Home namma chikmagalur chikamagalur ರೂಬೆನ್ ಮೊಸಸ್ ಗೆ ನ್ಯಾಷನಲ್ ಬೆಸ್ಟ್ ಸೋಷಿಯಲ್ ವರ್ಕರ್ ಅವಾರ್ಡ್ 
chikamagalurHomeLatest Newsnamma chikmagalur

ರೂಬೆನ್ ಮೊಸಸ್ ಗೆ ನ್ಯಾಷನಲ್ ಬೆಸ್ಟ್ ಸೋಷಿಯಲ್ ವರ್ಕರ್ ಅವಾರ್ಡ್ 

Share
Share
ಚಿಕ್ಕಮಗಳೂರು: ಸಮಾಜ ಸೇವೆಯಲ್ಲಿ ಗುರುತಿಸಿಕೊಂಡಿರುವ ರೂಬೆನ್ ಮೊಸಸ್ ರವರಿಗೆ ನ್ಯಾಷನಲ್ ಬೆಸ್ಟ್ ಸೋಷಿಯಲ್ ವರ್ಕರ್ ಅವಾರ್ಡ್ ದೊರೆತಿದೆ.
ಹಲವಾರು ವರ್ಷಗಳಿಂದ ಹಲವು ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸುತ್ತಿರುವ ರೂಬೆನ್ ಮೊಸಸ್ ರವರಿಗೆ ನವದೆಹಲಿಯ ವರ್ಲ್ಡ್ ಚಾರಿಟಿ ವೆಲ್ಫೇರ್ ಫೌಂಡೇಶನ್ ಬೆಂಗಳೂರಿನ ಗಾಂಧಿ ಭವನದಲ್ಲಿ ನಡೆಸಿದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಈ ಪ್ರಶಸ್ತಿಯನ್ನು ಅವರಿಗೆ ನೀಡಿ ಗೌರವಿಸಿದೆ
ಸರ್ವ ಧರ್ಮ ಯುವಕ ಸಂಘದ ಮೂಲಕ ಸಮಾಜ ಸೇವೆ ಆರಂಭಿಸಿದ ಅವರು ಲಯನ್ಸ್ ಕ್ಲಬ್, ರೋಟರಿ ಕ್ಲಬ್, ಅಡ್ವೆಂಚರ್ ಕ್ಲಬ್, ನೇಚರ್ ಕ್ಲಬ್, ಮಲೆನಾಡು ಕ್ರೈಸ್ತರ ಅಭಿವೃದ್ಧಿ ಸಂಘ, ಹಿಂದೂ ಸ್ಮಶಾನ ಅಭಿವೃದ್ಧಿ ಸಮಿತಿ, ಕ್ರಿಶ್ಚಿಯನ್ ಸ್ಮಶಾನ ಅಭಿವೃದ್ಧಿ ಸಮಿತಿ, ರಸ್ತೆ ಬಳಕೆದಾರರ ವೇದಿಕೆ, ನಾಗರಿಕ ಹೋರಾಟ ಸಮಿತಿ ಸೇರಿದಂತೆ ಹತ್ತು