Home namma chikmagalur chikamagalur ಮಳೆ ಅಭಾವ-ರೈತರ ಕಣ್ಣಲ್ಲಿ ದುಃಖ-ಜನ ಜಾನುವಾರು ಕಂಗಾಲು
chikamagalurHomeLatest Newsnamma chikmagalur

ಮಳೆ ಅಭಾವ-ರೈತರ ಕಣ್ಣಲ್ಲಿ ದುಃಖ-ಜನ ಜಾನುವಾರು ಕಂಗಾಲು

Share
Share

ಚಿಕ್ಕಮಗಳೂರು:  ಬಾರೋ,ಬಾರೋ ಮಳೆರಾಯ .ಜನ,ದನ,ಕರುಗಳಿಗೆ ನೀರಿಲ್ಲ,ತೋಟ,ಗದ್ದೆಗಳಿಗೆ ನೀರಿಲ್ಲ ಎಂದು ರೈತರು ಮತ್ತು ಜನಸಾಮಾನ್ಯರು ಒಮ್ಮೆ ಅಕಾಶದ ಕಡೆಗೆ ಕತ್ತು ಮೇಲೆ ಎತ್ತಿ ಇನ್ನೊಮ್ಮೆ ಭೂಮಿ ಕಡೆ ನೋಡಿ ಕಣ್ಣಂಚಿನಲ್ಲಿ ನೀರು ತುಂಬಿ ಕೊಳ್ಳುವ ದೃಶ್ಯ ಕಂಡು ಬರುತ್ತಿದೆ.

ರಾಜ್ಯದಲ್ಲಿ ವಾಡಿಕೆ ಮಳೆಗಿಂತ 40 % ರಷ್ಟು ಮಳೆ ಕಡಿಮೆಯಾಗಿದೆ ಎನ್ನಲಾಗುತ್ತಿದೆ.ಚಿಕ್ಕಮಗಳೂರು ಜಿಲ್ಲೆಯಲ್ಲಿ ಮಲೆನಾಡಿನ ಕೆಲ ಭಾಗಗಳಲ್ಲಿ ವಾಡಿಕೆ ಮಳೆ ಬಂದರೆ ಇನ್ನೂ ಕೆಲ ಭಾಗಗಳಲ್ಲಿ 60% ರಷ್ಟು ಮಳೆ ಬಂದಿದೆ ಇನ್ನೂ ಉಳಿದ ಕಡೂರು ತರೀಕೆರೆ ಮತ್ತು ಅಜ್ಜಂಪುರ ತಾಲ್ಲೂಕಿನಲ್ಲಿ ವಾಡಿಕೆ ಮಳೆ ಇರಲಿ ಪೂರ್ಣ ಮಳೆ ಬಂದಿಲ್ಲ.

ಹೀಗಾಗಿ ರೈತರು ಕಣ್ಣ್,ಕಣ್ಣ್ ಬಿಡುತ್ತಿದ್ದಾರೆ.ಒಟ್ಟಾರೆ ಮುಂಗಾರು ಮಳೆ ಕ್ಷೀಣಿಸಿದೆ ಎಂಬುದಕ್ಕೆ ಒಣಗುತ್ತಿರುವ ಅಡಿಕೆ ತೋಟಗಳೇ ಸಾಕ್ಷಿ. ಕೆರೆ,ಕಟ್ಟೆ,ಹಳ್ಳ,ಕೊಳ್ಳದಲ್ಲಿ ಒಂದು ಹನಿ ನೀರು ಇಲ್ಲದಿರುವುದನ್ನು ನೋಡಿದರೆ ಜನ ಗುಳಿ ಹೋಗಾಬೇಕಾಗುತ್ತದೆ ಎನ್ನಿಸುತ್ತದೆ.

ಕಾಫಿ ಬೆಳೆಗಾರರು,ರೈತರು ಬೀಜ,ರಸಗೊಬ್ಬರ ಖರೀದಿಸಿ ಭೂ ತಾತಿ ಒಡಲಿಗೆ ಬಸಿದಿದ್ದು ನಷ್ಟ ಉಂಟಾಗಿದೆ.ಇನ್ನೂ ಆಸೆ ಕಂಗಳಿಂದ ಮೈಲಿಗಟ್ಟಲೆ ಕ್ಯೂ ನಲ್ಲಿ ನಿಂತಿರುವ ದೃಶ್ಯ ಸಾಮಾನ್ಯವಾಗಿ ಕಂಡು ಬರುತ್ತಿರುವುದು ನೋಡಿದರೆ ಮುಂದಿನ ದಿನಗಳಲ್ಲಿ ಮಳೆ ಬಂದರೆ ತೊಂದರೆ ಇಲ್ಲ .ಇಲ್ಲದಿದ್ದರೆ ಜೇಬಿನ ಹಣ ಖಾಲಿ ಮಾಡಿಕೊಂಡು ಪರಿತಪಿಸುವುದು ಗ್ಯಾರಂಟಿ.

