Home namma chikmagalur chikamagalur ನಾಗಲಕ್ಷ್ಮಿ ಚಿತ್ರಮಂದಿರದ ಪ್ರದರ್ಶನ ಸ್ಥಗಿತ
chikamagalurCrime NewsHomeLatest Newsnamma chikmagalur

ನಾಗಲಕ್ಷ್ಮಿ ಚಿತ್ರಮಂದಿರದ ಪ್ರದರ್ಶನ ಸ್ಥಗಿತ

Share
Share

ಚಿಕ್ಕಮಗಳೂರು: ಅಗ್ನಿ ಸುರಕ್ಷತಾ ಪರಿಕರಗಳನ್ನು ಅಳವಡಿಸದ ಕಾರಣಕ್ಕೆ ನಗರದ ನಾಗಲಕ್ಷ್ಮಿ ಚಿತ್ರಮಂದಿರದಲ್ಲಿ ಚಲನಚಿತ್ರ ಪ್ರದರ್ಶನಗಳನ್ನು ಅಧಿಕಾರಿಗಳು ಬಂದ್ ಮಾಡಿಸಿದರು.

ಕಂದಾಯ ಇಲಾಖೆ, ಪೊಲೀಸ್, ಅಗ್ನಿಶಾಮಕ ಅಧಿಕಾರಿಗಳು ಶುಕ್ರವಾರ ಭೇಟಿ ನೀಡಿ ಚಿತ್ರಮಂದಿರದಲ್ಲಿ ಚಲನಚಿತ್ರ ಪ್ರದರ್ಶನ ಸ್ಥಗಿತಗೊಳಿಸಿದರು.

ಏಪ್ರಿಲ್ 17ರಂದು ಅಗ್ನಿಶಾಮಕ ಇಲಾಖೆ ಅಧಿಕಾರಿಗಳು ಚಿತ್ರಮಂದಿರಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು. ಈ ಸಂದರ್ಭದಲ್ಲಿ ಉಪಕರಣಗಳು ದುರಸ್ಥಿಯಲ್ಲಿರುವುದು ಕಂಡು ಬಂದಿತ್ತು.

ಹೊಸ ಮಾದರಿಯ ಅಗ್ನಿನಂದಕ ಉಪಕರಣಗಳನ್ನು ಅಳವಡಿಸಿಕೊಳ್ಳಬೇಕು. ಅಳವಡಿಕೆ ಮಾಡಿರುವ ಬಗ್ಗೆ 5 ದಿನದೊಳಗೆ ದೃಢೀಕರಣ ನೀಡಬೇಕು ಎಂದು ಸೂಚನಾ ಪತ್ರ ನೀಡಿದ್ದರು.

ಈವರೆಗೆ ದೃಢೀಕರಣ ಪತ್ರ ಸಲ್ಲಿಸಿ ಪರವಾನಗಿ ನವೀಕರಿಸಿಕೊಳ್ಳದ ಕಾರಣ ಚಲನಚಿತ್ರ ಪ್ರದರ್ಶನ ಸ್ಥಗಿತಗೊಳಿಸಿದರು.

Nagalakshmi Cinema’s show suspended

Share

Leave a comment

Leave a Reply

Your email address will not be published. Required fields are marked *

Don't Miss

ನೀಟ್ ವಿದ್ಯಾರ್ಥಿಗಳ ಹಲ್ಲೆ ಖಂಡಿಸಿ ಸಿಪಿಐನಿಂದ ಪ್ರತಿಭಟನೆ

ಚಿಕ್ಕಮಗಳೂರು:  ನೀಟ್ ವಿದ್ಯಾರ್ಥಿಗಳ ಮೇಲೆ ಹಲ್ಲೆ ಮಾಡಿರುವ ಕೇಂದ್ರ ಸರ್ಕಾರದ ಧೋರಣೆಯನ್ನು ಖಂಡಿಸಿ ಸಿಪಿಐ ತಾಲ್ಲೂಕು ಘಟಕದಿಂದ ಗುರುವಾರ ನಗರದ ಆಜಾದ್‌ಪಾರ್ಕ್ ವೃತ್ತ ದಲ್ಲಿ ಮುಖಂಡರುಗಳು ಪ್ರತಿಭಟನೆ ನಡೆಸುವ ಮೂಲಕ ಆಕ್ರೋಶ...