ಹಲವಾರು ಸಂಘ ಸಂಸ್ಥೆಗಳು ಹಾಗೂ ಪ್ರಸ್ತುತ ಬೇತೇಲ್ ಟ್ರಸ್ಟ್ ಹಾಗೂ ಸಹನಾ ಜೆ ರೂಬೆನ್ ಸಮಾಜ ಸೇವಾ ಟ್ರಸ್ಟ್ ಮೂಲಕ ಹಲವಾರು ಸಮಾಜ ಸೇವಾ ಕಾರ್ಯಗಳನ್ನು ಮಾಡುತ್ತಿದ್ದಾರೆ.
ಇವರು ಮಾಡಿರುವ ಸೇವೆಗಳಲ್ಲಿ ಮುಖ್ಯವಾಗಿ ಗುಜರಾತ್ ಭೂಕಂಪದ ಸಂದರ್ಭದಲ್ಲಿ ರೋಟರಿ ಕ್ಲಬ್ ಮೂಲಕ ಸ್ಥಳಕ್ಕೆ ತೆರಳಿ ಸೇವೆ ಸಲ್ಲಿಸಿರುತ್ತಾರೆ, ಕೇರಳದಲ್ಲಿ ,ರಾಯಚೂರಿನ ಮಾನ್ವಿ, ಮಡಿಕೇರಿ, ಮೂಡಿಗೆರೆ ಹಾಗೂ ಚಿಕ್ಕಮಗಳೂರಿನಲ್ಲಿ ಅತಿವೃಷ್ಟಿಯಾದಾಗ ಮಲೆನಾಡು ಕ್ರೈಸ್ತರ ಅಭಿವೃದ್ಧಿ ಸಂಘದ ಮೂಲಕ ಸೇವೆ ಸಲ್ಲಿಸಿರುತ್ತಾರೆ.
ವಿಶೇಷವಾಗಿ ಕೋವಿಡ್ ಸಂದರ್ಭದಲ್ಲಿ ಎರಡು ವರ್ಷ ಸತತವಾಗಿ ಮಲೆನಾಡು ಕ್ರೈಸ್ತರ ಅಭಿವೃದ್ಧಿ ಸಂಘ ಹಾಗೂ ಕಾಂಗ್ರೆಸ್ ಯುವಕರೊಂದಿಗೆ ರಸ್ತೆಯಲ್ಲಿ ಬಿದ್ದಿದ್ದ ಭಿಕ್ಷುಕರು, ನಿರಾಶ್ರಿತರು, ಅನಾಥರು, ದಿಕ್ಕು ದೆಸೆ ಇಲ್ಲದವರು, ಮಕ್ಕಳು, ಮಹಿಳೆಯರು ಸೇರಿದಂತೆ ನೂರಾರು ಜನಗಳಿಗೆ ನಿರಾಶ್ರಿತರ ಕೇಂದ್ರ ತೆರೆದು ದಾನಿಗಳ ಸಹಾಯದಿಂದ ಸೇವೆ ಸಲ್ಲಿಸಿರುತ್ತಾರೆ.
ಪತ್ನಿ ಹಾಗೂ ಮಗಳೊಂದಿಗೆ ಸೇವೆ ಸಲ್ಲಿಸುತ್ತಿರುವ ಇವರು 48 ಬಾರಿ ರಕ್ತದಾನ ಮಾಡಿ ಆರೋಗ್ಯ ಇಲಾಖೆಯಿಂದ ಪ್ರಶಸ್ತಿ ಪಡೆದಿರುತ್ತಾರೆ. ವಿಶೇಷವಾಗಿ ಕಳೆದ ಮೂರು ವರ್ಷಗಳ ಹಿಂದೆ ತಮ್ಮ ಪತ್ನಿ ಸಹನಾ ಬ್ರೈನ್ ಟ್ಯೂಮರ್ ನಿಂದ ಮೃತ ಪಟ್ಟ ಸಂದರ್ಭದಲ್ಲಿ ಕುಟುಂಬದವರ ಒಪ್ಪಿಗೆ ಪಡೆದು ದೇಹದ ಎಲ್ಲಾ ಅಂಗಾಂಗಳನ್ನು ದಾನ ಮಾಡಿ ಏಳೆಂಟು ಜನರ ಬಾಳಿಗೆ ಬೆಳಕಾಗುವಂತೆ ಮಾಡಿದ್ದಾರೆ.