ಮುಂಗಾರು ಮಳೆ ಬಾರಾದೇ ತೀವ್ರ ತೊಂದರೆಗೆ ಒಳಗಾಗಿರುವ ರೈತಾಪಿ ಜನರು ಕುಗ್ಗಿ ಹೋಗಿದ್ದಾರೆ.ಬಯಲು ಪ್ರದೇಶದಲ್ಲಿ ಮುಂಗಾರು ಬೆಳೆಗಳಾದ ಕಡಲೆ,ಈರುಳ್ಳಿ, ಜೋಳ,ಎಳ್ಳು ಮತ್ತು ತರಕಾರಿ ಬೆಳೆಗಳನ್ನು ಬೆಳೆಯಲಾಗಿಲ್ಲಾ.ಇನ್ನೂ ಹಿಂಗಾರು ಬೆಳೆಗಳನ್ನು ಬೆಳೆಯುವ ತವಕದಲ್ಲಿದ್ದಾರೆ.ಮಳೆ ಬಂದರೆ ಪರವಾಗಿಲ್ಲ ಇಲ್ಲದಿದ್ದರೆ ದನ ಕರಗಳ ಸಮೇತ ಗುಳೇ ಹೋಗುವ ದಾರಿ ಬಿಟ್ಟರೆ ಬೇರೆ ಏನೂ ಮಾಡಲು ಸಾಧ್ಯವಿಲ್ಲ.

ರೈತ ಕೇಳುವುದು ಮಳೆ ಬೇಳೆ ಇವುಗಳು ಸಿಕ್ಕರೆ ಪಂಚ ಪ್ರಾಣ ಆದರೆ ಒಣಗುತ್ತಿರುವ ಅಡಿಕೆ ತೋಟಗಳನ್ನು ನೋಡಿದರೆ ಪರಿಸ್ಥಿತಿ ಸುಧಾರಣೆ ಆಗುವ ಲಕ್ಷಣಗಳು ಇಲ್ಲ. ಹೀಗಾಗಲೇ ಹಲವು ಹಳ್ಳಿಯಲ್ಲಿ ಕುಡಿಯುವ ನೀರು ಸಿಗುತ್ತಿಲ್ಲ.

ಬೋರ್ ವೆಲ್ ಗಳು ಬತ್ತಿ ನಿಂತಿವೆ.ಅನ್ನದಾತನಿಗೆ ಕಣ್ಣೀರು ಒರೆಸುವ ಬದಲಿಗೆ ಆಡಳಿತರೂಡರು ಮಂತ್ರಿ ನಿಗಮ ಅಧಿಕಾರ ಹಸ್ತಾಂತರ ಎಂದು ದಿಗಿಲಿಡಿದು ಓಡಾಡುತ್ತಿದ್ದಾರೆ ತಮ್ಮ ಬೆಂಬಲಿಗರ ಮೂಲಕ ಹೇಳಿಕೆ ಕೊಡಿಸುತ್ತಿದ್ದಾರೆ.ರೆಸಾರ್ಟ್ ರಾಜಕಾರಣದಲ್ಲಿ ಮುಳುಗೇಳುತ್ತಿದ್ದಾರೆ.ರೈತರಿಗೆ ಹಿಂಗಾರು ಮಳೆಯಾದರು ಬಂದು ದನಕರುಗಳಿಗೆ ಮತ್ತು ಜನರಿಗೆ ನೆಮ್ಮದಿ ಸಿಗಲಿ.