ಮಳೆಗಾಗಿ ಅಯ್ಯನಕೆರೆ, ಮದಗದಕೆರೆ ತಪ್ಪಲಿನಲ್ಲಿ ವಿಶೇಷ ಪೂಜೆ

ಚಿಕ್ಕಮಗಳೂರು: ಮಳೆ ಕೊರತೆಯಿಂದ ಆತಂಕಗೊಂಡಿರುವ ಕಡೂರು ತಾಲೂಕಿನ ಅಯ್ಯನಕೆರೆ ಹಾಗೂ ಮದಗದಕೆರೆ ತಪ್ಪಲಿನ ಗ್ರಾಮಸ್ಥರು ಉತ್ತಮ ಮಳೆಯಾಗಿ ಕೆರೆಗಳು ತುಂಬಲಿ ಎಂಬ ಆಶಯದೊಂದಿಗೆ ವಿಶೇಷ ಪೂಜೆ ನೆರವೇರಿಸಿದರು. ಸುಮಾರು 1,300 ಹೆಕ್ಟೇರ್...

Related Articles

ಸಮ ಸಮಾಜ ನಿರ್ಮಿಸಲು ಒಂದಾಗಿ ಹೋರಾಟ ನಡೆಸುವುದು ಇಂದಿನ ಅಗತ್ಯ

ಚಿಕ್ಕಮಗಳೂರು: ಸಮಾನತೆಯ ಆಶಯ ದೊಂದಿಗೆ ಸಮ ಸಮಾಜ ನಿರ್ಮಿಸಲು ಒಂದಾಗಿ ಹೋರಾಟ ನಡೆಸುವುದು ಇಂದಿನ ಅಗತ್ಯ...

ಭೀಕರ ರಸ್ತೆ ಅಪಘಾತದಲ್ಲಿ ಬೈಕ್ ಸವಾರ ಸಾವು

ಶೃಂಗೇರಿ : ತಾಲೂಕಿನ ನೆಮ್ಮಾರ್ ಸರ್ಕಲ್‌ನಲ್ಲಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಬೈಕ್ ಸವಾರನೊಬ್ಬ ಸ್ಥಳದಲ್ಲೇ...

ಶಂಕರ ಭಾರತಿ ಗೋಶಾಲೆಗೆ ₹10 ಲಕ್ಷ ವೆಚ್ಚದ ನೂತನ ಗೋಶೆಡ್ ನಿರ್ಮಾಣ

ಚಿಕ್ಕಮಗಳೂರು: ರಾಜ್ಯ ಸರ್ಕಾರದ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಅಧೀನದಲ್ಲಿ ಕಾರ್ಯನಿರ್ವಹಿಸುತ್ತಿರುವ ಕರ್ನಾಟಕ ಸ್ಟೇಟ್...

ಕಾವೇರಿ ನೀರು ಹರಿಸುವುದನ್ನು ವಿರೋಧಿಸಿ ರಾಜ್ಯ ರೈತ ಸಂಘ ಪ್ರತಿಭಟನೆ

ಚಿಕ್ಕಮಗಳೂರು: ತಮಿಳುನಾಡಿಗೆ ಕಾವೇರಿ ನೀರು ಹರಿಸುವುದನ್ನು ವಿರೋಧಿಸಿ ಕರ್ನಾಟಕ ರಾಜ್ಯ ರೈತ ಸಂಘದ ಕಾರ್ಯಕರ್ತರು ನಗರದಲ್ಲಿ...