ಇವರ ಈ ಎಲ್ಲಾ ಸಮಾಜಸೇವಾ ಕಾರ್ಯಗಳನ್ನು ಪರಿಗಣಿಸಿ ಕೇಂದ್ರ ಸರ್ಕಾರದ ನೆಹರು ಯುವ ಕೇಂದ್ರದಿಂದ ಯುವ ಪ್ರಶಸ್ತಿ, ರಾಜ್ಯ ಸರ್ಕಾರದ ಯುವಜನ ಸೇವಾ ಕ್ರೀಡಾ ಇಲಾಖೆಯಿಂದ ಯುವ ಪ್ರಶಸ್ತಿ, ಲಯನ್ಸ್ ಕ್ಲಬ್ ನಿಂದ ಗವರ್ನರ್ ಡೈಮೆಂಡ್ ಸುಪ್ರೀಮ್ ಎಕ್ಸೆಲೆನ್ಸ್ ಅವಾರ್ಡ್, ಬೆಸ್ಟ್ ಸೆಕ್ರೆಟರಿ, ರೋಟರಿ ಕ್ಲಬ್ ಅವಾರ್ಡ್, ರಾಷ್ಟ್ರೀಯ ಸ್ವಹೃದಯಿ ಪ್ರಶಸ್ತಿ, ರಾಜ್ಯ ಕ್ರೈಸ್ತ ರತ್ನ ಪ್ರಶಸ್ತಿ, ಬಸವ ಜ್ಯೋತಿ ರಾಜ್ಯ ಪ್ರಶಸ್ತಿ, ಮ್ಯಾಕ್ಸ್ ಲೈಫ್ ಸೇವಾ ರತ್ನ ಪ್ರಶಸ್ತಿ, ಸಿಟಿ ಎಕ್ಸೆಲೆನ್ಸ್ ಅವಾರ್ಡ್ ಕರ್ನಾಟಕ ಸೇವಾ ರತ್ನ ಪ್ರಶಸ್ತಿ , ಪ್ರಜಾವಾಣಿ ಪತ್ರಿಕೆ ಕೊರೋನ ಸೇನಾನಿ ಪ್ರಶಸ್ತಿ, ಪೋಲಿಸ್ ಇಲಾಖೆಯಿಂದ ಪ್ರಶಂಸೆ ಪತ್ರ, ರಾಜ್ಯ ಸರ್ಕಾರದಿಂದ ಪ್ರಶಂಸ ಪ್ರಮಾಣಪತ್ರ ಸೇರಿದಂತೆ ಹಲವಾರು ಪ್ರಶಸ್ತಿಗಳನ್ನು ಪಡೆದಿರುವ ಇವರಿಗೆ ಮತ್ತೊಂದು ನ್ಯಾಷನಲ್ ಬೆಸ್ಟ್ ಸೋಷಿಯಲ್ ವರ್ಕರ್ ಅವಾರ್ಡ್ ದೊರೆತಿರುವುದು ನಮ್ಮ ಜಿಲ್ಲೆಗೆ ಕೀರ್ತಿ ತಂದಿದೆ.
Reuben Moses wins National Best Social Worker Award
Share

