಕ್ಕೆ ಅನುದಾನ

ಬೀರೂರು:ಕಾಂಗ್ರೆಸ್ ಸರಕಾರದಲ್ಲಿ ನನ್ನಂತ ಹಿಂದುಳಿದ ವರ್ಗದ ಶಾಸಕನಿಗೆ ಸಚಿವ ಸಂಪುಟದಲ್ಲಿ ಸ್ಥಾನ ನೀಡಿದ ಮಾಜಿ ಮುಖ್ಯಮಂತ್ರಿ...