Lack of rain – sadness in the eyes of farmers – people and livestock are in distress

Share

Leave a comment

Leave a Reply

Your email address will not be published. Required fields are marked *

Don't Miss

ಪೊಲೀಸ್ ಕಾನ್‌ಸ್ಟೇಬಲ್ ಲಿಖಿತ ಪರೀಕ್ಷೆಗೆ 451 ಅಭ್ಯರ್ಥಿಗಳ ಗೈರು

ಚಿಕ್ಕಮಗಳೂರು: ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ) ವತಿಯಿಂದ ಭಾನುವಾರ ರಾಜ್ಯಾದ್ಯಂತ ನಡೆದ ಪೊಲೀಸ್ ಕಾನ್‌ಸ್ಟೇಬಲ್ (ಸಿವಿಲ್) ಹುದ್ದೆಗಳ ಲಿಖಿತ ಪರೀಕ್ಷೆಯು ಚಿಕ್ಕಮಗಳೂರು ಜಿಲ್ಲೆಯ ೧೬ ಪರೀಕ್ಷಾ ಕೇಂದ್ರಗಳಲ್ಲಿ ಯಾವುದೇ ಅಡೆತಡೆ ಇಲ್ಲದೆ...

ವಿಧಾನ ಪರಿಷತ್ ಸದಸ್ಯೆಯಾಗಿ ಗಾಯತ್ರಿ ಶಾಂತೇಗೌಡ ಇಂದು ಪ್ರಮಾಣ ವಚನ

ಬೆಂಗಳೂರು: ಕರ್ನಾಟಕ ವಿಧಾನ ಪರಿಷತ್ತಿನ ನೂತನ ಸದಸ್ಯೆಯಾಗಿ ನೇಮಕಗೊಂಡಿರುವ ಶ್ರೀಮತಿ ಗಾಯತ್ರಿ ಶಾಂತೇಗೌಡ ಅವರು ಸೋಮವಾರ (ಆಗಸ್ಟ್ 3) ಮಧ್ಯಾಹ್ನ 12 ಗಂಟೆಗೆ ವಿಧಾನಸೌಧದ ಬ್ಯಾಂಕ್ವೆಟ್ ಹಾಲ್‌ನಲ್ಲಿ ನಡೆಯುವ ಸಮಾರಂಭದಲ್ಲಿ ಪ್ರಮಾಣ...

Related Articles

ದೇವಸ್ಥಾನ ಪ್ರವೇಶದ ವಿಚಾರಕ್ಕೆ ಬಾಲಕನ ಮೇಲೆ ಕತ್ತಿಯಿಂದ ಹಲ್ಲೆಗೆ ಯತ್ನ

ಚಿಕ್ಕಮಗಳೂರು: ದೇವಸ್ಥಾನ ಪ್ರವೇಶದ ವಿಚಾರಕ್ಕೆ ಸಂಬಂಧಿಸಿದಂತೆ ಪರಿಶಿಷ್ಟ ಜಾತಿಗೆ ಸೇರಿದ 16 ವರ್ಷದ ಬಾಲಕನಿಗೆ ಅವಾಚ್ಯವಾಗಿ...

ಸ್ಕೂಟರ್ ಮರದ ಬಿಳಲಿಗೆ ಡಿಕ್ಕಿಗೆ ಮಹಿಳೆ ಸ್ಥಳದಲ್ಲೇ ಸಾವು

ಕಡೂರು: ಸ್ಕೂಟರ್ ನಿಯಂತ್ರಣ ತಪ್ಪಿ ಆಲದ ಮರದ ಬಿಳಲಿಗೆ ಡಿಕ್ಕಿ ಹೊಡೆದ ಪರಿಣಾಮ ಹಿಂಬದಿ ಕುಳಿತಿದ್ದ...

ಜಲಜೀವನ್ ಮಿಷನ್ ಕಾಮಗಾರಿ ಸ್ಥಳದಿಂದ ಜನರೇಟರ್, ಪೈಪ್ ಕಳವು

ಚಿಕ್ಕಮಗಳೂರು: ಜಲಜೀವನ್ ಮಿಷನ್ ಯೋಜನೆಯಡಿ ಕುಡಿಯುವ ನೀರಿನ ಪೈಪ್‌ಲೈನ್ ಕಾಮಗಾರಿಗೆ ಬಳಸುತ್ತಿದ್ದ 10 ಕೆವಿಎ ಡೀಸೆಲ್...

ಬೀರೂರಿನ ಫೈನಾನ್ಸ್ ಕಂಪನಿಗೆ ₹9.91 ಲಕ್ಷ ವಂಚನೆ

ಬೀರೂರು: ಬೇರೊಬ್ಬ ವ್ಯಕ್ತಿಯಂತೆ ನಟಿಸಿ ಫೈನಾನ್ಸ್‌ನಲ್ಲಿ ಗಿರವಿ ಇಟ್ಟಿರುವ ಚಿನ್ನ ಬಿಡಿಸಿಕೊಡುವುದಾಗಿ ನಂಬಿಸಿ ನವರತ್ನ ಗೋಲ್ಡ್...