Home namma chikmagalur chikamagalur ಚಿಕ್ಕಮಗಳೂರು ಜಿಲ್ಲೆಯ ಯಾರಿಗೂ ಸಚಿವ ಸ್ಥಾನವಿಲ್ಲ
chikamagalurHomeLatest Newsnamma chikmagalur

ಚಿಕ್ಕಮಗಳೂರು ಜಿಲ್ಲೆಯ ಯಾರಿಗೂ ಸಚಿವ ಸ್ಥಾನವಿಲ್ಲ

Share
Share

ಚಿಕ್ಕಮಗಳೂರು: ಚಿಕ್ಕಮಗಳೂರು ಜಿಲ್ಲೆಯ ಯಾವ ಶಾಸಕರಿಗೂ ಮಂತ್ರಿ ಸ್ಥಾನ ಸಿಗುವುದಿಲ್ಲ ಎಂದು ಖಚಿತ ಮಾಹಿತಿ ಇದೆ.

ಜಿಲ್ಲೆಯಲ್ಲಿ ಕಾಂಗ್ರೆಸ್ ನ ಐದು ಶಾಸಕರಿದ್ದು ಇಬ್ಬರು ವಿಧಾನ ಪರಿಷತ್ ಸದಸ್ಯರಿದ್ದಾರೆ ಹೀಗಾಗಿ ಮಂತ್ರಿ ಸ್ಥಾನಕ್ಕಾಗಿ ಶೃಂಗೇರಿ ಶಾಸಕ ಟಿ.ಡಿ.ರಾಜೇಗೌಡ ಮತ್ತು ತರೀಕೆರೆ ಶಾಸಕ ಶ್ರೀನಿವಾಸ್ ಎಲ್ಲಾ ರೀತಿಯ ಕಸರತ್ತು ನಡೆಸಿದ್ದರು.

ಹಿಂದಿನಿಂದಲೂ “ನ್ಯೂಸ್ ಕಿಂಗ್” ಜಿಲ್ಲೆಯ ಯಾರಿಗೂ ಮಂತ್ರಿ ಸ್ಥಾನ ಸಿಗುವುದಿಲ್ಲ ಎಂದು ಬರೆದಿತ್ತು. ಏಕೆಂದರೆ ಜಾತಿ ಲೆಕ್ಕಾಚಾರದಲ್ಲಿ ಒಕ್ಕಲಿಗರ ಕೋಟದಡಿ ಹಿರಿಯ ಶಾಸಕರು ಕ್ಯೂ ನಿಂತಿರುವುದು ಈಗಾಗಲೇ ಮೂರು ಜನ ಒಕ್ಕಲಿಗರು ಮಂತ್ರಿಗಳಾಗಿರುವುದು ರಾಜೇಗೌಡರಿಗೆ ಬಿಸಿ ತುಪ್ಪವಾಗಿದೆ.ಇದೇ ರೀತಿ ಕುರುಬರ ಕೋಟದಡಿ ಯತೀಂದ್ರ ಮತ್ತು ಬೈರತಿ ಸುರೇಶ್ ಮಂತ್ರಿಯಾಗಿರುವುದು ಶ್ರೀನಿವಾಸ್ ಗೆ ಕಡುಕಷ್ಟವಾಗಿದೆ.ಜೊತೆಗೆ ಗೆದ್ದಿರುವ ಶಾಸಕರು ಮೊದಲ ಬಾರಿ ಶಾಸಕರಾಗಿರುವುದರಿಂದ ಮಂತ್ರಿ ಸ್ಥಾನ ಕೇಳಲು ಸಾಧ್ಯವಿಲ್ಲ.

ಸುಪ್ರೀಂ ಕೋರ್ಟ್ ಆದೇಶದ ಹಿನ್ನೆಲೆಯಲ್ಲಿ ಗಾಯಿತ್ರಿ ಶಾಂತೇಗೌಡ ಮೊನ್ನೆ ಮುಖ್ಯಮಂತ್ರಿ ಮತ್ತು ಮಾಜಿ ಮುಖ್ಯಮಂತ್ರಿ ಭೇಟಿಯಾಗಿದ್ದಾರೆ.ಜಿಲ್ಲೆಗೆ ಮಂತ್ರಿ ಸ್ಥಾನ ಕೊಡಿ ಎಂದು ಕೇಳಿದಾಗ ಸಿದ್ದರಾಮಯ್ಯ ನಿಮ್ಮ ಜಿಲ್ಲೆಗೆ ಮಂತ್ರಿ ಸ್ಥಾನ ದೊರೆಯುವುದಿಲ್ಲ ಎಂದು ನೇರವಾಗಿ ಹೇಳಿರುವುದು ಖಂಡಿತವಾಗಿ ಮಂತ್ರಿ ಸ್ಥಾನ ದೊರೆಯುವುದಿಲ್ಲ ಎನ್ನಲಾಗುತ್ತದೆ.

ಕಳೆದ ಮೂರು ವರ್ಷಗಳಿಂದ ಕೆ.ಜೆ.ಜಾರ್ಜ್ ಜಿಲ್ಲಾ ಉಸ್ತುವಾರಿಯಾಗಿ ಕಾಟಚಾರಕ್ಕೆ ಕೆ.ಡಿ.ಪಿ ಸಭೆ ನಡೆಸಿದ್ದು ಬಿಟ್ಟರೆ ನಾಡ ಹಬ್ಬಗಳಲ್ಲಿ ಧ್ವಜಾರೋಹಣ ಮಾಡಿದ್ದೆ ಸಾಕ್ಷಿ ಗುಡ್ಡೆ.ಇಲ್ಲ ಎಂದರೆ ಮೂನ್ನುರು ಎಕರೆ ಕಾಫಿತೋಟದ ಜೊತೆಗೆ ಹತ್ತು ಸಾವಿರ ಎಕರೆಯಷ್ಟು ವಿಸ್ತೀರ್ಣ ಮಾಡಿದ್ದುಸಾಧನೆ ಎನ್ನಬೇಕು.

