ಚಿಕ್ಕಮಗಳೂರು: ವೈಚಾರಿಕತೆಯ ಭದ್ರ ಬುನಾದಿಯನ್ನು ಸಾಮಾಜಿಕ ಪರಿವರ್ತನ ಚಳ ವಳಿಯ ಸಂದರ್ಭದಲ್ಲಿ ರಾಜಪ್ರಭುತ್ವದಲ್ಲಿ ಶಾಹೂ ಮಹಾರಾಜರು ಹಾಕಿದ್ದಾರೆ. ಅದರ ಫಲವನ್ನು ನಾವೀಗ ಪ್ರಜಾಪ್ರಭುತ್ವದಲ್ಲಿ ಅನುಭವಿಸುತ್ತಿದ್ದೇವೆ ಎಂದು ಬಿಎಸ್ಪಿ ರಾಜ್ಯ ಉಪಾಧ್ಯಕ್ಷ ಜಾಕೀರ್ ಹುಸೇನ್ ತಿಳಿಸಿದರು.
ನಗರದ ಬಿಎಸ್ಪಿ ಕಚೇರಿಯಲ್ಲಿ ಭಾನುವಾರ ಛತ್ರಪತಿ ಶಾಹೂ ಮಹಾರಾಜರ ಜಯಂತಿ ಅಂಗವಾಗಿ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡಿದ ಅವರು ಈ ರೀತಿಯ ಸಾಧನೆ ಮಾಡಿದ ಮಹನೀ ಯರ ಜಯಂತಿ ಆಚರಿಸುವ ಮೂಲಕ ಯುವಕರಿಗೆ ಸ್ಫೂರ್ತಿ ತುಂಬಬೇಕು ಎಂದರು.
ಶಾಹು ಮಹಾರಾಜರು ಜಾತೀಯತೆ ತೊಲಗಿಸಲು ಶ್ರಮಿಸಿದ ಮಹಾ ಮಾನವತಾವಧಿ. ಶೋಷಿತರು, ದಲಿತರ ಏಳಿಗಗೆ ದುಡಿದ ಮಹಾನೀಯರ ಜನ್ಮದಿನಾಚರಣೆ ಜೊತೆಗೆ ಅವರ ಆದರ್ಶ, ತತ್ವಸಿದ್ದಾಂತವನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಈ ಮೂಲಕ ಸಮ ಸಮಾಜದ ನಿರ್ಮಾಣಕ್ಕೆ ಪ್ರತಿಯೊಬ್ಬರೂ ಕೊಡುಗೆ ನೀಡಬೇಕು ಎಂದರು.
ಬಿಎಸ್ಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಕೆ.ಟಿ.ರಾಧಾಕೃಷ್ಣ ಮಾತನಾಡಿ ಶಾಹು ಮಹಾರಾಜ್ ಅವರ ಕ್ರಾ ಂತಿಕಾರ ಹೆಜ್ಜೆಗಳಿಂದ ಅನೇಕ ಶೋಷಿತ ಹಾಗೂ ಹಿಂದುಳಿದ ಸಮುದಾಯದವರು ಮೇಲೆ ಬರಲು ಸಾಧ್ಯ ವಾಯಿತು. ಹೀಗಾಗಿ ತಳಸಮುದಾಯದವರು ಸದಾ ಶಾಹು ಮಹಾರಾಜರನ್ನು ಸ್ಮರಿಸಬೇಕು ಹಾಗೂ ಅವರ ಚಿಂತನೆ ಮೈಗೂಡಿಸಿಕೊಳ್ಳಬೇಕು ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಬಿಎಸ್ಪಿ ಜಿಲ್ಲಾಧ್ಯಕ್ಷ ಪರಮೇಶ್ ಮಾತನಾಡಿದರು. ಈ ಸಂದರ್ಭದಲ್ಲಿ ಬಿಎಸ್ಪಿ ರಾಜ್ಯ ಕಾರ್ಯದರ್ಶಿಗಳಾದ ಪಿ ವೇಲಾಯುಧನ್, ಕೆ ಬಿ ಸುಧಾ, ಲೋಕಸಭಾ ಕ್ಷೇತ್ರದ ಸಂಯೋಜಕರಾದ ಬಿ.ಎಂ.ಶಂಕರ್, ಕೆ ಆರ್ ಗಂಗಾಧರ್, ಜಿಲ್ಲಾ ಸಂಯೋಜಕ ಯು ಬಿ.ಮಂಜಯ್ಯ, ಉಪಾಧ್ಯಕ್ಷರಾದ ಎಂ.ಬಾಬು, ಕೆ,ಎಸ್,ಮಂಜುಳ, ಕಾರ್ಯದರ್ಶಿ ಡಿ.ಪುಟ್ಟಸ್ವಾಮಿ ಭಾಗವ ಹಿಸಿದ್ದರು.
Shahu’s humane efforts to eradicate casteism
Leave a comment