Home namma chikmagalur chikamagalur ಮೂಡಿಗೆರೆಯಲ್ಲಿ ಬಾಗಿಲು ಮುರಿದು ಕಳ್ಳತನ
chikamagalurCrime NewsHomeLatest Newsnamma chikmagalur

ಮೂಡಿಗೆರೆಯಲ್ಲಿ ಬಾಗಿಲು ಮುರಿದು ಕಳ್ಳತನ

Share
Share

ಮೂಡಿಗೆರೆ: ಬೀಗ ಹಾಕಿದ್ದ ಮನೆಯೊಂದರ ಮುಂಬಾಗಿಲು ಮುರಿದು ಮನೆಯೊಳಗೆ ನುಗ್ಗಿ ನಗದು ಸಹಿತ ಅಪಾರ ಮೌಲ್ಯದ ವಸ್ತುಗಳನ್ನು ಕಳವು ಮಾಡಿರುವ ಘಟನೆ ತಾಲ್ಲೂಕಿನ ಗೋಣಿಬೀಡು ಗ್ರಾಮದಲ್ಲಿ ನಡೆದಿದೆ.

ಗೋಣಿಬೀಡಿನ ಮಂಡಿಮನೆ ಲಕ್ಷ್ಮಣಗೌಡ ಎಂಬುವರ ಮನೆಯಲ್ಲಿ ಈ ಕಳ್ಳತನ ನಡೆದಿದೆ. ಮನೆಯವರು ಮೇ 30ರಂದು ಮಧ್ಯಾಹ್ನ ಸಕಲೇಶಪುರದಲ್ಲಿರುವ ಮಗಳ ಮನೆಗೆ ತೆರಳಿದ್ದರು. ಜೂ 1ರಂದು ಬೆಳಿಗ್ಗೆ ಮನೆಗೆ ಬಂದು ನೋಡಿದಾಗ ಕಳ್ಳತನ ನಡೆದಿರುವುದು ಗೊತ್ತಾಗಿದೆ.

ಕಳ್ಳರು ಮನೆಯ ಮುಂಬಾಗಿಲನ್ನು ಮುರಿದು ಸಿಸಿಟಿವಿ ಕ್ಯಾಮೆರಾಗಳನ್ನು ಧ್ವಂಸಗೊಳಿಸಿದ್ದಾರೆ. ಕೊಠಡಿಯಲ್ಲಿದ್ದ ₹ 10 ಸಾವಿರ ನಗದು, ₹ 25 ಸಾವಿರ ರೂಪಾಯಿ ಮೌಲ್ಯದ ಎರಡು ವಾಚು ಹಾಗೂ * 10 ಸಾವಿರ ಬೆಲೆಯ ಒಂದು ಆಂಪ್ಲಿಫೈಯರ್ ಸೇರಿ ಒಟ್ಟು ಸುಮಾರು ₹ 45 ಸಾವಿರ ರೂಪಾಯಿ ಮೌಲ್ಯದ ಸ್ವತ್ತನ್ನು ದೋಚಿ ಪರಾರಿಯಾಗಿದ್ದಾರೆ.

ಮನೆಯಲ್ಲಿದ್ದ ಎರಡು ಸ್ಪೀಕರ್ ಹಾಗೂ ಜನರೇಟರ್ ಅನ್ನು ಕಳ್ಳತನ ಮಾಡಲು ಯತ್ನಿಸಿದ್ದು, ಅವುಗಳನ್ನು ಮನೆಯಿಂದ ಹೊರ ತಂದಿಟ್ಟು ಅಲ್ಲಿಯೇ ಬಿಟ್ಟು ಹೋಗಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಜೂನ್ 3 ರಂದು ಲಕ್ಷ್ಮಣಗೌಡ ಅವರು ನೀಡಿದ ದೂರಿನನ್ವಯ ಗೋಣಿಬೀಡು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಕಳ್ಳರ ಪತ್ತೆಗೆ ತನಿಖೆ ಮುಂದುವರಿಸಿದ್ದಾರೆ.