ಇನ್ನೂ ಶಾಸಕರುಗಳುಇವರೇ ಉತ್ತಮ ಎನ್ನುತ್ತಾರೆ ಏಕೆಂದರೆ ವರ್ಗಾವಣೆ ಧಂದೆಗೆ ಇತರ ವ್ಯವಹಾರ ಗಳಿಗೆ ಕಣ್ಣು ಮುಚ್ಚಿ ಸಹಿ ಹಾಕುವವರನ್ನು ಮೆಚ್ಚಲೇ ಬೇಕು.ಅಂತೂ,ಇಂತೂ ಮೂರು ವರ್ಷ ಮುಗಿಸಿ ಇನ್ನೇರಡು ವರ್ಷ ಜಿಲ್ಲೆಗೆ ಜಾರ್ಜ್ ಬೇಕೆ ಬೇಕು ಎನ್ನುತ್ತಾರೆ.

No one in Chikkamagaluru district has a ministerial position.

Share

Leave a comment

Leave a Reply

Your email address will not be published. Required fields are marked *

Don't Miss

ಮಲೆನಾಡಿನ ಕರಾಳ ಅರಣ್ಯ ಕಾಯ್ದೆ ರದ್ದುಪಡಿಸಿ

ಚಿಕ್ಕಮಗಳೂರು: ಮಲೆನಾಡಿನ ಜನರ ಬದುಕಿಗೆ ತೊಂದರೆ ಉಂಟುಮಾಡುತ್ತಿರುವ ಕರಾಳ ಅರಣ್ಯ ಕಾಯ್ದೆಗಳನ್ನು ರದ್ದುಪಡಿಸುವುದರ ಜೊತೆಗೆ, ಹಲವು ವರ್ಷಗಳಿಂದ ಭೂಮಿ ಹಾಗೂ ನಿವೇಶನಕ್ಕಾಗಿ ಅರ್ಜಿ ಸಲ್ಲಿಸಿ ಕಾಯುತ್ತಿರುವ ರೈತರು, ಕಾರ್ಮಿಕರು, ದಲಿತರು ಹಾಗೂ...

ಚಿಕ್ಕಮಗಳೂರು ಡಿಸಿಸಿ ಬ್ಯಾಂಕ್‌ಗೆ 6.87 ಕೋಟಿ ರೂ. ನಿವ್ವಳ ಲಾಭ

ಚಿಕ್ಕಮಗಳೂರು: ಚಿಕ್ಕಮಗಳೂರು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್‌ (ಡಿಸಿಸಿ ಬ್ಯಾಂಕ್) 2025-26ನೇ ಸಾಲಿನ ಮಾರ್ಚ್ ಅಂತ್ಯಕ್ಕೆ 6.87 ಕೋಟಿ ರೂ. ನಿವ್ವಳ ಲಾಭ ಗಳಿಸಿದ್ದು, 98.05ರಷ್ಟು ಸಾಲ ವಸೂಲಾತಿ ಸಾಧಿಸಿದೆ ಎಂದು...

Related Articles

ಗಂಜಿ ಗಿರಾಕಿಗಳ ಅಟ್ಟಾಹಾಸಕ್ಕೆ ವೀರೇಂದ್ರ ಬಲಿಪಶು ??

ಸಖಾರಾಯಪಟ್ಟಣ: ಇಲ್ಲಿಗೆ ಸಮೀಪದ ಮುಸ್ಲಪುರ್ ಹಟ್ಟಿಯಲ್ಲಿರುವ ಬಾರ್ ಅಂಡ್ ರೆಸ್ಟೋರೆಂಟ್ ಗೆ 15 ರ ನಡು...

ಎಸ್‌ಐಆರ್‌ ವಿರುದ್ಧ ರಾಷ್ಟ್ರವ್ಯಾಪಿ ಆಂದೋಲನ

ಚಿಕ್ಕಮಗಳೂರು: ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆ ಹಾಗೂ ಚುನಾವಣಾ ಆಯೋಗದ ಕಾರ್ಯವೈಖರಿ...

ಸೌಜನ್ಯ ಪ್ರಕರಣದ ಕುರಿತು ಪಾರದರ್ಶಕ ತನಿಖೆಯಾಗಬೇಕು.

ಚಿಕ್ಕಮಗಳೂರು: ಕೆಪಿಎಸ್‌ಸಿ ನೇಮಕಾತಿ ಅಕ್ರಮಕ್ಕೆ ಸಂಬಂಧಿಸಿದಂತೆ ನ್ಯಾಯಾಲಯದ ಸೂಚನೆಯಂತೆ ಎಸ್‌ಐಟಿ ರಚಿಸಿ ತನಿಖೆಯನ್ನು ಕಾಲಮಿತಿಲ್ಲಿ ಪೂರ್ಣಗೊಳಿಸಬೇಕು....

ಮಂಜೆಗೌಡ ನೇತೃತ್ವದಲ್ಲಿ ಕಾಂಗ್ರೆಸ್ ಬಲಪಡಿಸಲು ಸಂಕಲ್ಪ

ಚಿಕ್ಕಮಗಳೂರು: ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಬೂತ್‌ಮಟ್ಟದಿಂದ ಮತ್ತಷ್ಟು ಬಲಪಡಿಸುವ ಮೂಲಕ ಮುಂಬರುವ ಜಿಲ್ಲಾ ಪಂಚಾಯಿತಿ, ತಾಲೂಕು...