Leave a comment

Leave a Reply

Your email address will not be published. Required fields are marked *

Don't Miss

ಸಿಐಡಿ ಪೊಲೀಸ್ ರಿಂದ ಪಂಜರದಲ್ಲಿ ಬಂಧಿಸಿಟ್ಟಿದ ಕಾಡು ಗಿಳಿ ವಶ

ಚಿಕ್ಕಮಗಳೂರು : ಅಕ್ರಮವಾಗಿ ಪಂಜರದಲ್ಲಿ ಬಂಧಿಸಿಟ್ಟಿದ ಕಾಡು ಗಿಳಿಗಳನ್ನು ಸಿಐಡಿ ಪೊಲೀಸ್ ಅರಣ್ಯ ಸಂಚಾರಿ ದಳ ವಶಕ್ಕೆ ಪಡೆದಿದೆ ನಗರದ ಟಿಪ್ಪುನಗರದ ಚಾಮುಂಡಿ ಕಾಫಿ ಕ್ಯೂರಿಂಗ್ ಹಿಂಭಾಗದ ರಾಜಸ್ತಾನ ಕುಳ್ಳಿ ರಸ್ತೆಯ...

ಸಖರಾಯಪಟ್ಟಣದಲ್ಲಿ ಹಣದ ವಿಷಯಕ್ಕೆ ಸ್ನೇಹಿತನೇ ಕೊಲೆ

ಕಡೂರು: ಅಪಘಾತದಲ್ಲಿ ಯುವಕ ಸಾವನ್ನಪ್ಪಿದ್ದ ಎಂದು ಭಾವಿಸಿದ್ದ ಪ್ರಕರಣ ತಿರುವು ಪಡೆದುಕೊಂಡಿದ್ದು, ಹಣದ ವಿಷಯಕ್ಕೆ ಸ್ನೇಹಿತನೇ ಕೊಲೆ ಮಾಡಿರುವುದನ್ನು ಸಖರಾಯಪಟ್ಟಣ ಪೊಲೀಸರು ಪತ್ತೆ ಮಾಡಿದ್ದಾರೆ. ಜೂನ್ 13ರ ರಾತ್ರಿ ಸಖರಾಯಪಟ್ಟಣ ಪೊಲೀಸ್...

Related Articles

ಅರತಿಕೃಷ್ಣಗೆ ಮಂತ್ರಿ ಗ್ಯಾರಂಟಿ – ಶ್ರೀನಿವಾಸ್ ತಿರುಪತಿಗೆ ? – ನಯನ ನವ ಅವತಾರಕ್ಕೆ ಭಂಗ, ಭಂಗ

ಚಿಕ್ಕಮಗಳೂರು: ಜಿಲ್ಲೆಯ ಲ್ಲಿ ಮಂತ್ರಿಯಾಗ ಬೇಕು ಎಂದು ಪಟ್ಟು ಹಿಡಿದವರು ಪಲ್ಟಿ ಹೊಡೆದಿದ್ದಾರೆ ಆದರೆ ಅರತಿಕೃಷ್ಣ...

ಹಿರಿಯ ನಾಗರಿಕರಿಗೆ ಪಿಂಚಣಿ ಸೌಲಭ್ಯ ನೀಡಲು ಮನವಿ

ಚಿಕ್ಕಮಗಳೂರು:  ಹಿರಿಯ ನಾಗರೀಕರಿಗೆ ಸಂಧ್ಯಾ ಸುರಕ್ಷಾ, ವಿಧವಾ ಹಾಗೂ ಅಂಗವಿಕಲ ವೇತನವನ್ನು ಒದಗಿಸಿಕೊಡಬೇಕು ಎಂದು ಆಗ್ರಹಿಸಿ...

ಜಲಾಶಯದ ನೀರು ಕುಡಿಯುವ ನೀರಿಗೆ ಬಳಕೆ

ಚಿಕ್ಕಮಗಳೂರು: ಪ್ರಸಕ್ತ ಸಾಲಿನಲ್ಲಿ ಮುಂಗಾರು ಮಳೆಯ ಕೊರತೆಯಿಂದಾಗಿ ರಾಜ್ಯದ ಜಲಾಶಯಗಳಲ್ಲಿ ನೀರಿನ ಮಟ್ಟ ತೀವ್ರವಾಗಿ ಕ್ಷೀಣಿಸುತ್ತಿದ್ದು,...

ಆಗಸ್ಟ್ 2ಕ್ಕೆ ಪೊಲೀಸ್ ಕಾನ್‌ಸ್ಟೇಬಲ್ ಹುದ್ದೆಯ ಪರೀಕ್ಷೆಗೆ ನಿಷೇಧಾಜ್ಞೆ ಜಾರಿ

ಚಿಕ್ಕಮಗಳೂರು: ಪೊಲೀಸ್ ಕಾನ್‌ಸ್ಟೇಬಲ್ (ಸಿವಿಲ್) ಹುದ್ದೆಗಳ ನೇರ ನೇಮಕಾತಿಗಾಗಿ ಆಗಸ್ಟ್ ೨ ರಂದು ಲಿಖಿತ ಪರೀಕ್ಷೆ...