Burglary in Mudigere breaking into a door

Share

Leave a comment

Leave a Reply

Your email address will not be published. Required fields are marked *

Don't Miss

ಕೇಂದ್ರ ಶಿಕ್ಷಣ ಸಚಿವರ ವಜಾಕ್ಕೆ ಆಗ್ರಹಿಸಿ ಸಿಪಿಐ(ಎಂ.ಎಲ್)ರೆಡ್‌ಸ್ಟಾರ್ ಪ್ರತಿಭಟನೆ

ಚಿಕ್ಕಮಗಳೂರು: ದೆಹಲಿಯ ಜಂತರ್ ಮಂತರ್‌ನಲ್ಲಿ ಶಾಂತಿಯುತವಾಗಿ ಪ್ರತಿಭಟನೆ ನಡೆಸುತ್ತಿದ್ದವರ ಮೇಲೆ ನಡೆದ ಪ್ರಹಾರವನ್ನು ಖಂಡಿಸಿರುವ ಸಿಪಿಐ(ಎಂ.ಎಲ್)ರೆಡ್‌ಸ್ಟಾರ್ ಪಕ್ಷವು, ನೀಟ್ ಪ್ರಶ್ನೆಪತ್ರಿಕೆ ಸೋರಿಕೆಯಾಗಿದ್ದು, ಕೇಂದ್ರದ ಶಿಕ್ಷಣ ಸಚಿವರನ್ನು ಸಚಿವ ಸಂಪುಟದಿಂದ ವಜಾಗೊಳಿಸಬೇಕೆಂದು ಒತ್ತಾಯಿಸಿ...

ಕಾಫಿ ತೋಟದ ಮಾಲೀಕ ಹಾರಿಸಿದ ಗುಂಡೇಟಿನಿಂದ ಬಾಲಕನಿಗೆ ಗಾಯ

ಮೂಡಿಗೆರೆ: ಕೂಲಿ ಹಣದ ವಿಚಾರವಾಗಿ ಕಾಫಿ ತೋಟದ ಮಾಲೀಕ ಹಾಗೂ ಕಾರ್ಮಿಕರ ನಡುವೆ ಮಾತಿನ ಚಕಮಕಿ ನಡೆದಾಗ, ತೋಟದ ಮಾಲೀಕ ಹಾರಿಸಿದ ಗುಂಡು 4 ವರ್ಷದ ಬಾಲಕನ ತಲೆಗೆ ತಾಗಿದ ಘಟನೆ...

Related Articles

ತಾಕತ್ತಿದ್ದರೆ ಸಿ.ಟಿ. ರವಿಯನ್ನು ತಡೆಯಿರಿ

  ಚಿಕ್ಕಮಗಳೂರು, ಜು.30: ಮಾಜಿ ಸಚಿವರು ಹಾಗೂ ವಿಧಾನ ಪರಿಷತ್ ಸದಸ್ಯರಾದ ಡಾ. ಸಿ.ಟಿ. ರವಿ...

ಜಲಯೋಗ ಸಾಧನೆಯಲ್ಲಿ ವಕೀಲ ವಿ.ಕೆ.ರಘು ವಿಶ್ವ ದಾಖಲೆ

ಚಿಕ್ಕಮಗಳೂರು: ನಗರದ ವಕೀಲ ವಿ.ಕೆ.ರಘು ಅವರು ಜಲಯೋಗ ಸಾಧನೆಯಲ್ಲಿ ವಿಶ್ವ ದಾಖಲೆ ನಿರ್ಮಿಸಿದ್ದಾರೆ. ಈ ಬಾರಿಯ...

ಬ್ಯಾಂಕ್ ಸಾಲದಿಂದ ಮುಕ್ತಿ ಹೊಂದಲು ಕ್ಯಾನ್ ಅದಾಲತ್

ಚಿಕ್ಕಮಗಳೂರು: ಬ್ಯಾಂಕ್ ಸುಸ್ತಿದಾರ ಬೆಳೆಗಾರರ ಅನುಕೂಲಕ್ಕಾಗಿ ಕೆನರಾ ಬ್ಯಾಂಕ್ ಕಾಫಿ ಬೆಳೆಯುವ ಜಿಲ್ಲೆಗಳ ಆಯ್ದ ಕೆಲವು...

ರಾಜ್ಯ ಮಟ್ಟದ ಕಬಡ್ಡಿಯಲ್ಲಿ ಚಿಕ್ಕಮಗಳೂರು ಮಹಿಳಾ ತಂಡಕ್ಕೆ ಚಾಂಪಿಯನ್ ಪಟ್ಟ

ಚಿಕ್ಕಮಗಳೂರು: ಕರ್ನಾಟಕ ಸರ್ಕಾರದ ಸಾರಿಗೆ ಸಚಿವರಾದ ಶ್ರೀ ಬೈರತಿ ಸುರೇಶ್ ಅವರ ನೇತೃತ್ವದಲ್ಲಿ ಜುಲೈ 27ರಿಂದ...